ವ್ಯಸನ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಸ್ವಪ್ರೇರಣೆಯಿಂದ ವ್ಯಸನಮುಕ್ತರಾಗಿ ಜೀವನ ನಡೆಸಿದಲ್ಲಿ ಅದುವೇ ನೀವು ಶಿಬಿರ ಆಯೋಜಕರಿಗೆ ನೀಡುವ ದೊಡ್ಡ ಗೌರವವಾಗಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ .

by | 09/10/23 | ಆರೋಗ್ಯ



ಚಳ್ಳಕೆರೆ ಜನಧ್ವನಿವಾರ್ತೆ ಅ.9. ವ್ಯಸನ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ. ಶಿಬಿರದಲ್ಲಿ ಪಾಲ್ಗೊಂಡವರು ಸ್ವಪ್ರೇರಣೆಯಿಂದ ವ್ಯಸನಮುಕ್ತರಾಗಿ ಜೀವನ ನಡೆಸಿದಲ್ಲಿ ಅದುವೇ ನೀವು ಶಿಬಿರ ಆಯೋಜಕರಿಗೆ ನೀಡುವ ದೊಡ್ಡ ಗೌರವವಾಗಿರುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಅನಂತನಾಥ ಜೈನ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ. ಜಿಲ್ಲಾ ಹಾಗೂ ತಾಲೂಕು ಮದ್ಯವರ್ಜನ ಸಮಿತಿ ,ಜಿಲ್ಲಾ ಹಾಗೂ ತಾಲೂಕಿನ ಜನಜಾಗೃತಿ ವೇಧಿಕೆಗಳ ಸಹಯೋಗದಲ್ಲಿ 1736 ನೇ ಆಯೋಜಿಸಿದ್ ಮದ್ಯವರ್ಜನ ಶಿಬಿರದ ಸಮರೋಪ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.

ನಾನು ಕ್ಷೇತ್ರದ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನು ತೆರೆಯಲು ಬಿಟ್ಟಿಲ್ಲ ಬಿಡುವುದಿಲ್ಲ ಈಗಾಗಲೆ ಗ್ರಾಮೀಣ ಭಾಗದಲ್ಲಿ ಅಕ್ರಮಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದುಶ್ಚಟಗಳಲ್ಲೇ ಮದ್ಯಪಾನ ಮೊದಲು. ಅದನ್ನು ಬಿಟ್ಟರೆ ಎಲ್ಲಾ ದುಶ್ಚಟಗಳು ಬಿಡುವುದಕ್ಕೆ ಸೂಕ್ತವಾದ ಮಾರ್ಗವನ್ನು ಮನಸ್ಸೇ ತೋರಿಸುತ್ತದೆ.
ಕುಡಿತಕ್ಕೆ ದಾಸರಾದವರು ಮನೆಯಲ್ಲಿ ಹಣ ಕೊಡದಿದ್ದರೆ ಕುಡಿತದ ಚಟಕ್ಕಾಗಿ ತಾಯಿ, ತಂದೆ, ಹೆಂಡತಿಯರ ಕೊಲೆ ಮಾಡಿರುವ ಹಾಗೂ ಜಗಳ ಮಾಡಿ ಹೊಡೆದಿರುವ ಘಟನೆಗಳನ್ನು ನಾವು ಮಾಧ್ಯಮದ ವರದಿಯಲ್ಲಿ ಕಾಣ ಬಹುದು ಆದ್ದರಿಂದ ಮದ್ಯ ಹಾಗೂ ದುಶ್ಚಟಗಳಿಂದ ಮುಕ್ತರಾಗುವಂತೆ ತಿಳಿಸಿದರು.
ಧ. ಗ್ರಾ.ಅ.ಜಿಲ್ಲಾನಿರ್ದೇಶಕ ವಿನಯ್ ಕುಲಕರ್ಣಿ ಸುವರ್ಣ ಮಾತನಾಡಿ ವ್ಯಸನ ಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಉದ್ದೇಶವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡ ಮದ್ಯವರ್ಜನ ಶಿಬಿರ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಈವರೆಗೆ 1736 ಶಿಬಿರಗಳು ನಡೆದಿದ್ದು ಈವರೆಗೆ 1. ಜನರನ್ನು ವ್ಯಸನ ಮುಕ್ತರನ್ನಾಗಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಪಂ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ. ರಾಘವೇಂದ್ರ, ಬಿ.ಸಿ.ಸಂಜೀವಮೂರ್ತಿ, ಸಾಲ್ವೆಂಟ್ ಪ್ರಕಾಶ್, ದೊಡ್ಡರಂಗಪ್ಪ , ನೇತಾಜಿ ಪ್ರಸನ್ನ, ಮಾರುತೇಶ್,ಕಿಶೋರ್ ಶೆಟ್ಟಿ,ಓಂಕಾರಪ್ಪ,ಮಂಜುನಾಥ, ಪಿಎಸ್ಐ ಸತೀಶ್ ನಾಯ್ಕ, ಗೀತಾ,ಸರಸ್ವತಮ್ಮ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *