ಕಂದಿಕೆರೆ ಆ.3 ಸಂತ್ರಸ್ತ ರೈತ ಪರ ಧ್ವನಿ ಎತ್ತಿದಕ್ಕೆ ಅಪರಾಧಿ ಪಟ್ಟ ಕೆ. ಜಗದೀಶ್ ಕಂದಿಕೆರೆ. ಹಿರಿಯೂರು ತಾಲೂಕು ಸಾಮಾಜಿಕ ಹಾಗೂ (ಆರ್.ಟಿ.ಐ) ಮಾಹಿತಿ ಹಕ್ಕು ಹೋರಾಟಗಾರ ಯರಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ, ಮಾಜಿ ಅಧ್ಯಕ್ಷ ಕಳವಿಭಾಗಿ ವ್ಯವಸಾಯ ಪತ್ತಿನ ಸಹಕಾರ ಸಂಘನಿ, ಅಧ್ಯಕ್ಷ ಶ್ರೀಕೆಂಪೇಗೌಡ ಪತ್ತಿನ ಸಹಕಾರ ಸಂಘ ನಿ ಮತ್ತು ಮಾಜಿ ಅಧ್ಯಕ್ಷ ಜಿಲ್ಲಾ ಯುವ ಜನತಾದಳ ಚಿತ್ರದುರ್ಗ ಹಾಗೂ ಪ್ರಸ್ತುತ ಕಾಂಗ್ರೆಸ್ ಮುಖಂಡ ಆಗಿದ್ದು ನಾನು ಯಾವಾಗಲೂ ನ್ಯಾಯ ನೀತಿ ಸತ್ಯ ಧರ್ಮದ ಪರವಾಗಿ ನಿರಂತರವಾಗಿ ಕೆಚ್ಚೆದೆಯ ದಿಟ್ಟ ಹೋರಾಟ ಮಾಡುತ್ತಾ ಬೆಳೆದು ಬಂದವನು ಕಣ್ಣೆದುರಿಗೆ ನಡೆಯುವ ಅನ್ಯಾಯ ಕ್ರಮಗಳನ್ನು ನೇರ ನುಡಿಗಳಲ್ಲಿ ಖಂಡಿಸುತ್ತಾ ಬೆಳೆದವನು ನನಗೆ ನಾಜೂಕಿನಿಂದ ಮಾತನಾಡುವುದಾಗಲಿ ಯಾರನ್ನು ಓಲೈಸುವುದಾಗಲಿ ಅವಶ್ಯಕತೆ ಇಲ್ಲ ಬರುವುದಿಲ್ಲ ಯಾಕೆಂದರೆ ನಾನು ಹಳ್ಳಿಗಾಡಿನ ಸ್ವಾಭಿಮಾನಿ ರೈತನ ಮಗ. ನಮ್ಮ ಊರ ಸಮೀಪದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150ಎ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೆ//ಪಿ.ಎನ್.ಸಿ ಕಂಪನಿ ಮಾಡುವ ಅನ್ಯಾಯ ಅಕ್ರಮಗಳನ್ನು ಸರ್ಕಾರಕ್ಕೆ ಕೊಟ್ಯಾಂತರ ವಂಚನೆ ಆರ್ಥಿಕ ನಷ್ಟ ಉಂಟುಮಾಡಿರುವ ಬಗ್ಗೆ ನೇರ ನುಡಿಗಳಲ್ಲಿ ದಾಖಲೆ ಸಹಿತ ಬಯಲು ಮಾಡುತ್ತಾ ಸರ್ಕಾರಕ್ಕಾಗುವ ನಷ್ಟ ತಪ್ಪಿಸುವ ಪ್ರಯತ್ನ ಮಾಡಿದ್ದೇನೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸಿದ್ದೇನೆ. ಸುಮಾರು 40 ಜನ ರೈತರಿಗೆ ಪರಿಹಾರ ಕೊಡದೆ ವಂಚಿಸಿ ಕಾಮಗಾರಿ ಮಾಡಿದ್ದಾರೆ.
ಐಮಂಗಲ ಪೋಲೀಸ್ ಠಾಣೆಯಲ್ಲಿ ನನ್ನ ಮೇಲೆ ಕುತಂತ್ರದಿಂದ ದಾಖಲಾದ ಎಲ್ಲಾ ರೀತಿಯ ಕೇಸ್ ಗಳನ್ನು ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯದಲ್ಲಿ ಸುಳ್ಳೆಂದು ಸಾಬೀತಾಗಿ ವಜಾಗೊಳಿಸಿ ದೋಷ ಮುಕ್ತರನ್ನಾಗಿ ಬಿಡುಗಡೆಗೊಳಿಸಿರುತ್ತದೆ. ಕೆಲವೊಂದು ಮಾಧ್ಯಮಗಳು 2015ರ ಹಳೆಯ ಘಟನೆಗಳನ್ನು ಈ ಸಂದರ್ಭದಲ್ಲಿ ತಳುಕು ಹಾಕಿ ಭೂ ಸ್ವಾಧೀನ ಮತ್ತು ಪರಿಹಾರದ ಹೆಸರಿನಲ್ಲಿ ನಕಲಿ ಪೂಜರಿ ದಾಖಲೆಗಳನ್ನ ಸೃಷ್ಟಿಸಿ ಕೊಟ್ಯಾಂತರ ವಂಚಿಸಿ ಭ್ರಷ್ಟಾಚಾರ ನಡೆಸಲಾಗಿದೆ ಮತ್ತು ಸಂಬಂದಿಸಿದ ಮೆ//ಪಿ.ಎನ್.ಸಿ ಕಂಪನಿ ದೌಜನ್ಯ ದಬ್ಬಾಳಿಕೆ ಆಕ್ರಮವಾಗಿ ರೈತರ ಮನೆ ಕಟ್ಟಡ ಜಾಗಗಳು ಮತ್ತು ಜಮೀನುಗಳನ್ನ ಹಾನಿಮಾಡಿ ನಾಶಗೊಳಿಸಿ ಜಲ್ಲಿ ಕಲ್ಲು ಮಣ್ಣು ತಂದು ಸುರಿದು
ಹಾನಿಮಾಡಿರುವುದಲ್ಲದೆ ಪರಿಹಾರವನ್ನು ವಂಚಿಸಿ ಆರ್ಥಿಕ ನಷ್ಟ ಉಂಟುಮಾಡಿರುತ್ತಾರೆ ಈ ಸಂದರ್ಭದಲ್ಲಿ ಸಂತ್ರಸ್ತ ರೈತರಿಗೆ ನ್ಯಾಯ ಕೊಡಿಸುವ ವರದಿ ಮಾಡದೆ ಬೆಳಕು ಚೆಲ್ಲದೆ ನನ್ನನ್ನು ಗುರಿಯಾಗಿಸಿಕೊಂಡು ತೇಜೋವದೆ ಮಾಡಿ ರೈತರಿಗೆ ನಷ್ಟ ಉಂಟು ಮಾಡುವ ಪ್ರಯತ್ನವನ್ನು ಕಾಣದ ಕೈಗಳು ಮಾಡಿಸುತ್ತಿದ್ದಾರೆ. ಇಂತಹ ಸಾಮಾಜಿಕ ಹೋರಾಟಗಾರರನ್ನು ಹೋರಾಟ ದಿಂದ ಹಿಂದೆ ಸರಿಯುವಂತೆ ಮಾಡುವ ಆ ಮೂಲಕ ರೈತ ಸಂಕುಲಕ್ಕೆ ಅನ್ಯಾಯ ಮಾಡುವ ಯಾವುದೋ ಕಂಪನಿಯ ಮಾಲೀಕರಿಗೆ ಲಾಭ ಮಾಡುವ ,ಓಲೈಕೆ ಮಾಡುವ ಪ್ರವೃತ್ತಿಗಳು ಆಗಾಗ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಸತ್ಕಾರ್ಯ ಮಾಡಲು ಸಾವಿರ ಟೀಕೆಗಳು ಬರುತ್ತವೆ. ನಾವು ಮಾಡುವ ಸಮಾಜ ಮುಖಿ ಕೆಲಸಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ನಾನು ಸಾಮಾಜಿಕ ಹೋರಾಟಗಾರ, ಕಾಂಗ್ರೆಸ್ ಮುಖಂಡ, ಆದರೆ ಮೊದಲಿಗೆ ರೈತ, ಇಂತಹ ರೈತರನ್ನು ತೇಜೋವದೆ ಮಾಡುವ ಪ್ರಯತ್ನಗಳ ಬದಲಿಗೆ ರೈತರಿಗೆ ನ್ಯಾಯ ಕೊಡಿಸಿ ಎಂದು ತಮ್ಮಲ್ಲಿ ಕಳಕಳಿಯ ಮನವಿ ಮಾಡುತ್ತೇನೆ.
ಅತೀ ಶೀಘ್ರದಲ್ಲಿಯೆ ಮೆ//ಪಿ.ಎನ್.ಸಿ ಕಂಪನಿ ಮಾಡುವ ಅನ್ಯಾಯ ಅಕ್ರಮಗಳ ದಾಖಲೆ ಸಮೇತವಾಗಿ ಎಲ್ಲಾ ಪತ್ರಿಕಾ ಮತ್ತು ಟಿ.ವಿ.ಮಾಧ್ಯಮದವರಿಗೆ ದಾಖಲೆ ಸಮೇತವಾಗಿ ಬಿಡುಗಡೆಮಾಡಲಾಗುವುದು ಕೆ.ಜಗದೀಶ್ ಕಂದಿಕೆರೆ
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments