ವಿಶೇಷಚೇತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ಟಿ.ರಘಮೂರ್ತಿ

by | 09/10/23 | ಸುದ್ದಿ

ಚಳ್ಳಕೆರೆ ಜನಧ್ವನಿ ವಾರ್ತೆ ಅ.9. ವಿಶೇಷಚೇತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ಟಿ.ರಘಮೂರ್ತಿ ಕಿವಿಮಾತು ಹೇಳಿದರು.

ನಗರದ ತಾಲೂಕು ಪಂಚಾಯತ್ ಆವರಣದಲ್ಲಿರುವ ಶಾಸಕರ ಭವನದ ಮುಂಭಾಗದಲ್ಲಿ ವಿಕಲಚೇತರ ಹಾಗೂ ಹಿರಿಯ ನಾಗರೀಕರ ಸಬಲೀಕರಣಕ್ಕೆ 2020-21 ನೇ ಸಾಲಿನ ಜಿಪಂ ಅರ್ನಿಬಂಧಿತ ಅನುದಾನದಡಿಯಲ್ಲಿ 5 ಜನ ವಿಕಲಚೇತರಿಗೆ ಯಂತ್ರ ಚಾಲಿತ ದ್ವಿಚಕ್ರವಾಹನ ವಿತರಿಸಿ ಮಾತನಾಡಿದರು.
ವಿಕಲಚೇತನರು ಸ್ವಾವಲಂಭಿ ಜೀವನ ನಡೆಸಲು ಸರಕಾರ ಹತ್ತು ಹಲವು ಸೌಲಭ್ಯಗಳನ್ನು ಜಾರಿಗೊಳಲಾಗುತ್ತಿದ್ದು ಜತಗೆ ಸರಕಾರ ವಿವಿಧ ಅನುದಾನದಲ್ಲಿ ವಿಕಲಚೇತನರಿಗೆ ಇಂತಿಷ್ಟು ಮೀಸಲಿಟ್ಟು ಹಣದಲ್ಲಿ ವಾಹನ, ವ್ಯಾಪಾರಕ್ಕೆ ಸಾಲಸೌಲಭ್ಯ, ನ್ಯೂನತಗೆತಕ್ಕಂತೆ ಪರಿಕರಗಳನ್ನು ವಿತರಣೆ ಮಾಡುತ್ತಿದ್ದು. ಅಂಗವಿಕಲರು ನ್ಯೂನ್ಯತೆಯ ಬಗ್ಗೆ ಕೀರುಮೆ ಬಿಟ್ಟು ನಿಮ್ಮಲ್ಲಿರುವ ಕೌಲ್ಯವನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿ ಬಧುಕು ಕಟ್ಟಿಕೊಳ್ಳುವಂತೆ ತಿಳಿಸಿದರು.
ದೊಡ್ಡೇರಿ ಜಿಪಂ ಕ್ಷೇತ್ರದ ಸುಧಾರವಿಕುಮಾರ್, ನನ್ನಿವಾಳ ಕ್ಷೇತ್ರದ ಬಿ.ಪಿ.ಪ್ರಕಾಶ್ ಮೂರ್ತಿ,ಐಮಂಗಲ ಕ್ಷೇತ್ರದ ರಾಜೇಶ್ವರಿ, ತಲಾ ಒಬ್ಬರಿಗೆ, ತುರುವನೂರು ಕ್ಷೇತ್ರ ಕೌಶಲ್ಯ ಇಬ್ಬರಿಗೆ ಜಿಲ್ಲಾಪಂಚಾಯತ್್ ಸದಸ್ಯರ ಮೀಸಲು ಅನುದಾನದಲ್ಲಿ 5 ವಿಕಲ ಚೇತರನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ, ಹಾಗೂ ದಾಖಲೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಬಿ.ಪಿ. ಪ್ರಕಾಶ್ ಮೂರ್ತಿ, ತಾಲೂಕು ಮಹಿಳ ಮಕ್ಕಳ ಕಲ್ಯಾಣಾಧಿಕಾರಿ ಹರಿಪ್ರಸಾದ್, ತಾಲೂಕ್ ವಿಕಲ ಚೇತನರ ನೋಡೆಲ್ ಅಧಿಕಾರಿ ನರಸಿಂಹಮೂರ್ತಿ ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *