ಶಾಲೆಗೆ ತಪ್ಪಿಸಿಕೊಂಡ ವಿರ್ಥಿಯನ್ನು ತಳಿಸಿದ ಎಂ.ಡಿ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ

by | 02/12/22 | Uncategorized

ಚಳ್ಳಕೆರೆ ಡಿ.2 ವಿದ್ಯಾರ್ಥಿ ಶಾಲೆಗೆ ಗೈರು ಮನಬಂದಂತೆ ತಳಿಸಿದ ವ್ಯವಸ್ಥಾಪಕ ಆಸ್ಪತ್ರೆಗೆ ಸೇರಿದ ವಿದ್ಯಾರ್ಥಿ. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಶಾರದ ಕಾನ್ವೆಂಟ್ ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ಯಿರುವ ನಿತೀನ್ ಎಂಬ ವಿದ್ಯಾರ್ಥಿ ಸುಮಾರು ಆರು ದಿನಗಳಿಂದ ಶಾಲೆಗೆ ಹೋಗಿಲ್ಲ ವಿದ್ಯಾರ್ಥಿ ನಿತೀನ್ ದೊಡ್ಡ ಉಳ್ಖಾರ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿದೆ ಕಬ್ಬಡ್ಡಿ ಆಟ ಕಲಿತು ಕ್ರೀಡೆಯಲ್ಲಿ ಕಬ್ಬಡಿ ಆಟದಲ್ಲಿ ಪ್ರಥಮ ಬಹುಮಾನ ಪಡೆದು ಶಾರದ ಕಾನ್ವೆಂಟ್ ಗೆ ಕೀರ್ತಿ ತಂದಿದ್ದಾನೆ. ಕಬ್ಬಡ್ಡಿ ಆಟದ ವಿಚಾರವಾಗಿ ಹೆಚ್ಚಿನ ತರಬೇತಿ ಪಡೆಯಲು ಒಂದುವಾರ ಶಾಲೆಗೆ ಹೋಗಿಲ್ಲ ಎನ್ನಲಾಗಿದೆ. ಗುರುವಾರ ಶಾಲೆಗೆ ಹೋದಾಗ ಶಾಲೆಯ ಸನುಮತಿ ಪಡೆಯದೆ ನನಗೆ ಕೇಳದೆ ಹೋಗಿದ್ದೀಯ ಎಂದು ಕಾನ್ವೆಂಟ್ ಎಂ ಡಿ ಚಂದ್ರಪ್ಪ ವಿದ್ಯಾರ್ಥಿ ನಿತೀನ್ ಗೆ
ಗುರುವಾರ ಚನ್ಬಾಗಿ ಥಳಿಸಿದ್ದಾರೆ. ಈ ವಿಷಯವನ್ನು ತಂದೆ ತಾಯಿ ಬಳಿ ಹೇಳದೆ ನೋವನ್ನುಂಡು ಸುಮ್ಮನಾಗಿದ್ದಾನೆ. ಶುಕ್ರವಾರ ವಿದ್ಯಾರ್ಥಿಗೆ ಚಳಿ .ಜ್ವರ. ನಡುಕ. ಭಯವದಿಂದ ನಡಗುತ್ತಿರುವುದನ್ನು ಕಂಡು ತಕ್ಚಣ ಚಳ್ಳಕೆರೆ ನಗರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ ಆಗ ವಿದ್ಯಾರ್ಥಿ ತಂದೆ ತಾಯಿ ಬಳಿ ಶಾಲೆಯ ಎಂ ಡಿ ಚಂದ್ರಪ್ಪ ಗುರುವಾರ ಒಡೆದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ವಿದ್ಯಾರ್ಥಿಯ ಮಾವ ನಾಗರಾಜ್ ಶುಕ್ರವಾರ ರಾತ್ರಿ 10.30 ರ ಸೂಮಾರಿನಲ್ಲಿ ಜನಧ್ವನಿ ಯೊಂದಿಗೆ ಮಾತನಾಡಿ ಸಂಬಂಧ ಪಟ್ಟ ಅಧಿಕಾರಿಗಳು ಮಗುವಿಗೆ ಹೊಡೆದಿರುವ ಶಾಲೆಯ ಎಂ ಡಿ ಚಂದ್ರಪ್ಪ ಇವರಿಗೆ ಸೋಕ್ತ ಕ್ರಮ ಕೈಗೊಳ್ಳುವಂತೆ ಅಳಲು ತೋಡಿಕೊಂಡಿದ್ದಾರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *