ಚಳ್ಳಕೆರೆ ಜನಧ್ವನಿ ವಾರ್ತೆ ಅ.29. ಶಾಸಕರ ಮನೆ ಗೇಟ್ ಒಳಗೆ ಬಿಡದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರ ಪೋಲಿಠಾಣೆ ಮೆಟ್ಟಿಲೇರಿದೆ.
ಹೌದು ಚಳ್ಳಕೆರೆ ನಗರದ ಹಳೆ ಟೌನ್ ಶ್ರೀ
ವೀರಭದ್ರಸ್ವಾಮಿ ದೇವಸ್ಥಾನ ಬಳಿ ಇರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮನೆ ಬಳಿ ಶನಿವಾರ ತಡ ರಾತ್ರಿ 1.30 ರ ಸಮಯದಲ್ಲಿ ಚಿತ್ರದುರ್ಗ ತಾಲೂಕಿನ
ಬಚ್ಚಬೋರನಹಟ್ಟಿ, ಕಲೆನಹಳ್ಳಿ, ಗ್ರಾಮದ ಸುಮಾರು 140 ರಿಂದ 150 ಜನ ಗಂಡು ಹಾಗೂ ಹೆಣ್ಣು ಮಕ್ಕಳು ಶಾಸಕ ಕೆ.ಸಿ.ವೀರೇಂದ್ರಪಪ್ಪಿಯವರ ಬಳಿ ಮಾತನಾಡ ಬೇಕು ಎಂದು ಏಕಾಏಕಿ ಗೇಟ್ ಒಳಗೆ ನುಗ್ಗಲು ಮುಂದಾಗಿದ್ದಾರೆ. ತಡೆಯಲು ಹೋದಾಗ ಮನೆಯ ಸೆಕ್ಯುರಿಟಿ ಗಾರ್ಡ್ ತಿಪ್ಪೇಸ್ವಾಮಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಗಾಯಗೊಂಡ ತಿಪ್ಪೇಸ್ವಾಮಿ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ನನಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ನನ್ನೇಲೆ ಅಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಿತ್ರದುರ್ಗ ಶಾಸಕರಾದ ಕೆ.ಸಿ ವಿರೇಂದ್ರ ರವರ
ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಅವಾಚ್ಯ
ಶಬ್ದಗಳಿಂದ ಬೈದಾಡಿ ಗೇಟ್ ತೆಗಿ ನಾವು ಎಂ.ಎಲ್.ಎ ರವರನ್ನು ಕಾಣಬೇಕು ಎಂದು ಹೇಳಿ ಅವರಲ್ಲಿ ರವಿಕುಮಾರ, ಪ್ರದೀಪ ಕೆನ್ನೆಗೆ ಕೈಯಿಂದ
ಹೊಡೆದರು ನಂತರ ಬಚ್ಚಬೋರನಹಟ್ಟಿ ಗ್ರಾಮದ ಬಸವರಾಜ ಕಾಲಿನಿಂದ ಪಿರ್ಯಾದಿಯ ಎದೆಗೆ ಹೊಡೆದ, ಕನಹಳ್ಳಿ ಗ್ರಾಮದ
ಅವಿನಾಶ,ರಾಮಕುಮಾರ,ಶಶಿಕುಮಾರ, ದಯಾನಂದ,ಗಣೇಶ.ಜೆ.ಓ ರವರು ನಿಮ್ಮ ಎಂ.ಎಲ್.ಎ ನಮ್ಮ ಗ್ರಾಮದಲ್ಲಿ
ರಾಜ್ಯಮಟ್ಟದ ಟಗರಿನ ಕಾಳಗ ನಡೆಯದಂತೆ ಪೋಲಿಸರಿಗೆ ಹೇಳಿ ನಡೆದಯಂತೆ ಅಡ್ಡಿಪಡಿಸಿರುತ್ತಾರೆ, ಇವನನ್ನು ಹೊಡೆದು ಎಂ.ಎಲ್.ಎ ರವರನ್ನು
ಎಬ್ಬಿಸಿ ಎಂತಾ ಪ್ರಚೋದನೆ ಮಾಡಿ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ. ಪ್ರಾಣ ತೆಗೆಯುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ನನ್ನ ಮೇಲೆ ಗಲಾಟೆ
ಮಾಡಿದ ಇನ್ನು ಉಳಿದವರ ಹೆಸರು ವಿಳಾಸ ತಿಳಿಸಿರುವುದಿಲ್ಲ. ಈ ಗಲಾಟೆಯನ್ನು ಮಹೇಂದ್ರ, ನಾಗರಾಜ, ಮುರುಳಿ, ಗೋವಿಂದ ರವರು ಬಿಡಿಸಿ
ಕಳುಹಿಸಿರುತ್ತಾರೆ. ನನಗೆ ಅವಾಚ್ಯ ಶಬ್ದ ಮೇಲೆ ಗಲಾಟೆಮಾಡಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಕಾನುನು ರೀತಿಯ ಕ್ರಮ
ಕೈಗೊಳ್ಳುವಂತೆ ಚಳ್ಳಕೆರೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಾಸಕ ಕೆ.ಸಿ.ವೀರೇಂದ್ರ ಮನೆಯ ಸೆಕ್ಯುರಿಟ್ ಗಾರ್ಡ್ ಮೇಲೆ ಹಲ್ಲೆ 9 ಜನ ಹಾಗೂ ಇತರರ ಮೇಲೆ ಪ್ರಕರಣ ದಾಖಲು.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments