ದೇವಲಾಪುರ. ನ:-11 ಸಮಾಜಕ್ಕೆ ನಮಗೆ ಏನು ಮಾಡುವುದು ಮುಖ್ಯವಲ್ಲ ಸಮಾಜಕ್ಕೆ ನಾವು ನಮ್ಮ ಕೈಲಾದ ಸೇವೆ ಮಾಡುವುದು ಮುಖ್ಯ ಉದ್ದೇಶ ವಾಗಿದೆ ಎಂದು ಸಮಾಜ ಸೇವಕರಾದ ಫೈಟರ್ ರವಿ ಅವರು ತಿಳಿಸಿದರು.
ಅವರಿಂದುನಾಗಮಂಗಲ ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಕಾಲೇಜಿನ ಕಟ್ಟಡದ ಮೇಲ್ಚಾವಣಿ ಚಾಲನೆ ನೀಡುವ ಮುಖಾಂತರ ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಸಮಾನತೆಯ ಭಾತೃತ್ವ ಬೆಳೆಸಿಕೊಳ್ಳುವ ಮುಖಾಂತರ ಸಮಾಜಕ್ಕೆ ಗುರುತರವಾದ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು ಸಮಾಜಕ್ಕೆ ನಾವು ಮಾಡುವ ಕೆಲಸ ಬೇರೊಬ್ಬರಿಗೂ ಮಾದರಿಯಾಗುವಂತಿರಬೇಕೆಂದು ಮಾತನಾಡುತ್ತಿದ್ದರು.
ಸಮಾಜ ಸೇವೆಗೆ ನಿಂತಾಗ ಅನೇಕ ತೊಂದರೆಗಳು ಬಂದರು ಅವುಗಳನ್ನು ಮೆಟ್ಟಿನಿಂತು ಸ್ವಸ್ಥ ಸಮಾಜ ಕಾಪಾಡುವ ನಿಟ್ಟಿನಲ್ಲಿ ನನ್ನ ಗುರಿಯೊಂದಿಗೆ ತಾಲೂಕಿನ ಪ್ರತಿ ಹೋಬಳಿ ಶುದ್ಧ ನೀರು ಸಮೃದ್ಧ ಸಮಾಜ ಉತ್ತಮ ಆರೋಗ್ಯ ಕಾಪಾಡುವ ಉದ್ದೇಶವನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಸಣ್ಣ ಸಮಾಜ ಸೇವೆ ಮಾಡುವ ಪ್ರಯತ್ನದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಸಿಜೆ ಕುಮಾರ್. ಪಿ ಜೆ ಜಯರಾಮ್ ಅರ್ಜುನ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
0 Comments