ನಾಯಕನಹಟ್ಟಿ:: ಪ್ರತಿಯೊಬ್ಬ ವಿದ್ಯಾರ್ಥಿಯು ಆರೋಗ್ಯವಂತರಾಗಿರಲು ವೈಯಕ್ತಿಕ ಸ್ವಚ್ಛತೆ ಮತ್ತು ಪರಿಸರ ಸ್ವಚ್ಛತೆ ಬಗ್ಗೆ ಜಾಗೃತರಾಗಬೇಕು ಎಂದು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಕೆ.ಬಿ.ಸುಧಾ ರಂಗಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಿಂದ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಪರಿಸರ ಸ್ವಚ್ಛತೆ ಎಚ್ಐವಿ ಹಾಗೂ ಟಿಬಿ ಸೋಂಕಿನ ಬಗ್ಗೆ ಮಕ್ಕಳಿಗೆ
ಅರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ ನೈರ್ಮಲ್ಯದ ಕೊರತೆಯಿದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆ ನೈರ್ಮಲ್ಯದ ಅಭ್ಯಾಸಗಳನ್ನು ತೊಡಲು ಹಾಕಿ ನಿರ್ಮಲ ಪರಿಸರವನ್ನು ರೂಪಿಸಲು ವಿದ್ಯಾರ್ಥಿಗಳು ನೆರವಾಗಬೇಕಾಗಿದೆ ಶಾಲೆ, ಮನೆಗಳಲ್ಲಿ, ಪರಿಸರ ವೈಯಕ್ತಿಕ ಸ್ವಚ್ಛತೆ ಹೆಚ್ಚಿನ ಒಲವು ತೋರಬೇಕು ಎಂದರು.
ಇನ್ನೂ ಶಾಲೆಯ ವಿದ್ಯಾರ್ಥಿಗಳಿಗೆ ವಯಕ್ತಿಕ ಸ್ವಚ್ಛತೆ ಪರಿಸರ ಸ್ವಚ್ಛತೆ ಎಚ್ಐವಿ ಹಾಗೂ ಟಿ.ಬಿ. ಸೋಂಕಿನ ಬಗ್ಗೆ ಮಕ್ಕಳಿಗೆ ಕೆಲವೊಂದು ಆಟಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಡಾ.ಆರ್ .ಮಂಜುಳಾ, ವಿಜಯಕಲಾ. ಶೇಖರಪ್ಪ. ಲತಾ ಸೇರಿದಂತೆ ಶಾಲೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದ್ದರು
0 Comments