ಚಳ್ಳಕೆರೆ ಸೆ.4ಬಡವರ ಬಾದಾಮಿ ಶೇಂಗಾ ಬೆಳೆಗೆ ಸುರುಳಿ ಪೂಚಿ ರೋಗ ಅನ್ನದಾತರಲ್ಲಿಆತಂಕ.
ಹೌದು ಇದು ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆ ಮುಂಗಸರು ಹಂಗಾಮಿನಲ್ಲಿ ಮಳೆಯ ಕೊರತೆ ಹಾಗೂ ಅತಿ ಕಡಿಮೆ ತೇವಾಂಶದಲ್ಲಿ ದುಬಾರಿ ಬೆಲೆಯ ಶೇಂಗಾ ಬಿತ್ತನೆ ಮಾಡಿದ್ದು ಕಳೆ. ಎಡೆಕುಂಟೆ ಹೊಡೆದು ಬೆಳೆಯಲ್ಲಿನ ಕಳೆ ಸ್ವಚ್ಚತೆ ಮಾಡಿಕೊಳ್ಳಯವಾಗಲೆ ಉತ್ತಮ ಮಳೆಯಾಗಿದ್ದು ಬಾಡುವ ಬೆಳೆಗೆ ಮಳೆಯಿಂದ ಜೀವಕಳೆ ಬಂದು ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದ ಬೆನ್ನಲ್ಲೇ ಈಗ ಶೇಂಗಾ ಬೆಳೆ ಹೂವು ಕಾತುತ್ತಿರುವಾಗಲೆ ಬೆಂಕಿ ರೋಗ ಹಾಗೂ ಕೀಟ ಬಾದೆ ಕಾಣಿಸಿಕೊಂಡಿದ್ದು ರೈತರಿಗೆ ಬರಸಿಡಿಲು ಬಡಿದಂತಾಗಿ ಅತಂಕಕ್ಕೆ ದೂಡುವಂತೆ ಮಾಡಿದೆ.
ಬಹುತೇಕ ಗ್ರಾಮಗಳಲ್ಲಿಯ ರೈತರ ಶೇಂಗಾ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದ್ದು, ಗಿಡಗಳು ಒಣಗಲು ಪ್ರಾರಂಭಿಸಿವೆ.ರೈತರು ಆತಂಕಕ್ಕೀಡಾಗಿದ್ದಾರೆ.
ಆತಂಕ ಬೇಡ ಜಾಗೃತಿ ವಹಿಸಿ.
0 Comments