ಬೆಂಗಳೂರು; ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವಂತ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದ್ರೇ ಇನ್ನೂ ಒಂದು ಪ್ರಕರಣದಲ್ಲಿ ಜಾಮೀನು ದೊರೆಯಬೇಕಿರುವಂತ ಕಾರಣ, ಜೈಲೇ ಗತಿ ಎನ್ನುವಂತೆ ಆಗಿದೆ.ಹೌದು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ಹಲವು ತಿಂಗಳಿನಿಂದ ಮುರುಘಾ ಶ್ರೀಗಳು ಜೈಲು ಪಾಲಾಗಿದ್ದಾರೆ.
ಇಂತಹ ಮುರುಘಾ ಶ್ರೀಗಳು ಹೈಕೋರ್ಟ್ ಗೆ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಯಿತು. ಏಳು ಷರತ್ತುಗಳನ್ನು ವಿಧಿಸುವುದರೊಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ವಿಧಿಸಿರುವಂತ ಷರತ್ತುಗಳಲ್ಲಿ ಚಿತ್ರದುರ್ಗ ಪ್ರವೇಶಿಸುವಂತಿಲ್ಲ. ಪಾಸ್ ಪೋರ್ಟೋ ಕೋರ್ಟ್ ವಶಕ್ಕೆ ನೀಡಬೇಕು, ಸಾಕ್ಷ್ಯ ನಾಶಪಡಿಸುವಂತಿಲ್ಲ. ಇಬ್ಬರ ಶ್ಯೂರಿಟಿಗಳನ್ನು ಒದಿಗಸಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತಿಸುವಂತಿಲ್ಲ. ಕೋರ್ಟ್ ಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಾಗಬೇಕು ಎಂಬುದಾಗಿ ಸೇರಿವೆ.
ಇನ್ನೂ ಒಂದು ಪ್ರಕರಣದಲ್ಲಿ ಜಾಮೀನು ಅರ್ಜಿ ಬಾಕಿ ಇರುವ ಕಾರಣ ಶಿವಮೂರ್ತಿ ಮುರುಘಾ ಷರಣರಿಗೆ ಪೋಕ್ಸೋ ಕೇಸ್ ನಲ್ಲಿ ಜಾಮೀನು ದೊರೆತರು ಬಿಡುಗಡೆಯ ಭಾಗ್ಯವಿಲ್ಲ. ಜೈಲೇ ಗತಿ ಎನ್ನುವಂತೆ ಆಗಿದೆ. ಆ ಪ್ರಕರಣದಲ್ಲೂ ಜಾಮೀನು ದೊರೆತ ನಂತ್ರ ಬಿಡುಗಡೆಯಾಗಲಿದೆ.
0 Comments