ವೇದಾವತಿ ನದಿ ಸೇತುವೆಯ ರೆಡ್ಡಿಹೋಟೆಲ್ ನಿಂದ ಗಾಂಧಿಸರ್ಕಲ್ ವರೆಗೆ ರಸ್ತೆ ಅಗಲೀಕರಣಕ್ಕೆ ಅಂಗಡಿ ಮಾಲಿಕರು ಸಹಕರಿಸಬೇಕು:ಸಚಿವರಾದ ಡಿ.ಸುಧಾಕರ್

by | 24/06/24 | ಸುದ್ದಿ


ಹಿರಿಯೂರು:
ನಗರದ ಹುಳಿಯಾರು ರಸ್ತೆಯನ್ನು ಮುಂದಿನ ಭವಿಷ್ಯಕ್ಕಾಗಿ ವೇದಾವತಿ ನದಿ ಸೇತುವೆಯ ರೆಡ್ಡಿ ಹೋಟೆಲ್ ನಿಂದ ಗಾಂಧಿ ಸರ್ಕಲ್ ವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದ್ದು, ಈ ರಸ್ತೆಯಲ್ಲಿ ಬರುವ ವರ್ತಕರು, ಅಂಗಡಿ ಮುಂಗಟ್ಟುಗಳ ಮಾಲಿಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸುವ ಮೂಲಕ ಸಹಕರಿಸಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ನಗರದ ರೋಟರಿ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳಾದ ಟಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಹುಳಿಯಾರು ರಸ್ತೆ ಅಗಲೀಕರಣ ಸಂಬಂಧ ಪ್ರದೇಶದ ವರ್ತಕರು, ಅಂಗಡಿ ಮುಂಗಟ್ಟುಗಳ ಮಾಲಿಕರ ಹಾಗೂ ವರ್ತಕರುಗಳ ಅಭಿಪ್ರಾಯ ಸಂಗ್ರಹಣೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಸಭೆ ಕರೆದಿದ್ದಾಗ ಮಧ್ಯ ರಸ್ತೆಯಿಂದ ಎರಡು ಕಡೆ 62ಅಡಿ ಎಂಬುದಾಗಿ ತೀರ್ಮಾನಿಸಲಾಗಿದ್ದು, ಈ ಹಿಂದಿನ ನಿಮ್ಮ ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ ಅಂತಿಮವಾಗಿ ಮಧ್ಯ ರಸ್ತೆಯಿಂದ ಎರಡು ಕಡೆ 42 ಅಡಿವರೆಗೆ ಅಗಲೀಕರಣ ಮಾಡಲು ತೀರ್ಮಾನಿಸಲಾಗಿದೆ ಎಂಬುದಾಗಿ ಸಚಿವರು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ ಪ್ರತಿದಿನ ಹಿರಿಯೂರು ಬೆಳೆಯುತ್ತಿದ್ದು ಅದರಲ್ಲೂ ಗಾಂಧಿ ಸರ್ಕಲ್ ನಲ್ಲಿ ಬಹಳ ಟ್ರಾಫಿಕ್ ಜಾಮ್ ಆಗುವುದರಿಂ, ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದು ಈ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ ಎಂಬುದಾಗಿ ಹೇಳಿದರಲ್ಲದೆ, ಈ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೆಲ್ಲರ ಸಹಕಾರ ಇರಲಿ ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವರ್ತಕರಾದ ಪ್ರಶಾಂತ್ ಬಾಬು ಎಂ.ಎಸ್.ರಾಘವೇಂದ್ರ ಮಾತನಾಡಿ ನಮ್ಮ ಪೂರ್ವಜರ ಕಾಲದಿಂದ ಈ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ನಮ್ಮ ಕಟ್ಟಡಗಳ ಮೇಲೆ ಬ್ಯಾಂಕ್ ಲೋನ್ ಸೇರಿದಂತೆ ಹಲವಾರು ಕಮಿಟ್ಮೆಂಟ್ ಗಳಿವೆ ನೀವು ಒಮ್ಮೆಲೆ ರಸ್ತೆ ಅಗಲೀಕರಣ ನೆಪದಲ್ಲಿ ಕಟ್ಟಡಗಳನ್ನು ಧ್ವಂಸ ಮಾಡಿದರೆ ನಮಗೆ ಜೀವನ ಮಾಡುವುದೇ ಕಷ್ಟವಾಗುತ್ತದೆ. ಆದ್ದರಿಂದ ಮೊದಲು ಪರಿಹಾರದ ಹಣ ಕೊಟ್ಟು ಆಮೇಲೆ ರಸ್ತೆಯ ರಸ್ತೆ ಅಗಲೀಕರಣ ಮಾಡಿ ಎಂಬುದಾಗಿ ಮನವಿ ಮಾಡಿದರು.
ವರ್ತಕರಾದ ಮಂಜುನಾಥ ಜಪಾನ್ ಶೆಟ್ಟಿ ಹಾಗೂ ವೆಂಕಟೇಶ್ ಮಾತನಾಡಿ ರಸ್ತೆ ಅಕ್ಕ ಪಕ್ಕದಲ್ಲಿರುವ ನಮ್ಮಅಂಗಡಿಗಳನ್ನು ತೆರವುಗೊಳಿಸಿದರೆ ನಮ್ಮ ವ್ಯಾಪಾರ ವ್ಯವಹಾರಗಳಿಗೆ ತುಂಬಾ ಕಷ್ಟವಾಗುತ್ತದೆ. ನಮಗೆ ಪರಿಹಾರದ ಹಣ ಬೇಡ ನಮ್ಮ ಅಂಗಡಿ ಮಳಿಗೆಗಳ ಹಿಂದೆ ಹಳೆ ಸರ್ಕಾರಿ ಆಸ್ಪತ್ರೆ ಖಾಲಿ ಜಾಗವಿದ್ದು ಅದನ್ನು ನಮಗೆ ಪರ್ಯಾಯವಾಗಿ ಜಾಗ ನೀಡಿದರೆ ನಿಮ್ಮನ್ನು ಜೀವನ ಪೂರ್ತಿ ಸ್ಮರಿಸಿಕೊಳ್ಳುತ್ತೇವೆ ಎಂಬುದಾಗಿ ಮನವಿ ಮಾಡಿದರು.
ವರ್ತಕ ಶ್ರೀನಾಥ್ ಮಾತನಾಡಿ ಈಗ ರಸ್ತೆ ಅಗಲೀಕರಣದಲ್ಲಿ ವಿಶೇಷ ತಾಂತ್ರಿಕತೆ ಲಭ್ಯವಿದ್ದು ಈ ಪಾರಂಪರಿಕ ನಮ್ಮ ಪೂರ್ವಜರ ಕಾಲದ ಕಟ್ಟಡಗಳನ್ನು ಒಡೆಯುವ ಬದಲು ವೇದಾವತಿ ಸೇತುವೆಯಿಂದ ಗಾಂಧಿ ಸರ್ಕಲ್ ವರೆಗೆ ಪ್ಲೈ ಓವರ್ ನಿರ್ಮಾಣ ಮಾಡಬಹುದು ಇದರಿಂದಾಗಿ ಕಟ್ಟಡಗಳು ಉಳಿದುಕೊಳ್ಳುತ್ತವೆ ಅಲ್ಲದೆ ಪರಿಹಾರ ಕೊಡುವ ಪ್ರಶ್ನೆ ಉದ್ವವಿಸುವುದಿಲ್ಲ . ಸರ್ಕಾರಕ್ಕೆ ಹಣದ ಉಳಿತಾಯವಾಗುತ್ತದೆ ಎಂಬುದಾಗಿ ಸಲಹೆ ನೀಡಿದರು.
ಎಂ. ಎಸ್. ರಾಘವೇಂದ್ರ, ಕಿರಣ್ ಕುಮಾರ್ ಮಾತನಾಡಿ ನಮಗೆ ಊರು ಅಭಿವೃದ್ಧಿಯೂ ಆಗಬೇಕು. ರಸ್ತೆ ಸಹ ಅಗಲಿಕರಣ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಂಗಡಿ ಮುಗ್ಗಟ್ಟುಗಳ ಮಾಲಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ, ಬೆಳಂ ಬೆಳಗ್ಗೆ ದಿಡೀರ್ ಬಂದು ಡೆಮಾಲಿಶ್ ಮಾಡಿ ನಮ್ಮನ್ನು ಪರಿಹಾರಕ್ಕಾಗಿ ಅಲೆಯುವಂತೆ ಮಾಡಬಾರದು. ಆದ್ದರಿಂದ ಮೊದಲು ಪರಿಹಾರ ಕೊಡಿಸಿ ಆಮೇಲೆ ಕೆಲಸ ಪ್ರಾರಂಭಿಸಿ ಎಂಬುದಾಗಿ ಮನವಿ ಮಾಡಿದರು.
ಈ ಎಲ್ಲಾ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ರವರು ಮಾತನಾಡಿ ಎಲ್ಲಾ ರೀತಿಯಿಂದ ಯೋಚನೆ ಮಾಡಿ ಈ ಕೆಲಸಕ್ಕೆ ಕೈ ಹಾಕಿದ್ದೇನೆ. ಯಾರಿಗೂ ತೊಂದರೆಯಾಗದಂತೆ ರಸ್ತೆ ಅಗಲೀಕರಣ ಮಾಡಲಾಗುವುದು ನಿಮಗೆ ಬರಬೇಕಾದ ಪರಿಹಾರದ ಹಣವನ್ನು ಯಾವುದೇ ಅಲೆದಾಟವಿಲ್ಲದೆ ಕೊಡಿಸಲಾಗುವುದು. ಮುಂದಿನ ವಾರದಿಂದಲೇ ಈ ಕೆಲಸ ಪ್ರಾರಂಭಮಾಡಿ ಆದಷ್ಟು ಶೀಘ್ರವಾಗಿ ಮುಗಿಸಲಾಗುವುದು ಎಂಬುದಾಗಿ ಸಭೆಗೆ ಭರವಸೆ ನೀಡಿದರು.
ಇಂದಿನ ಸಭೆಯಲ್ಲಿ ತಹಶಿಲ್ದಾರ್ ರವರಾದ ರಾಜೇಶ್ ಕುಮಾರ್, ನಗರಸಭೆ ಆಯುಕ್ತರಾದ ಎಚ್. ಮಹಂತೇಶ್, ಪೋಲಿಸ್ ಸರ್ಕಲ್ ಇನ್ ಸ್ಪೆಕ್ಟರ್ ರಾಘವೇಂದ್ರ, ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಕಂದಿಕರೆ ಸುರೇಶ್ ಬಾಬು, ಗಿಡ್ಡಬೋನಹಳ್ಳಿ ಅಶೋಕ್, ಕಲ್ಲಟ್ಟಿ ಹರೀಶ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಶಿವರಂಜಿನಿ, ಶ್ರೀಮತಿ ಗೀತಾಗಂಗಾಧರ್, ಶ್ರೀಮತಿ ಶಂಷುನ್ನೀಸಾ, ಮಂಜುನಾಥ್, ಶ್ರೀಮತಿ ಮಮತಾ, ನಗರಸಭೆ ಸದಸ್ಯರುಗಳಾದ ಶ್ರೀಮತಿ ರತ್ನಮ್ಮ, ಮೊದಲ ಮೇರಿ, ಅಜಯ್ ಕುಮಾರ್, ಬಿ.ಎನ್ .ಪ್ರಕಾಶ್, ವಿಠ್ಠಲ್ ಪಾಂಡುರಂಗ ರಮೇಶ್ ಬಾಬು, ಜಗದೀಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Latest News >>

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್ ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು....

ಬೆಸ್ಕಾಂ: ನೀರಾವರಿ ಪಂಪ್‍ಸೆಟ್ ಬಳಕೆದಾರರು ಆರ್ ಆರ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ

ಚಿತ್ರದುರ್ಗಜು 15 ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page