ಸಂತ ಕವಿ ಸರ್ವಜ್ಞರ ಜಯಂತಿ ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದವರು ಸರ್ವಜ್ಞರು : ಟಿ. ಜವರೇಗೌಡ

by | 20/02/23 | ಚರಿತ್ರೆ

ಚಿತ್ರದುರ್ಗ ಫೆ. 20
ಸರಳ ಭಾಷೆಯಲ್ಲಿ ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಕವಿ ಸರ್ವಜ್ಞರು ಸಮಾಜದ ಚಿಕಿತ್ಸಕರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಏರ್ಪಡಿಸಿದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಮ್ಮು ಬಿಮ್ಮು, ಗರ್ವ ಬಿಟ್ಟವರು ಮಾತ್ರ ಜ್ಞಾನಿಗಳಾಗಲು ಸಾಧ್ಯ. ಎಲ್ಲೆಡೆಯೂ ಜ್ಞಾನ ಇದೆ, ಕಲಿಕೆಯೂ ಇದೆ. ವಯಸ್ಸು, ವ್ಯಕ್ತಿತ್ವ ಬಿಟ್ಟು, ಎಲ್ಲಿಯೇ ಒಳ್ಳೆಯ ವಿಚಾರಗಳು, ಕಲಿಯುವಂತಹ ಸಂಗತಿಗಳು ಸಿಗುತ್ತವೆಯೋ ಅಲ್ಲೆಲ್ಲಕಡೆ ಜ್ಞಾನವನ್ನು ಪಡೆಯಬೇಕು. ಈ ತತ್ವವನ್ನೇ ಅನುಸರಿಸಿ, ಜ್ಞಾನಿಗಳಾದವರು ಸರ್ವಜ್ಞರು. ಎಲ್ಲೋ ಒಂದು ಕಡೆ ಕುಳಿತು ಸರ್ವಜ್ಞರು ತಮ್ಮ ತ್ರಿಪದಿಗಳನ್ನು ರಚಿಸಿಲ್ಲ, ತಮ್ಮ ಸಂಚಾರದ ಕಾಲದಲ್ಲಿ ಸಮಾಜದಲ್ಲಿ ಕಂಡಂತಹ ಘಟನೆಗಳು, ತಿಳಿದ ವಿಚಾರಗಳನ್ನು ಅರಿತು, ಆಯಾ ಕ್ಷಣದಲ್ಲಿಯೇ ತ್ರಿಪದಿಗಳನ್ನು ರಚಿಸಿದವರು. ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ, ಸಮಾಜ ತಿದ್ದುವ ಕಾರ್ಯ ಮಾಡುವ ಮೂಲಕ ಸಮಾಜದ ಚಿಕಿತ್ಸಕರಾಗಿದ್ದವರು ಸರ್ವಜ್ಞರು. 16 ನೇ ಶತಮಾನದಲ್ಲಿ ಸಂಸ್ಕøತ ಭಾಷೆಯೇ ಪ್ರಧಾನವಾಗಿತ್ತು. ಹೀಗಾಗಿ ಶಿಕ್ಷಣ ಪಡೆಯಲು ಸಂಸ್ಕøತ ಕಲಿಯಲೇಬೇಕಿತ್ತು. ಇಂತಹ ಕಾಲಘಟ್ಟದಲ್ಲಿ ಅತ್ಯಂತ ಸರಳ ಭಾಷೆಯಲ್ಲಿ, ಜನಸಾಮಾನ್ಯರಿಗೂ ಲೋಕಜ್ಞಾನ ಒದಗಿಸಿದ ಕೀರ್ತಿ ಸರ್ವಜ್ಞರಿಗೆ ಸಲ್ಲುತ್ತದೆ. ಜಾತಿ, ಮತ ಭೇದಗಳನ್ನು ಟೀಕಿಸಿದ ಸರ್ವಜ್ಞರು, ಸುಖವಾಗಿರಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು, ಸಾಲ ಮಾಡುವುದು ಒಳ್ಳೆಯದಲ್ಲ, ಮನುಷ್ಯ ವಿದ್ಯೆ ಪಡೆಯಬೇಕು ಎಂಬುದಾಗಿ ತಮ್ಮ ತ್ರಿಪದಿಗಳಲ್ಲಿ ಮಾರ್ಮಿಕವಾಗಿ ನುಡಿದ್ದಿದ್ದಾರೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ಇವರ ಸಂದೇಶಗಳನ್ನು ಅನುಸರಿಸಿದರೆ ಸುಖಿ ಸಮಾಜ, ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಹೇಳಿದರು.
ನಿವೃತ್ತ ಉಪನ್ಯಾಸಕ ಸಿದ್ದಪ್ಪ ಅವರು ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞರು ತಮ್ಮ ತ್ರಿಪದಿ ವಚನಗಳಲ್ಲಿ ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ತಿಳಿಸಿದ್ದಾರೆ. ಜಾತಿ, ಮತ, ಪಂಥ ಇವುಗಳ ಬಗ್ಗೆ ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕು ವ್ಯವಸ್ಥೆಯನ್ನು ತಿದ್ದಿದ್ದಾರೆ. ಮನುಷ್ಯರಾಗಿ ಬಾಳುವುದು ಮುಖ್ಯ ಎಂದು ಕವಿ ಸರ್ವಜ್ಞರು ಮನುಕುಲಕ್ಕೆ ಸಂದೇಶವನ್ನು ನೀಡಿದ್ದಾರೆ. ಮಹಾನ್ ಕವಿ ಸರ್ವಜ್ಞರು. ಸಮಾಜದಲ್ಲಿ ತಾವು ಕಂಡ ಘಟನೆ, ನೋಡಿದ ವಿಚಾರಗಳನ್ನಾಧರಿಸಿ, ಸರ್ವಜ್ಞರು ಆಯಾ ಕ್ಷಣದಲ್ಲಿ ರಚಿಸಿದ ತ್ರಿಪದಿಗಳು ಜನರ ನಾಲಿಗೆ ಮೇಲೆ ಮೌಖಿಕವಾಗಿ ಹರಿದಾಡಿದವು. ಕೇವಲ ಮೂರು ಸಾಲುಗಳಲ್ಲಿ ಸಮಗ್ರ ಅರಿವನ್ನು ಹೊಂದುವಂತಹ ವಚನಗಳನ್ನು ರಚಿಸಿರುವುದು ಅವರ ಜ್ಞಾನ ಭಂಡಾರಕ್ಕೆ ನಿದರ್ಶನವಾಗಿದೆ. ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳನ್ನು ಟೀಕಿಸುವಂತಹ ವಿಡಂಬನಾತ್ಮಕ ಸಂದೇಶಗಳು ಅವರ ವಚನಗಳಲ್ಲಿ ಅಡಗಿವೆ. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಬಲ್ಲದ ವಿಷಯವಿಲ್ಲ’ ಎಂಬ ನುಡಿ, ಸರ್ವಜ್ಞರ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಎಷ್ಟೇ ವಿದ್ವತ್ತನ್ನು ಹೊಂದಿದ್ದರೂ, ಜನಸಾಮಾನ್ಯರಿಗೆ ಉಪಯೋಗಕ್ಕೆ ಬಾರದಿದ್ದರೆ ಅಂತಹ ವಿದ್ಯೆಯಿಂದೇನು ಪ್ರಯೋಜನ ಎಂಬುದನ್ನು ಮನಗಂಡೇ, ಸರಳ ಭಾಷೆಯಲ್ಲಿ ತಮ್ಮ ಸಂದೇಶಗಳನ್ನು ಸರ್ವಜ್ಞರು ನೀಡಿದ್ದಾರೆ ಎಂದರು.
ಕಬೀರಾನಂದ ಮಠದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ, ಕವಿ ಸರ್ವಜ್ಞನ ಜೀವನ ಕಷ್ಟಕರವಾಗಿದ್ದರೂ ಬರವಣಿಗೆ ಅಕ್ಷಯವಾಗಿತ್ತು. ಸರ್ವಜ್ಞನ ತ್ರಿಪದಿಗಳು ಇಂದಿಗೂ ಮಾನ್ಯವಾಗಿದ್ದು, ಸರ್ವಕಾಲಕ್ಕೂ ನಿಜವಾದ ಜ್ಯೋತಿಷ್ಯವಾಗಿವೆ. ಎಲ್ಲವನ್ನು ಬಲ್ಲವನು ಹಾಗೂ ಅತ್ಯುನ್ನತ ಬರಹಗಾರ ಮತ್ತು ಜಾತಿಗಳ ಬೇದವಿಲ್ಲದೆ ಬದುಕಿದಂತಹ ವ್ಯಕ್ತಿ ಸರ್ವಜ್ಞ, ಅವರು ಬರೆದಂತಹ ತ್ರಿಪದಿಗಳ ಮೂಲಕ ಇವತ್ತಿಗೂ ಜನರ ಮನದಲ್ಲಿ ನೆಲೆಸಿದ್ದಾರೆ ಎಂದರು.
ಮಾದರ ಚೆನ್ನಯ್ಯ ಗುರುಪೀಠದ ಶಿವಮೂರ್ತಿ ಮಾದರ ಚನ್ನಯ್ಯ ಸ್ವಾಮಿಗಳು ಮಾತನಾಡಿ, ಅನೇಕ ಶರಣರು ಹಾಗೂ ಶರಣೆಯರು ತಮ್ಮದೇಯಾದ ಅಲೋಚನೆಗಳ ಮೂಲಕ ವಚನಗಳನ್ನು ನೀಡಿದ್ದಾರೆ, ಅದರೆ ಸರ್ವಜ್ಞರು, ಜನರಿಗೆ ಅರ್ಥವಾಗುವ ರೀತಿಯಲ್ಲಿ ಹಾಗೂ ಸರಳ ಭಾಷೆಯಲ್ಲಿ ತಮ್ಮ ವಚನಗಳನ್ನು ಬರೆದಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬಾಳಲು ಮೊದಲು ಶಿಕ್ಷಣ ಪಡೆದುಕೊಳ್ಳಬೇಕು. ಕುಂಬಾರ ಸಮುದಾಯ ತಮ್ಮ ಕುಲಕಸುಬು ಮರೆಯದೆ, ವೃತ್ತಿ ಜೊತೆ ಜೊತೆಗೆ ಮುಂದಿನ ಪೀಳಿಗೆಗೆ ಬೇಕಿರುವ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಮಾಜ ಸಾಮಾಜಿಕವಾಗಿ ತಲೆ ಎತ್ತಿ ನಿಲ್ಲುವ ರೀತಿ ಅಭಿವೃದ್ಧಿ ಕಾಣಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಯಂತಿ ಅಂಗವಾಗಿ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಮಾರಮ್ಮನ ದೇವಸ್ಥಾನ ಮುಂಭಾಗದಿಂದ ತ.ರಾ.ಸು ರಂಗಮಂದಿರದವರೆಗೂ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಕುಂಬಾರ ಗುಂಡಯ್ಯ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಹಾಂತೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಅಧ್ಯಕ್ಷ ಕೆ.ಚಂದ್ರಪ್ಪ, ಜಿಲ್ಲಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್. ಯರ್ರಿಸ್ವಾಮಿ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್.ಬೈಲಮ್ಮ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಕಾರ್ಯದರ್ಶಿ ಕೆ.ಟಿ. ರಮೇಶ್, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ವೈ. ಮೃತ್ಯುಂಜಯ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಕಾರ್ಯದರ್ಶಿ ಹೇಮಾವತಿ, ವಿದ್ಯುತ್ ಪರಿವೀಕ್ಷಕಿ ರಾಧಾ ಸೇರಿದಂತೆ ಕುಂಬಾರ ಸಮಾಜದ ಮುಖಂಡರು ಸೇರಿದಂತೆ ಮತ್ತಿರರು ಇದ್ದರು. ತ್ರಿವೇಣಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Latest News >>

ಮಹಾವೀರರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ: ತಹಸಿಲ್ದಾರ್ ರೆಹಾನ್ ಪಾಷ

ಚಳ್ಳಕೆರೆ: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಜೈನ ಸಮುದಾಯ ವತಿಯಿಂದ ಇಂದು ಮಹಾವೀರ  ಜಯಂತಿಯನ್ನು ಲೋಕಸಭಾ ಚುನಾವಣೆ...

ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ನ ಸ್ಥಳಕ್ಕೆಮುಖ್ಯಕಾರ್ಯದರ್ಶಿಯಾದ ಅಂಜುಮ್ ಫರ್ವೇಜ್ ಭೇಟಿ

ಹಿರಿಯೂರು: ವಾಣಿವಿಲಾಸ ಸಾಗರದ ಐಮಂಗಲ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ಸ್ಥಳಕ್ಕೆ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀರಾಮನವಮಿ- ಶ್ರೀರಾಮ ಭಕ್ತರಿಂದ ಪಾನಕ. ಕೋಸಂಬರಿ ವಿತರಣೆ- ವಿಶೇಷ ಪೂಜೆ.

ಚಳ್ಳಕೆರೆ ಜನಧ್ವನಿ ವಾರ್ತೆ ಏ17. ಶ್ರೀರಾಮನವಮಿ ಅಂಗವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀರಾಮ ಜಪದೊಂದಿಗೆ ಸಡಗರ ಸಂಭ್ರಮದಿಂದ...

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡವಂತ ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ :ಕಸವನಹಳ್ಳಿ ರಮೇಶ್ ಆರೋಪ

ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ ಹಾಗೂ ಭದ್ರಾ...

ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ: ಎಚ್.ಎನ್.ಶಿವೇಗೌಡ

ಹಿರಿಯೂರು: ಬೆಳೆವಿಮೆ ಪರಿಹಾರದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಮರುಪರಿಶೀಲಿಸಿ ಹೆಚ್ಚುವರಿ ಪರಿಹಾರ ಕೊಡಿಸಲು...

ಯುಗಾದಿ ಹಬ್ಬಕ್ಕೆ ಬಂದವರಿಗೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರು.

ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ....

ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯವಸ್ತುಗಳ ಖರೀದಿ ಬಲು ಜೋರು..

ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ...

ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು‌ ಶಾಂತಿ‌ಸೌಹಾರ್ಧತೆಯಿಂದ ಆಚರಿಸಿ ಠಾಣಾಧಿಕಾರಿ ಕೆ.ಕುಮಾರ್.

ಚಳ್ಳಕೆರೆ ಏ.8 ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಠಾಣಾಧಿಕಾರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page