ವೈರಲ್

ಬೆಳೆಯೋರು ಬೆಳೆಯಲಿ ಆಸೂಹೆ ಪಟ್ಟು ಕಾಲೆಳೆಯ ಬೇಡಿ ಇಂತ ವಿಚಾರಗಳು ನಿಮ್ಮ ಮಕ್ಕಳಿಗೆ ಮಾರಕವಾಗುತ್ತದೆ .ಪೊಲೀಸಪ್ಪ ವೀಡಿಯೋ ಸಕತ್ ವೈರಲ್.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸಪ್ಪನ ವಿಡೀಯೋ ಸಕತ್ ಸದ್ದು ಮಾಡುತ್ತಿದೆ..
ಚಳ್ಳಕೆರೆ ನ.25. ಮನವಿ ಮಾಡಿಕೊಂಡಿರುವ ಪಲೀಸಪ್ಪನ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಎಲ್ಲರೀಗೂ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಗ್ರಾಮಗಳಲ್ಲಿ ಯಾರಾದರೊಬ್ಬರು ಅಭಿವೃದ್ಧಿಹೊಂದಿದರೆ , ಉತ್ತಮ ಹೆಸರು ಗಳಿಸಿದರೆ ಬೆಳೆದವರು ಹೊಟ್ಟೆ ಕಿಚ್ಚು, ಅಸೂಹೆ ಪಟ್ಟುಕೊಂಡು ಕಾಲಳೆಯುವವರು ಹೆಚ್ಚಾಗಿದ್ದಾರೆ. ಅಂತವರ ಮೇಲೆ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿ ಹಣ ಎಂದು ಪೊಲೀಸರಿಗೆ ಪೋನ್ ಮಾಡುವವರ ಸಂಖ್ಯೆಹೆಚ್ಚಾಗಿದೆ.
ದಯಮಾಡಿ ನಿಮ್ಕ ಮಕ್ಕಳಿಗೆ ಒಳ್ಳೆಯದರು ಮಾಡಲಿ ಯಾರೂ ಸಹ ಇಂತಹ ಮಾಹಿತಿಯನ್ನು ಬಿಡಿ ಅವರು ಯಾವ ರೀತಿ ಅಭಿವೃದ್ಧಿ ಹೊಂದಿದ್ದಾನೆ ತಿಳಿದು ನೀವು ಸಹ ಕಷ್ಟ ಪಟ್ಟು ಮುಂದೆ ಬನ್ನಿ ಹೊಟ್ಟೆ ಕಿಚ್ಚು ಮನೋ ಭಾವನೆ ಬಿಡಿ ನಿಮ್ಮ ಮಕ್ಕಳು ಸಹ ಉನ್ನತ ಮಟ್ಟಕ್ಕೆ ಹೋಗಲಿ ಭಗವಂತೆ ಒಳ್ಳೆಯದು ಮಾಡಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ವಿವಿಧ ಪ್ರಕರಣಗಳ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ, ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆತಂಕ ಜನಸಮಾನ್ಯರಲ್ಲಿ ಮನೆ ಮಾಡಿದೆ.
ಗಂಡ ಹೆಂಡತಿ ಜಗಳ, ಭೂವಿವಾದ, ರಸ್ತೆ ಅಪಘಾತ, ಪ್ರೇಮ ಪ್ರಕರಣ, ಸಂಚಾರಿ ನಿಯಮ ಉಲ್ಲಘನೆ ಸೇರಿದಂದೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತ್ರರಿಗೆ ನ್ಯಾಯ ಸಿಗುವ ಬದಲು ತಪ್ಪು ಮಾಡಿದವರಿಗೆ ನ್ಯಾಯದೊರೆಯುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ.
ಸಂತ್ರಸ್ತ್ರರು ದೂರು ನೀಡಲು ಬರುವ ಮುನ್ನವೇ ತಪ್ಪು ಮಾಡಿದವರ ಪರವಾಗಿ ಪ್ರಭಾವಿಗಳಿಂದ ಪೋನ್ ಕರೆ ಮಾಡಿ ಇಬ್ಬರಿಗೆ ರಾಜಿ ಮಾಡಿಕಳಿಸಿ ಇಲ್ಲವೆ ಇಬ್ಬರಿಂದಲೂರು ದೂರು ಪಡೆದು ತಪ್ಪು ಮಾಡಿದವನು ನಮ್ಮವನು ಎಂದು ರಕ್ಷಣೆ ನೀಡುತ್ತಾರೆ.
ಸಂತ್ರಸ್ತರಿಗೆ ನ್ಯಾಯಸಿಗದೆ ಅಲೆದಾಡುವಂತಾಗುತ್ತದೆ ಮತ್ತೆ ಪದೇ ಪದೆ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆಯಾಗಲ್ಲಿ ಅನ್ಯಾಯಕ್ಕೆ ತುಳಿತಕ್ಕೆ ಒಳಗಾದವರಿಗೆ ನ್ಯಾಯಸಿಗಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಹಣೆಪಟ್ಟಿಕೊಂಡು ಒತ್ತಡಗಳ ನಡುವೆ ಪೊಲೀಸ್ ಇಲಾಖೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಪೋಲಿಸ್ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಲ್ಲಿ

ಈಗಲಾದರೂ ತಪ್ಪಿತಸ್ಥರ ಪರ ಅಸೂಹೆ ಹೊಟ್ಟೆಕಿಚ್ಚಿನ ಮೇಲೆ ಬೆಂಬಲಿಸದೆ ಪೋಲಿಸರಿಗೆ ಕೆಲಸ ಮಾಡಲು ಬಿಡಿ ತಪ್ಪು ಮಾಡಿದವರಿಗೆ ಬುದ್ದಿಕಲಿಸಲು ಮುಂದಾಗಿ ಪೋಲಿಸಪ್ಪ ಮನವಿ ಮಾಡಿಕೊಂಡಿರುವು ಸತ್ಯ ಎಲ್ಲಾ ಕಡೆ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ ಹಾಗೂ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

ಚಳ್ಳಕೆರೆ ಕ್ಷೇತ್ರದ ಶಾಸಕನೇ ಹೊರತು, ಚಿತ್ರದುರ್ಗದ ಶಾಸಕನಲ್ಲ. ಚಿತ್ರದುರ್ಗ ನನ್ನ ಕ್ಷೇತ್ರವೂ ಅಲ್ಲ ಎಂಬುದನ್ನು ಬಿಜೆಪಿ ಐಟಿ ಸೆಲ್ ನವರಿಗೆ ತಿಳಿಸಲು ಇಚ್ಛಿಸುತ್ತೇನೆ. ಟೀಕಿಸುವ ಮುನ್ನ ಮಾಹಿತಿ ತಿಳಿಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಟ್ವಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸುದ್ದಿ ಕಲ್ಲೇನಹಳ್ಳಿ ಗ್ರಾಮ ಚಿತ್ರದುರ್ಗ ಕ್ಷೇತ್ರಕ್ಕೆ ಸೇರಿರುತ್ತದೆ. ನಾನು ಚಳ್ಳಕೆರೆ ಕ್ಷೇತ್ರದ ಶಾಸಕನೇ ಹೊರತು, ಚಿತ್ರದುರ್ಗದ ಶಾಸಕನಲ್ಲ. ಚಿತ್ರದುರ್ಗ ನನ್ನ ಕ್ಷೇತ್ರವೂ ಅಲ್ಲ ಎಂಬುದನ್ನು ಬಿಜೆಪಿ ಐಟಿ ಸೆಲ್ ನವರಿಗೆ ತಿಳಿಸಲು ಇಚ್ಛಿಸುತ್ತೇನೆ. ಟೀಕಿಸುವ ಮುನ್ನ ಪೂರ್ವಾಪರ ತಿಳಿದು ಮಾತನಾಡುವುದು ಉತ್ತಮ.

ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಸಾಮಾಜಿಕ‌ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದಾನೆ….

ಬೆಳೆ ವಿಮೆ ಬೆಳೆ ಪರಿಹಾರ ನೀಡುವಂತೆ ಯುವನೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಬೆಳೆವಿಮೆ ಕಟ್ಟಿದ ರಸೀದಿಯೊಂದಿಗೆ ಹಂಚಿಕೊಂಡಿದ್ದಾನೆ. ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರ… 2022-2023 (ಬೆಳೆ ವಿಮೆ).

ಬೆಳೆ ಪರಿಹಾರ 2022-23….ರಾಜ್ಯ ಸರ್ಕಾರ…
*
ಈ ವರ್ಷ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತು ಆಲ್ಮೋಸ್ಟ್ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸಂಪೂರ್ಣ ಬೆಳೆಗಳು ಹಾಳಾಗಿ ಹೋಗಿದೆ ಹಾಗಾಗಿ ಈ ವರ್ಷನಾದ್ರು ನಾವು ಕಟ್ಟಿರುವ ಬೆಳೆ ವಿಮೆಯ ಹಣಕ್ಕೆ ಪ್ರತಿಫಲವಾಗಿ ಬೆಳೆ ವಿಮೆಯ ಹಣವನ್ನು ತಡ ಮಾಡದೆ ನಿಮ್ಮ ಇತರೆ ಉದ್ದೇಶಗಳನ್ನ ಬದಿಗೊತ್ತಿ ನಮ್ಮ ರೈತರ ಖಾತೆಗಳಿಗೆ 2 ಸಾವಿರಾನೋ ಅಥವಾ
3 ಸಾವಿರಾನೋ ಹಾಕಿ ಸಮಾಧಾನ ಮಾಡುವುದನ್ನ ಬಿಟ್ಟು ನ್ಯಾಯಯುತವಾಗಿ ಎಷ್ಟು ಹಣ ನೀಡಬೇಕೊ ಅಷ್ಟು ಹಣವನ್ನ ಕೂಡಲೇ ಜಮೆ ಮಾಡಬೇಕಾಗಿ ಒಬ್ಬ ನಾಗರೀಕನಾಗಿ ಒಬ್ಬ ರೈತ ಮಗನಾಗಿ ಮನವಿ
ಮಾಡಿಕೊಳ್ಳುತ್ತಿದ್ದೇನೆ..

ಇಲ್ಲಿ ಬೆಳೆ ವಿಮೆ ಕಟ್ಟಿರು ರಶೀದಿಯನ್ನ ಹಾಕಿದ್ದೀನಿ ಯೋಜನೆಯ ನಿಯಮಗಳ ಪ್ರಕಾರ 5 ಎಕರೆ ಮಳೆಯಾಶ್ರಿತ ಭೂಮಿಗೆ ಸಂಪೂರ್ಣ ಬೆಳೆ ನಾಶ ಆದರೆ 1ಲಕ್ಷದ 10 ಸಾವಿರ ರೂಪಾಯಿಗಳನ್ನ ನೀಡಬೇಕು ಈ ಭಾರಿ ನಮ್ಮಲ್ಲಿ ನೂರಕ್ಕೆ ನೂರರಷ್ಟು ಬೆಳೆ ನಾಶ ಆಗಿದೆ ಹಾಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಮಖ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ಎಲ್ಲರೂ ಮಾತಾಡಿಕೊಂಡು ಆದಷ್ಟು ಬೇಗ ರೈತರಿಗೆ ಸಲ್ಲಬೇಕಾಗಿರುವ ಹಣವನ್ನು ನ್ಯಾಯಯುತವಾಗಿ ಸಲ್ಲುವ ಹಾಗೆ ಮಾಡಿ ಇಲ್ಲವಾದರೆ ಈಗಾಗಲೇ ರೈತ ಕೆಲಸಗಳು ಇಳಿಕೆಯಾಗುತ್ತಿದೆ ನೆಕ್ಸ್ಟ್ ಬಿತ್ತನೆ ಮಾಡುವವರ ಸಂಖ್ಯೆ ಇನ್ನೂ ತುಂಬಾ ಕಡಿಮೆ ಆಗುತ್ತದೆ…ಹೀಗಾದರೆ ಮುಂದೆ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ…

ಹೆಸರಿಗಷ್ಟೇ ಯೋಜನೆ ಅನ್ನೋ ಹಾಗೆ ಮಾಡಬೇಡಿ

ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಎಮ್ ಎಲ್ ಎ ಗಳು ಎಂ ಪಿ ಗಳು ಸಚಿವರುಗಳು ರೈತ ಸಂಘದವರು ಇತರೆ ನಾಯಕರುಗಳು ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿ ನಮ್ಮ ರೈತರಿಗೆ ಬೆಳೆ ವಿಮೆಯ ಸೂಕ್ತ ಹಣವನ್ನು ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

ಇದನ್ನ ಬಿಟ್ಟು ವಿಮೆ ಕಂಪೆನಿಗಳಿಂದ ಕೆಲವರು ಹಣಪಡೆದೋ ಅಥವಾ ಮತ್ತಿನ್ಯಾವುದೊ ಕಾರಣಗಳಿಗಾಗಿ ಮೇಲ್ನೋಟಕ್ಕೆ ಹೋರಾಟ ಮಾಡುವ ಹಾಗೆ ನಾಟಕ ಮಾಡಿ ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ…
ರೈತರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ..

ಹಾಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನ ಕೇಂದ್ರ ಸರ್ಕಾರ ಯಾಣ ಕೊಟ್ಟಿಲ್ಲ
ಎನ್ ಡಿ ಆರ್ ಎಫ್ ನಿಯಮಗಳು ಸರಿಹೊಂದುತ್ತಿಲ್ಲ ಅಂತ ಇನ್ನಿತರೇ ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ…

ದಯವಿಟ್ಟು ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿ…ಹಾಗೆ ಎಲ್ಲಾ ನಾಗರೀಕರು ಇದರ ಬಗ್ಗೆ ಧ್ವನಿ ಎತ್ತಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ…

ಎಷ್ಟೋ ವಿಚಾರಗಳಿಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತೇವೆ ಈ ಕಷ್ಟದ ಸಮಯದಲ್ಲಿ ನಮ್ಮ ರೈತರ ಪರ ಪಕ್ಷಾತೀತವಾಗಿ ಧ್ವನಿ ಎತ್ತೋಣ….

ವಿ ಸ್ಟ್ಯಾಂಡ್ ವಿತ್ ಇಸ್ರೇಲ್ & ಪ್ಯಾಲೆಸ್ತೈನ್..ವಿ ಸ್ಟ್ಯಾಂಡ್ ವಿತ್ ಎಡಪಂಥೀಯ & ಬಲಪಂಥೀಯ ವಿ ಸ್ಟ್ಯಾಂಡ್ ವಿತ್ ಜಾತ್ಯಾತೀತ & ಕೋಮುವಾದ…ಹೀಗೆ ಎಷ್ಟೋ ಪೋಸ್ಟ್ ಗಳನ್ನ ಹಾಕ್ತಿರ್ತೀವಿ ಇದೇ ತರಹ ಅವಾಗಾವಗ ಅಟ್ಲೀಸ್ಟ್ ಕಷ್ಟದ ಸಮಯದಲ್ಲಿ


ವಿ ಸ್ಟ್ಯಾಂಡ್ ವಿತ್ ನಮ್ಮ ರೈತರು ಅಂತ ಹೇಳಬುಹುದಲ್ವಾ???

ಸೋ ಎಲ್ಲಾ ರೈತ ಬಾಂಧವರು ಮತ್ತು ರೈತ ಪರ ಇರುವವರು ಆದಷ್ಟು ಈ ಅರ್ಹ ಹಕ್ಕಿನ ಪೋಸ್ಟನ್ನು ಶೇರ್ ಮಾಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.💐

ಪುಟ್ಟ ಬಾಲಕಿಯ ಪತ್ರಕ್ಕೆ ಸ್ಪಂಧಿಸಿ 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು 9 ಮತ್ತು 10ನೇ ತರಗತಿಗೂ ವಿಸ್ತರಿಸಿದ ಮುಖ್ಯಮಂತ್ರಿ ಸಿದ್ದರಾಮ್ಯ.

ಬೆಂಗಳೂರು ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ. ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ.

ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ‌ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ.

ಅನ್ನಭಾಗ್ಯ ಭಾಗ್ಯ ಯೋಜನೆಯಡಿ ಉಚಿತ ಪಡಿತರ ವಿತರಣೆಗೆ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ವೀಡಿಯೋ ವೈರಲ್

ಜನಧ್ವನಿ ವಾರ್ತೆ ಜೂ 17
ಅನ್ನಭಾಗ್ಯ ಭಾಗ್ಯ ಯೋಜನೆಯಡಿ ಉಚಿತ ಪಡಿತರ ವಿತರಣೆಗೆ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಪಂ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಮಾಲಿಕ ಉಚಿತ ಪಡಿತರ ಅಕ್ಕಿ ನೀಡಲು ಪ್ರತಿಯೊಬ್ಬರಿಂದ 10 ರಿಂದ 20 ರೂ ವಸೂಲಿ ಮಾಡುತ್ತಿರುವ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಣಾದಲ್ಲಿ ಹರಿದಾಡುತ್ತಿದೆ ಬಡವರಿಗೆಂದು ಉಚಿತವಾಗಿ ನೀಡುತ್ತಿರುವ ಅನ್ನ ಭಾಗ್ಯ ಯೋಜನೆಯಡಿ ಸರಕಾರ ಉಚಿತ ಅಕ್ಕಿ ನೀಡಿದರೆ ನ್ಯಾಯಬೆಲೆ ಅಂಗಡಿಯವರು ಪ್ರತಿ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೆಆರ್‌ಎಸ್‌ಪಕ್ಷದ ಸಿ.ಮಹೇಶ್ ನಗರಂಗೆರೆ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರಕಾರ ಬಡವರಿಗೆಂದು ಉಚತವಾಗಿ ಪಡಿತ ವಿತರಣೆ ಮಾಡುತ್ತಿದ್ದು ಇತ್ತ ಪಡಿತರ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿ ಮಾಲಿಕರು ಹಣ ಪಡೆಯುವ ಜತೆಗೆ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದಲೇ ಆಹಾರ ಇಲಾಖೆ ಅಧಿಕಾರಿಗಳು ಹಫ್ತಾ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಇದು ಯಾವುದೋ ಒಂದು ಅಂಗಡಿ ಕಥೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಲ್ಲಿ ನಡೆಯುತ್ತಿರುವ ತೂಕದಲ್ಲಿ ಮೋಸ ಹಾಗೂ ಹಣ ಪಡೆಯುತ್ತಿರುವುದು ಕೇಳಿ ಬರುತ್ತಿದೆ ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಪ್ರತಿಭಟೆನೆ ಮಾಡುವುದಾಗಿ ಕೆಆರ್‌ಪಕ್ಷ ಎಚ್ಚರಿಕೆ ನೀಡಿದೆ.

ರಾಷ್ಟ್ರಧ್ವಜ ಕಸದ ಪುಟ್ಟಿಗೆ ವೀಡಿಯೋ ವೈರಲ್ ಖಾಸಗಿ ಶಾಲೆಯ ಯಡವಟ್ಟು


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.5 ವೈರಲ್ ವೀಡಿಯೋ
ನಮ್ಮ ದೇಶದ ರಾಷ್ಟ್ರಧ್ವಜ ಶಾಲಾ ಕಾಲೇಜು ಹಾಗೂ ಹಲವಾರು
ಶಿಕ್ಷಣ ಸಂಸ್ಥೆಗಳು ನಮ್ಮ ದೇಶದ ತ್ರಿವರ್ಣ
ಧ್ವಜವನ್ನು ಮಕ್ಕಳಿಗೆ ಶಿಕ್ಷಣ ಕೊಡುವಂತಹ ಕೆಲವು ಶಿಕ್ಷಣ
ಸಂಸ್ಥೆಗಳು ರಾಷ್ಟ್ರಧ್ವಜದ ಮಹತ್ವವನ್ನು ಅರಿಯದೆ ಕಸದ ಪುಟ್ಟಿಗೆ
ಹಾಕಿರುವ ಸಂಗತಿ ವಿಡಿಯೋ ವೈರಲ್ ಆಗಿದೆ,
ಹೌದು
ನಮ್ಮ ದೇಶದ ಹೆಮ್ಮೆಯ ಕೇಸರಿ ಬಿಳಿ ಹಸಿರು ಧ್ವಜವನ್ನು ನಮ್ಮ
ರಾಷ್ಟ್ರದ ಜನತೆಯು ಪ್ರತಿಯೊಬ್ಬರು ಗೌರವಿಸುತ್ತಾರೆ, ಆದರೆ ಇಲ್ಲಿ
ನೋಡಿ ಚಳ್ಳಕೆರೆ ನಗರದ ವಿಠಲ್ ನಗರದಲ್ಲಿ ಬರುವ ಚಿನ್ಮಯ್
ಶಾಲೆ ಎದುರು ಕಸದ ಬುಟ್ಟಿಯಲ್ಲಿ ಬಿದ್ದಿದ್ದ ರಾಷ್ಟ್ರಧ್ವಜವನ್ನು ನೋಡಿ
ಶಾಲೆಗೆ ಮಕ್ಕಳನ್ನು ಬಿಡಲು ಹೋದ ಪೋಷಕರು ಸಾಮಾಜಿಕ
ಜಾಲತಾಣದಲ್ಲಿ ಹರಿಬಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ,
ಚಿನ್ಮಯ ಶಾಲೆಯ ಶಾಲೆಯ ಹೊರಗಡೆಯ ಕಾಲಿ ನಿವೇಶನದ ಕ್ರಾಸ್
ಬಳಿ ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜ ಕಾಣಿಸಿಕೊಂಡಿದ್ದು ಕೆಲವೇ
ನಿಮಿಷಗಳಲ್ಲಿ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅವರಿಗೆ
ಮಾಧ್ಯಮದಿಂದ ಫೋನ್ ಮಾಡಿದಾಗ ಈ ವಿಷಯವನ್ನು
ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮದವರಿಗೆ
ವಿಶೇಷ ತಿಳಿಸಿದರು ನೋಡಿ ಒಂದು ಶಿಕ್ಷಣ ಸಂಸ್ಥೆ ಈ ತರಹ
ರಾಷ್ಟ್ರಧ್ವಜವನ್ನು ಅವಮಾನಿಸಿದ್ದು ಎಷ್ಟರಮಟ್ಟಿಗೆ ಸರಿ, ಇದಕ್ಕೆ
ಸಾರ್ವಜನಿಕರೇ ಸರಿಯಾದ ಉತ್ತರ ಹೇಳಬೇಕಾಗಿದೆ ,ಇನ್ನಾದರೂ
ಶಿಕ್ಷಣ ಅಧಿಕಾರಿಗಳು ಇಂತಹ ಶಾಲೆಯನ್ನು ಗುರುತಿಸಿ ಅಂತವರ
ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು
ಒತ್ತಾಯಿಸಿದ್ದಾರೆ

ಸರ್ಕಾರಿ ಅಧಿಕಾರಿ ಲಂಚ ಕೇಳಿದರೆರವಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಥವಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪದಾಧಿಕಾರಿಗಳನ್ನು ಸಂಪರ್ಕಿಸಿ ರವಿಕೃಷ್ಣರೆಡ್ಡಿ.

ಲಂಚ ಪಡೆದಿದ್ದ ಪ್ರಭಾರ ಉಪನೋಂದಣಾಧಿಕಾರಿ ಶ್ರೀಮತಿ ಯಶೋಧ ಕೆಲಸದಿಂದಲೆ ವಜಾ…

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಉಪನೋಂದಣಾಧಿಕಾರಿ ಕಚೇರಿಯ ಪ್ರಭಾರ ಉಪನೋಂದಣಾಧಿಕಾರಿ ಶ್ರೀಮತಿ ಯಶೋಧ ಕಚೇರಿಯಲ್ಲಿ ಲಂಚದ ಹಣದ ಸ್ವೀಕರಿಸಿದ ವಿಚಾರವಾಗಿ ವಿಡಿಯೋ ಸಹಿತ *ಲಂಚಮುಕ್ತ ಕರ್ನಾಟಕ ನಿರ್ಮಾಣ ವೇಧಿಕೆ (ರಿ)* ದೂರು ದಾಖಲಿಸಿ ನಿರಂತರ ಹೊರಾಟ ಮಾಡಿದ ಪರಿಣಾಮವಾಗಿ, ಅವರು ಲಂಚ ಸ್ವೀಕರಿಸಿದ್ದು ಸಾಬೀತಾಗಿರುವ ಕಾರಣ ಈಗ ಸರ್ಕಾರಿ ಕೆಲಸದಿಂದ ವಜಾ ಆಗಿದ್ದಾರೆ.


ಯಾವುದೇ ಸರ್ಕಾರಿ ಅಧಿಕಾರಿ ಲಂಚ ಕೇಳಿದ ಪಕ್ಷದಲ್ಲಿ ದಯವಿಟ್ಟು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ (888427730) ಅಥವಾ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (7975625575) ಪದಾಧಿಕಾರಿಗಳನ್ನು ಸಂಪರ್ಕಿಸಿ.

ಪ್ರಭಾಕರ ಮ್ಯಾಸನಾಯಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಅಂತರಾಳದ ಮಾತು

ಆತ್ಮೀಯರೇ..

ಕೊನೆಗಳಿಗೆ ತನಕ ಹೋರಾಟ ಮಾಡಿದ್ದರ ಫಲವಾಗಿ ಅಭಿಮನ್ಯುವಿಗೆ ಶೂರ ಎಂಬ ಬಿರುದು ಬಂತು ಎಂದು ಕೇಳಿದ್ದೇವೆ. ಅಭಿಮನ್ಯು ನನಗೆ ಪ್ರೇರಣೆ. ಅದೇ ರೀತಿ ಮಾಡಿದಷ್ಟು ನೀಡುಭಿಕ್ಷೆಯ ಶ್ರೀಕ್ಷೇತ್ರ ಇರುವುದು ಕೂಡ ಮೊಳಕಾಲ್ಮೂರು ಕ್ಷೇತ್ರದಲ್ಲಿ. ಇಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯ ಕೈಗೊಂಡಿದ್ದೇನೆ. ನನ್ನ ಪರಿಶ್ರಮಕ್ಕೆ ಭಗವಂತ ಕೈ ಹಿಡಿದು ನಡೆಸುತ್ತಾನೆ ಎಂಬ ಅಚಲ ನಂಬಿಕೆ ನನ್ನದು. ಈಗಲೂ ಕ್ಷೇತ್ರದ ಜನರೊಡನೆ ಇದ್ದೇನೆ, ಮುಂದೆಯೂ ಇರುತ್ತೇನೆ.ನನ್ನ ನೋಡಿ ನಗುವವರು ಆಡಿಕೊಳ್ಳುವವರು, ಕಿಚಾಯಿಸುವವರು ಹಾಗೂ ನನಗೆ ಮಾಡುತ್ತಿರುವ ಅಪಮಾನ ಅವಮಾನಗಳು ಎಲ್ಲವೂ ನನಗೆ ಪ್ರೇರಣೆಯಾಗಿದೆ.
ಇವೆಲ್ಲವೂ ನನ್ನನ್ನು ಮತ್ತಷ್ಟು ಸದೃಢನನ್ನಾಗಿಸಿದೆ. ನನಗೆ ಅಪಮಾನ ಅವಮಾನ ಮಾಡುತ್ತಿರುವ ಎಲ್ಲರನ್ನು ಬಸವಣ್ಣನವರ ಹೇಳಿರುವ ವಚನದಂತೆ ಜರಿದವರೆನ್ನ ಜನ್ಮ ಬಂಧುಗಳೆಂಬಂತೆ ಅತ್ಯಂತ ಸ್ನೇಹಭಾವದಿಂದ ಸ್ವೀಕರಿಸಿದ್ದೇನೆ.
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿರುವಂತೆ *ಕನಸಿನ ಗುರಿ ಕೇಳಿ ಜನ ಇವನೊಬ್ಬ ಹುಚ್ಚ ಎನ್ನಬೇಕು ಗುರಿ ತಲುಪಿದ ಮೇಲೆ ನೋಡಿ ನಗಾಡಿರುವವರು ಹುಚ್ಚರಾಗಬೇಕು* ಇವು ನನಗೆ ಆದರ್ಶ ನುಡಿಗಳು ಕ್ಷೇತ್ರದಲ್ಲಿ ನನ್ನ ಗುರಿ ತಲುಪುತ್ತೇನೆ. ನನ್ನ ಮಾತೃಸಮಾನ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ವಿಶ್ವಾಸವಿದೆ. ಮತದಾರ ದೇವರುಗಳ ಆಶೀರ್ವಾದದಿಂದ ಶಾಸಕನಾಗುತ್ತೇನೆ ಎಂಬ ಅಧಮ್ಯ ವಿಶ್ವಾಸ ನನ್ನದು. ಇದಕ್ಕೆ ಕ್ಷೇತ್ರದ ಜನರ ಸಹಕಾರ ಕೋರುತ್ತೇನೆ. ಮಹಾತ್ಮ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹ ಆರಂಭ ಮಾಡಿದಾಗ ಹಿಂದೆ ಬಂದವರು ಕೇವಲ ಮೂರು ಜನ ಮಾತ್ರ ಹಾಗೆ ಶಿವಾಜಿ ಮಹಾರಾಜರು ಸೈನ್ಯ ಕಟ್ಟಲು ಹೊರಟಾಗ ಸಿಕ್ಕಿದ್ದು ಹಸು ಮೇಯಿಸುವ ನಾಲ್ಕಾರು ಹುಡುಗರು ಮಾತ್ರ. ಇವರ್ಯಾರು ಎದೆಗುಂದದೆ ಸೈನ್ಯ ಕಟ್ಟಿ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ. ಹಾಗೆ ನಾನು ಕೂಡ ಶುಭೋದಯ ಕಾರ್ಯಕ್ರಮ ಮುಖೇನ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಮನಸ್ಸನ್ನು ಗೆಲ್ಲುತ್ತೇನೆ. *ನನ್ನ ತಾಯಿ ನನಗೆ ಕಲಿಸಿಕೊಟ್ಟ ಸಂಸ್ಕಾರ*
ಯಾರಿಗೂ ನೋವುಂಟು ಮಾಡಬೇಡ ಯಾರಿಗೂ ಕೆಡಕು ಬಯಸಬೇಡ ಎಂದು ನನ್ನ ತಾಯಿ ಅನಕ್ಷರಸ್ಥೆ ಆದರೂ ಮೇಲಿನಂತೆ ಸದಾ ಹೇಳುತ್ತಿದ್ದರು. ಅಣ್ಣ ಶ್ರೀರಾಮುಲು ಅವರ ಬಗ್ಗೆ ಆವೇಶದಲ್ಲಿ ಭಾವನಾತ್ಮಕವಾಗಿ ಮಾತನಾಡಿರುವ ಬಗ್ಗೆ ಇತ್ತೀಚೆಗೆ ಸ್ನೇಹಿತನೋರ್ವ ಒಂದು ಆಡಿಯೋ ಒಂದು ವೈರಲ್ ಮಾಡಿದ್ದರು. ಅದು ನನ್ನನ್ನು ಮಾನಸಿಕವಾಗಿ ಬಹಳ ನೋಯಿಸಿದೆ. ಇದು ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ. ಯಾರು ಈ ಬಗ್ಗೆ ಅನ್ಯತಾಭಾವಿಸಬಾರದು ಈ ಬಗ್ಗೆ ಅವರಲ್ಲಿ ಹಾಗು ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದೇನೆ ಪಕ್ಷದಲ್ಲಿರುವ ಎಲ್ಲರೂ ಅಣ್ಣ ತಮ್ಮಂದಿರು, ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯೋಣ ಪಕ್ಷ ಗೆಲ್ಲಿಸೋಣ ಎಂದು ಆಶಿಸುತ್ತಾ ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ

ಇಂತಿ ನಿಮ್ಮ ಪ್ರೀತಿಯ
ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಪ್ರಕಾಶ್ ಹಿರಿಯೂರು

ವೃತ್ತಿ ಮಾತ್ಸರ್ಯವೋ…ಪ್ರಚಾರದ ಅಮಲೋ..? ಸಾಮಾಜಿಕ ಜಾಲತಾಣದ ಮುಖಪುಟದ ವೈರಲ್
************
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವುದು ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದರೂ, ಸರ್ಕಾರದ ಆಡಳಿತದ ಎಂಜಿನ್ ಇರೋದು ಕಾರ್ಯಾಂಗದ ಬ್ಯೂರೋಕ್ರೆಸಿಯ ಕೈಯಲ್ಲಿಯೇ ! ಅದರಲ್ಲೂ ಮುಖ್ಯವಾಗಿ IAS ಮತ್ತು IPS ಗಳದ್ದೇ ಇಲ್ಲಿ ಕಾರುಬಾರು. ನಾಗರಿಕ ಸೇವಾ ಅಧಿಕಾರಿಗಳು ದಕ್ಷರು, ಸೇವಾ ಮನೋಭಾವ ಉಳ್ಳವರು ಹಾಗೂ ಸಾಮಾನ್ಯ ಜನರ ನೋವಿಗೆ ದನಿಯಾಗುವವರೂ ಆಗಿದ್ದಲ್ಲಿ ನಿಸ್ಸಂಶಯವಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದೇ ಬರುತ್ತದೆ. ಒಂದೊಮ್ಮೆ ಬ್ಯೂರೋಕ್ರೆಸಿಯಲ್ಲಿ ಮಾನವೀಯ ಅಂತಃಕರಣವಿಲ್ಲದ , ಜನರ ಭಾವನೆಗಳಿಗೆ ಸ್ಪಂದಿಸದ ಅಥವಾ ಎಲ್ಲದರಲ್ಲೂ ವಿವಾದವೆಬ್ಬಿಸುವ ಸ್ವಪ್ರತಿಷ್ಠೆಯ ಅಧಿಕಾರಿಗಳೇ ತುಂಬಿದ್ದಲ್ಲಿ ಶಾಸಕಾಂಗ ಎಷ್ಟೇ ಪ್ರಬಲವಾಗಿದ್ದರೂ ಸರ್ಕಾರಕ್ಕೆ ಕೆಟ್ಟ ಹೆಸರು ಗ್ಯಾರಂಟೀ ! ಇದು ಡೆಮೊಕ್ರೆಸಿಯ ಮೇಲಿನ ಬ್ಯೂರೋಕ್ರೆಸಿಯ ಹಿಡಿತದ ಒಂದು ಝಲಕ್.

ಕಳೆದ ವರ್ಷವಷ್ಟೇ ಮೈಸೂರಿನ ಜಿಲ್ಲಾಧಿಕಾರಿ ಯಾಗಿದ್ದ ಶ್ರೀಮತಿ ರೋಹಿಣಿ ಸಿಂಧೂರಿ ಹಾಗೂ ಆಯುಕ್ತರಾಗಿದ್ದ ಶ್ರೀಮತಿ ಶಿಲ್ಪಾನಾಗ್ ಎಂಬ ಇಬ್ಬರು ಮಹಿಳಾ ಐ.ಎ.ಎಸ್ ಅಧಿಕಾರಿಗಳ ನಡುವಿನ ಅಂತರ್ಯುದ್ಧ ರಾಜ್ಯಾದ್ಯಂತ ಬೇಡದ ಕಾರಣಕ್ಕೆ ಸುದ್ದಿಮಾಡಿ ಜನರ ಗಮನ ಸೆಳೆದು ಕೊನೆಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಅದನ್ನು ಬಗೆಹರಿಸುವಂತಹ ಸೆನ್ಸಿಟೀವ್ ಸೀನ್‌ ಕ್ರಿಯೇಟ್ ಆಗಿತ್ತು. ಈಗ ಅದೇ ಮಹಿಳಾ ಅಧಿಕಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈಗಿನ ಬಹಿರಂಗ ಯುದ್ಧದಲ್ಲಿ ರೋಹಿಣಿ ವಿರುದ್ಧ ಕತ್ತಿ‌ಗುರಾಣಿ ಹಿಡಿದಿರುವವರು ರೂಪಾ ಮೌದ್ಗಿಲ್ ಎಂಬ ಐಪಿಎಸ್ ಅಧಿಕಾರಿ.

ಈ ಇಬ್ಬರು ಸ್ಮಾರ್ಟ್ ಅಧಿಕಾರಿಗಳ ಶೀತಲ ಸಮರ ಆಡಳಿತಾತ್ಮಕ ಕಾರಣಕ್ಕೆ ಸುದ್ದಿಯಾಗಿದ್ದಲ್ಲಿ ಅದು ರಾಜ್ಯದ ಸಾಮಾನ್ಯಜನರ ಗಮನವನ್ನು ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಆದರೆ ಇಲ್ಲಿ ವೈಯಕ್ತಿಕ ಕಾರಣ ಹಾಗೂ ವೃತ್ತಿ ಮಾತ್ಸರ್ಯದ ಸೋಂಕು ಎರಡೂ ಲಿಂಕ್ ಆಗಿ ಸಿಂಧೂರಿಯವರ ಸುತ್ತ ನಡೆದಿದೆಯೆನ್ನಲಾದ ಅನೇಕ ಹಳೆಯ ವರ್ಣರಂಜಿತ ಘಟನಾವಳಿಗಳಿಗೆ ಸ್ಪೈಸೀ ಟಚ್ ಕೊಟ್ಟು ಇಂತಹಾ ಸುದ್ದಿಗಳಿಗಾಗಿಯೇ ಬಕಪಕ್ಷಿಗಳಂತೆ ಕಾದು ಕೂತಿರುವ ಮಾಧ್ಯಮಗಳಿಗೆ ಮಟನ್ ಬಿರಿಯಾನಿ ಕೊಟ್ಟಂತಿದೆ !

ಈ ಹಿಂದೆ ರೋಹಿಣಿ ಸಿಂಧೂರಿಯವರು ಜೆಡಿಎಸ್ ಶಾಸಕರೊಬ್ಬರ ಆಸ್ತಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಬಹಿರಂಗವಾಗಿ ಫ಼ೈಟ್ ಮಾಡಿದ್ದು ಜಗಜ್ಜಾಹೀರಾಗಿತ್ತು. ಈಗ ಅದೇ ಶಾಸಕರೊಂದಿಗೆ ಈಯಮ್ಮ ಸಂಧಾನಕ್ಕಾಗಿ ಮುಂದಾಗಿರುವ ವಿಚಾರವನ್ನು ಹಿಡಿದುಕೊಂಡು ರೂಪಾ ಮೌದ್ಗಿಲ್ ರವರು ರೋಹಿಣಿಯವರ ವಿರುದ್ಧ ನಿನ್ನೆಯಿಂದ ತಮ್ಮ ಫ಼ೇಸ್ ಬುಕ್ ನಲ್ಲಿ ಸರಣಿಯೋಪಾದಿಯಲ್ಲಿ ಆಪಾದನೆಗಳ ರೂಪದ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಅವರ ಕೆಲವು ಖಾಸಗೀ ಭಾವಚಿತ್ರಗಳನ್ನೂ ಅಪ್ ಲೋಡ್ ಮಾಡಿ, ಆಡಳಿತಾತ್ಮಕ ವಿಚಾರದ ಜೊತೆಗೆ ನೈತಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನೂ ಎತ್ತಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ರೂಪಾರವರು ಎತ್ತಿರುವ ಪ್ರಶ್ನೆಗಳು, ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನೇಕ ಮಾಹಿತಿಗಳು , ಫೋಟೋಗಳು, ವೈಯಕ್ತಿಕ ವಿಚಾರ…. ಇತ್ಯಾದಿಗಳು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವ ಚರ್ಚೆ ರಾಜ್ಯದಲ್ಲಿ ಸಧ್ಯದ ಹಾಟ್ ಡಿಬೇಟ್ ಟಾಪಿಕ್ಕು ! ಈ ವಿಷಯದಲ್ಲಿ ರೂಪಾರವರ ವೇಗ ಆವೇಗ ಹಾಗೂ ಭಾವೋದ್ವೇಗವೆಲ್ಲವನ್ನೂ ನೋಡಿದರೆ ಸಿಂಧೂರಿಯವರ ವಿರುದ್ಧ ಯಾವುದೇ ರೀತಿಯ ಕಾನೂನು‌ ಹೋರಾಟಕ್ಕೂ ತಾನು ರೆಡಿ ಎನ್ನುವ ಸೂಚನೆಯನ್ನು ಕೊಟ್ಟೇ ಆತ್ಮವಿಶ್ವಾಸದಿಂದ ಮುಂದಡಿಯಿಟ್ಟಿದ್ದಾರೆ.

ಈ ಹಿಂದೆ ಡಿ.ಕೆ ರವಿ ಎಂಬ ಐ ಎ ಎಸ್ ಅಧಿಕಾರಿಯ ಆತ್ಮಹತ್ಯೆಯ ಎಪಿಸೋಡು, ರೋಹಿಣಿಯವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ನಡೆಸಿದ ದರ್ಬಾರು, ಕೊರೋನಾ ಕಾಲದಲ್ಲಿ ಜನ ಸಾಯುತ್ತಿದ್ದರೆ ಇವರು ಲಕ್ಷಗಟ್ಟಲೆ ಖರ್ಚುಮಾಡಿ ತಮ್ಮ ಡಿ.ಸಿ ಬಂಗಲೆಯನ್ನು ನವೀಕರಣ‌ಮಾಡಿಸಿಕೊಂಡಿದ್ದು, ಈಜುಕೊಳ ಕಟ್ಟಿಸಿದ್ದು, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರೆತೆಯಿಂದ ಜನ ಸತ್ತಿದ್ದಕ್ಕೂ ಕಾರಣರಾಗಿದ್ದು, ಮೈಸೂರಿನ ಜಿಲ್ಲಾಧಿಕಾರಿಯಾಗಿ ರಿಪೋರ್ಟ್ ಮಾಡಿಕೊಂಡ ತಿಂಗಳೊಳಗೇ ಕನ್ನಡಿಗ ಶರತ್ ರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬಂದಿದ್ದು, ಸರ್ಕಾರದ ಮಟ್ಟದಲ್ಲಿ ಅಪಾರ ಪ್ರಭಾವ ಹೊಂದಿರುವುದು , ಕುಟುಂಬದ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿಕೊಂಡಿರುವುದು…ಇವೇ ಮೊದಲಾದ ಹತ್ತೊಂಭತ್ತು ಆರೋಪಗಳ ಸುರಿಮಳೆಯನ್ನೇ ರೋಹಿಣಿಯವರ ವಿರುದ್ಧ ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸುರಿಸಿರುತ್ತಾರೆ.

ಈ ಎಲ್ಲಾ ಆರೋಪಗಳಿಗೂ ಗರಂ ಆಗಿರುವ ರೋಹಿಣಿ, ರೂಪಾರನ್ನು ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾರೆಂದೂ ತಿರುಗೇಟು ನೀಡಿ ಅವರ ವಿರುದ್ದ ಕಾನೂನು ಸಮರಕ್ಕೆ ಮುಂದಾಗುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅದಾವುದಕ್ಕೂ ಕೇರ್ ಮಾಡದ ರೂಪಾ ಮೌದ್ಗಿಲ್ , ಸಿಂಧೂರಿಯವರ ಮತ್ತಷ್ಟು ಹಸಿಹಸಿ ಕರ್ಮಕಾಂಡಗಳನ್ನು ಬಯಲಿಗೆಳೆಯುವುದಾಗಿ ಆಕ್ರೋಶ ಹೊರಹಾಕಿದ್ದಾರೆ…!

ಇದು ಯಾಕೋ ನೆವರ್ ಎಂಡಿಂಗ್ ಅನಿಸುತ್ತಿದೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಬ್ಬರ ಈ ಆರೋಪ ಪ್ರತ್ಯಾರೋಪಗಳಿಂದ ಕರುನಾಡಿನ‌ ನಾಗರಿಕರಿಗೆ ಪುಕ್ಕಟ್ಟೆ ಮನರಂಜನೆ ಹಾಗೂ ಮಾಧ್ಯಮಗಳಿಗೆ ಅದರಲ್ಲೂ ಡಿಜಿಟಲ್ ಮಾಧ್ಯಮಗಳಿಗೆ ಫ಼ುಲ್ ಮೀಲ್ಸ್ ಸಿಕ್ಕಂತಾಗಿ ಕಲರ್ ಫ಼ುಲ್ ಕಾಂಟ್ರೋವರ್ಸಿಯಲ್ಲಿ ಕರುನಾಡು ರಂಗೇರುವಂತೆ ಮಾಡಿದೆ. ನಮ್ಮ ಜನರೂ ಸಹ ಈ ಇಬ್ಬರು ಅಧಿಕಾರಿಗಳ ಎಪಿಸೋಡನ್ನು ಅವರದೇ ಆದ ರೀತಿಯಲ್ಲಿ ಚರ್ಚಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಆದರೆ ಇದು ನಾಗರಿಕ ಸೇವಾ ಅಧಿಕಾರಿಗಳ ಲೆವೆಲ್ಲಿಗೆ ತರವಲ್ಲದ ನಡೆಯೆಂದು ಸಂಬಂಧಿಸಿದವರಿಗೆ ಇನ್ನೂ
ಅನಿಸುತ್ತಿಲ್ಲವೇ..?? ಹಾಗಾದರೆ ಈ ತರಹದ ಎಪಿಸೋಡುಗಳಿಗೆ ಏನು ಕಾರಣ ?

ನಮ್ಮ ಕೆಲವು ಐ.ಎ.ಎಸ್ ಅಧಿಕಾರಿಗಳಿಗೆ ತಾವು ಮಾಡಿದ್ದೆಲ್ಲವೂ ಯೆಸ್ ಎನ್ನುವ ಪಿತ್ಥ‌ ಸದಾ ನೆತ್ತಿಯ ಮೇಲೆ ಕೂರಿರುತ್ತೆ. ಹೀಗಾಗಿಯೇ ಅಧಿಕಾರವೆನ್ನುವುದು ಜನಸೇವೆಗೆ ಸಿಕ್ಕ ಅವಕಾಶವೆಂದು‌ ಭಾವಿಸದೇ ಅದು ಜನರನ್ನು ಆಳಲು , ಪವರ್ ಚಲಾಯಿಸಲು , ಭ್ರಷ್ಟಾಚಾರದಲ್ಲಿ ಮುಳುಗೇಳಲು ಸಿಕ್ಕ ಸುವರ್ಣ ಅವಕಾಶದಂತೆ ಇಂಥವರು ಭ್ರಮಿಸುತ್ತಾರೆ. ಈ ಐಲುಗಳ ಜೊತೆಗೆ ಪ್ರಚಾರದ ಅಮಲು ಸಹಾ ಸೇರಿಕೊಂಡಲ್ಲಿ ಅಲ್ಲಿಗೆ ಮುಗೀತು ! ಇವರನ್ನು ಕಂಟ್ರೋಲ್ ಮಾಡಲು ಯಾರಿಗೂ ಆಗೋಲ್ಲ. ಹೀಗಾಗಿಯೇ ತಮ್ಮ ದಿನನಿತ್ಯದ ಆಗುಹೋಗುಗಳ ಬಗೆಗೆ ರನ್ನಿಂಗ್ ಕಾಮೆಂಟರಿ ಮಾಡುವಂತಹ ವಂಧಿಮಾಗಧ ಮಾಧ್ಯಮದವರನ್ನು ಇಟ್ಟುಕೊಂಡು ತಮ್ಮ ಅನೇಕಾನೇಕ ಒಣ ಸಾಧನೆಗಳ ಹಸಿ‌ವಿಡಿಯೋಗಳನ್ನು, ಸಿಂಗಂ ರೀತಿಯ ಭಂಗಿಗಳನ್ನೂ ಅಬ್ಬರದ ಪ್ರಚಾರಕ್ಕೆ ಉಪಯೋಗಿಸಿಕೊಂಡು ತಾನೊಬ್ಬ ದಕ್ಷ ಜನನಾಯಕ ಎಂದೋ ಅಥವಾ ಡೇರ್ ಅಂಡ್ ಡೆವಿಲ್ ಹೀರೋ ಎಂದೋ ಬಿಂಬಿಸಿಕೊಳ್ಳುತ್ತಲೇ ಗಮನ ಸೆಳೆಯುತ್ತಾರೆ. ಈ ಪ್ರಚಾರದ ಹುಚ್ಚು ಒಮ್ಮೊಮ್ಮೆ ಇವರಿಂದ ಮಾಡಬಾರದ ಕೆಲಸಗಳನ್ನೂ ಮಾಡಿಸಿಬಿಡುತ್ತೆ.

ಈ ಇಬ್ಬರು ಮಹಿಳಾ ಅಧಿಕಾರಿಗಳ ವಿಚಾರದಲ್ಲಿಯೂ ಪ್ರಚಾರದ ಮೈಲೇಜ್ ನ ಹೊಳಹು ಸಾಕಷ್ಟಿದೆಯೆಂಬುದು ಮೇಲ್ನೋಟಕ್ಕೆ ಕಣ್ಣಿಗೆ ರಾಚುತ್ತದೆ.

ಸರ್ಕಾರದ ಸೇವಾ ನಿಯಮಗಳಡಿಯಲ್ಲಿ ರೂಪಾ ಮೌದ್ಗಿಲ್ ರವರ ವರ್ತನೆ ಎಷ್ಟರಮಟ್ಟಿಗೆ ಸಹನೀಯ ಎಂಬುದು ಇತರರಿಗಿಂತ ಅವರಿಗೇ ಚೆನ್ನಾಗಿ ಗೊತ್ತು. ಒಬ್ಬ ದಕ್ಷ ಅಧಿಕಾರಿಣಿಯಾಗಿ ಹೆಸರು ಮಾಡಿರುವ ಅವರಿಗೆ ಯಾವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು- ಬಾರದು ಎಂಬುದರ ಸಂಪೂರ್ಣ ಅರಿವು ಇದ್ದೇ ಇರುತ್ತದೆ. ಅದರಲ್ಲೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವೈಯಕ್ತಿಕ ಫೋಟೋಗಳನ್ನೂ ತಮ್ಮ ಫ಼ೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಪ್ರಶ್ನೆಗಳನ್ನು ಕೇಳಿರುವುದು ನೈತಿಕವಾಗಿ ಸರಿಯಲ್ಲವಾದರೂ ಇದರ ಹಿಂದೆ ಬಲವಾದ ಉದ್ದೇಶವಂತೂ ಇದ್ದೇ ಇದೆ. ಇದು ಒಂದು ಬ್ಯೂರೋಕ್ರೆಟಿಕ್ ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣ ಮಾಡಿದಲ್ಲಿ ಮಾತ್ರ ಅವರ ಉದ್ದೇಶವನ್ನು ಸಹ್ಯ ಎನ್ನಬಹುದು. ಇಲ್ಲವಾದಲ್ಲಿ ಇದು ವೃತ್ತಿ ಮಾತ್ಸರ್ಯದ ಸಂಕೇತಗಳಂತೆಯೂ ತೋರಿ , ರೋಹಿಣಿಯವರ ತೇಜೋವಧೆಗಾಗಿ ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರ್ಯಾವಸನಗೊಳ್ಳಲೂ ಬಹುದು.

ರೂಪಾ ಮೌದ್ಗಿಲ್ ರವರು ರೋಹಿಣಿಯವರಿಗೆ ಬಹಿರಂಗವಾಗಿ ಕೇಳಿರುವ ಅನೇಕ ಆಡಳಿತಾತ್ಮಕ ಹಾಗೂ ವೈಯಕ್ತಿಕ ಪ್ರಶ್ನೆಗಳಿಗೆ ಅದೇ ಮಾದರಿಯಲ್ಲೇ ಅವರು ಉತ್ತರಿಸಿದ್ದರೆ ಚೆನ್ನಾಗಿರುತ್ತಿತ್ತು. ಇದರಿಂದ ಒಂದು ವ್ಯವಸ್ಥೆಯ ಹಿನ್ನೆಲೆಯಲ್ಲಿ ಏನೆಲ್ಲಾ ರಂಪ ರಾಮಾಯಣಗಳು ಅಡಗಿರಬಲ್ಲವೆಂಬ ಸಹಜ ಕುತೂಹಲಕ್ಕೆ ಬ್ರೇಕ್ ಬೀಳುತ್ತಿತ್ತು. ರೂಪಾರವರ ಯಾವ ಪ್ರಶ್ನೆಗಳಿಗೂ ರೋಹಿಣಿಯವರ ಉತ್ತರಗಳಲ್ಲಿ ಮುಚ್ಚಿಡುವಂಥಾದ್ದೇನಿರಲಾರದು. ಹೀಗಾಗಿ ಅವುಗಳಿಗೆ ದಾಖಲೆ ಸಹಿತ ಸಾಮಾಜಿಕ ಜಾಲತಾಣದಲ್ಲೇ ಪ್ರತ್ಯುತ್ತರ ನೀಡಿದ್ದಲ್ಲಿ ಜೊಳ್ಳಾವುದು- ಗಟ್ಟಿ ಯಾವುದು ಎಂಬ ನಿರ್ಧಾರವನ್ನು ಜನರೇ ಮಾಡುತ್ತಿದ್ದರು.

ಏನೇ ಆಗಲಿ, IAS, IPS ಗಳೆಂದರೆ ದೇವಮಾನವರಲ್ಲ, ಅವರೂ ಸಹ ಹೀಗೆಲ್ಲಾ ಗೋಲಿ, ಕುಂಟೆಬಿಲ್ಲೆ ಆಡುವ ಮಕ್ಕಳ ಲೆವೆಲ್ಲಿಗೂ ಹೋಗಿ ಬಹಿರಂಗವಾಗಿ ಕಿತ್ತಾಡಬಹುದೆಂಬ ಸತ್ಕೀರ್ತಿಯನ್ನು ಸರಳವಾಗಿ ತೋರಿಸಿಕೊಟ್ಟ ನಮ್ಮ ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು. ಏಕೆಂದರೆ ಹಣ, ಅಸೂಯೆ, ಮಾತ್ಸರ್ಯ, ಪ್ರಚಾರ, ಹೆಸರು ಹಾಗೂ ಶ್ರೇಷ್ಠತೆಯ ವ್ಯಸನಗಳಿಗೆ ಅತೀತರು ಭೂಲೋಕದಲ್ಲಿ ಯಾರಾದರೂ ಇದ್ದಾರೆಯೇ…?

ಅದರಲ್ಲೂ….ಎರಡು ಜಡೆಗಳು…?

** ಮರೆಯುವ ಮುನ್ನ **

ನಮ್ಮ ವೈಯಕ್ತಿಕ ಗುಣ- ಸ್ವಭಾವಗಳೇನೇ ಇರಲಿ , ನಾವು ಏನೇ ಓದಿರಲಿ, ಒಂದು ಹುದ್ದೆ, ಒಂದು ಸ್ಥಾನಮಾನದಲ್ಲಿ ಅಂತ ಇದ್ದಾಗ ಅದರ ಗೌರವ ಕಾಪಾಡಿಕೊಂಡು ಬರುವುದು ಅದನ್ನು ವಹಿಸಿಕೊಂಡವರ ಆದ್ಯ ಕರ್ತವ್ಯವಾಗಬೇಕಿತ್ತು. ತಮ್ಮ ನಡೆ ನುಡಿಗಳನ್ನು ಜನಸಾಮಾನ್ಯರು ಗಮನಿಸುತ್ತಿದ್ದಾರೆಂಬ ಕನಿಷ್ಠ ಕನ್ಸರ್ನ್ ಇಂಥವರಲ್ಲಿ ಇರಬೇಕಿತ್ತು. ತಮ್ಮ ದಕ್ಷ ಆಡಳಿತದ ನಡೆಯಿಂದ ಇತರರಿಗೆ ಮಾದರಿಯಾಗಬೇಕಿತ್ತು. ಕಾನೂನು‌ ಹೋರಾಟಕ್ಕೆ ಅದರದ್ದೇ ಆದ ಮಾರ್ಗವಿದೆ ಎಂಬ ಯಃಕಿಂಚಿತ್ ಅರಿವಿರಬೇಕಿತ್ತು,

ಒಬ್ಬ ಅಧಿಕಾರಿಗೆ ತಾವಿರುವ ಹುದ್ದೆಯ ಮೂಲಕ ಜನ ಸಾಮಾನ್ಯರ ಬದುಕನ್ನು ಹಸನು‌ ಮಾಡಲು, ಸಾಮಾಜಿಕ ಪರಿವರ್ತನೆ ತರಲು ತಾನೇನು ಮಾಡಬಲ್ಲೆ ಎಂಬ ಪ್ರಾಮಾಣಿಕ ಕಾಳಜಿ ಮುಖ್ಯವೇ ಹೊರತು ತಾನು ನೋಡಲು ಎಷ್ಟು ಸುಂದರವಾಗಿದ್ದೇನೆ, ತಾನೆಂತಹಾ ಬಂಗಲೆ, ಕಾರು, ಬೆಲೆಬಾಳುವ ವಸ್ತುಗಳನ್ನು ಉಪಯೋಗಿಸುತ್ತಿದ್ದೇನೆ ಅಥವಾ ತನಗೆಷ್ಟು ಮಂದಿ ತಾವಾಗಿಯೇ ಮುಗಿಬಿದ್ದು ಪ್ರಚಾರ ಕೊಡುತ್ತಾರೆ ಎಂಬುದು ತಲೆ ತಿರುಗಿಸುವಂತಾಗಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಾರ್ಯಾಂಗದ ಎಂಜಿನ್ನುಗಳಿಗೆ ತಮಗೆ ಅಧಿಕಾರ ಸಿಕ್ಕಿರೋದು ಜನಸೇವೆಗಾಗಿ ಹಾಗೂ ತಾನು ಪಬ್ಲಿಕ್ ಸರ್ವೆಂಟೇ ಹೊರತು ಪಬ್ಲಿಕ್ ರೂಲರ್ ಅಲ್ಲ , ತನ್ನ ವರ್ತನೆಯ ಮೇಲೆ ಸರ್ಕಾರದ ಇಮೇಜೂ ಅಡಗಿದೆ…. ಎಂಬ ಕಾಮನ್ ಸೆನ್ಸ್ ಇಲ್ಲದೇ ಹೋದಲ್ಲಿ ಈ ತರಹದ ಅವಘಡಗಳು ಕಾಮನ್. ಅದರಲ್ಲೂ ಇಂದಿನ ಬಹುತೇಕ ನಾಗರಿಕ ಸೇವಾ ಅಧಿಕಾರಿಗಳಲ್ಲಿ ಪವರ್ ನಲ್ಲಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುವ, ಆನಂತರ ರಾಜಕೀಯದ ಆಕರ್ಷಣೆಗೆ ಒಳಗಾಗಿ ಅದರತ್ತ ಮುಖಮಾಡುವ ಸ್ವಕೇಂದ್ರೀಕೃತ ಮೆಂಟಾಲಿಟಿ ಹೆಚ್ಚಾಗುತ್ತಿರುವುದೂ ಇಂತಹ ಘಟನೆಗಳಿಗೆ ಪರೋಕ್ಷ ಕಾರಣ.

ಬಹುಶಃ ಈ ತರಹದ ವಿಚಿತ್ರ ಕ್ರೇಜ಼ು, ಪಬ್ಲಿಸಿಟಿಯ ಮೋಜು ಸಿಂಧೂರಿಯವರಂತಹ ಪ್ರಚಾರ ಪ್ರಿಯ ಅಧಿಕಾರಿಗಳ ಸದಾ ವಿವಾದಾತ್ಮಕ ವಿಷಯಗಳಿಗೆ ಅಥವಾ ರೂಪಾ ಮೌದ್ಗಿಲ್ ರಂತಹ ಅಧಿಕಾರಿಗಳ ದಕ್ಷತೆಯ ಬ್ರಾಂಡ್ ಇಮೇಜ್ ಕಾಪಾಡಿಕೊಳ್ಳಲಿಕ್ಕೆ, ವೃತ್ತಿ ಮೈಲೇಜ್ ಹೆಚ್ಚಿಸಿಕೊಳ್ಳಲಿಕ್ಕೆ ಉತ್ತೇಜಿಸುವ ಅಂಶಗಳಾಗಿಯೂ ಕೆಲಸ ಮಾಡಿರಬಲ್ಲದು !

ಒಟ್ಟಾರೆ…. ಜನರಿಗೆ, ಮಾಧ್ಯಮದವರಿಗೆ ಬಿಟ್ಟಿ ಮನರಂಜನೆ ಒದಗಿಸಲು ಈ ಚುನಾವಣಾ ಸಮಯದಲ್ಲಿ ನಮ್ಮ ರಾಜಕಾರಣಿಗಳಲ್ಲೇ ಪಕ್ಷಾತೀತವಾಗಿ ಸಕತ್ ಪೈಪೋಟಿ ಇರುವಾಗ ಅದರ ಜವಾಬ್ದಾರಿಯನ್ನು ನಾಗರಿಕ ಸೇವಾ ಅಧಿಕಾರಿಗಳು ಹೊರಬಾರದಿತ್ತು..!

ವೆರಿ ಸ್ಯಾಡ್ !

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

ಕಸದಲ್ಲಿ ರಸ ಎಂಬಂದೆ ಕಸದ ರಾಶಿಗೆ ಸೇರಬೇಕಾದ ಪೇಪರ್ ಮಕ್ಕಳ ನೋಟ್ ಬುಕ್ ತಾತಾನ ಕೈಚಳಕ

ಜಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ‌‌‌‌
ಪ್ರತಿದಿನ ಬೆಳಗ್ಗೆ ರಾಜಧಾನಿ ಬೆಂಗಳೂರಿನ ಬ್ಯಾಂಕ್ ಕಾಲನಿನಲ್ಲಿ ದಿನಪತ್ರಿಕೆಯ ಏಜೆಂಟರುಗಳು ತಮ್ಮ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುತ್ತಾರೆ.

ಹೀಗೆ ಬಿಚ್ಚುವಾಗ ಬಂಡಲ್ ಮೇಲೆ ಸುತ್ತಿರುವ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದು ಪಕ್ಕಕ್ಕೆ ಎಸೆದು ಪತ್ರಿಕೆಗಳನ್ನು ಜೋಡಿಸಿಸುತ್ತಾರೆ. ಅಲ್ಲಿಗೆ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಬಂದು ಕೆಳಗೆ ಬಿದ್ದಿದ್ದ ಎಲ್ಲಾ ಬಿಳಿ ಬಣ್ಣದ ಪೇಪರ್ ಗಳನ್ನು ತೆಗೆದುಕೊಂಡು ಜೋಡಿಸಿ ಕೊಳ್ಳುತ್ತಾರೆ.

ಪ್ರತಿದಿನ ಹೀಗೆ ವೇಸ್ಟ್ ಎಂದು ಬಿಸಾಡುವ ಈ ಪೇಪರ್ ಗಳನ್ನು ತೆಗೆದುಕೊಂಡು ಹೋಗಿ ಅದನ್ನು ಪುಸ್ತಕದ ಅಳತೆಗೆ ಕತ್ತರಿಸಿ ಅದರಿಂದ ಬರೆಯುವ ನೋಟ್ ಬುಕ್ ತಯಾರಿಸುತ್ತಾರೆ, ಹಲವಾರು ನೊಟಬುಕ್ ಗಳನ್ನು ತಯಾರಿಸಿ ಇವರು ಮೈಸೂರು ರಸ್ತೆಯಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಹಂಚುತ್ತಾರೆ.

ಇವರು ಬಂದರೆಂದರೆ ಸಾಕು ಮಕ್ಕಳು ಓಡೋಡಿ ಬಂದು “ನೋಟ್ ಬುಕ್ ತಾತಾ” ಎನ್ನುತ್ತಾ ಮುದ್ದಾಡುತ್ತಾರೆ.. ಹೀಗೆ ಯಾರಿಗೂ ತಿಳಿಯದ ಹಾಗೆ ಸಮಾಜಸೇವೆ ಮಾಡುತ್ತಿರುವ ಈ ಹಿರಿಯ ನಾಗರಿಕ ವ್ಯಕ್ತಿಯು ಹೆಸರು #ಮೋಹನ್.

ಇವರು ಐ.ಟಿ.ಐ ಕಂಪನಿಯ ನಿವೃತ್ತ ಉದ್ಯೋಗಿ, ತಮ್ಮ ಜೀವನದ ಕೊನೆಯ ಕಾಲದಲ್ಲಿ ಮನೆಯಲ್ಲಿ ಹಾಯಾಗಿ ಇರದೇ ಶಾಲಾ ಮಕ್ಕಳಿಗೆ ತಮ್ಮದೇ ಆದ ವಿಶಿಷ್ಟವಾದ ಸೇವೆ ಮಾಡುತ್ತಿರುವ ಇವರು ನಿಜಕ್ಕೂ ಎಲ್ಲರಿಗೂ ಮಾದರಿ.

ಕೃಪೆ: ಮಿತ್ರ.