ನಾಯಕನಹಟ್ಟಿ:: ಶ್ರೀ ಕಾವಲು ಆಂಜನೇಯ ಸ್ವಾಮಿಗೆ ಶ್ರಾವಣ ಮಾಸದಲ್ಲಿ ಆಂಜನೇಯ ಸ್ವಾಮಿಗೆ ಹರಿಕೆ ಒತ್ತ ಭಕ್ತರು ನಾಲ್ಕು ವಾರ ಕೂಡ ವಿಶೇಷ ಪೂಜೆ ಅಭಿಷೇಕ ದಾಸೋಹ ವ್ಯವಸ್ಥೆ ಮಾಡುತ್ತಾರೆ ಎಂದು ತೊರೆಕೋಲಮ್ಮನಹಳ್ಳಿ ಪಿತಂಬರ್ ಹೇಳಿದ್ದಾರೆ.
ಶನಿವಾರ ಗುಂತಕೋಲಮ್ಮನಹಳ್ಳಿ ಸಮೀಪ ಹಾಗೂ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಕಾವಲು ಪ್ರದೇಶದಲ್ಲಿ ನೆಲೆಸಿರುವ ಶ್ರೀ ಕಾವಲು ಆಂಜನೇಯ ಸ್ವಾಮಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ರೇಖಲಗೆರೆ ಮತ್ತು ರೇಖಲಗೆರೆ ತಾಂಡದ ಭಕ್ತರು ಆಯೋಜಿಸಿದ ಕಡೆ ಶ್ರಾವಣ ಮಾಸದ ಶ್ರೀ ಕಾವಲು ಆಂಜನೇಯ ಸ್ವಾಮಿಯ ವಿಶೇಷ ಪೂಜೆ ಮತ್ತು ಅಭಿಷೇಕ ದಾಸೋಹ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನವು 400 ವರ್ಷಗಳ ಇತಿಹಾಸವನ್ನು ಹೊಂದಿದೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ ದೇವಸ್ಥಾನಕ್ಕೆ ಭಕ್ತರು ತಮ್ಮ ಸಹಾಯ ಹಸ್ತ ನೀಡಿ ದೇಣಿಗಿಯ ಮೂಲಕ ದೇವಸ್ಥಾನವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ.
ಇನ್ನೂ ಹರಕೆ ಹೊತ್ತ ಭಕ್ತರು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಾಲ್ಕು ವಾರ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಅಭಿಷೇಕ ದಾಸೋಹ ನಡೆಯುತ್ತದೆ ಈ ವರ್ಷದ ಮೊದಲ ಶನಿವಾರ ಹೊಸಳ್ಳಿ ಶಕುಂತಲಮ್ಮ ಗಿರೀಶ್.
ಎರಡನೇ ಶನಿವಾರ ತೊರೆ ಕೋಲಮ್ಮನಹಳ್ಳಿ ಮಧು ಪಡಿಕರ್ ಮಂಜುನಾಥ್, ಮೂರನೇ ಶನಿವಾರ ಕಪ್ಪಳದ ಬಸಯ್ಯ.
ನಾಲ್ಕನೇ ಶನಿವಾರ ರೇಖಲಗೆರೆ ಮತ್ತು ರೇಖಲಗೆರೆ ತಾಂಡದ ಸರ್ವ ಭಕ್ತಾದಿಗಳಿಂದ ವಿಶೇಷ ಪೂಜೆ ಅಭಿಷೇಕ ನೆರವೇರಿಸಿದ್ದಾರೆ ಎಂದರು.
ಇದೇ ವೇಳೆ ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ರೇಖಲಗೆರೆ ಎಂ. ಚಿನ್ನಯ್ಯ ಮಾತನಾಡಿದರು ಪ್ರತಿ ವರ್ಷ ಸಂಪ್ರದಾಯದಂತೆ ಶ್ರಾವಣ ಮಾಸದಲ್ಲಿ ಕಡೆ ಶ್ರಾವಣ ಮಾಸದ ಶನಿವಾರ ನಮ್ಮ ರೇಖಿಗೆರೆ ಗ್ರಾಮಸ್ಥರು ಶ್ರೀ ಕಾವಲು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ದಾಸೋಹ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ದೇನಾ ಭಗತ್ ಸ್ವಾಮೀಜಿ, ಶ್ರೀ ಕಾವಲು ಆಂಜನೇಯ ಸೇವಾ ಸಮಿತಿ ನಿರ್ದೇಶಕರಾದ ಗುಂತುಕೋಲಮ್ಮಹಳ್ಳಿ ಮುಖಂಡರಾದ ಚಂದ್ರಣ್ಣ, ಜೆಸಿಬಿ ತಿಪ್ಪೇಸ್ವಾಮಿ, ರೇಖಲಗೆರೆ ಎ.ಟಿ. ಅಶೋಕ್, ದಾಸರಮುತ್ತೈನಹಳ್ಳಿ ಬಿಒಆರ್ ಓಬಳೇಶ್ ,ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ. ವೀರೇಶ್, ಪ್ರೊಫೆಸರ್ ಕೆ ಸಿ ತಿಪ್ಪೇಸ್ವಾಮಿ, ಶಿಕ್ಷಕ ಅರುಣ್ ಕುಮಾರ್, ಎಸ್ ತಿಪ್ಪೇಸ್ವಾಮಿ ಗೊಂಚಿಗಾರ್ ಬೋರೇಶ್, ಕೆ.ಟಿ. ಲೋಕೇಶ್, ಕೆ ಎಲ್ ರಾಮದಾಸ್, ಪೂಜಾರಿ ನಾಗೇಶ್, ಪುರೋಹಿತ ಮುರಳಿ ಕೃಷ್ಣ, ಸೇರಿದಂತೆ ಭಕ್ತಾದಿಗಳು ಇದ್ದರು
0 Comments