ಜನಧ್ವನಿ ಎಫೆಕ್ಟ್
ಚಳ್ಳಕೆರೆ.
ಶಾಲಾ ಕಾಲೇಜು, ವಿದ್ಯಾರ್ಥಿನಿಯಲಗಳ ಬಳಿ ಗುಟ್ಕಾ, ತಂಬಾಕು ನಿಶೇಷದದ ನಡುವೆಯೂ ವಸತಿ ನಿಯಲದಲ್ಲಿ ವಿದ್ಯಾರ್ಥಿಗಳು ಗೋಡೆಗಳ ಮೇಲೆ ಗುಡ್ಕಾ ಉಗಿದಿರುವುದ ಕಂಡು ಜಿಲ್ಲಾ ತಂಬಾಕು ನಿಯಂತ್ರಾಣಾಧಿಕಾರಿ ಆತಂಕ ವ್ಯಕ್ತಪಡಿಸಿದರು.
ಆನಧ್ವನಿ ವೆಬ್ ಪತ್ರಿಕೆಯಲ್ಲಿ ಹೊರಗೆ ಸುಂದರವಾದ ಕಟ್ಟಡಗಳು ಒಳಗೆ ಗೋಡೆಗಳ ಮೇಲೆ ಗುಟ್ಕಾ ಉಗಿದಿದುವುದು ಗೋಡೆಗಳು ವಿರೂಪಗೊಳಿಸಿರುವ ಬಗ್ಗೆ ೧೭ ರ ಶನಿವಾರ ಸುದ್ದಿ ಪ್ರಕಟಿದ ಬೆನ್ನಲ್ಲೇ ಜಿಲ್ಲಾ ತಂಪಾಕು ನಿಯಂತ್ರಾಧ ಕೋಶಾಧಿಕಾರಿ ಪ್ರಭುದೇವ್ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗೋಡೆಗಳ ಮೇಲಿನ ಗುಟ್ಕಾ ಕಲೆಗಳ ದೃಶ್ಯ ಕಂಡು ಬಂತು.
ವಿದ್ಯಾರ್ಥಿನಿಯಲಗಳ ನಿಲಯ ಪಾಲಕರು ಹಾಗೂ ಸಿಬ್ಬಂದಿಗಳು ಕರ್ತವ್ಯದ ವೇಳೆ ಗುಡ್ಕಾ ಸೇವಿಸುವುದಿಲ್ಲ ಎಂದು ದೃಡೀಕರಣ ಬರೆದು ಕೊಡ ಬೇಕು ಜತೆಗೆ ಪ್ರತಿ ನಿತ್ಯ ವಿದ್ಯಾಥಿಗಳು ಒಳ ಪ್ರವೇಶ ಮಾಡುವಾಗಿ ಬ್ಯಾಗ್ ಹಾಗೂ ಜೇಬುಗಳನ್ನು ತಪಾಸಣೆ ಮಾಡ ಬೇಕು ಸಿಕ್ಕಲ್ಲಿ ವಸತಿ ನಿಯಲದಿಂದ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡ ಬೇಕು.
ಗೋಡೆಗಳ ಮೇಲೆ ಹಾಗೂ ವಸತಿ ನಿಲಯದ ನೂರು ಮೀಟರ್ ಹಂತದಲ್ಲಿ ಗುಟ್ಕಾ ಮಾರಾಟ ಹಾಗೂ ಸೇವನೆ ಮಾಡಿದ ಕಾನೂನು ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಕೂಡಲೆ ವಿದ್ಯಾರ್ಥಿನಿಯಗಳು ಗುಟ್ಕಾ ಹಾಗೂ ತಂಬಾಕು ಮುಕ್ತ ಎಂದು ನಾಮಫಲಕ ಅಳವಡಿಸುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿನಿಯಲದ ವಾರ್ಡ್ನ್ ಚಂದ್ರನಾಯಕ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸಾ ಕೇಂದ್ರಗಳಾಗಿ ನಿರ್ಮಿಸಿದ್ದರಿಂದ ಕೊರಾನ ಸೋಂಕಿತರು ಗುಟ್ಕಾ ಉಗಿದ್ದಾರೆ ಎಂದು ಉತ್ತರಿಸಿದಸರು.
ತಂಬಾಕು ನಿಯಂತ್ರಾಣಾಧಿಕಾರಿ ಪ್ರಭುದೇವ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಗುಟ್ಕಾ ಹಾಗೂ ಅಡಿಕೆ ಚೀಟಿಗಳ ಮಾರಾಟವನ್ನು ನಿಶೇದ ಮಾಡಲಿಗಿತ್ತು ಗುಟ್ಕಾ ಸಾರ್ವಜನಿಕ ಸ್ಥಲದಲ್ಲಿ ಉಗಿದರೂ ದಂಡ ಹಾಕಲಾಗಿದೆ ಕೂಡಲೆ ಗುಟ್ಕಾ ಕಲೆಗೆ ಬಣ್ಣವನ್ನು ಬಳಿಯುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಸಿಎಂ ಅಧಿಕಾರಿ ದಿವಕರ್ ಬಾಬು ಸಿಬ್ಬಂದಿಗಳಿದ್ದರು.
0 Comments