ಶಾಲಾ ಅನುದಾನ ದುರ್ಬಳಕೆ ಬೆನ್ನಲ್ಲೇ ಬಿಸಿಯೂಟದ ಜತಗೆ ನೀಡುವ ಮೊಟ್ಟೆ ಅನುದಾನ ದುರ್ಬಳಕೆ ಬಯಲು..

by | 01/07/24 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಜು.1 ಶಾಲಾ ಅಭಿವೃದ್ಧಿ ಹಣ ದುರ್ಬಳಕೆ ಮಾಡಿಕೊಂಡು ಎಸ್ ಡಿ ಎಂಸಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿ ಮರಳಿ ಕಟ್ಟಿದ ಬೆನ್ನಲ್ಲೇ ಈಗ ಮಕ್ಕಳ ಮೊಟ್ಟೆಯ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಬೆಳೆಕಿಗೆ ಬಂದಿದೆ.

25/1/2024 ರಂದು 1,54,868 ರೂಗಳನ್ನು ಬಿಸಿಕೊಂಡಿರುವುದು ಬೆಳಕಿಗೆ ಬಂದಾಗ 10-2-2024 ರೊಳಗೆ ಹಣ ಶಾಲಾ ಬ್ಯಾಂಕ್ ಖಾತೆಗೆ ತುಂಬುವುದಾಗಿ ಮುಖ್ಯ ಶಿಕ್ಷಕ ಬರೆದಿಟ್ಟ ಮುಚ್ಚಳಿಗೆ ಪತ್ರ.
ಹೌದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಅಭಿವೃದ್ಧಿಗೆಂದು ಬಂದ 5 ಲಕ್ಷ ರೂ ಹಣದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರ ಸದಸ್ಯರ ಗಮನ್ನೂ ತಾರದೆ ಸುಮಾರು 1,54,868 ರೂ ಹಣ ಬ್ಯಾಂಕ್ ಖಾತೆಯಿಂದ ಬಿಡಿಸಿ ಮಗನ ಶಿಕ್ಷಣ ಶುಲ್ಕ ಕಟ್ಟಿರುವುದಾಗಿ ತನಿಖೆಯಿಂದ ಬಯಲಾಗಿ ಮರಳಿ ಕಟ್ಟುವುದಾಗಿ ಮುಖ್ಯ ಶಿಕ್ಷಕನೇ ಲಿಖಿತ ತಪ್ಪನ್ನು ಒಟ್ಟಿಕೊಂಡು ಸಮಯ ಪಡೆದು ಹಣ ಖಾತೆಗೆ ಜಮೆ ಮಾಡುತ್ತೇನೆ ಎಂದು ಮುಚ್ಚಳಿಗೆ ಪತ್ರ ಬರೆದು ಕೊಟ್ಟು ಖಾತೆ ಜಮೆ ಮಾಡಿರುವ ಬೆನ್ನಲ್ಲೇ ಈಗ ಬಿಸಿಯೂಟದ ಜತಗೆ ನೀಡುವ ಮೊಟ್ಟೆಯ ಅನುದಾನ ದುರ್ಬಳಕೆ ಮಾಡಿರುವುದು ಕಂಡು ಬಂದಿದೆ.
ವಿದ್ಯಾರ್ಥಿಯ ತಂದೆ ರಂಗಸ್ವಾಮಿ ಮಾತನಾಡಿ ಸಾರ್ ಶಾಲೆಯಲ್ಲಿ ನನ್ನ ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಜೂನ್ ತಿಂಗಳಲ್ಲಿ ಮೊಟ್ಟೆ ಕೊಟ್ಟಿರಲ್ಲಿಲ್ಲ ನಾನೇ ಶಾಲೆ ಬಳಿ ಹೋಗಿ ಮುಖ್ಯ ಶಿಕ್ಷಕರ ಬಳಿ ಪ್ರಶ್ನೆ ಮಾಡಿದ್ದಕ್ಕೆ ಗುರುವಾರ ಮಾತ್ರ ಮೊಟ್ಟೆ ನೀಡಿದ್ದಾರೆ ಎಂದು ಜನಧ್ವನಿಡಿಜಿಟಲ್ ಮೀಡಿಯಾದೊಂದಿಗೆ ದೂರು ಹಂಚಿಕೊಂಡಿದ್ದರು.
ಪೋಷಕನ ಮನವಿಯಂತೆ ಜನಧ್ವನಿ ಡಿಜಿಟ್ ಮೀಡಿಯಾ ಸಾಣಿಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಿಯಾಲಿಟ್ ಚೆಕ್ ಮಾಡಲು ಸೋಮವಾರ ಬೆಳಗ್ಗೆ 10 ಗಂಟೆಗೆ ಶಾಲೆಗೆ ಭೇಟಿ ನೀಡಿದಾಗ ಸರಕಾರಿ ಶಾಲೆಯ ಒಳಗೆ ಬರಲು ಶಿಕ್ಷಣ ಇಲಾಖೆ ಅನುಮತಿ ಪಡೆಯ ಬೇಕು ಎಂದು ಅಡ್ಡಿಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರವಾಣಿ ಮೂಲಕ ತಿಳಿಸಿದಾಗ ಅವರಿಗೆ ಮಾಹಿತಿ ಪಡೆಯಲು ಅಡ್ಡಿ ಮಾಡ ಬೇಡಿ ತಿಳಿಸಿದಾಗ ಕೆಲ ವಿದ್ಯಾರ್ಥಿಗಳ ಸಂಪರ್ಕಿಸಿ ತಿಂಗಳಿಗೆ ಎಷ್ಟು ದಿನ ಮೊಟ್ಟೆ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಜೂನ್ ತಿಂಗಳಲ್ಲಿ ಕೊಟ್ಟಿಲ್ಲ ಕೊನೆಯ ಗುರುವಾರ ಮಾತ್ರ ಒಂದು ಮೊಟ್ಟೆಕೊಟ್ಟಿದ್ದಾರೆ ಎಂದು ಮಕ್ಕಳು ಜನಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡರು ಆಗ ಕ್ಷೇತ್ರ ಶಿಕ್ಷಣಾಧಿಕಾರಿ ತಿಂಗಳಿಗೆ ಒಂದೆ ಮೊಟ್ಟೆ ಕೊಟ್ಟೀದ್ದಾರೆ ಎಂದು ಮುಖ್ಯ ಶಿಕ್ಷಕನಿಗೆ ದೂರವಾಣಿ ಮೂಲಕವೇ ಮಾಹಿತಿ ಕೇಳಿದಾಗ ಮುಖ್ಯ ಶಿಕ್ಷಕ ಇಲ್ಲ ಸಾರ್ ಹೊರಸಂಚಾರ ಹೋಗಿದ್ದೆವು ಆಗಾಗಿ ನೀಡಿಲ್ಲ ಅವು ಸೇರಿ ಕೊಡುತ್ತೇನೆ ಎಂದು ಉತ್ತರ ನೀಡಿದರು.
ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಸರಕಾರ ಬಿಸಿಯೂಟದ ಜತೆಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ಮುಂದಾಗಿದೆ ಆದರೆ ಮಕ್ಕಳಿಗೆ ನೀಡುವ ಮೊಟ್ಟೆಯ ಅನುದಾವನ್ನೂ ಸಹ ಗುಳುಂ ಮಾಡುವ ಮುಖ್ಯ ಶಿಕ್ಷಕರೂ ಸಹ ಇದ್ದಾರೆ ಎಂಬುದಕ್ಕೆ ಸಾಣಿಕೆರೆ ಗ್ರಾಮದ ಮುಖ್ಯ ಶಿಕ್ಷಕರೇ ಸಾಕ್ಷಿಯಾಗಿದ್ದಾರೆ.
ಸರಕಾರಿ ಶಾಲಾ ಆವರಣದಕ್ಕೆ ಪ್ರವೇಶ ಮಾಡಲು ಶಿಕ್ಷಣ ಇಲಾಖೆ ಅನುಮತಿ ಬೇಕು ,ಆದರೆ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಮೊಟ್ಟೆ ಅನುದಾನ ಹಾಗೂ ಶಾಲಾ ಆಭಿವೃದ್ಧಿ ಅನುದಾನ ದುರ್ಬಳಕೆ ಮಾಡಿಕೊಳ್ಳಲು ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದರೇ ಎಂಬ ಪ್ರಶ್ನೆ ಅನುಮಾನಕ್ಕೆ ಎಡೆ ಮಾಡಿದೆ.
ಅಕ್ಷರದಾಸಹೋಹ ಸಹಾಯಕ ನಿರ್ಶೇಕ ತಿಪ್ಪೇಸ್ವಾಮಿ ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿದಾಗ ತಿಂಗಳಲ್ಲಿ ನಾಲ್ಕು ದಿನ ಕೊಟ್ಟಿದ್ದೇನೆ ಎಂದು ಲೆಕ್ಕ ತೋರಿಸಲಾಗಿದೆ ಉಳಿದ ಮೊಟ್ಟೆ ಎಲ್ಲಿ ಎಂದು ಕೇಳಿದಾಗ ಕೊಡುತ್ತೇನೆ ಎಂಬ ಉತ್ತರ ನೀಡಿದ್ದಾರೆ.
25/1/2024 ರಂದು 1,54,868 ರೂಗಳನ್ನು ಬಿಸಿಕೊಂಡಿರುವುದು ಬೆಳಕಿಗೆ ಬಂದಾಗ 10-2-2024 ರೊಳಗೆ ಹಣ ಶಾಲಾ ಬ್ಯಾಂಕ್ ಖಾತೆಗೆ ತುಂಬುವುದಾಗಿ ಮುಚ್ಚಳಕಿಗೆ ಬರೆದುಕೊಟ್ಟಿದ್ದರೂ ಸಹ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದೇ ಮತ್ತೆ ಈಗ ವಿದ್ಯಾರ್ಥಿಗಳ ಮೊಟ್ಟೆಯ ಅನುದಾನ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಪುಷ್ಠಿ ನೀಡಿದಂತಿದೆ.

Latest News >>

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್ ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು....

ಬೆಸ್ಕಾಂ: ನೀರಾವರಿ ಪಂಪ್‍ಸೆಟ್ ಬಳಕೆದಾರರು ಆರ್ ಆರ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ

ಚಿತ್ರದುರ್ಗಜು 15 ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page