ಶಾಲ ಮಕ್ಕಳೊಂದಿಗೆ ನಲಿಯುತ್ತಾ ಆಟ ಪಾಠ ಕೇಳ ಬೇಕಾದ ಬಾಲಕ ಊರೂರು ಅಲೆದು ಹಣ ,ಹಳೆ ಬಟ್ಟೆ ಸಂಗ್ರಹಣೆ ಮಾಡುತ್ತಿರುವುದು ಕಡ್ಡಾಯ ಶಿಕ್ಷಣ ಹಳ್ಳಹಿಡಿದಂತಾಗಿದೆ…

by | 16/12/23 | ಜನಧ್ವನಿ

ಚಳ್ಳಕೆರೆ ಜನಧ್ವನಿ ವಾರ್ತೆ ಡಿ.16 ಹೆಗಲ ಮೇಲೆ ಬ್ಯಾಗ್, ಕೈಯಲ್ಲಿ ಪೆನ್ನಿಡಿದು ಶಾಲೆಯಲ್ಲಿ ಮಕ್ಕಳೊಂದಿಗೆ ಶಾಲಾಗುರುತಿನ ಚೀಟಿ ಕೊರಳಿಗೆ ಹಾಕಿಕೊಂಡು ಆಟ ,ಪಾಠ ಕೇಳುವ ವಯಸ್ಸಿನ ಮಕ್ಕಳು ಊರೂರು ಅಲೆದು ಹಣ ಹಾಗೂ ಹಳೆಯ ಬಟ್ಟೆಗಳನ್ನ ಕೇಳುತ್ತಿರುವ ದೃಶ್ಯ ಮಲಕಲಕುವಂತಿದೆ..
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ‌ಗ್ರಾಮದ ಅಂಗಡಿಯೊಂದರ ಮುಂದೆ ಕರ ಪತ್ರ ತೋರಿಸಿ ಹಣ ಹಾಗೂ ಹಳೆಯ ಬಟ್ಟೆಗಳನ್ನು ಕೇಳುತ್ತಿರುವ ಬೆಂಗಳೂರು ಮೂಲದ ಬಾಲಕ. ಹೌದು ಬೆಂಗಳೂರು ಮೂಲದ ಶ್ರೀಗರು ಸಾವಾ ಫೌಂಡೇಷನ್ ವಯೋವೃದ್ಧರ ಮತ್ತು ಬಡಮಕ್ಕಳ ಆಶ್ರಮಧಾಮ ಕೆಂಈ ಹೆಸರಿನ ಐಡಿ ಕಾರ್ಡ್ ಹಾಗೂ ಕರ ಪತ್ರವನ್ನಿಡಿದು ಅನಾಥಾಶ್ರಮದ ಹೆಸರು ಹೇಳಿಕೊಂಡು ಮಕ್ಕಳು ಹಳ್ಳಿ ಹಳ್ಳಿಗ ಮನೆ, ಅಂಗಡಿಗಳಿಗೆ ಭೇಟಿ ನೀಡಿ ಹಳೆಯ ಬಟ್ಟೆ ಹಾಗೂ ಹಣ ವಸೂಲಿ ಮಾಡುತ್ತಿರುವುದು ಅಂಗಡಿ ಹೋಟೆಲ್ ಬಳಿ ಹೋದಾಗ ಅಕ್ಕ, ಅಣ್ಣ, ಅಮ್ಮಹೊಟ್ಟೆ ಹಸಿವಾಗಿದೆ ಏನಾದರೂ ತಿನ್ನಲು ಕೊಡಿ ಎಂದು ಕೇಳಿದಾಗ ಎಂತವರಿಗೂ ಕರಳು ಕಿತ್ತು ಬರುವಂತಾಗುತ್ತದೆ.
ವೃದ್ಧ ಹಾಗೂ ಬಡಮಕ್ಕಳ ಆಶ್ರಮ ಎಂದು ಹೆಸರೇಳಿಕೊಂಡು ಬಂದಾಗ ಸಾಮಾನ್ಯವಾಗಿ ಮನೆಗಳಲ್ಲಿ ಹಳೆ ಬಟ್ಟೆಗಳು, ಬಳಸದೇ ಇರುವ ವಸ್ತುಗಳು, ಹೀಗೆ ಉಪಯೋಗಿಸದೇ ಇರುವ ವಸ್ತುಗಳನ್ನು ಜನರು ಅನಾಥಾಶ್ರಮಕ್ಕೆ ಹೋಗಿ ದಾನ ಮಾಡ್ತಿದ್ರು. ಇತ್ತೀಚಿನ ದಿನಗಳಲ್ಲಿ ಜನರಿಗೆ ಕೆಲಸದ ಒತ್ತಡದ, ಸಮಯದ ಅಭಾವದಿಂದಾಗಿ ಅನಾಥಾಶ್ರಮಕ್ಕೆ ಹೋಗಲು ಆಗದ ಕಾರಣ, ಕೆಲ ಆಶ್ರಮದವರು ಮನೆ ಮನೆಗೆ ಹೋಗಿ ಉಪಯೋಗಿಸದ ವಸ್ತುಗಳನ್ನು ಕೇಳಿ ಪಡೆಯುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಅನಾಥಾಶ್ರಮದ ಹೆಸರಲ್ಲಿ ಶಾಲೆಗೆ ಹೋಗ ಬೇಕಾದ ಮಕ್ಕಳನ್ನು ಹಣ , ಬಟ್ಟೆ ವಸೂಲಿ ಮಾಡಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿರುವದು ಎಷ್ಟು ಸರಿ ಎಂಬ ಪ್ರಶ್ನೆಯಾಗಿದೆ.


ಕಡ್ಡಾಯ ಶಿಕ್ಷಣ
ಕೂಲಿ ಯಿಂದ ಶಾಲೆಗೆ ,ಮರಳಿ ಬಾ ಶಾಲೆಗೆ ಸೇರಿಂದ ವಿಇವಧ ಯೋಜನೆಗಳಡಿಯಲ್ಲಿ ಯಾವೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದು ಶಾಲೆಯಿಂದ ಹೊರಗುಳಿಯ ಬಾರದು ,ಶಾಲೆಗೆ ಗೈರಾದ ವಿದ್ಯಾರ್ಥಿಯ ಮನೆಗೆ ಹೋಗಿ ಕರೆತರ ಬೇಕು ಎಂಬ ನಿಮಯವಿದೆ. ಸಂವಿಧಾನಾತ್ಮಕವಾಗಿ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳು ಶಿಕ್ಷಣ ದಿಂದ ವಂಚಿತರಾಗ ಬಾರದು ಎಂದು ಸರಕಾರಿ ಶಾಲೆಗಳಲ್ಲಿ ಬಿಸಿಯೂಟ, ಶೂ, ಸಮವಸ್ತ್ರ,ಉಚಿತ ಶಿಕ್ಷಣ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಣದ ಹೊಳೆ ಹರಿಸುತ್ತಿವೆ ಆದರೂ ಸಹ ಶಿಕ್ಷಣದ ಹಕ್ಕು ಕಾಯ್ದೆಯ ಯಶಸ್ವಿಗಾದೆ ಇರುವುದರಿಂದ ಅದೇಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಂಡು ಬರುತ್ತಿರುವುದು ವಿಪರ್ಯಾಸವಾಗಿದೆ.
ಮಕ್ಕಳನ್ನು ಕೂಲಿಗೆ ಕಳಿಸಿದರೆ, ಬೇಕರಿ, ಚಿನ್ನ ಬೆಳ್ಳಿ, ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಮಾಡುತ್ತಿರುವ ಮಕ್ಕಳನ್ನು ಬಾಲ ಕಾರ್ಮಿಕ ಎಂದು ಪರಿಗಣಿಸಿ ಮಾಲಿಕರ ವಿರುದ್ದ ದಂಢ ಶಿಕ್ಷ ವಿಧಿಸಲಾಗುವುದು ಎಂದು ಎಚ್ಚೆರಿಕೆ ಹೇಳಲಾಗುತ್ತಿದೆ ಆದರೆ ಮಕ್ಕಳನ್ನಿಟ್ಟುಕೊಂಡು ಹಣ ಹಾಗೂ ಹಳೆಯ ಬಟ್ಟೆಗಳನ್ನು ವಸೂಲಿ ಮಾಡಿಸುತ್ತಿರುವ ಸಂಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವಕ್ರಮ ಕೈಗೊಳ್ಳುವರು ಕಾದು ನೋಡ ಬೇಕಿದೆ.
. ಶಾಲೆಯ ಗುರುತಿನ ಚೀಟಿ ಹಾಕಿಕೊಂಡು ಶಾಲೆಗೆ ಹೋಗಬೇದ ಬಾಲಕ‌ನ ಕೊರಳಲ್ಲಿ ಅನಾಥಾಶ್ರಮದ ಗುರುತಿನ ಚೀಟಿ.

Latest News >>

ಕಾಣೆಯಾದ ಐದು ವರ್ಷದ ಬಾಲಕಿ ಪತ್ತೆ ಕುಟುಂಬಸ್ಥರ ಮಡಿಲು ಸೇರಿದ ಬಾಲಕಿ

ಚಳ್ಳಕೆರೆ ಮಾ.3 ಮನೆಯಿಂದ ಕಾಣೆಯಾಗಿದ್ದ 5 ವರ್ಷದ ಬಾಲಕಿ‌ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ. ಹೌದು ಇದು ಚಳ್ಳಕೆರೆ ನಗರದ ಶಾಂತಿನಗರದ...

ಚಳ್ಳಕೆರೆಯಲ್ಲಿ 700 ಮನೆಗಳ ಲೋಕಾರ್ಪಣೆ ಮನೆ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

ಚಿತ್ರದುರ್ಗ ಮಾ.01: ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’...

ಸಹಕಾರ ಸಂಘಗಳು ಲೆಕ್ಕಪರಿಶೋಧಕರ ನೇಮಕ ಮಾಹಿತಿ ಸಲ್ಲಿಸಲು ಸೂಚನೆ

ಚಿತ್ರದುರ್ಗ ಫೆ.29: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8)ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ...

ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ: ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಚಿತ್ರದುರ್ಗ ಫೆ.28: ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016ರನ್ವಯ ಕರ್ನಾಟಕ...

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page