ಚಳ್ಳಕೆರೆ ಗ್ರಾಮಗಳ ಅಭಿವೃದ್ದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಣದ ಹೊಳೆ ಹರಿಯುತ್ತಿದೆ ದೇವರು ವರಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಮಾತಿನಂತೆ ಹಣ ಬಂತು ಖಾತೆ ಬಿದ್ದರೂ ಕ್ರಿಯಾಯೋನೆ ತಯಾರಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಗ್ರಾಮಗಳ ಅಭಿವೃದ್ದಿ ಗೆಂದು 15 ನೇ ಹಣ ಕಾಸು ಯೋಜನೆಯಡಿ ಸುಮಾರು 18 ಲಕ್ಷ ರೂ ಅನುದಾನ ಬಿಡುಗಡೆಯಾಗಿ ಸುಮಾರು ಮೂರು ತಿಂಗಳು ಕಳೆದರೂ ಕ್ರಿಯಾ ಯೋಜನೆ ರೂಪಿಸಿಲ್ಲ ಎಂಬುದು ತಿಳಿದು ಬಂದುದೆ. ಗ್ರಾಮಪಂಚಾಯತ್ ವ್ಯಾಪ್ತಿಯ ಹಳ್ಕಿಗಳಲ್ಲಿ ಅಗತ್ಯ ರಸ್ತೆ.ಚರಂಡಿ. ಬೀದಿ ದೀಪ.ಕುಡಿಯುವ ನೀರು.ಅಂಗನವಾಡಿ.ಶಾಲೆ ಸೇರಿದಂತೆ ಅಗತ್ಯ ಸಮಸ್ಯೆಗಳ ಪಟ್ಟಿ ಮಾಡಿ 15 ನೇ ಹಣ ಕಾಸು ಯೋಜನೆಯ ನಿಯಮದಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಕಳಿಸಿ ಅನುಮೋದನೆ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡ ಬೇಕು ಆದರೆ ಸದಸ್ಯರ ಇಚ್ಛಾಶಕ್ತಿ. ಕೊರತೆಯಿಂದ ಬಂದ ಅನುದಾನಕ್ಕೆ ಕ್ರಿಯಾಯೋಜನೆ ಮಾಡದೆ ವಿಳಂಬ ದೋರಣೆ ಮಾಡುತ್ತಿರುವುದು ಕಂಡು ಬಂದಿದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕ್ರಿಯಾ ಯೋಜನೆ ರೂಪಿಸಿ ಗ್ರಾಮಗಳ ಅಭಿವೃದ್ಧಿ ಗೆ ಮುಂದಾಗುವರೇ ಕಾದು ನೋಡ ಬೇಕಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷ. ಉಪಾಧ್ಯಕ್ಷರ ಗದ್ದುಗೆಯ ಮುಸುಕಿನ ಗುದ್ದಾಟ
ದಿಂದ ಮಾತುಕತೆಯಿಲ್ಲದೆ, ಪರಸ್ಪರ ಹೊಂದಾಣಿಕೆ
ಕೊರತೆ ಹಿನ್ನೆಲೆ ಘನತ್ಯಾಜ್ಯ ಘಟಕ ನಿರ್ಮಾಣ
ಕಾಮಗಾರಿ ಕಳೆದ ಸುಮಾರು ಒಂದು ವರ್ಷಕಳೆದರೂ ಕಾಮಗಾರಿ ನನೆಗುದಿಗೆ
ಬಿದ್ದಿದ್ದು, ಎಲ್ಲೆಡೆ ಕಸದ ಸಮಸ್ಯೆ ಜತೆ ಅಭಿವೃದ್ಧಿ
ಕಾರ್ಯಗಳೂ ಕುಂಠಿತಗೊಳ್ಳುತ್ತಿವೆ.
ಗೋಪನಹಳ್ಳಿ
ಗ್ರಾಮ ಪಂಚಾಯ್ತಿಯ ಆಡಳಿತದ ಕಾರ್ಯವೈಖರಿ.
ಗ್ರಾಮದ ಸರಕಾರಿ ಗೋಮಾಳದಲ್ಲಿ ನರೇಗಾದಡಿ
10 ಲಕ್ಷ ಹಾಗೂ 15ನೇ ಹಣ ಕಾಸು ಯೋಜನೆಯಡಿ
5 ಲಕ್ಷ ರೂ. ಸೇರಿದಂತೆ ಒಟ್ಟು 15 ಲಕ್ಷ ವೆಚ್ಚದಲ್ಲಿ ಕಸ
ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು ಎಂಬ
ಉದ್ದೇಶದಿಂದ ಕೇಂದ್ರ ಸರಕಾರ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಪಂಗಳಿಗೆ
ಒಂದು ತ್ಯಾಜ್ಯ ವಿಲೇವಾರಿ ಘಟಕ ಕಟ್ಟಡ ಕಾಮಗಾರಿ ಅಧ್ಯಕ್ಷ.ಉಪಾಧ್ಯ ಹಾಗೂ ಸದಸ್ಯರ ನಡುವೆ ಹೊಂದಾಣಿಕೆಯಿಲ್ಲದೆ ಕಟ್ಟಡ ಪೂರ್ಣಗೊಳಿಸದೆ ಸಂಪೂರ್ಣ ಸ್ವಚ್ಚತಾ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಂತಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕಟ್ಟಡ ಕಾಮಗಾರಿಗೆ ಚಾಲನೆ ನೀಡ ಬೇಕಿದೆ
ಸದಸ್ಯರ ಇಚ್ಚಾ ಶಕ್ತಿ ಹೊಂದಾಣಿಕೆಯಿಲ್ಲದೆ ಅಭಿವೃದ್ಧಿ ಕುಂಠಿತ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments