ವೈರಲ್

ಸರ್ಕಾರಿ ಅಧಿಕಾರಿ ಲಂಚ ಕೇಳಿದರೆರವಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಥವಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪದಾಧಿಕಾರಿಗಳನ್ನು ಸಂಪರ್ಕಿಸಿ ರವಿಕೃಷ್ಣರೆಡ್ಡಿ.

ಲಂಚ ಪಡೆದಿದ್ದ ಪ್ರಭಾರ ಉಪನೋಂದಣಾಧಿಕಾರಿ ಶ್ರೀಮತಿ ಯಶೋಧ ಕೆಲಸದಿಂದಲೆ ವಜಾ…

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಉಪನೋಂದಣಾಧಿಕಾರಿ ಕಚೇರಿಯ ಪ್ರಭಾರ ಉಪನೋಂದಣಾಧಿಕಾರಿ ಶ್ರೀಮತಿ ಯಶೋಧ ಕಚೇರಿಯಲ್ಲಿ ಲಂಚದ ಹಣದ ಸ್ವೀಕರಿಸಿದ ವಿಚಾರವಾಗಿ ವಿಡಿಯೋ ಸಹಿತ *ಲಂಚಮುಕ್ತ ಕರ್ನಾಟಕ ನಿರ್ಮಾಣ ವೇಧಿಕೆ (ರಿ)* ದೂರು ದಾಖಲಿಸಿ ನಿರಂತರ ಹೊರಾಟ ಮಾಡಿದ ಪರಿಣಾಮವಾಗಿ, ಅವರು ಲಂಚ ಸ್ವೀಕರಿಸಿದ್ದು ಸಾಬೀತಾಗಿರುವ ಕಾರಣ ಈಗ ಸರ್ಕಾರಿ ಕೆಲಸದಿಂದ ವಜಾ ಆಗಿದ್ದಾರೆ.


ಯಾವುದೇ ಸರ್ಕಾರಿ ಅಧಿಕಾರಿ ಲಂಚ ಕೇಳಿದ ಪಕ್ಷದಲ್ಲಿ ದಯವಿಟ್ಟು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ (888427730) ಅಥವಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (7975625575) ಪದಾಧಿಕಾರಿಗಳನ್ನು ಸಂಪರ್ಕಿಸಿ.

ಪ್ರಭಾಕರ ಮ್ಯಾಸನಾಯಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಅಂತರಾಳದ ಮಾತು

ಆತ್ಮೀಯರೇ..

ಕೊನೆಗಳಿಗೆ ತನಕ ಹೋರಾಟ ಮಾಡಿದ್ದರ ಫಲವಾಗಿ ಅಭಿಮನ್ಯುವಿಗೆ ಶೂರ ಎಂಬ ಬಿರುದು ಬಂತು ಎಂದು ಕೇಳಿದ್ದೇವೆ. ಅಭಿಮನ್ಯು ನನಗೆ ಪ್ರೇರಣೆ. ಅದೇ ರೀತಿ ಮಾಡಿದಷ್ಟು ನೀಡುಭಿಕ್ಷೆಯ ಶ್ರೀಕ್ಷೇತ್ರ ಇರುವುದು ಕೂಡ ಮೊಳಕಾಲ್ಮೂರು ಕ್ಷೇತ್ರದಲ್ಲಿ. ಇಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಕೈಗೊಂಡಿದ್ದೇನೆ. ನನ್ನ ಪರಿಶ್ರಮಕ್ಕೆ ಭಗವಂತ ಕೈ ಹಿಡಿದು ನಡೆಸುತ್ತಾನೆ ಎಂಬ ಅಚಲ ನಂಬಿಕೆ ನನ್ನದು. ಈಗಲೂ ಕ್ಷೇತ್ರದ ಜನರೊಡನೆ ಇದ್ದೇನೆ, ಮುಂದೆಯೂ ಇರುತ್ತೇನೆ.ನನ್ನ ನೋಡಿ ನಗುವವರು ಆಡಿಕೊಳ್ಳುವವರು, ಕಿಚಾಯಿಸುವವರು ಹಾಗೂ ನನಗೆ ಮಾಡುತ್ತಿರುವ ಅಪಮಾನ ಅವಮಾನಗಳು ಎಲ್ಲವೂ ನನಗೆ ಪ್ರೇರಣೆಯಾಗಿದೆ.
ಇವೆಲ್ಲವೂ ನನ್ನನ್ನು ಮತ್ತಷ್ಟು ಸದೃಢನನ್ನಾಗಿಸಿದೆ. ನನಗೆ ಅಪಮಾನ ಅವಮಾನ ಮಾಡುತ್ತಿರುವ ಎಲ್ಲರನ್ನು ಬಸವಣ್ಣನವರ ಹೇಳಿರುವ ವಚನದಂತೆ ಜರಿದವರೆನ್ನ ಜನ್ಮ ಬಂಧುಗಳೆಂಬಂತೆ ಅತ್ಯಂತ ಸ್ನೇಹಭಾವದಿಂದ ಸ್ವೀಕರಿಸಿದ್ದೇನೆ.
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿರುವಂತೆ *ಕನಸಿನ ಗುರಿ ಕೇಳಿ ಜನ ಇವನೊಬ್ಬ ಹುಚ್ಚ ಎನ್ನಬೇಕು ಗುರಿ ತಲುಪಿದ ಮೇಲೆ ನೋಡಿ ನಗಾಡಿರುವವರು ಹುಚ್ಚರಾಗಬೇಕು* ಇವು ನನಗೆ ಆದರ್ಶ ನುಡಿಗಳು ಕ್ಷೇತ್ರದಲ್ಲಿ ನನ್ನ ಗುರಿ ತಲುಪುತ್ತೇನೆ. ನನ್ನ ಮಾತೃಸಮಾನ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ವಿಶ್ವಾಸವಿದೆ. ಮತದಾರ ದೇವರುಗಳ ಆಶೀರ್ವಾದದಿಂದ ಶಾಸಕನಾಗುತ್ತೇನೆ ಎಂಬ ಅಧಮ್ಯ ವಿಶ್ವಾಸ ನನ್ನದು. ಇದಕ್ಕೆ ಕ್ಷೇತ್ರದ ಜನರ ಸಹಕಾರ ಕೋರುತ್ತೇನೆ. ಮಹಾತ್ಮ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ ಆರಂಭ ಮಾಡಿದಾಗ ಹಿಂದೆ ಬಂದವರು ಕೇವಲ ಮೂರು ಜನ ಮಾತ್ರ ಹಾಗೆ ಶಿವಾಜಿ ಮಹಾರಾಜರು ಸೈನ್ಯ ಕಟ್ಟಲು ಹೊರಟಾಗ ಸಿಕ್ಕಿದ್ದು ಹಸು ಮೇಯಿಸುವ ನಾಲ್ಕಾರು ಹುಡುಗರು ಮಾತ್ರ. ಇವರ್ಯಾರು ಎದೆಗುಂದದೆ ಸೈನ್ಯ ಕಟ್ಟಿ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ. ಹಾಗೆ ನಾನು ಕೂಡ ಶುಭೋದಯ ಕಾರ್ಯಕ್ರಮ ಮುಖೇನ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುತ್ತೇನೆ. *ನನ್ನ ತಾಯಿ ನನಗೆ ಕಲಿಸಿಕೊಟ್ಟ ಸಂಸ್ಕಾರ*
ಯಾರಿಗೂ ನೋವುಂಟು ಮಾಡಬೇಡ ಯಾರಿಗೂ ಕೆಡಕು ಬಯಸಬೇಡ ಎಂದು ನನ್ನ ತಾಯಿ ಅನಕ್ಷರಸ್ಥೆ ಆದರೂ ಮೇಲಿನಂತೆ ಸದಾ ಹೇಳುತ್ತಿದ್ದರು. ಅಣ್ಣ ಶ್ರೀರಾಮುಲು ಅವರ ಬಗ್ಗೆ ಆವೇಶದಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ಇತ್ತೀಚೆಗೆ ಸ್ನೇಹಿತನೋರ್ವ ಒಂದು ಆಡಿಯೋ ಒಂದು ವೈರಲ್ ಮಾಡಿದ್ದರು. ಅದು ನನ್ನನ್ನು ಮಾನಸಿಕವಾಗಿ ಬಹಳ ನೋಯಿಸಿದೆ. ಇದು ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ. ಯಾರು ಈ ಬಗ್ಗೆ ಅನ್ಯತಾಭಾವಿಸಬಾರದು ಈ ಬಗ್ಗೆ ಅವರಲ್ಲಿ ಹಾಗು ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದೇನೆ ಪಕ್ಷದಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರು, ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯೋಣ ಪಕ್ಷ ಗೆಲ್ಲಿಸೋಣ ಎಂದು ಆಶಿಸುತ್ತಾ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ

ಇಂತಿ ನಿಮ್ಮ ಪ್ರೀತಿಯ
ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಪ್ರಕಾಶ್ ಹಿರಿಯೂರು

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಸಾಮಾಜಿಕ ಜಾಲತಾಣದ ಮುಖಪುಟದ ವೈರಲ್
************
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವುದು ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದರೂ, ಸರ್ಕಾರದ ಆಡಳಿತದ ಎಂಜಿನ್ ಇರೋದು ಕಾರ್ಯಾಂಗದ ಬ್ಯೂರೋಕ್ರೆಸಿಯ ಕೈಯಲ್ಲಿಯೇ ! ಅದರಲ್ಲೂ ಮುಖ್ಯವಾಗಿ IAS ಮತ್ತು IPS ಗಳದ್ದೇ ಇಲ್ಲಿ ಕಾರುಬಾರು. ನಾಗರಿಕ ಸೇವಾ ಅಧಿಕಾರಿಗಳು ದಕ್ಷರು, ಸೇವಾ ಮನೋಭಾವ ಉಳ್ಳವರು ಹಾಗೂ ಸಾಮಾನ್ಯ ಜನರ ನೋವಿಗೆ ದನಿಯಾಗುವವರೂ ಆಗಿದ್ದಲ್ಲಿ ನಿಸ್ಸಂಶಯವಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದೇ ಬರುತ್ತದೆ. ಒಂದೊಮ್ಮೆ ಬ್ಯೂರೋಕ್ರೆಸಿಯಲ್ಲಿ ಮಾನವೀಯ ಅಂತಃಕರಣವಿಲ್ಲದ , ಜನರ ಭಾವನೆಗಳಿಗೆ ಸ್ಪಂದಿಸದ ಅಥವಾ ಎಲ್ಲದರಲ್ಲೂ ವಿವಾದವೆಬ್ಬಿಸುವ ಸ್ವಪ್ರತಿಷ್ಠೆಯ ಅಧಿಕಾರಿಗಳೇ ತುಂಬಿದ್ದಲ್ಲಿ ಶಾಸಕಾಂಗ ಎಷ್ಟೇ ಪ್ರಬಲವಾಗಿದ್ದರೂ ಸರ್ಕಾರಕ್ಕೆ ಕೆಟ್ಟ ಹೆಸರು ಗ್ಯಾರಂಟೀ ! ಇದು ಡೆಮೊಕ್ರೆಸಿಯ ಮೇಲಿನ ಬ್ಯೂರೋಕ್ರೆಸಿಯ ಹಿಡಿತದ ಒಂದು ಝಲಕ್.

ಕಳೆದ ವರ್ಷವಷ್ಟೇ ಮೈಸೂರಿನ ಜಿಲ್ಲಾಧಿಕಾರಿ ಯಾಗಿದ್ದ ಶ್ರೀಮತಿ ರೋಹಿಣಿ ಸಿಂಧೂರಿ ಹಾಗೂ ಆಯುಕ್ತರಾಗಿದ್ದ ಶ್ರೀಮತಿ ಶಿಲ್ಪಾನಾಗ್ ಎಂಬ ಇಬ್ಬರು ಮಹಿಳಾ ಐ.ಎ.ಎಸ್ ಅಧಿಕಾರಿಗಳ ನಡುವಿನ ಅಂತರ್ಯುದ್ಧ ರಾಜ್ಯಾದ್ಯಂತ ಬೇಡದ ಕಾರಣಕ್ಕೆ ಸುದ್ದಿಮಾಡಿ ಜನರ ಗಮನ ಸೆಳೆದು ಕೊನೆಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಅದನ್ನು ಬಗೆಹರಿಸುವಂತಹ ಸೆನ್ಸಿಟೀವ್ ಸೀನ್‌ ಕ್ರಿಯೇಟ್ ಆಗಿತ್ತು. ಈಗ ಅದೇ ಮಹಿಳಾ ಅಧಿಕಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈಗಿನ ಬಹಿರಂಗ ಯುದ್ಧದಲ್ಲಿ ರೋಹಿಣಿ ವಿರುದ್ಧ ಕತ್ತಿ‌ಗುರಾಣಿ ಹಿಡಿದಿರುವವರು ರೂಪಾ ಮೌದ್ಗಿಲ್ ಎಂಬ ಐಪಿಎಸ್ ಅಧಿಕಾರಿ.

ಈ ಇಬ್ಬರು ಸ್ಮಾರ್ಟ್ ಅಧಿಕಾರಿಗಳ ಶೀತಲ ಸಮರ ಆಡಳಿತಾತ್ಮಕ ಕಾರಣಕ್ಕೆ ಸುದ್ದಿಯಾಗಿದ್ದಲ್ಲಿ ಅದು ರಾಜ್ಯದ ಸಾಮಾನ್ಯಜನರ ಗಮನವನ್ನು ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಆದರೆ ಇಲ್ಲಿ ವೈಯಕ್ತಿಕ ಕಾರಣ ಹಾಗೂ ವೃತ್ತಿ ಮಾತ್ಸರ್ಯದ ಸೋಂಕು ಎರಡೂ ಲಿಂಕ್ ಆಗಿ ಸಿಂಧೂರಿಯವರ ಸುತ್ತ ನಡೆದಿದೆಯೆನ್ನಲಾದ ಅನೇಕ ಹಳೆಯ ವರ್ಣರಂಜಿತ ಘಟನಾವಳಿಗಳಿಗೆ ಸ್ಪೈಸೀ ಟಚ್ ಕೊಟ್ಟು ಇಂತಹಾ ಸುದ್ದಿಗಳಿಗಾಗಿಯೇ ಬಕಪಕ್ಷಿಗಳಂತೆ ಕಾದು ಕೂತಿರುವ ಮಾಧ್ಯಮಗಳಿಗೆ ಮಟನ್ ಬಿರಿಯಾನಿ ಕೊಟ್ಟಂತಿದೆ !

ಈ ಹಿಂದೆ ರೋಹಿಣಿ ಸಿಂಧೂರಿಯವರು ಜೆಡಿಎಸ್ ಶಾಸಕರೊಬ್ಬರ ಆಸ್ತಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಹಿರಂಗವಾಗಿ ಫ಼ೈಟ್ ಮಾಡಿದ್ದು ಜಗಜ್ಜಾಹೀರಾಗಿತ್ತು. ಈಗ ಅದೇ ಶಾಸಕರೊಂದಿಗೆ ಈಯಮ್ಮ ಸಂಧಾನಕ್ಕಾಗಿ ಮುಂದಾಗಿರುವ ವಿಚಾರವನ್ನು ಹಿಡಿದುಕೊಂಡು ರೂಪಾ ಮೌದ್ಗಿಲ್ ರವರು ರೋಹಿಣಿಯವರ ವಿರುದ್ಧ ನಿನ್ನೆಯಿಂದ ತಮ್ಮ ಫ಼ೇಸ್ ಬುಕ್ ನಲ್ಲಿ ಸರಣಿಯೋಪಾದಿಯಲ್ಲಿ ಆಪಾದನೆಗಳ ರೂಪದ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಅವರ ಕೆಲವು ಖಾಸಗೀ ಭಾವಚಿತ್ರಗಳನ್ನೂ ಅಪ್ ಲೋಡ್ ಮಾಡಿ, ಆಡಳಿತಾತ್ಮಕ ವಿಚಾರದ ಜೊತೆಗೆ ನೈತಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನೂ ಎತ್ತಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ರೂಪಾರವರು ಎತ್ತಿರುವ ಪ್ರಶ್ನೆಗಳು, ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನೇಕ ಮಾಹಿತಿಗಳು , ಫೋಟೋಗಳು, ವೈಯಕ್ತಿಕ ವಿಚಾರ…. ಇತ್ಯಾದಿಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವ ಚರ್ಚೆ ರಾಜ್ಯದಲ್ಲಿ ಸಧ್ಯದ ಹಾಟ್ ಡಿಬೇಟ್ ಟಾಪಿಕ್ಕು ! ಈ ವಿಷಯದಲ್ಲಿ ರೂಪಾರವರ ವೇಗ ಆವೇಗ ಹಾಗೂ ಭಾವೋದ್ವೇಗವೆಲ್ಲವನ್ನೂ ನೋಡಿದರೆ ಸಿಂಧೂರಿಯವರ ವಿರುದ್ಧ ಯಾವುದೇ ರೀತಿಯ ಕಾನೂನು‌ ಹೋರಾಟಕ್ಕೂ ತಾನು ರೆಡಿ ಎನ್ನುವ ಸೂಚನೆಯನ್ನು ಕೊಟ್ಟೇ ಆತ್ಮವಿಶ್ವಾಸದಿಂದ ಮುಂದಡಿಯಿಟ್ಟಿದ್ದಾರೆ.

ಈ ಹಿಂದೆ ಡಿ.ಕೆ ರವಿ ಎಂಬ ಐ ಎ ಎಸ್ ಅಧಿಕಾರಿಯ ಆತ್ಮಹತ್ಯೆಯ ಎಪಿಸೋಡು, ರೋಹಿಣಿಯವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ನಡೆಸಿದ ದರ್ಬಾರು, ಕೊರೋನಾ ಕಾಲದಲ್ಲಿ ಜನ ಸಾಯುತ್ತಿದ್ದರೆ ಇವರು ಲಕ್ಷಗಟ್ಟಲೆ ಖರ್ಚುಮಾಡಿ ತಮ್ಮ ಡಿ.ಸಿ ಬಂಗಲೆಯನ್ನು ನವೀಕರಣ‌ಮಾಡಿಸಿಕೊಂಡಿದ್ದು, ಈಜುಕೊಳ ಕಟ್ಟಿಸಿದ್ದು, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರೆತೆಯಿಂದ ಜನ ಸತ್ತಿದ್ದಕ್ಕೂ ಕಾರಣರಾಗಿದ್ದು, ಮೈಸೂರಿನ ಜಿಲ್ಲಾಧಿಕಾರಿಯಾಗಿ ರಿಪೋರ್ಟ್ ಮಾಡಿಕೊಂಡ ತಿಂಗಳೊಳಗೇ ಕನ್ನಡಿಗ ಶರತ್ ರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಅಪಾರ ಪ್ರಭಾವ ಹೊಂದಿರುವುದು , ಕುಟುಂಬದ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಕೊಂಡಿರುವುದು…ಇವೇ ಮೊದಲಾದ ಹತ್ತೊಂಭತ್ತು ಆರೋಪಗಳ ಸುರಿಮಳೆಯನ್ನೇ ರೋಹಿಣಿಯವರ ವಿರುದ್ಧ ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸುರಿಸಿರುತ್ತಾರೆ.

ಈ ಎಲ್ಲಾ ಆರೋಪಗಳಿಗೂ ಗರಂ ಆಗಿರುವ ರೋಹಿಣಿ, ರೂಪಾರನ್ನು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆಂದೂ ತಿರುಗೇಟು ನೀಡಿ ಅವರ ವಿರುದ್ದ ಕಾನೂನು ಸಮರಕ್ಕೆ ಮುಂದಾಗುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅದಾವುದಕ್ಕೂ ಕೇರ್ ಮಾಡದ ರೂಪಾ ಮೌದ್ಗಿಲ್ , ಸಿಂಧೂರಿಯವರ ಮತ್ತಷ್ಟು ಹಸಿಹಸಿ ಕರ್ಮಕಾಂಡಗಳನ್ನು ಬಯಲಿಗೆಳೆಯುವುದಾಗಿ ಆಕ್ರೋಶ ಹೊರಹಾಕಿದ್ದಾರೆ…!

ಇದು ಯಾಕೋ ನೆವರ್ ಎಂಡಿಂಗ್ ಅನಿಸುತ್ತಿದೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಬ್ಬರ ಈ ಆರೋಪ ಪ್ರತ್ಯಾರೋಪಗಳಿಂದ ಕರುನಾಡಿನ‌ ನಾಗರಿಕರಿಗೆ ಪುಕ್ಕಟ್ಟೆ ಮನರಂಜನೆ ಹಾಗೂ ಮಾಧ್ಯಮಗಳಿಗೆ ಅದರಲ್ಲೂ ಡಿಜಿಟಲ್ ಮಾಧ್ಯಮಗಳಿಗೆ ಫ಼ುಲ್ ಮೀಲ್ಸ್ ಸಿಕ್ಕಂತಾಗಿ ಕಲರ್ ಫ಼ುಲ್ ಕಾಂಟ್ರೋವರ್ಸಿಯಲ್ಲಿ ಕರುನಾಡು ರಂಗೇರುವಂತೆ ಮಾಡಿದೆ. ನಮ್ಮ ಜನರೂ ಸಹ ಈ ಇಬ್ಬರು ಅಧಿಕಾರಿಗಳ ಎಪಿಸೋಡನ್ನು ಅವರದೇ ಆದ ರೀತಿಯಲ್ಲಿ ಚರ್ಚಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಆದರೆ ಇದು ನಾಗರಿಕ ಸೇವಾ ಅಧಿಕಾರಿಗಳ ಲೆವೆಲ್ಲಿಗೆ ತರವಲ್ಲದ ನಡೆಯೆಂದು ಸಂಬಂಧಿಸಿದವರಿಗೆ ಇನ್ನೂ
ಅನಿಸುತ್ತಿಲ್ಲವೇ..?? ಹಾಗಾದರೆ ಈ ತರಹದ ಎಪಿಸೋಡುಗಳಿಗೆ ಏನು ಕಾರಣ ?

ನಮ್ಮ ಕೆಲವು ಐ.ಎ.ಎಸ್ ಅಧಿಕಾರಿಗಳಿಗೆ ತಾವು ಮಾಡಿದ್ದೆಲ್ಲವೂ ಯೆಸ್ ಎನ್ನುವ ಪಿತ್ಥ‌ ಸದಾ ನೆತ್ತಿಯ ಮೇಲೆ ಕೂರಿರುತ್ತೆ. ಹೀಗಾಗಿಯೇ ಅಧಿಕಾರವೆನ್ನುವುದು ಜನಸೇವೆಗೆ ಸಿಕ್ಕ ಅವಕಾಶವೆಂದು‌ ಭಾವಿಸದೇ ಅದು ಜನರನ್ನು ಆಳಲು , ಪವರ್ ಚಲಾಯಿಸಲು , ಭ್ರಷ್ಟಾಚಾರದಲ್ಲಿ ಮುಳುಗೇಳಲು ಸಿಕ್ಕ ಸುವರ್ಣ ಅವಕಾಶದಂತೆ ಇಂಥವರು ಭ್ರಮಿಸುತ್ತಾರೆ. ಈ ಐಲುಗಳ ಜೊತೆಗೆ ಪ್ರಚಾರದ ಅಮಲು ಸಹಾ ಸೇರಿಕೊಂಡಲ್ಲಿ ಅಲ್ಲಿಗೆ ಮುಗೀತು ! ಇವರನ್ನು ಕಂಟ್ರೋಲ್ ಮಾಡಲು ಯಾರಿಗೂ ಆಗೋಲ್ಲ. ಹೀಗಾಗಿಯೇ ತಮ್ಮ ದಿನನಿತ್ಯದ ಆಗುಹೋಗುಗಳ ಬಗೆಗೆ ರನ್ನಿಂಗ್ ಕಾಮೆಂಟರಿ ಮಾಡುವಂತಹ ವಂಧಿಮಾಗಧ ಮಾಧ್ಯಮದವರನ್ನು ಇಟ್ಟುಕೊಂಡು ತಮ್ಮ ಅನೇಕಾನೇಕ ಒಣ ಸಾಧನೆಗಳ ಹಸಿ‌ವಿಡಿಯೋಗಳನ್ನು, ಸಿಂಗಂ ರೀತಿಯ ಭಂಗಿಗಳನ್ನೂ ಅಬ್ಬರದ ಪ್ರಚಾರಕ್ಕೆ ಉಪಯೋಗಿಸಿಕೊಂಡು ತಾನೊಬ್ಬ ದಕ್ಷ ಜನನಾಯಕ ಎಂದೋ ಅಥವಾ ಡೇರ್ ಅಂಡ್ ಡೆವಿಲ್ ಹೀರೋ ಎಂದೋ ಬಿಂಬಿಸಿಕೊಳ್ಳುತ್ತಲೇ ಗಮನ ಸೆಳೆಯುತ್ತಾರೆ. ಈ ಪ್ರಚಾರದ ಹುಚ್ಚು ಒಮ್ಮೊಮ್ಮೆ ಇವರಿಂದ ಮಾಡಬಾರದ ಕೆಲಸಗಳನ್ನೂ ಮಾಡಿಸಿಬಿಡುತ್ತೆ.

ಈ ಇಬ್ಬರು ಮಹಿಳಾ ಅಧಿಕಾರಿಗಳ ವಿಚಾರದಲ್ಲಿಯೂ ಪ್ರಚಾರದ ಮೈಲೇಜ್ ನ ಹೊಳಹು ಸಾಕಷ್ಟಿದೆಯೆಂಬುದು ಮೇಲ್ನೋಟಕ್ಕೆ ಕಣ್ಣಿಗೆ ರಾಚುತ್ತದೆ.

ಸರ್ಕಾರದ ಸೇವಾ ನಿಯಮಗಳಡಿಯಲ್ಲಿ ರೂಪಾ ಮೌದ್ಗಿಲ್ ರವರ ವರ್ತನೆ ಎಷ್ಟರಮಟ್ಟಿಗೆ ಸಹನೀಯ ಎಂಬುದು ಇತರರಿಗಿಂತ ಅವರಿಗೇ ಚೆನ್ನಾಗಿ ಗೊತ್ತು. ಒಬ್ಬ ದಕ್ಷ ಅಧಿಕಾರಿಣಿಯಾಗಿ ಹೆಸರು ಮಾಡಿರುವ ಅವರಿಗೆ ಯಾವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು- ಬಾರದು ಎಂಬುದರ ಸಂಪೂರ್ಣ ಅರಿವು ಇದ್ದೇ ಇರುತ್ತದೆ. ಅದರಲ್ಲೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವೈಯಕ್ತಿಕ ಫೋಟೋಗಳನ್ನೂ ತಮ್ಮ ಫ಼ೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಪ್ರಶ್ನೆಗಳನ್ನು ಕೇಳಿರುವುದು ನೈತಿಕವಾಗಿ ಸರಿಯಲ್ಲವಾದರೂ ಇದರ ಹಿಂದೆ ಬಲವಾದ ಉದ್ದೇಶವಂತೂ ಇದ್ದೇ ಇದೆ. ಇದು ಒಂದು ಬ್ಯೂರೋಕ್ರೆಟಿಕ್ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣ ಮಾಡಿದಲ್ಲಿ ಮಾತ್ರ ಅವರ ಉದ್ದೇಶವನ್ನು ಸಹ್ಯ ಎನ್ನಬಹುದು. ಇಲ್ಲವಾದಲ್ಲಿ ಇದು ವೃತ್ತಿ ಮಾತ್ಸರ್ಯದ ಸಂಕೇತಗಳಂತೆಯೂ ತೋರಿ , ರೋಹಿಣಿಯವರ ತೇಜೋವಧೆಗಾಗಿ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರ್ಯಾವಸನಗೊಳ್ಳಲೂ ಬಹುದು.

ರೂಪಾ ಮೌದ್ಗಿಲ್ ರವರು ರೋಹಿಣಿಯವರಿಗೆ ಬಹಿರಂಗವಾಗಿ ಕೇಳಿರುವ ಅನೇಕ ಆಡಳಿತಾತ್ಮಕ ಹಾಗೂ ವೈಯಕ್ತಿಕ ಪ್ರಶ್ನೆಗಳಿಗೆ ಅದೇ ಮಾದರಿಯಲ್ಲೇ ಅವರು ಉತ್ತರಿಸಿದ್ದರೆ ಚೆನ್ನಾಗಿರುತ್ತಿತ್ತು. ಇದರಿಂದ ಒಂದು ವ್ಯವಸ್ಥೆಯ ಹಿನ್ನೆಲೆಯಲ್ಲಿ ಏನೆಲ್ಲಾ ರಂಪ ರಾಮಾಯಣಗಳು ಅಡಗಿರಬಲ್ಲವೆಂಬ ಸಹಜ ಕುತೂಹಲಕ್ಕೆ ಬ್ರೇಕ್ ಬೀಳುತ್ತಿತ್ತು. ರೂಪಾರವರ ಯಾವ ಪ್ರಶ್ನೆಗಳಿಗೂ ರೋಹಿಣಿಯವರ ಉತ್ತರಗಳಲ್ಲಿ ಮುಚ್ಚಿಡುವಂಥಾದ್ದೇನಿರಲಾರದು. ಹೀಗಾಗಿ ಅವುಗಳಿಗೆ ದಾಖಲೆ ಸಹಿತ ಸಾಮಾಜಿಕ ಜಾಲತಾಣದಲ್ಲೇ ಪ್ರತ್ಯುತ್ತರ ನೀಡಿದ್ದಲ್ಲಿ ಜೊಳ್ಳಾವುದು- ಗಟ್ಟಿ ಯಾವುದು ಎಂಬ ನಿರ್ಧಾರವನ್ನು ಜನರೇ ಮಾಡುತ್ತಿದ್ದರು.

ಏನೇ ಆಗಲಿ, IAS, IPS ಗಳೆಂದರೆ ದೇವಮಾನವರಲ್ಲ, ಅವರೂ ಸಹ ಹೀಗೆಲ್ಲಾ ಗೋಲಿ, ಕುಂಟೆಬಿಲ್ಲೆ ಆಡುವ ಮಕ್ಕಳ ಲೆವೆಲ್ಲಿಗೂ ಹೋಗಿ ಬಹಿರಂಗವಾಗಿ ಕಿತ್ತಾಡಬಹುದೆಂಬ ಸತ್ಕೀರ್ತಿಯನ್ನು ಸರಳವಾಗಿ ತೋರಿಸಿಕೊಟ್ಟ ನಮ್ಮ ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು. ಏಕೆಂದರೆ ಹಣ, ಅಸೂಯೆ, ಮಾತ್ಸರ್ಯ, ಪ್ರಚಾರ, ಹೆಸರು ಹಾಗೂ ಶ್ರೇಷ್ಠತೆಯ ವ್ಯಸನಗಳಿಗೆ ಅತೀತರು ಭೂಲೋಕದಲ್ಲಿ ಯಾರಾದರೂ ಇದ್ದಾರೆಯೇ…?

ಅದರಲ್ಲೂ….ಎರಡು ಜಡೆಗಳು…?

** ಮರೆಯುವ ಮುನ್ನ **

ನಮ್ಮ ವೈಯಕ್ತಿಕ ಗುಣ- ಸ್ವಭಾವಗಳೇನೇ ಇರಲಿ , ನಾವು ಏನೇ ಓದಿರಲಿ, ಒಂದು ಹುದ್ದೆ, ಒಂದು ಸ್ಥಾನಮಾನದಲ್ಲಿ ಅಂತ ಇದ್ದಾಗ ಅದರ ಗೌರವ ಕಾಪಾಡಿಕೊಂಡು ಬರುವುದು ಅದನ್ನು ವಹಿಸಿಕೊಂಡವರ ಆದ್ಯ ಕರ್ತವ್ಯವಾಗಬೇಕಿತ್ತು. ತಮ್ಮ ನಡೆ ನುಡಿಗಳನ್ನು ಜನಸಾಮಾನ್ಯರು ಗಮನಿಸುತ್ತಿದ್ದಾರೆಂಬ ಕನಿಷ್ಠ ಕನ್ಸರ್ನ್ ಇಂಥವರಲ್ಲಿ ಇರಬೇಕಿತ್ತು. ತಮ್ಮ ದಕ್ಷ ಆಡಳಿತದ ನಡೆಯಿಂದ ಇತರರಿಗೆ ಮಾದರಿಯಾಗಬೇಕಿತ್ತು. ಕಾನೂನು‌ ಹೋರಾಟಕ್ಕೆ ಅದರದ್ದೇ ಆದ ಮಾರ್ಗವಿದೆ ಎಂಬ ಯಃಕಿಂಚಿತ್ ಅರಿವಿರಬೇಕಿತ್ತು,

ಒಬ್ಬ ಅಧಿಕಾರಿಗೆ ತಾವಿರುವ ಹುದ್ದೆಯ ಮೂಲಕ ಜನ ಸಾಮಾನ್ಯರ ಬದುಕನ್ನು ಹಸನು‌ ಮಾಡಲು, ಸಾಮಾಜಿಕ ಪರಿವರ್ತನೆ ತರಲು ತಾನೇನು ಮಾಡಬಲ್ಲೆ ಎಂಬ ಪ್ರಾಮಾಣಿಕ ಕಾಳಜಿ ಮುಖ್ಯವೇ ಹೊರತು ತಾನು ನೋಡಲು ಎಷ್ಟು ಸುಂದರವಾಗಿದ್ದೇನೆ, ತಾನೆಂತಹಾ ಬಂಗಲೆ, ಕಾರು, ಬೆಲೆಬಾಳುವ ವಸ್ತುಗಳನ್ನು ಉಪಯೋಗಿಸುತ್ತಿದ್ದೇನೆ ಅಥವಾ ತನಗೆಷ್ಟು ಮಂದಿ ತಾವಾಗಿಯೇ ಮುಗಿಬಿದ್ದು ಪ್ರಚಾರ ಕೊಡುತ್ತಾರೆ ಎಂಬುದು ತಲೆ ತಿರುಗಿಸುವಂತಾಗಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಾರ್ಯಾಂಗದ ಎಂಜಿನ್ನುಗಳಿಗೆ ತಮಗೆ ಅಧಿಕಾರ ಸಿಕ್ಕಿರೋದು ಜನಸೇವೆಗಾಗಿ ಹಾಗೂ ತಾನು ಪಬ್ಲಿಕ್ ಸರ್ವೆಂಟೇ ಹೊರತು ಪಬ್ಲಿಕ್ ರೂಲರ್ ಅಲ್ಲ , ತನ್ನ ವರ್ತನೆಯ ಮೇಲೆ ಸರ್ಕಾರದ ಇಮೇಜೂ ಅಡಗಿದೆ…. ಎಂಬ ಕಾಮನ್ ಸೆನ್ಸ್ ಇಲ್ಲದೇ ಹೋದಲ್ಲಿ ಈ ತರಹದ ಅವಘಡಗಳು ಕಾಮನ್. ಅದರಲ್ಲೂ ಇಂದಿನ ಬಹುತೇಕ ನಾಗರಿಕ ಸೇವಾ ಅಧಿಕಾರಿಗಳಲ್ಲಿ ಪವರ್ ನಲ್ಲಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ, ಆನಂತರ ರಾಜಕೀಯದ ಆಕರ್ಷಣೆಗೆ ಒಳಗಾಗಿ ಅದರತ್ತ ಮುಖಮಾಡುವ ಸ್ವಕೇಂದ್ರೀಕೃತ ಮೆಂಟಾಲಿಟಿ ಹೆಚ್ಚಾಗುತ್ತಿರುವುದೂ ಇಂತಹ ಘಟನೆಗಳಿಗೆ ಪರೋಕ್ಷ ಕಾರಣ.

ಬಹುಶಃ ಈ ತರಹದ ವಿಚಿತ್ರ ಕ್ರೇಜ಼ು, ಪಬ್ಲಿಸಿಟಿಯ ಮೋಜು ಸಿಂಧೂರಿಯವರಂತಹ ಪ್ರಚಾರ ಪ್ರಿಯ ಅಧಿಕಾರಿಗಳ ಸದಾ ವಿವಾದಾತ್ಮಕ ವಿಷಯಗಳಿಗೆ ಅಥವಾ ರೂಪಾ ಮೌದ್ಗಿಲ್ ರಂತಹ ಅಧಿಕಾರಿಗಳ ದಕ್ಷತೆಯ ಬ್ರಾಂಡ್ ಇಮೇಜ್ ಕಾಪಾಡಿಕೊಳ್ಳಲಿಕ್ಕೆ, ವೃತ್ತಿ ಮೈಲೇಜ್ ಹೆಚ್ಚಿಸಿಕೊಳ್ಳಲಿಕ್ಕೆ ಉತ್ತೇಜಿಸುವ ಅಂಶಗಳಾಗಿಯೂ ಕೆಲಸ ಮಾಡಿರಬಲ್ಲದು !

ಒಟ್ಟಾರೆ…. ಜನರಿಗೆ, ಮಾಧ್ಯಮದವರಿಗೆ ಬಿಟ್ಟಿ ಮನರಂಜನೆ ಒದಗಿಸಲು ಈ ಚುನಾವಣಾ ಸಮಯದಲ್ಲಿ ನಮ್ಮ ರಾಜಕಾರಣಿಗಳಲ್ಲೇ ಪಕ್ಷಾತೀತವಾಗಿ ಸಕತ್ ಪೈಪೋಟಿ ಇರುವಾಗ ಅದರ ಜವಾಬ್ದಾರಿಯನ್ನು ನಾಗರಿಕ ಸೇವಾ ಅಧಿಕಾರಿಗಳು ಹೊರಬಾರದಿತ್ತು..!

ವೆರಿ ಸ್ಯಾಡ್ !

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

ಕಸದಲ್ಲಿ ರಸ ಎಂಬಂದೆ ಕಸದ ರಾಶಿಗೆ ಸೇರಬೇಕಾದ ಪೇಪರ್ ಮಕ್ಕಳ ನೋಟ್ ಬುಕ್ ತಾತಾನ ಕೈಚಳಕ

ಜಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ‌‌‌‌
ಪ್ರತಿದಿನ ಬೆಳಗ್ಗೆ ರಾಜಧಾನಿ ಬೆಂಗಳೂರಿನ ಬ್ಯಾಂಕ್ ಕಾಲನಿನಲ್ಲಿ ದಿನಪತ್ರಿಕೆಯ ಏಜೆಂಟರುಗಳು ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ.

ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಸುತ್ತಾರೆ. ಅಲ್ಲಿಗೆ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಬಂದು ಕೆಳಗೆ ಬಿದ್ದಿದ್ದ ಎಲ್ಲಾ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದುಕೊಂಡು ಜೋಡಿಸಿ ಕೊಳ್ಳುತ್ತಾರೆ.

ಪ್ರತಿದಿನ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಪೇಪರ್ ಗಳನ್ನು ತೆಗೆದುಕೊಂಡು ಹೋಗಿ ಅದನ್ನು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಬರೆಯುವ ನೋಟ್ ಬುಕ್ ತಯಾರಿಸುತ್ತಾರೆ, ಹಲವಾರು ನೊಟಬುಕ್ ಗಳನ್ನು ತಯಾರಿಸಿ ಇವರು ಮೈಸೂರು ರಸ್ತೆಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ.

ಇವರು ಬಂದರೆಂದರೆ ಸಾಕು ಮಕ್ಕಳು ಓಡೋಡಿ ಬಂದು “ನೋಟ್ ಬುಕ್ ತಾತಾ” ಎನ್ನುತ್ತಾ ಮುದ್ದಾಡುತ್ತಾರೆ.. ಹೀಗೆ ಯಾರಿಗೂ ತಿಳಿಯದ ಹಾಗೆ ಸಮಾಜಸೇವೆ ಮಾಡುತ್ತಿರುವ ಈ ಹಿರಿಯ ನಾಗರಿಕ ವ್ಯಕ್ತಿಯು ಹೆಸರು #ಮೋಹನ್.

ಇವರು ಐ.ಟಿ.ಐ ಕಂಪನಿಯ ನಿವೃತ್ತ ಉದ್ಯೋಗಿ, ತಮ್ಮ ಜೀವನದ ಕೊನೆಯ ಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೇ ಶಾಲಾ ಮಕ್ಕಳಿಗೆ ತಮ್ಮದೇ ಆದ ವಿಶಿಷ್ಟವಾದ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ಎಲ್ಲರಿಗೂ ಮಾದರಿ.

ಕೃಪೆ: ಮಿತ್ರ.

ಎರಡು ಸಮುದಾಯಗಳ ನಡುವೆ ಗಲಾಟೆ 72 ಜನರ ಮೇಲೆ ಪ್ರಕಣ ದಾಖಲು ತಳಕು ಠಾಣೆ ವ್ಯಾಪ್ತಿಯಲ್ಲಿ ಘಟನೆ

ಚಳ್ಳಕೆರೆ ಜನಧ್ವನಿ ವಾರ್ತೆ ಫೆ 10. ಜನಧ್ವನಿ ಕಳ ಕಳಿ
ಒಂದು ಊರು ಅಂದ ಮೇಲೆ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರAತೆ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಓಡಾಡುವ ರಸ್ತೆ ಕುಡಿಯುವ ನೀರಿ ಪೈಪ್ ಲೈನ್ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಪದೇ ಪದೆ ಘರ್ಷಣೆಗಳಿಂದ ಇಲ್ಲಿನ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಳಕು ಹೋಬಳಿಗೆ ಬೇಲ್ದಾರಹಟ್ಟಿ ಗ್ರಾಮದಲ್ಲಿ ಈಡಿಗ ಹಾಗೂ ಕುಂಬಾರದ ಸಮುದಾಯಗಳು ವಾಸ ಮಾಡುತ್ತಿದ್ದು ಈ ಊರಿನ ಯಾರ ವಕ್ರ ದೃಷ್ಠಿ ಬಿತ್ತೋ ಏನೋಗೊತ್ತಿಲ್ಲ ಆದರೆ ಪದೇ ಪದೇ ಈ ಊರಿನಲ್ಲಿ ಒಂದಲ್ಲ ಒಂದು ವಿಷಕ್ಕೆ ಗಲಾಟೆಗಳನ್ನು ಮಾಡಿಕೊಂಡು ಠಾಣೆ ಮೆಟ್ಟಿಲೇರುತ್ತಿರುವ ಘಟನೆಳು ಮಾಸುವ ಮುನ್ನವೇ ಫೆ ೫ ರಂದು ಕುಡಿಯುವ ನೀರಿನ ಘಟಕ ಕಟ್ಟಡ ಸ್ಥಾಪನೆ ಮಾಡುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ, ಹೊಡೆದಾಟದಲ್ಲಿ ತಲೆ,ಕೈಕಾಲುಗಳಿಗೆ ಪೆಟ್ಟುಗಳಾಗಿ ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಸಮುದಾಯಗಳ ಗಾಯಾಳುಗಳು ಆಸ್ಪತ್ರೆಗೆ ಸೇರಿ ಚಿಕಿತ್ಸೆಪಡೆಯುವಂತಾಗಿದೆ.
ಎರಡು ಸಮುದಾಯಗಳ ಮೇಲು ಪ್ರಕರಣ ದಾಖಲು
ಈಡಿಗ ಜನಾಂಗದ , ದೇವೇಂದ್ರಪ್ಪ, ಅಪ್ಪು, ದಾನಮ್ಮ, ಚಾಮರಾಜ ಸೇರಿ ಒಟ್ಟು 40ಂಜನರ ಮೇಲೆ ಪ್ರಕಣ ದಾಖಲಾದರೆ ಕುಂಬಾರ ಜನಾಂಗದ ಮನೋಜ್ , ಪಿಡಿಒ ಗುಂಡಪ್ಪ ಸೇರಿ ಒಟ್ಟು 32 ಎರಡು ಸಮುದಾಯ 72 ಜನರ ಮೇಲೆ ವಿವಿಧ ಸೆಕ್ಷನ್ ಅಡಿಯಲ್ಲಿ ತಳಕು ಠಾಣೆಯಲ್ಲಿ ಪ್ರಕಣ ದಾಖಲು ಮಾಡಿಕೊಂಡಿದ್ದಾರೆ
ಶಾಂತಿ ಸಭೆ
ಇದೇ ರೀತಿ ಪದೇ ಪದೇ ಗಲಾಟೆ ದೊಂಬಿಗಳು ನಡೆಯುವುದರಿಂದ ಎರಡು ಸಮುದಾಯಗಳ ನಡುವೆ ಶಾಂತಿ ನೆಮ್ಮದಿ ಕಳೆದುಕೊಳ್ಳುವಂತಾಗಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತೆ ಇಂಹತ ಘಟನೆಗಳು ಮರುಕಳಿಸದಂತೆ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಎರಡು ಸಮುದಾಯಗಳ ನಡುವೆ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿಯ ವಾತಾವಣ ನಿರ್ಮಾಣ ಮಾಡಲು ಶಾಂತಿ ಸಭೆಹಮ್ಮಿಕೊಂಡು ನೆಮ್ಮಧಿಯ ಜೀವನ ನಡೆಸುವರೇ ಕಾದು ನೋಡ ಬೇಕಿದೆ

ಜಾತ್ರೆ ಉತ್ಸವ ನಡೆಯುವ ಸ್ಥಳಗಳಲ್ಲಿ ನಿಷೇಧಿತ ಪ್ಲೆಕ್ಸ್ ಬ್ಯಾನರ್ ಗಳಿಗೆ ಕಡಿವಾಣ ಹಾಕುವವರು ಯಾರು…?

ಹಿರಿಯೂರು ಜನಧ್ವನಿ ವಾರ್ತೆ ಫೆ.6 ದೇವರ ದರ್ಶನ ಪಡೆಯಲು ಬಂದವರಿಗೆ ರಾಜಕೀಯ ಪಕ್ಷಗಳ ಬ್ಯಾನರ್ ದರ್ಶನ ಭಾಗ್ಯ ಪಡೆಯುವಂತಾಗಿದೆ. ಹೌದು ಇದು ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೆ ಪ್ರಶಿದ್ದ ಪಡೆದ ತೇರುಮಲ್ಲೇಶ್ವಸ್ವಾಮಿಯ ಜಾತ್ರಾಮಹೋತ್ಸವ ಹಾಗು ರಥೋತ್ಸವ ಇರುವುದರಿಂದ ವಿವಿಧ ಪಕ್ಷಗಳ ವಿಧಾನಸಭಾ ಚುನಾವಣಾ ಆಕ್ಷಾಂಕ್ಷಿಗಳು ಮತದಾರರನ್ನು ಸೆಳೆಯಲ್ಲಿ ದೇವಾಸ್ಥನಾ. ತೇರು ಬೀದಿಯಲ್ಲಿ ಎಗ್ಗಿಲ್ಲದೆ ಪ್ಲೆಕ್ಸ್ ಬ್ಯಾನರ್ ಹಾಕಿರುವುದರಿಂದ ದೇವರ ದರ್ಶನ ಪಡೆಯಲು ಭಯ.ಭಕ್ತಿ..ಶ್ರದ್ದೆಯಿಂದ ಪೂಜೆ ಸಲ್ಲಿಸಲು ಬರುವ ಭಕ್ತರು ದೇವರ ದರ್ಶನ ಪಡೆಯುವ ಬದಲು ಪ್ಲೆಕ್ಸ್ ಗಳ ದರ್ಶನ ಪಡೆಯವಂತಾಗಿ ದೇವರಮೇಲಿನ ಭಕ್ತಿ ಹೊರಟು ಹೋಗುವಂತಾಗುತ್ತದೆ ಅಕ್ರಮವಾಗಿ ಹಾಕಿರುವ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ವರ್ಷವಾಗಿದ್ದು ಇನ್ನು ಚುನಾವಣೆ ಮೂರು ತಿಂಗಳು ಬಾಕಿಇರುವಾಗಲೇ ವಿವಿಧ ಪಕ್ಷದ ಆಕಾಂಕ್ಷಿಗಳು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ ಉತ್ಸವ.ಹಬ್ಬ .ನಾಟಕ ಗಳಿಗೆ ಶುಕ್ರದಶೆ ತಿರುಗಿದ್ದು ಎಲ್ಲಾ ಪಕ್ಷದ ನಾಯಕರು ಭಾಗವಹಿಸುವುದರಿಂದ ಪ್ಲೆಕ್ಸ್.ಬ್ಯಾನರ್ .ಬಂಟಿಗಳಿಂದ ಅಲಂಕಾರ ಮಾಡಲಾಗುತ್ತಿದೆ. ಸಾರ್ವ​ಜ​ನಿಕ ಸ್ಥಳ​ಗ​ಳಲ್ಲಿ ಪ್ಲೆಕ್ಸ್ ಬ್ಯಾನರ್ ಪ್ರದ​ರ್ಶಿ​ಸು​ವಂತಿಲ್ಲ ಅಂತ​ಹು​ಗ​ಳನ್ನು ಪ್ರಕ​ಟಣೆ – ಪ್ರದ​ರ್ಶನ ಮಾಡಿ​ದರ ಮೇಲೂ ಕಠಿಣ ಕ್ರಮ ಕೈಗೊ​ಳ್ಳುವ ಅವಕಾಶವಿದೆ.
ನೀತಿಸಂಹಿತೆ ಇದ್ದಾಗ ಕಡಿವಾಣ! ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಪ್ರಚಾರಕ್ಕೆ ಕಟ್ಟುವ ಬ್ಯಾನರ್‌, ಬಂಟಿಂಗ್ಸ್ ಮತ್ತು ಮುಖ್ಯರಸ್ತೆಯ ವಿಭಜಕದ ಗ್ರಿಲ್‌, ವಿದ್ಯುತ್‌ ಕಂಬಗಳಿಗೆ ಅಳವಡಿಸುವ ಪೋಸ್ಟರ್‌ಗಳ ತೆರವು ಕಾರ್ಯದಲ್ಲಿ ಸ್ಥಳೀಯ ಸಂಸ್ಥೆ​ಗಳು ನಿರ್ಲಕ್ಷ್ಯ ವಹಿಸಿದೆ. ಚುನಾವಣೆಗಳ ನೀತಿಸಂಹಿತೆ ಜಾರಿಯಾದ ಸಮಯದಲ್ಲಿ ಕಡ್ಡಾಯವಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ನಂತರ ಅತ್ತ ತಲೆ ಹಾಕುವುದಿಲ್ಲ.
ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ ಹಾಕುವುದರಲ್ಲಿ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ಇದ್ದಾರೆ. ಇದರಲ್ಲಿ ಪಕ್ಷ ಭೇದವಿಲ್ಲ. ಸ್ಥಳೀಯ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ. ಮುಖ್ಯಮಂತ್ರಿ, ಸಚಿವರು, ಪಕ್ಷದ ವರಿಷ್ಠರನ್ನು ಸ್ವಾಗತಿಸುವ ತರಹೇವಾರಿ ಫ್ಲೆಕ್ಸ್‌, ಬ್ಯಾನರ್‌ಗಳು ಎಲ್ಲಡೆ ಕಾಣಸಿಗುತ್ತವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅನಾದಿಕೃತ ಪ್ಲೆಕ್ಸ್ ಗಾಳಿಗೆ ಕಡಿವಾಣ ಕಾಕುವರೇ ಹಾಗೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ ಉತ್ಸವ ಸ್ಥಳಗಳಲ್ಲಿ ಪ್ಲೆಕ್ಸ್ ನಿಷೇದ ಜತೆಗೆ ಹಾಕಿರುವ ಪಕ್ಸ್ ಗಳನ್ನು ತೆರವುಗೊಳಿಸುವರೇ ಕಾದು ನೋಡ

ಜಾತ್ರೆ ಉತ್ಸವ ನಡೆಯುವ ಸ್ಥಳಗಳಲ್ಲಿ ಹಾಕಿರುವ ಪ್ಲೆಕ್ಸ ಬ್ಯಾನರ್ ತೆರವುಗೊಳಿಸುವಂತೆ ಆಗ್ರಹ

ಹಿರಿಯೂರು ಜನಧ್ವನಿ ವಾರ್ತೆ ಫೆ.6 ದೇವರ ದರ್ಶನ ಪಡೆಯಲು ಬಂದವರಿಗೆ ರಾಜಕೀಯ ಪಕ್ಷಗಳ ಬ್ಯಾನರ್ ದರ್ಶನ ಭಾಗ್ಯ ಪಡೆಯುವಂತಾಗಿದೆ. ಹೌದು ಇದು ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೆ ಪ್ರಶಿದ್ದ ಪಡೆದ ತೇರುಮಲ್ಲೇಶ್ವಸ್ವಾಮಿಯ ಜಾತ್ರಾಮಹೋತ್ಸವ ಹಾಗು ರಥೋತ್ಸವ ಇರುವುದರಿಂದ ವಿವಿಧ ಪಕ್ಷಗಳ ವಿಧಾನಸಭಾ ಚುನಾವಣಾ ಆಕ್ಷಾಂಕ್ಷಿಗಳು ಮತದಾರರನ್ನು ಸೆಳೆಯಲ್ಲಿ ದೇವಾಸ್ಥನಾ. ತೇರು ಬೀದಿಯಲ್ಲಿ ಎಗ್ಗಿಲ್ಲದೆ ಪ್ಲೆಕ್ಸ್ ಬ್ಯಾನರ್ ಹಾಕಿರುವುದರಿಂದ ದೇವರ ದರ್ಶನ ಪಡೆಯಲು ಭಯ.ಭಕ್ತಿ..ಶ್ರದ್ದೆಯಿಂದ ಪೂಜೆ ಸಲ್ಲಿಸಲು ಬರುವ ಭಕ್ತರು ದೇವರ ದರ್ಶನ ಪಡೆಯುವ ಬದಲು ಪ್ಲೆಕ್ಸ್ ಗಳ ದರ್ಶನ ಪಡೆಯವಂತಾಗಿ ದೇವರಮೇಲಿನ ಭಕ್ತಿ ಹೊರಟು ಹೋಗುವಂತಾಗುತ್ತದೆ ಅಕ್ರಮವಾಗಿ ಹಾಕಿರುವ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ವರ್ಷವಾಗಿದ್ದು ಇನ್ನು ಚುನಾವಣೆ ಮೂರು ತಿಂಗಳು ಬಾಕಿಇರುವಾಗಲೇ ವಿವಿಧ ಪಕ್ಷದ ಆಕಾಂಕ್ಷಿಗಳು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ ಉತ್ಸವ.ಹಬ್ಬ .ನಾಟಕ ಗಳಿಗೆ ಶುಕ್ರದಶೆ ತಿರುಗಿದ್ದು ಎಲ್ಲಾ ಪಕ್ಷದ ನಾಯಕರು ಭಾಗವಹಿಸುವುದರಿಂದ ಪ್ಲೆಕ್ಸ್.ಬ್ಯಾನರ್ .ಬಂಟಿಗಳಿಂದ ಅಲಂಕಾರ ಮಾಡಲಾಗುತ್ತಿದೆ. ಸಾರ್ವ​ಜ​ನಿಕ ಸ್ಥಳ​ಗ​ಳಲ್ಲಿ ಪ್ಲೆಕ್ಸ್ ಬ್ಯಾನರ್ ಪ್ರದ​ರ್ಶಿ​ಸು​ವಂತಿಲ್ಲ ಅಂತ​ಹು​ಗ​ಳನ್ನು ಪ್ರಕ​ಟಣೆ – ಪ್ರದ​ರ್ಶನ ಮಾಡಿ​ದರ ಮೇಲೂ ಕಠಿಣ ಕ್ರಮ ಕೈಗೊ​ಳ್ಳುವ ಅವಕಾಶವಿದೆ.
ನೀತಿಸಂಹಿತೆ ಇದ್ದಾಗ ಕಡಿವಾಣ! ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಪ್ರಚಾರಕ್ಕೆ ಕಟ್ಟುವ ಬ್ಯಾನರ್‌, ಬಂಟಿಂಗ್ಸ್ ಮತ್ತು ಮುಖ್ಯರಸ್ತೆಯ ವಿಭಜಕದ ಗ್ರಿಲ್‌, ವಿದ್ಯುತ್‌ ಕಂಬಗಳಿಗೆ ಅಳವಡಿಸುವ ಪೋಸ್ಟರ್‌ಗಳ ತೆರವು ಕಾರ್ಯದಲ್ಲಿ ಸ್ಥಳೀಯ ಸಂಸ್ಥೆ​ಗಳು ನಿರ್ಲಕ್ಷ್ಯ ವಹಿಸಿದೆ. ಚುನಾವಣೆಗಳ ನೀತಿಸಂಹಿತೆ ಜಾರಿಯಾದ ಸಮಯದಲ್ಲಿ ಕಡ್ಡಾಯವಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ನಂತರ ಅತ್ತ ತಲೆ ಹಾಕುವುದಿಲ್ಲ.
ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ ಹಾಕುವುದರಲ್ಲಿ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ಇದ್ದಾರೆ. ಇದರಲ್ಲಿ ಪಕ್ಷ ಭೇದವಿಲ್ಲ. ಸ್ಥಳೀಯ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ. ಮುಖ್ಯಮಂತ್ರಿ, ಸಚಿವರು, ಪಕ್ಷದ ವರಿಷ್ಠರನ್ನು ಸ್ವಾಗತಿಸುವ ತರಹೇವಾರಿ ಫ್ಲೆಕ್ಸ್‌, ಬ್ಯಾನರ್‌ಗಳು ಎಲ್ಲಡೆ ಕಾಣಸಿಗುತ್ತವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅನಾದಿಕೃತ ಪ್ಲೆಕ್ಸ್ ಗಾಳಿಗೆ ಕಡಿವಾಣ ಕಾಕುವರೇ ಹಾಗೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ ಉತ್ಸವ ಸ್ಥಳಗಳಲ್ಲಿ ಪ್ಲೆಕ್ಸ್ ನಿಷೇದ ಜತೆಗೆ ಹಾಕಿರುವ ಪಕ್ಸ್ ಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡುವಲ್ಲಿ ಶಾಸಕ ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮುಕಿ ನಡೆದು ರಾಜಕಾರಣಿಯಂತೆ ಸಭೆಯಿಂದ ಸಭತ್ಯಾಗ ಮಾಡಿರುವುದು ಸಂವಿಧಾನಾತ್ಮಕ ಕಾನುನು ಉಲ್ಲಂಘನೆಯಾಗಿದ್ದು ಕೂಡಲೆ ಇವರನ್ನು ಹುದ್ದೆಯಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯ

ಚಳ್ಳಕೆರೆ.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡುವಲ್ಲಿ ಶಾಸಕ ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮುಕಿ ನಡೆದು ರಾಜಕಾರಣಿಯಂತೆ ಸಭೆಯಿಂದ ಸಭತ್ಯಾಗ ಮಾಡಿರುವುದು ಸಂವಿಧಾನಾತ್ಮಕ ಕಾನುನು ಉಲ್ಲಂಘನೆಯಾಗಿದ್ದು ಕೂಡಲೆ ಇವರನ್ನು ಹುದ್ದೆಯಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಶಾಸಕರ ಭವನದಲ್ಲಿ ಪರಶುರಾಂಪುರ ಹಾಗೂಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ತಾಲೂಕು ತಹಶೀಲ್ದಾರ್ ವಿರುದ್ದ ಸುದ್ದಿಗೋಷ್ಠಿಯಲ್ಲಿ ಹಕ್ಕೊತ್ತಾಯಿಸಿದ್ದಾರೆ.
ಸಭೆಯಲ್ಲಿ ಅಭಿವೃದ್ಧಿ ವಿಷಯವಾಗಿ ಮಾಹಿತಿ ನೀಡ ಬೇಕಾದ ತಹಶೀಲ್ದಾರ್ ಶಾಸಕರ ವಿರುದ್ದವೇ ಉಡಾಫೆ ಉತ್ತರ ನೀಡಿ. ಕೈತೋರಿಸಿ ಜಿಲ್ಲಾಧಿಕಾರಿಗಳಿಗಾದರ ದೂರು ನೀಡಿ ಯಾರಿಗಾದರೂ ಕಳಿಸಿ ಎಂದು ಸಭೆಯಿಂದ ಎದ್ದು ಹೋಗಿರುವುದು ಇದು ವಿರೋಶ ಪಕ್ಷದವರನ್ನು ನಾಚುವಂತೆ ಮಾಡಿದ್ದು ಇದು ಶಾಸರೊಬ್ಬರಿಗೆ ಅಲ್ಲ ಇಡೀ ತಾಲೂಕಿನ ಜನತೆ ಅವಮಾನ ಮಾಡಿದಂತೆ ಇವರು ಕ್ಷೇತ್ರದ ಶಾಸಕರಿಗೆ ಈ ರೀತಿ ಯಾದರೆ ಇನ್ನು ಜನ ಸಾಮಾನ್ಯರ ಪಾಡೇನು ಎಂಬ ಪ್ರಶ್ನೆಯಾಗಿದೆ.
ಸಾಹಿತಿ, ನಾಟಕ ಅಕಾಡಮಿ ಪುರಷ್ಕೃತ ಪಿ.ತಿಪ್ಪೇಸ್ವಾಮಿ ಮಾತನಾಡಿ ನಕ್ಷೇತ್ರದ ಪ್ರಥಮ ಪ್ರಜೆಯಾದ ಶಾಸಕರಿಗೆ ಪ್ರತಿಯೊಬ್ಬ ಅಧಿಕಾರಿಯೂ ಬೆಲೆ ಗೌರವ ಕೊಡುವುದು ಆಧ್ಯ ಕರ್ತವ್ಯ ಆದರೆ ನನ್ನ ೭೦ ವರ್ಷಗಳ ಇತಿಯಾಸದಲ್ಲಿ ಇಂತಹ ತಹಶೀಲ್ದಾರ್ ನಾನೂ ನೋಡಿಲ್ಲ ಪ್ರಥಮ ಪ್ರಜೆಗೆ ಅಮಾನ ಮಾಡಿರುವ ಮಾತಿನ ಹಿಡಿತವಿಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಯೇ ದುರ್ನಡತೆ ನಡೆದುಕೊಂಡು ಒಬ್ಬ ಕ್ಷೇತ್ರದ ಶಾಸರ ವಿರುದ್ದವೇ ಶೆಡ್ ಹೊಡೆದಿರುವುದು ಸಂವಿಧಾನ ಹಾಗೂ ಕ್ಷೇತ್ರದ ಜನತೆವೆ ಮಾಡಿರುವು ಅವಮಾನ ಕೂಡಲೆ ಇಂತಹ ಅಧಿಕಾರಿಗೆ ಸರಕಾರ ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಜನ ಸಂಪರ್ಕ ಸಭೆ , ಸಮಸ್ಯೆ ಮುಕ್ತ ಗ್ರಾಮಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ಇವತ್ತು ನಮ್ಮ ಮನೆಯಲ್ಲೇ ಸಮಸ್ಯೆ ಮುಕ್ತ ಮಾಡಿಕೊಳ್ಳಲು ಸಾಧ್ಯವಿಲ್ಲ ಆದರೆ ನೂರಾಕ್ಕೂ ಹೆಚ್ಚು ಹಳ್ಳಿಗಳನ್ನು ಸಮಸ್ಯೆ ಮುಕ್ತ ಎಂದು ಸ್ವಯಂ ಘೋಷಣೆ ಮಾಡಿರುವುದು ಎಷ್ಟು ಸರಿ? ಸರಕಾರಿ ಭೂಮಿಯನ್ನು ಮಂಜುರಾತಿ ವಿಚಾರದಲ್ಲಿ ಮಂಜುರಾತಿ ನೀಡುತ್ತೇನೆ ಸುಳ್ಳು ಭರಸವಸೆಗಳನ್ನು ನೀಡುವ ಮೂಲಕ ಕ್ಷೇತ್ರದಲ್ಲಿ ಅಶಾಂತಿ ವಾತಾರಣ ನಿರ್ಮಾಣ ಮಾಡಲಾಗುತ್ತಿದೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸುಮಾರು ೧೦ ವರ್ಷಗಳಿಂದ ಶಾಸಕರು ಉತ್ತಮ ಕೆಲಸ ಮಾಡಿಕೊಂಡು ಎಲ್ಲಾ ಸಮುದಾಯಗಳಿಗೆ ನ್ಯಾಯಕೊಡಿಸಿ ಅಭಿವೃದ್ಧಿ ಪಡಿಸುವ ಜತೆಗೆ ಶಾಂತಿ ಸುವ್ಯವಸ್ಥೆ, ಕಾಪಾಡಿಕೊಂಡು ಬಂದಿರುತ್ತಾರೆ. ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಕೆಲವು ರಾಜಕೀಯ ಮುಖಂಡರ ಜತೆ ಸೇರಿಕೊಂಡು ಶಾಸರ ಗೌರವಕ್ಕೆ ಜ್ಯುತಿ ಬರುವಂತೆ ತಾಲೂಕು ದಂಡಾಧಿಕಾರಿ ಎಂಬುದನ್ನು ಮರೆತು ರಾಜಕಾರಣಿಯಂತೆ ವರ್ತಿಸಿ. ತಾಲೂಕು ಕಚೇರಿಯನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡು ರಾಜಕಾರಣಿಯಂತೆ ವರ್ತಿಸುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮವಹಿಸಿದೆ ಶಾಸರ ವಿರುದ್ದ ದುರ್ನಡೆ ಮಾಡಿರುವುದು ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಘರ್ಷಣೆ ನಡೆಯುವಂತಾಗಿರುವ ವೀಡಿಯೋ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಡಿ ರಾಜ್ಯವೇ ನೋಡುವಂತಾಗಿದೆ ಈಗಿದ್ದರೂ ಸಹ ಜಿಲ್ಲಾಡಳಿತ ಮೌನ ವಹಿಸಿರುವುದು ತಾಲೂಕಿನ ಹಾಗೂ ರಾಜ್ಯದ ಜನರು ಜಿಲ್ಲಾಡಳೀತ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಕೂಡಲೆ ಇಂತಹ ತಹಶೀಲ್ದಾರ್ ಕೂಡಲೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕ ಹೆಚ್.ಎಸ್.ಸೈಯಾದ್,ನಾಗರಾಜ್, ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ವೀರಭದ್ರಪ್ಪ, ವೈ.ಪ್ರಕಾಶ್, ಮಲ್ಲಿಕಾರ್ಜುನ, ರಮೇಶ್‌ಗೌಡ, ಜೈತುಂಬಿ, ಸುಮ, ಕವಿತಾ, ಮುಖಂಡರಾದ ಸಿ.ಟಿ.ಶ್ರೀನಿವಾಸ್, ಕಾಟಯ್ಯ, ಬಡಗಿ ಪಾಪಣ್ಣ, ನಿವೃತ್ತ ಶಿಕ್ಷಕ ಅನ್ವರ್,ಚೌಳೂರು ಪ್ರಕಾಶ್, ಪಾಲಣ್ಣ, ಪ್ರಹ್ಲಾದ್,ಇತರರಿದ್ದರು.

ಶಾಶ್ವತ ಬರಪೀಡಿತ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾದ ವಲಸಿಗರಿಗೆ ಈ ಬಾರಿ ಕ್ಷೇತ್ರಕ್ಕೆ ಪ್ರವೇಶ ನಿಶೇದ ಮೊಳಕಾಲ್ಮೂರು ಕ್ಷೇತ್ರದ ಮತದಾರರು ಜಾಗೃತಿ ಫಲಕ

ಚಳ್ಳಕೆರೆ ಜನಧ್ವನಿ ವಾರ್ತೆ ಜ.2ಚಳ್ಳಕೆರೆ ಅತಿ ಹೆಚ್ಚು ಹಿಂದುಳಿದ ಪರಿಶಿಷ್ಟ ಪಂಗಡ ಹಾಗೂ ಪರಿಷ್ಟ ಜಾತಿ ಹೊಂದಿರುವ ಎಸ್ಟಿ ಮೀಸಲಾತಿ ಕ್ಷೇತ್ರದ ಅಭಿವೃದ್ಧಿ ಕುಂಠಿತವನ್ನು ವಿರೋದಿಸಿ ಕ್ಷೇತ್ರದ ಮತದಾರರು ಕ್ಷೇತ್ರದಲ್ಲಿ ನಾಮಫಕ ಹಾಕುವ ಮೂಲಕ ಕ್ಷೇತ್ರ ಸ್ಫರ್ಥಿಸುವ ಆಕಾಂಕ್ಷಿಗಳಿಗೆ ಈ ಬಾರಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು ಕ್ಷೇತ್ರದ ಶಾಸಕ. ಸಚಿವ .ಬಿ.ಶ್ರೀರಾಮುಲು ಗೆದ್ದು ಐದು ವರ್ಷ ಕಳೆಯಲು ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿಯಿದ್ದು. ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ತಮ್ಮದೇ ಬಿಜೆಪಿ ಸರಕಾರವಿದ್ದು ಸಮಾಜ ಕಲ್ಯಾಣ. ಸಾರಿಗೆ ಸಚಿವರಾಗಿದ್ದರೂ ಕ್ಷೇತ್ರದ ಅಭಿವ್ಯದ್ಧಿಯಾಗದೆ ಇರುವುದು ಮತದಾರರನ್ನು ಕೆರಳಿಸುವಂತೆ ಮಾಡಿದೆ. ಕ್ಷೇತ್ರದ ರಸ್ತೆಗಳು ಕಿತ್ತು ಹೋಗಿವೆ.ಗೌರಸಮುದ್ರ ಮಾರಮ್ಮ ದೇವಿ ಪುಣ್ಯ ಕ್ಷೇತ್ರದಿಂದ ಆದಾಯ ಬಂದರೂ ಬರುವ ಭಕ್ತರಿಗೆ ಮೂಲ ಭೂತ ಸೌಕರ್ಯಗಳಿಲ್ಲ. ಈ ಹಿಂದೆ ಸ್ಥಳಿಯ ಶಾಸರು ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ . ಇನ್ನು ಚುನಾವಣೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ವಿವಿಧ ನಗರಗಳಿಂದ ಕ್ಷೇತ್ರಕ್ಕೆ ಪ್ರಭಲ ಆಕಾಂಕ್ಷಿಗಳು ಎಂದು ಮತದಾರರನ್ನು ಸೆಳೆಯಲು ವಲಸಿಗರ ದಂಡು ಬರುತ್ತಿದ್ಸು. ಈ ಬಾರಿ ಕ್ಷೇತ್ರದ ಸ್ಥಳಿಯರಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ನಾಯಕನ್ನು‌ಆಯ್ಕೆ ಮಾಡಿಕೊಳ್ಳಲು ಕ್ಷೇತ್ರದ ಮತದಾರರು ಪ್ರಥಮವಾಗಿ ಜಾಗೃತರಾಗಿ ಹೊಸ ತಂತ್ರಗಾರಿಕೆ ರೂಪಿಸಿ ಕ್ಷೇತ್ರದ ಎಲ್ಲಾ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ವಲಸಿಗ ಹೊರಗಿನ
ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ ಎಂಬ ಪ್ಲೆಕ್ಸ್ ಗಳನ್ನು ಅಳವಡಿಸಲು ಮುಂದಾಗಿದ್ದಾರೆ.
“ಕ್ಷೇತ್ರದ ಅಭಿವೃದ್ದಿ ವಂಚಿತ ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರವು ಹಿಂದುಳಿದ,ಶಾಶ್ವತ ಬರಪೀಡಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹೊರಗಿನ ವಲಸಿಗ ಅಭ್ಯರ್ಥಿಗಳು ಚುನಾವಣೆಯಲ್ಲಿ
ಗೆದ್ದು ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಇದರಿಂದ ಸ್ಥಳೀಯ ಜನರ ಸಮಸ್ಯೆಗಳು ಬಗೆಹರಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದಕ್ಕೆ ಸೂಕ್ತ ಪರಿಹಾರವೆಂದರೆ ಸ್ಥಳೀಯ ಅಭ್ಯರ್ಥಿಗಳು ಶಾಸಕರಾಗಿ
ಆಯ್ಕೆಯಾಗುವುದು ಎಂಬ ಸತ್ಯ ಕ್ಷೇತ್ರದ ಜನತೆಗೆ ಅರ್ಥವಾಗಿದೆ
ಹಾಗಾಗಿ ವಲಸಿಗರು/ಹೊರಗಿನ ಅಭ್ಯರ್ಥಿಗಳು ಕ್ಷೇತ್ರದ ಕಡೆಗೆ ಬರುವುದು ಉತ್ತಮವಾದ ಬೆಳವಣಿಗೆ ಸ್ಥಳಿಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು.
ಎಂದು ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರದ ಮತದಾರರು ಪ್ಲೆಕ್ಸ್ ಗಳನ್ನು ಹಾಕುವ ಮೂಲಕ ವಲಸಿಗ ಆಕಾಂಕ್ಷಿಗಳ ಎದೆಯಲ್ಲಿ ನಡುವನ್ನುಂಟು ಮಾಡಿದೆ.

ಕೋಟೆ ನಾಡಿನ ಚಳ್ಳಕೆರೆ ಗೋಶಾಲೆಗಳ ಜಾನುವಾರಗಳ ಮೇವು ಖರೀದಿಲ್ಲೂ ಭ್ರಷ್ಠಾಚಾರ ಅಧಿಕಾರಿಗಳು 18 ಕೋಟಿ ನುಂಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್

ಚಳ್ಳಕೆರೆ
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು 2016- 17 ನೇ ಸಾಲಿನಲ್ಲಿ ಘೋಷಿಸಿ ಜಾನುವಾರು ಗಳಿಗಾಗಿ ಗೋಶಾಲೆಯನ್ನು ತೆರೆದು ಜಾನುವಾರುಗಳ ನಿರ್ವಹಣೆಗಾಗಿ ಮೇವು ಖರೀದಿಗಾಗಿ 84 ಕೋಟಿ ರೂಪಾಯಿಗಳ ಹಣವನ್ನು ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಬಿಡುಗಡೆ ಮಾಡಿತ್ತು.

ಆ ಕೋಟ್ಯಾಂತರ ರೂಪಾಯಿ ಹಣದಲ್ಲಿ ಬರೋಬ್ಬರಿ 18 ಕೋಟಿಯಷ್ಟು ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿರುವ ಘಟ‌ನೆ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯು ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ 60 ಬಾರಿ ಬರಗಾಲಕ್ಕೆ ತುತ್ತಾಗಿದೆ. ಹಾಗೆಯೇ 2016- 17 ನೇ ಸಾಲಿನಲ್ಲಿ ಕೂಡ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿತ್ತು. ಇದರಿಂದ ಆಗಿನ ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿತ್ತು.

ಜನ ಜಾನುವಾರುಗಳು ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಲ್ಲಿ ಕೂಲಿ‌ ಕೆಲಸ ಕೊಟ್ಟರೆ ಜಾನುವಾರುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಗೋಶಾಲೆಗಳನ್ನು ತೆರೆದು ಅದರಲ್ಲಿ ಬರುವ ಜಾನುವಾರುಗಳಿಗೆ ಮೇವು ವಿತರಿಸಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು.

ಇದಕ್ಕಾಗಿ ಜಿಲ್ಲೆಗೆ ಅಂದಿನ ಸರ್ಕಾರ 84 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಚಳ್ಳಕೆರೆ ತಾಲೂಕಿಗೆ 30 ಕೋಟಿ ಬಿಡುಗಡೆ ಮಾಡಿದ್ದರೆ ಅದರಲ್ಲಿ ಸೇರಿ 18 ಕೋಟಿ 60 ಲಕ್ಷ ಅನುದಾನ ಅವ್ಯವಹಾರವಾಗಿದೆ.

ಇಷ್ಟೂ ಅನುದಾನಕ್ಕೆ ಮೇವು ಸರಬರಾಜು ಮಾಡಿದ್ದೇವೆ ಎಂದು ನಕಲಿ ಬಿಲ್ ಹಾಗೂ ನಕಲಿ ಟಿನ್ ನಂಬರ್ ಹಾಗೂ ನಕಲಿ ಟೆಂಡರ್ ದಾರರನ್ನು ಸೃಷ್ಠಿಸಿ 18 ಕೋಟಿ 60 ಲಕ್ಷ ಹಣವನ್ನು ಸಂಪೂರ್ಣ ಗುಳುಂ ಮಾಡಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಆಲಘಟ್ಟದ ಈ. ರವಿ ಆರೋಪಿಸಿದ್ದಾರೆ.

ಚಳ್ಳಕೆರೆ ತಾಲೂಕಿನಲ್ಲಿ ಗೋಶಾಲೆಗಳಿಗೆ 30 ಕೋಟಿ ಹಾಗೂ ಚಿತ್ರದುರ್ಗ ತಾಲೂಕಿಗೆ 7 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು, ಅದೂ ಕೂಡ ನಕಲಿ ದಾಖಲೆಗಳನ್ನು ಸೃಷ್ಠಿಸಿ 60 ಲಕ್ಷ ನುಂಗಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿದ ಅನುದಾನ 45 ಲಕ್ಷದ 98 ಸಾವಿರದಲ್ಲಿ ಕ್ರೆಡಿಟ್ ಬಿಲ್ ನಂಬರ್ 1 ರಿಂದ 4 ರವರೆಗೆ ಬಿಲ್ ಗಳಲ್ಲಿನ ಟಿನ್ ನಂಬರಿಗೂ ಹಾಗೂ ಸರಬರಾಜು ಮಾಡಿ ಬಿಲ್ ಕೊಟ್ಟಿರುವ ಬಿಲ್ ಗು ಒಂದಕ್ಕೊಂದು ತಾಳೆಯೇ ಇಲ್ಲ, ಇನ್ನೊಂದು ಖಾತೆಯಲ್ಲಿ 9 ಲಕ್ಷದ 94 ಸಾವಿರ ಅನುದಾನಕ್ಕೆ 1 ರಿಂದ 2 ಬಿಲ್ ಗಳಲ್ಲಿ ಟಿನ್ ನಂಬರೇ ಇಲ್ಲ, ದಿನಾಂಕವನ್ನು ನಮೂದಿಸಿಲ್ಲ, ಇನ್ನು ಹಣ ಸಂದಾಯ ಮಾಡಿರುವ ರಶೀದಿಗಳಲ್ಲಿ ದಿನಾಂಕ, ಕಿಲೋ ಮೀಟರ್, ಚಕ್ ಸಂಖ್ಯೆ, ಟ್ರಾಕ್ಟರ್ ನಂಬರ್ ನಮೂದು ಮಾಡದೆ ಸುಮಾರು 4 ಲಕ್ಷದ 45 ಸಾವಿರ ಹಣವನ್ನು ವಂಚನೆ ಮಾಡಲಾಗಿದೆ ಎಂದು ತಿಳಿದು‌ ಬಂದರೆ, ಕ್ರೆಡಿಟ್ ಬಿಲ್ ನಂಬರ್ 1 ರಿಂದ 43 ಪುಟಗಳ ಸಂಖ್ಯೆಯಲ್ಲಿ‌ ಭ್ರಷ್ಠಾಚಾರ ಮಾಡಿರುವುದು ಕಂಡು‌ಬಂದಿದೆ.

ಆದರೆ ಇದೆಲ್ಲವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆ ಮಾಡಿಸದೆ ವಂಚಿಸಲಾಗಿದೆ ಎಂದು ಆಲಘಟ್ಟದ ಆರ್ ಟಿ ಐ ಕಾರ್ಯಕರ್ತ ಈ. ರವಿ ಆರೋಪಿಸಿದ್ದಾರೆ.

ಈ‌ ಎಲ್ಲಾ ದಾಖಲೆಗಳಿಂದ ಅಧಿಕಾರಿಗಳು ನಕಲಿ ಬಿಲ್ ಗಳನ್ನು ಸರ್ಕಾರಕ್ಕೆ ನೀಡಿ ಚಿತ್ರದುರ್ಗ ತಾಲೂಕಿನಲ್ಲಿ 60 ಲಕ್ಷ ಹಣವನ್ನು ಭ್ರಷ್ಠಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಚಳ್ಳಕೆರೆ ತಾಲೂಕಿನಲ್ಲಿ ಕೂಡ 30 ಕೋಟಿ 52 ಲಕ್ಷದ 83 ಸಾವಿರ ಅನುದಾನ ಬಿಡುಗಡೆ ಮಾಡಿತ್ತು.

ಇಷ್ಟು ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಇಲ್ಲಿಯೂ ಕ್ರೆಡಿಟ್ ಬಿಲ್ 1 ರಿಂದ 14 ರವರೆಗೂ ಟಿನ್ ನಂಬರಿಗೂ ಹಾಗೂ ಮೇವು ಸರಬರಾಜು ದಾರರಿಗೂಹೊಂದಾಣಿಕೆಯೇ ಇಲ್ಲದೆ ನಕಲಿ ಬಿಲ್ ಗಳನ್ನು‌ ಸೃಷ್ಠಿಸಿ ಇದರಲ್ಲಿ 6 ಕೋಟಿ 10 ಲಕ್ಷದ 57 ಸಾವಿರ ವಂಚನೆ ಮಾಡಲಾಗಿದೆ.

ಕ್ರೆಡಿಟ್ ಬಿಲ್ ನಂಬರ್ 1 ರಿಂದ 16 ರವರೆಗಿನ ಬಿಲ್ ಗಳಲ್ಲಿಯೂ‌ ಕೂಡ ಟಿನ್ ನಂಬರ್ ಹಾಗೂ ಮೇವು ಸರಬರಾಜು ಬಿಲ್ ಗಳಿಗೂ ಹೊಂದಾಣಿಕೆ ಇಲ್ಲ, ಇಲ್ಲಿಯೂ ಕೂಡ ನಕಲಿ ಬಿಲ್ ಸೃಷ್ಠಿಸಲಾಗಿದ್ದು, 5,15,93, 497 ರೂಪಾಯಿಗಳ ವಂಚಿಸಲಾಗಿದೆ. ಇನ್ನು ಕ್ರೆಡಿಟ್ ಬಿಲ್ ನಂಬರ್ 1 ರಿಂದ 14 ರವರೆಗಿನ ಬಿಲ್ ಗಳಲ್ಲಿ 7,36,81,811 ರೂಪಾಯಿಗಳನ್ನು ವಂಚಿಸಲಾಗಿದೆ.

ಇಲ್ಲಿಯೂ ಕೂಡ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಿಲ್ಲದೆ ಇರುವುದು ಕಂಡು ಬರುತ್ತದೆ. ಇದರಿಂದ ಚಳ್ಳಕೆರೆ ತಾಲೂಕಿನ ಬಿಡುಗಡೆಯಾಗಿದ್ದ 18,63,32 ,370 ರೂಪಾಯಿಗಳು ವಂಚನೆಯಾಗಿರುವುದು ನಕಲಿ ಬಿಲ್ ಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.

ಇದರಿಂದ ಕೂಲಂಕುಷವಾಗಿ ದಾಖಲೆಗಳ‌ನ್ನು ಪರಿಶೀಲಿಸಿ, ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಅವರಿಗೆ ಆರ್ ಟಿ ಐ ಕಾರ್ಯಕರ್ತ ಈ. ರವಿ ಆಲಘಟ್ಟ ದೂರನ್ನು ನೀಡಿದ್ದಾರೆ.

ಮುರುಳಿಧರನ್ ಆರ್ ಹಿರಿಯೂರು.

You cannot copy content of this page