ಚಿತ್ರದುರ್ಗ ಅ.16:
ರೋಗಗಳ ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಪರಿಣಾಮಕಾರಿ ಮಾರ್ಗವಾಗಿ ಕೈ ತೊಳೆಯುವ ಮಹತ್ವದ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿಶ್ವ ಕೈ ತೊಳೆಯುವ ದಿನ ಮತ್ತು ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೈ ತೊಳೆಯುವ ಮಹತ್ವದ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಕ್ಟೋಬರ್ 15 ಅನ್ನು ಜಾಗತಿಕ ಕೈ ತೊಳೆಯುವ ದಿನ ಎಂದು ಆಚರಿಸಲಾಗುತ್ತದೆ ಎಂದರು.
‘ಸ್ವಚ್ಛವಾದ ಕೈಗಳು-ಸುಸ್ಥಿರ ಅಭಿವೃದ್ಧಿಯ ಕೀಲಿ ಕೈ’ ಇದು 2023ರ ಘೋಷವಾಕ್ಯ. ಕೈ ತೊಳೆಯುವುದಕ್ಕೆ ಇμÉ್ಟೂಂದು ಮಹತ್ವ ಏಕೆ? ಮಾನವನಿಗೆ ಬರುವ ಹಲವು ಕಾಯಿಲೆಗಳಿಗೆ ಸ್ವಚ್ಛವಾಗಿರದ ನಮ್ಮ ಕೈಗಳು ಕಾರಣ ಎಂಬುದು ಹಲವರಿಗೆ ತಿಳಿದಿಲ್ಲ. ವಿಶೇಷವಾಗಿ ಮನುಷ್ಯನ ಕರುಳಿನ ಸೋಂಕಿಗೆ ಕಾರಣವಾಗುವುದು ನಮ್ಮ ಕೈಯಲ್ಲಿರುವ ವೈರಾಣುಗಳು ದೇಹ ಸೇರುವುದರಿಂದ ನಾವು ನಿಮಿಷವೊಂದಕ್ಕೆ ಕನಿಷ್ಠ ಹತ್ತು ಬಾರಿ ಕೈಯಿಂದ ಮೂಗು, ಬಾಯಿ, ಕಣ್ಣುಗಳನ್ನು ನಮಗೆ ಅರಿವಿಲ್ಲದಂತೆ ಮುಟ್ಟಿಕೊಳ್ಳುತ್ತೇವೆ. ಇದರ ಪರಿಣಾಮವಾಗಿ ಕೈಯಲ್ಲಿರುವ ರೋಗಾಣುಗಳು ದೇಹ ಸೇರಿ ಹಲವು ಸೋಂಕಿಗೆ ಕಾರಣವಾಗುತ್ತವೆ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕೈ ತೊಳೆಯುವುದು ಹಾಗೂ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬುದು ಈಗ ರೂಢಿಗೆ ಬಂದಿರುವುದಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮನೆಗೆ ಯಾರಾದರೂ ಹೊರಗಡೆಯಿಂದ ಬಂದಲ್ಲಿ ಕೈ-ಕಾಲು ತೊಳೆದುಕೊಳ್ಳಲು ನೀರು ಕೊಡುವ ಪದ್ಧತಿ ಜಾರಿಯಲ್ಲಿತ್ತು. ಕರೊನಾ ಇದನ್ನೆಲ್ಲ ನೆನಪಿಸಿ ಈ ಹಿಂದಿನ ರೂಢಿ ಮತ್ತೆ ಅನುμÁ್ಠನಕ್ಕೆ ತರುವಂತೆ ಮಾಡುತ್ತಿದೆ. ಪ್ರತಿಯೊಬ್ಬರು ದಿನದಲ್ಲಿ 6-10 ಬಾರಿ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ವಿಶ್ವವಿದ್ಯಾಲಯವೊಂದು ಸಂಶೋಧನೆಯಿಂದ ಕಂಡುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಪ್ರಕಾರ ಆರು ಹಂತಗಳಲ್ಲಿ ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವುದರಿಂದ ಕರೊನಾ ಮಾತ್ರವಲ್ಲ, ಯಾವುದೇ ವೈರಾಣುಗಳು ನಮ್ಮ ಕೈ ಮೂಲಕ ದೇಹದೊಳಗೆ ಪ್ರವೇಶ ಮಾಡದಂತೆ ತಡೆಗಟ್ಟಬಹುದಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಕೈ ತೊಳೆಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ನಂತರ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಡಿಯೋಲಾಜಿಸ್ಟ್ ಚಂದನ್ ಕುಮಾರಿ, ಸಮುದಾಯ ಆರೋಗ್ಯ ಅಧಿಕಾರಿಗಳು ಇದ್ದರು.
ವಿಶ್ವ ಕೈ ತೊಳೆಯುವ ದಿನ ಕಾರ್ಯಕ್ರಮದಲ್ಲಿ ಡಿಹೆಚ್‍ಓ ಡಾ.ಜಿ.ಪಿ.ರೇಣುಪ್ರಸಾದ್ ಕೈ ತೊಳೆಯುವ ಮಹತ್ವದ ಬಗ್ಗೆ ಜಾಗೃತಿ ಅಗತ್ಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments