ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗ ಬಾರದು: ಶಾಸಕ ಟಿ ರಘುಮೂರ್ತಿ

by | 29/10/23 | ಕಥೆ.ಕವನ.ಜೀವನ ಚರಿತ್ರೆ


ಚಳ್ಳಕೆರೆ: ಪರಿವರ್ತನೆ ಜಗದ ನಿಯಮ ಲೋಕಕಲ್ಯಾಣದ ಉದ್ದೇಶದಿಂದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ರಚಿಸಿದ್ದಾರೆ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯನ್ನು ಬಯಸಿದವರು ಎಂದು ಟಿ ರಘುಮೂರ್ತಿ ಅಭಿಪ್ರಾಯಪಟ್ಟರು


ನಗರದ ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಜಾತಿ ವ್ಯವಸ್ಥೆಯಲ್ಲಿ ಅನೇಕ ತಾರತಮ್ಯಗಳಿವೆ ಈ ತಾರತಮ್ಯ ಹೋಗಲಾಡಿಸಬೇಕಾದರೆ ಬುದ್ಧ ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಜಾತಿ ವ್ಯವಸ್ಥೆ ಹೋಗಿ ನೀತಿ ವ್ಯವಸ್ಥೆ ಜಾರಿಗೆ ಬರಬೇಕು. ಕರ್ನಾಟಕ ಇತಿಹಾಸ ಎಂದರೆ ಅದು ನಾಯಕ ಜನಾಂಗದ ಇತಿಹಾಸ ಶಿವಭಕ್ತ ಬೇಡರ ಕಣ್ಣಪ್ಪ .ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ ಬುಕ್ಕ ಚಿತ್ರದುರ್ಗದ ಪಾಳೆಯಗಾರರು ಹೀಗೆ ಹಲವರು ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ.ವಾಲ್ಮೀಕಿ ಸಮುದಾಯದಲ್ಲಿ357ಉಪ.ಜಾತಿಗಳಿದ್ದು  ಅವುಗಳೆಲ್ಲವುಕ್ಕೂ ಸಮಾನ.ನ್ಯಾಯ ಸಿಗಬೇಕು


ಇದೇ ವೇಳೆ ಸಮುದಾಯದ ಎಲ್ಲಾ ಮುಖಂಡರು ಪಕ್ಷ ಬೇಧ ಮರೆತು ಒಟ್ಟಾಗಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿರುವುದಕ್ಕೆ ಮುಖಂಡರನ್ನು ಶ್ಲಾಘಿಸಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ರೆಹಾನ್ ಪಾಷ ರಾಮಾಯಣದ ಮೂಲಕ ಮನುಕುಲಕ್ಕೆ ಜೀವನದ ಮೌಲ್ಯಗಳನ್ನು ಜಗತ್ತಿಗೆ ಪಸರಿಸಿದ ಶ್ರೇಯ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ.ರಾಮಾಯಣ ಕಾವ್ಯದಲ್ಲಿ ವ್ಯಕ್ತಿಗಳನ್ನು ವೈಭವವಿಕರಿಸದೆ ಅವರ ಆದರ್ಶಗಳನ್ನು ಸಮಾಜಕ್ಕೆ ಸಾರಿದ್ದಾರೆ. ಅವುಗಳನ್ನು ಅಳವಡಿಸಿಕೊಂಡು ಬಾಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಕುರಿತು ನಗರಸಭೆ ಸದಸ್ಯೆ ಕವಿತಾ ಬೋರಯ್ಯ ಮಾತನಾಡಿದರು


ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್ ಟಿ ವಿರೂಪಾಕ್ಷಪ್ಪ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಕಲೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು ಎಸ್ ಎಸ್ ಎಲ್ ಸಿ ,ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ನಗರ ಸಭೆ ಸದಸ್ಯರಾದ ರಮೇಶ್ ಗೌಡ ಜಯಣ್ಣ ಚಳ್ಳಕೆರಪ್ಪ ಸುಮ ಬರಮಯ್ಯ ಕವಿತಾ ಬೋರಯ್ಯ ಸುಜಾತ ಪ್ರಹ್ಲಾದ್ ವಾಲ್ಮೀಕಿ ಸಮಾಜದ ತಾಲೂಕು ಅದ್ಯಕ್ಷ ಮಲ್ಲಪ್ಪ ನಾಯಕ  ಬಿಜೆಪಿ ಮುಖಂಡ ಜಯಪಾಲಯ್ಯ, ರಾಮದಾಸ್, ಪಿ ತಿಪ್ಪೇಸ್ವಾಮಿ, ಮುಖಂಡರಾದ ಬೋರಯ್ಯ, ಡಾ.ನಾಗೇಂದ್ರ ನಾಯಕ ಪಿ ತಿಪ್ಪೇಸ್ವಾಮಿ ಶಿವರಾಜ್ ನಗರಸಭೆ ಪೌರಾಯುಕ್ತ ಚಂದ್ರಪ್ಪ ಡಿ ವೈ ಎಸ್ ಪಿ ರಾಜಣ್ಣ ವೃತ ನಿರೀಕ್ಷಕ ಕೆ ಸಮಿವುಲ್ಲ ದಿವಾಕರ್ ಬಾಗವಹಿಸಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *