ಹಿರಿಯೂರು :
ನಗರದ ಸಿದ್ದನಾಯಕ ಸರ್ಕಲ್ ನಲ್ಲಿ ಶ್ರೀ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಮದಕರಿ ಯುವಕ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಜಂಗೀಕುಸ್ತಿಯಲ್ಲಿ ಬೆಳಗಾವಿಯ ಬಸವರಾಜ್ ರವರು ಪ್ರಥಮ ಬಹುಮಾನ ಪಡೆದರು. ದಾವಣಗೆರೆಯ ಇರ್ಫಾನ್ ಹಾಗೂ ಧಾರವಾಡದ ಪ್ರಥಮ್ ದ್ವಿತೀಯ ಸ್ಥಾನವನ್ನು ಹಂಚಿಕೊಂಡರು. ಚಿತ್ರದುರ್ಗದ ಭೂಪತಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಈ ಜಂಗೀಕುಸ್ತಿಯಲ್ಲಿ ಪ್ರಥಮ ಬಹುಮಾನ 10 ಸಾವಿರ ರೂಗಳು, ದ್ವಿತೀಯ ಬಹುಮಾನ 4 ಸಾವಿರ ರೂಗಳು (ತಲಾ ಇಬ್ಬರಿಗೆ), ಹಾಗೂ ತೃತೀಯ ಬಹುಮಾನ 5 ಸಾವಿರ ರೂಗಳು ಹಾಗೂ ಆಕರ್ಷಕ ಪಾರಿತೋಷಕ ನೀಡಲಾಯಿತು. ವಿಜೇತರಿಗೆ ಮದಕರಿ ಯುವಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಪ್ರಶಸ್ತಿ ವಿತರಿಸಿದರು.
ಜಂಗೀಕುಸ್ತಿ ನಡೆಯುತ್ತಿದ್ದ ಸ್ಥಳಕ್ಕೆ ಮಾಜಿ ಸಚಿವರಾದ ಡಿ.ಸುಧಾಕರ್ ಭೇಟಿ ನೀಡಿ, ವಿಜೇತರಾದ ಕುಸ್ತಿಪಟುಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮದಕರಿ ಯುವಕ ಸಂಘದ ಗಿರೀಶ್ ಕುಮಾರ್, ರವಿ, ಶಿವರಾಜ್, ಮಹದೇವ್, ಸಾಗರ್, ರಘುವೀರ್, ನಗರಸಭಾಧ್ಯಕ್ಷೆ ಗೀತಾಗಂಗಾಧರ್, ಮುಖಂಡರಾದ ವಿ.ಶಿವಕುಮಾರ್, ಜಿ.ಎಲ್.ಮೂರ್ತಿ, ಶಿವರಂಜಿನಿ, ಸಮೀವುಲ್ಲಾ, ಕರವೇ ದಾದಾಪೀರ್, ಇತರರು ಉಪಸ್ಥಿತರಿದ್ದರು.
ಈ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆ, ಧಾರವಾಡ, ಬೆಳಗಾವಿ, ಚಿತ್ರದುರ್ಗ, ಹಾಗೂ ಹಿರಿಯೂರಿನ 16 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ದವನಪ್ಪ ಹಾಗೂ ನಾಗರಾಜ ನಾಯಕ ತೀರ್ಪುಗಾರರಾಗಿದ್ದರು.
ಶ್ರೀ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರ ಗಮನ ಸೆಳೆದ ಜಂಗೀಕುಸ್ತಿ ಪಂದ್ಯಾವಳಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments