ಶುದ್ಧ ನೀರಿನ ಘಟಕ ದುರಸ್ತಿ ಪಡಿಸುವಂತೆ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರಾದ ಕೆ. ಟಿ. ಮಲ್ಲಿಕಾರ್ಜುನ್ ಆಗ್ರಹ.

by | 18/10/23 | ಪ್ರತಿಭಟನೆ

ನಾಯಕನಹಟ್ಟಿ ಅ18: ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ನಮ್ಮಗ್ರಾಮದಲ್ಲಿ ಸುಮಾರು ಒಂದು ಸಾವಿರದಿಂದ 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನವನ್ನು ನೀಡಿದರು.


ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಹೇಳುತ್ತಿರುವುದು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಕೂಡ ಇಲ್ಲದಂತಾಗಿದೆ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದರು ಸಹ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕ್ಯಾರಿಯನ್ನುತ್ತಿಲ್ಲ ಎಂದು ಗ್ರಾಮಸ್ಥರಾದ ಕೆ ‌.ಟಿ. ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.


ಇದೇ ವೇಳೆ ಗ್ರಾಮದ ಕೆ ಎಸ್ ಸಿದ್ದಲಿಂಗಯ್ಯ ಮಾತನಾಡಿ ನಮ್ಮ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಪ್ರಾರಂಭವಾದ ನಂತರ ಮೂರು ತಿಂಗಳು ಮಾತ್ರ ಶುದ್ಧ ನೀರಿನ ಘಟಕ ಚಾಲನೆಯಲ್ಲಿತ್ತು ದುರಸ್ತಿಯಾದ ನಂತರ ಅಂದಿನಿಂದ ಇಂದಿನವರೆಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಹಿತ ಕಡೆ ಗಮನಹರಿಸಿರುವುದು ತುಂಬಾ ನೋವಿನ ಸಂಗತಿ ಎಂದು ಅಳಿಲನ್ನ ಮಾಧ್ಯಮದೊಂದಿಗೆ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ ಎಸ್ ಸಿದ್ದಲಿಂಗಯ್ಯ, ಕೆ ಟಿ ಮಲ್ಲಿಕಾರ್ಜುನ್, ಬೂಟ್ ತಿಪ್ಪೇಸ್ವಾಮಿ, ದೊರೆ ತಿಪ್ಪೇಸ್ವಾಮಿ, ಎಸ್ ಟಿ ಮಧುಮದಕರಿ, ಕೆ ಬಿ ದಿಲೀಪ್ ಕುಮಾರ್, ವೈ ರಾಹುಲ್ ಇದ್ದರು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *