ವಿಜಯನಗರ: ಯುವತಿಯ ವಿವಾಹ ನಿಶ್ಚಿತಾರ್ತದ ದಿನವೇ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೇ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ನಡೆದಿದೆ.
ಐಶ್ವರ್ಯ ನೇಣಿಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಮದುವೆ ಸಂಭ್ರಮದಲ್ಲಿರಬೇಕಾದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಯುವತಿ. ಕಳೆದ
6 ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದ ಆಶೋಕ ಮತ್ತು ಐಶ್ವರ್ಯ , ಇಬ್ಬರೂ ಖಾಸಗಿ ಕಂಪನಿಯ ಉದ್ಯೋಗಿಗಳು. ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಮೇರೆಗೆ ಅಂತರ್ಜಾತಿ ವಿವಾಹವಾಗಲು ಸಿದ್ದರಾಗಿದ್ದರು. ಹುಡುಗಿ ಹುಡುಗ ಅಂತರ್ಜಾತಿ ಹಿನ್ನೆಲೆ ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ ಯುವಕನ ಕಡೆಯವರು.
ಬಳಿಕ ಸಂಪ್ರದಾಯದಂತೆ ಮದುವೆ ಮಾಡಿಕೊಳ್ತೇವೆಂದು ಶಾಸ್ತ್ರ ಇದೆ ಎಂದು ಯುವತಿಯನ್ನು ಕರೆದುಕೊಂಡು ಹೋಗಿದ್ದರು. ಹುಡುಗಿ ಕಡೆಯವರು ಯಾರೂ ಬರಬಾರದೆಂದು ಷರತ್ತು ಹಾಕಿ ಕರೆದುಕೊಂಡು ಹೋಗಿದ್ದ ಅಶೋಕನ ಕುಟುಂಬಸ್ಥರು. ಅವರ ಹಿಂದೆ ಒಬ್ಬಳೇ ಹೋಗಿದ್ದ ಐಶ್ವರ್ಯಾ ಇದೀಗ ದಿಢೀರನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕತೆ ಕಟ್ಟಿದ್ದಾರೆ ಎಂದು ಯುವತಿ ಮನೆಯವರು ಆರೋಪಿಸುತ್ತಿದ್ದಾರೆ.
ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಆದ್ರೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಯುವತಿ ಪೋಷಕರು ಯುವಕನ ಹಾಗೂ ಆತನ ಮನೆಯವರ ವಿರುದ್ಧ ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
0 Comments