ಹಿರಿಯೂರು :
ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ಆಧ್ಯಾತ್ಮಿಕತೆಗೆ ತಾರುಣ್ಯ ತುಂಬಿ ಹೊಸ ಜೀವಕಳೆಯನ್ನ ಒದಗಿಸಿದ ವಿವೇಕಾನಂದರ ಸಂದೇಶಗಳು ಇಂದಿನ ಯುವ ಜನತೆಗೆ ಸ್ಪೂರ್ತಿ ಆಗಬೇಕು ಎಂಬುದಾಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎನ್ ಧನಂಜಯ ಹೇಳಿದರು.
ನಗರದ ಜ್ಞಾನಭಾರತಿ ಬಿಇಡಿ ಕಾಲೇಜಿನಲ್ಲಿ ಸ್ವಾಮಿವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ರಾಷ್ಟ್ರೀಯ ಯುವದಿನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರ ಪಾಲಿನ ಸ್ಪೂರ್ತಿಯ ಚೆಲುವೆಯಾದ ಸ್ವಾಮಿ ವಿವೇಕಾನಂದರು ಆಧುನಿಕ ಯುಗದ ಶ್ರೇಷ್ಠ ಸಂತರು, ಚಿಂತಕ, ಪ್ರಭಾವಶಾಲಿ, ತತ್ವಜ್ಞಾನಿಯಾಗಿದ್ದು, ನಿರ್ಭಯತೆ ಆಶಾವಾದ ಮತ್ತು ಆಧುನಿಕ ವಿಚಾರ ಶಕ್ತಿಯುಳ್ಳ ಅತ್ಯಂತ ವಿಶಿಷ್ಟ ಶಕ್ತಿ, ಅವರಲ್ಲಿ ತಾಯಿಯ ಮೃದು ಹೃದಯ ಯೋಧನ ಶೌರ್ಯತ್ವ ಮೇಲೈಸಿದೆ ಎಂದರಲ್ಲದೆ,
ಸ್ವಾಮಿ ವಿವೇಕಾನಂದರು ಪ್ರಚಂಡ ವಾಕ್ ಪಟುತ್ವ, ತತ್ವಜ್ಞಾನಿಯ ತೀಕ್ಷ್ಣ ವಿಚಾರ ಬುದ್ಧಿ, ಸಂತನ ದಿವ್ಯದೃಷ್ಟಿ ಇವೆಲ್ಲವೂ ಮಿಳಿತವಾಗಿದ್ದ ಅಸಮಾನ್ಯ ವ್ಯಕ್ತಿ, ಅವರಲ್ಲಿ ದೇಶಪ್ರೇಮ, ಮಾನವ ಪ್ರೇಮ, ಭಗವತ್ ಪ್ರೇಮ ಸಾಮರಸ್ಯದಿಂದ ಬೆಸೆದುಕೊಂಡಿದ್ದು, ಇಡೀ ಜಗತ್ತಿಗೆ ಭಾರತೀಯ ಆಧ್ಯಾತ್ಮಿಕ ಪರಂಪರೆ ಕ್ರಾಂತಿಯನ್ನು ಪಸರಿಸಿದವರು ಎಂದರು.
ಜೀವನದಲ್ಲಿ ಗುರಿ ಮುಖ್ಯ, ಗುರಿ ಸಾಧನೆಗೆ ದಾರಿ ಮುಖ್ಯ ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾಮರ್ಥ್ಯವಷ್ಟೇ ಸಾಲದು ವಿಧೇಯತೆ ಇರಬೇಕು ವಿದೇಯತೆ ಎಂದರೆ ಅದು ದಾಸ್ಯವಲ್ಲ, ವಿಧೇಯರಾಗಿರುವುದು ಮಾತಾ ಪಿತೃಗಳಿಗೆ ಗುರುಗಳಿಗೆ ಸಮಾಜಕ್ಕೆ ಮತ್ತು ಪ್ರಕೃತಿಗೆ ಈ ನಿಟ್ಟಿನಲ್ಲಿ ವಿವೇಕಾನಂದರು ಬಾಲ್ಯದಿಂದಲೂ ಅಚಲ ಶ್ರದ್ಧೆ ಮತ್ತು ವಿಧೇಯತೆಯನ್ನು ಮೈಗೂಡಿಸಿಕೊಂಡಿದ್ದರು.
ವಿವೇಕಾನಂದರ ಮೇಲೆ ಅವರ ತಾಯಿ ಮತ್ತು ಅವರ ಗುರುಗಳಿಂದ ಬೀರಿದ ಪ್ರಭಾವ ಗಾಢವಾಗಿತ್ತು ಆ ಕಾರಣದಿಂದಲೇ ಅವರು ಶ್ರೇಷ್ಠ ವ್ಯಕ್ತಿಯಾಗಿ ನಿರ್ಮಾಣಗೊಂಡರು. ಉತ್ತಮ ಮೌಲ್ಯಗಳನ್ನಿತ್ತು ಮನುಷ್ಯನನ್ನು ರೂಪಿಸದಿದ್ದರೆ ಕಳಪೆ ವಿಷಯಗಳನ್ನು ಭಕ್ಷಿಸಿ ಅವನು ನರಿಯೇ ಆಗುತ್ತಾನೆ ಎನ್ನುವ ವಿವೇಕಾನಂದರ ಮಾತುಗಳು ಅವರ ಮೌಲ್ಯಯುತ ಬದುಕಿನ ಬಗ್ಗೆ ಇದ್ದ ದೃಷ್ಟಿಕೋನವನ್ನು ತಿಳಿಸುತ್ತದೆ,
ಯಾರು ತನಗಾಗಿ ಬದುಕುತ್ತಾರೋ ಅದು ಬದುಕಲ್ಲ ಯಾರು ಇತರರಿಗಾಗಿ ಬದುಕುತ್ತಾರೋ ಅದು ನಿಜವಾದ ಬದುಕು ಎನ್ನುವ ಅವರ ಮಾತು ನಿಸ್ವಾರ್ಥ ಸೇವೆಯ ಪ್ರತೀಕ, ಭಾರತಕ್ಕೆ ಇಂದು ಬೇಕಾಗಿರುವುದು ಮೆದುಳಿಗೆ ತರಬೇತಿ ನೀಡುವ ಶಿಕ್ಷಕರಲ್ಲ ಬದಲಿಗೆ ಮನಸ್ಸಿಗೆ ತರಬೇತಿ ಕೊಡುವ ಶಿಕ್ಷಕರ ಅವಶ್ಯವಿದೆ ಎಂದು ವಿವೇಕಾನಂದರು ಅಭಿಪ್ರಾಯ ಪಟ್ಟಿದ್ದರು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಬಸವರಾಜ್, ಎಂ.ನಾಗೇಶ್, ಜೆ.ಆರ್.ರವಿಕುಮಾರ್, ಎಚ್.ಅರುಣಕುಮಾರಿ, ಸಿ.ಎಂ.ಕಾವ್ಯ, ಡಿ.ಎಲ್.ವಿಜಯಲಕ್ಷ್ಮಿ, ಮಂಜುನಾಥ್ ಇತರರು ಉಪಸ್ಥಿತರಿದ್ದರು.
ವಿವೇಕಾನಂದರ ಸಂದೇಶಗಳು ಇಂದಿನ ಯುವಜನತೆಗೆ ಸ್ಪೂರ್ತಿ ಆಗಬೇಕು :ಪ್ರಾಚಾರ್ಯರಾದ ಎನ್.ಧನಂಜಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments