ನಾಯಕನಹಟ್ಟಿ:: ಆಗಸ್ಟ್ 23. ಮಕ್ಕಳಲ್ಲಿ ಇರುವ ವಿವಿಧ ಬಗೆಯ ಪ್ರತಿಭಾ ಸಾಮರ್ಥ್ಯವನ್ನು ಹೊರತರುವ ಪ್ರಯತ್ನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯಾಗಿದೆ ಎಂದು ಶ್ರೀ ಶ್ರೀ ದೇನಾ ಭಗವಾನ್ ಸೇವಾ ಟ್ರಸ್ಟ್ ಹಾಗೂ ಶ್ರೀ ರಾಜಯೋಗ ಆಶ್ರಮದ ದೇನಾ ಭಗವಾನ್ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ನಾಯಕನಹಟ್ಟಿ ಹೋಬಳಿ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 2023- 24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ರೇಖಗೆರೆ ಲಂಬಾಣಿಹಟ್ಟಿ ವ್ಯಾಪ್ತಿಯಲ್ಲಿ 1,500 ಎಕರೆ ಪ್ರದೇಶದಲ್ಲಿ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗಿದೆ ಮೊಳಕಾಲ್ಮೂರು ಮತ್ತು ಚಳ್ಳಕೆರೆ ಕ್ಷೇತ್ರ ತುಂಬಾ ಬರ್ಫಿ ಹಿಡಿತ ಪ್ರದೇಶ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ ಕೋವಿಡ್ ಸಂದರ್ಭದಲ್ಲಿ ಮನುಷ್ಯನಿಗೆ ಆಕ್ಸಿಜನ್ ಕೊರತೆ ಸಾಕಷ್ಟು ಕಂಡು ಬಂತು ಮನುಷ್ಯನ ಉಸಿರಾಟಕ್ಕೆ ಉತ್ತಮ ಗಾಳಿ ಬೇಕು ನಮ್ಮ ಸುತ್ತಮುತ್ತ ಪರಿಸರ ಬೆಳೆಸಬೇಕು ಸತತ ಆರು ತಿಂಗಳ ಕಾಲ ಪರಿಶ್ರಮದಿಂದ 1500 ಎಕೆರೆಯಲ್ಲಿ ಎರಡು ವರ್ಷಕ್ಕೆ 1,25,000 ಸಸಿಗಳನ್ನು 850 ಎಕರೆ ಪ್ರದೇಶಕ್ಕೆ ಹಾಕಲಾಗಿದೆ ಪ್ರತಿಯೊಬ್ಬ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಿಸರವನ್ನ ರಕ್ಷಿಸುವಂತೆ ಮನವರಿಕೆ ಮಾಡಿದರು.
ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ಮಾತನಾಡಿದರು
ಮಕ್ಕಳಲ್ಲಿ ಹಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಶಿಕ್ಷಕರ ಪಾತ್ರ ತುಂಬಾ ಮಹತ್ವವಾದದ್ದು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿಯನ್ನು ನೀಡಿದರೆ ಮಾತ್ರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.
ಇದೇ ವೇಳೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿರುವ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮಾಡುತ್ತಿರುವುದು ಅವರಲ್ಲಿನ ಪ್ರತಿಭೆಗಳ ಅನಾವರಣಗೊಳಿಸಲು ಅವರಲ್ಲಿರುವ ತುಡಿತವನ್ನು ಸೂಚಿಸುತ್ತದೆ ಇಂತಹ ಕಾರ್ಯಕ್ರಮಗಳಲ್ಲಿ ಸಾಹಿತ್ಯದ ಅಭಿವೃಚಿಯನ್ನು ಬೆಳೆಸಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಇನ್ನೂ ಮಲ್ಲೂರಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಸುಮಾರು 15 ಶಾಲೆಗಳಿಂದ 150ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಳಲ್ಲಿ ಪ್ರತಿಭೆಗಳನ್ನು ನೋಡಲು ಅವರ ಪೋಷಕರು ಕಾರ್ಯಕ್ರಮಕ್ಕೆ ಬಂದಿದ್ದರು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತ ಉರ್ದು ಕಂಠಪಾಠ ಲಘು ಸಂಗೀತ ಛದ್ಮವೇಷ ಕಥೆ ಹೇಳುವುದು ಚಿತ್ರಕಲೆ ಅಭಿನಯ ಗೀತೆ ಭಕ್ತಿಗೀತೆ ಆಶುಭಾಷಣ ಕವನ ಪದ್ಯ ವಾಚನ ಮಿಮಿಕ್ರಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಲ್ಲೂರಹಳ್ಳಿ ಗ್ರಾ. ಪಂ. ಉಪಾಧ್ಯಕ್ಷ ಶ್ರೀಮತಿ ಮಂಜುಳಾ, ನಿವೃತ್ತ ಉಪನ್ಯಾಸಕ ಕೆ ಸಿ ತಿಪ್ಪೇಸ್ವಾಮಿ, ಇಸಿಒ ತಿಪ್ಪೇಸ್ವಾಮಿ, ಮ್ಯಾಕಲಯ್ಯ,
ಬಿಆರ್ ಪಿ.ಕೆ ಎಸ್ ಜಗದೀಶ್, ಸಿಆರ್‌ಪಿರಾದ ಆರ್. ಈಶ್ವರಪ್ಪ, ಸಿ. ಹನುಮಂತಪ್ಪ, ಕೆ. ಲಿಂಗರಾಜ್, ಮಲ್ಲೂರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ, ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ ವೆಂಕಟೇಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಮಲ್ಲೂರಹಳ್ಳಿ ಗುಡ್ಡದ ಕಪಿಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಭಾಗ್ಯ, ಮಲ್ಲೂರಹಳ್ಳಿ ಲಂಬಾಣಿ ಹಟ್ಟಿ ಮುಖ್ಯ ಶಿಕ್ಷಕ ಆರ್. ಚನ್ನಪ್ಪ, ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಟಿ. ನಾಗಭೂಷಣ್, ಶಿಕ್ಷಕ ಓಂಕಾರಪ್ಪ,ಇಸಿಒ ತಿಪ್ಪೇಸ್ವಾಮಿ ನಾಯಕನಹಟ್ಟಿ, ಶಿಕ್ಷಕರಾದ ಎಂ.ಬಿ ತಿಪ್ಪೇಶ್, ಟಿ. ಆಂಜನೇಯ, ವಿಜಯಲಕ್ಷ್ಮಿ, ಚಂದನ, ವೆಂಕಟಸ್ವಾಮಿ, ರಾಮಸ್ವಾಮಿ, ಸತೀಶ್ ,ಬೋರಯ್ಯ, ಮಂಜುನಾಥ್, ಆರ್ ರಾಜಣ್ಣ, ಡಿ. ಬಸವರಾಜ್, ಶ್ರೀಮುಗ ಬಸವೇಶ್ವರ ಹೈಟೆಕ್ ಶಾಲೆ ಮುಖ್ಯ ಶಿಕ್ಷಕಿ ಎಂ .ಟಿ. ಸುನಿತಮ್ಮ, ಲಕ್ಷ್ಮಿ ಜ್ಯೋತಿ ಪಾಲಯ್ಯ, ಪಾಲಾಕ್ಷ, ಮಲ್ಲೂರಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರು ಸಾರ್ವಜನಿಕರು ಇದ್ದರು
0 Comments