ವಿದ್ಯುತ್‌ ತಂತಿಗೆ ತಾಗಿದ ಮರದ ಕೊಂಬೆಗಳು, ವಿದ್ಯುತ್ ಅವಘಡ ಭೀತಿಯಲ್ಲಿ ಕುರಿಬೊಮ್ಮನಹಟ್ಟಿ ಗ್ರಾಮಸ್ಥರು.

by | 10/11/23 | ಜನಧ್ವನಿ


ತಳಕು.ನ.10.ವಿದ್ಯುತ್ ಅವಘಡಕ್ಕೆ ಕೈಬೀಸಿ ಕರೆಯುವಂತಿರುವ ಮನೆಯ ಮುಂದಿನ ಮರದಲ್ಲಿನ ವಿದ್ಯುತ್‌ ತಂತಿ.

ಹೌದು ಇದು ಚಳ್ಳಕೆರೆ ತಾಲೂಕಿಮ ತಳಕು ಗ್ರಾಪಂ ವ್ಯಾಪ್ತಿಯ ಗಿರಿಯಮ್ಮನಹಳ್ಳಿ ಸಮೀಪದ ಮಜರೆ ಗ್ರಾಮವಾದ ಯಜಮಾನ ನಿಂಗಯ್ಯ ಹಾಗೂ ಕುರಿ ಚೆನ್ನಯ್ಯ ಇವರ ಮನೆ ಮುಂದೆ ಇರುವ ತೆಂಗಿನ ಮರ ಹಾಗೂ ಕಿಲಕಿಸ್ತ್ರೆ ಮರದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ವಿದ್ಯುತ್ ತಂತಿಗಳು ಮರದ ಗೊಂಬೆಗಳಿಗೆ ತಾಕಿಕೊಂಡಿರುವುದರಿಂದ ಮಳೆ ಗಾಳಿ ಸಂದರ್ಭದಲ್ಲಿ ಕಿಡಿ ಕಾರುತ್ತಿಗೆ ಹಾಗೂ ತೆಂಗಿನ ಮರದಲ್ಲಿಯೂ ವಿದ್ಯುತ್ ತಂತಿ ಹಾದೂ ಹೋಗಿರುವುದರಿಂದ ಕಾಯಿ ಕೀಳಲು ಮರ ಹತ್ತಿದೆ ವಿದ್ಯುತ್ ಅಫಾಯದ ಎದುರಾಗಿದೆ.
ಈ ಬಗ್ಗೆ ಗ್ರಾಪಂ ಸದಸ್ಯರಿಗೆ ಕರೆದುಕೊಂಡು ಬಂದು ಮರದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಬಗ್ಗೆ ತೋರಿಸಿದ್ದೇವೆ ಬೆಸ್ಕಾಂನವರಿಗೆ ಹೇಳಿ ಕೊಂಬೆಗಳ ಕಟಿಂಗ್ ಮಾಡಿಸುತ್ತೇವೆ ಎಂದು ಹೇಳಿದ್ದರು ಯಾರನ್ನು ಕಳಿಸಿಲ್ಲ . ಮರಗಳಲ್ಲಿ ವಿದ್ಯುತ್ ತಂತಿಗಳಿಗೆ ತಾಕುತ್ತಿದ್ದು, ವಿದ್ಯುತ್ ತಂತಿಗೂ ಬಳ್ಳಿ ಹಬ್ಬಿದ್ದು ಇಲ್ಲಿನ ನಿವಾಸಿಗಳಿಗೆ ಆತಂಕ ಮೂಡಿಸಿದೆ. ಬಳ್ಳಿಗಳು, ರೆಂಬೆ ಕೊಂಬೆಗಳು ತಂತಿಗೆ ತಾಗಿದ್ದು, ಅಚಾನಕ್ಕಾಗಿ ಯಾರಾದರೂ ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮರದ ಕೊಂಬೆಗಳನ್ನು ಕತ್ತರಿಸ ಬೇಕೆಂಬ ನಿಯಮವಿದೆ ಆದರೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮರಗಳಲ್ಲಿ ವಿದ್ಯುತ್ ತಂತಿ ತಾಗಿದರೂ ಕೊಂಬೆಗಳನ್ನು ತೆರವುಗೊಳಿಸಲು ಬೆಸ್ಕಾಂ ಇಲಾಖೆ ಮುಂದಾಗಿಲ್ಲ ವಿದ್ಯುತ್ ಅವಘಡದ ಭೀತಿಯಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಇದೆ . ರೈತರ ಜಮೀನು
ರಸ್ತೆ ಬದಿ ಸೇರಿದಂತೆ ಮರದ ಗೊಂಬೆಗಳಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದರೆ ಬೆಸ್ಕಾಂ ಲೈನ್ ಮ್ಯಾನ್ ಜಂಗಲ್ ಕಟಿಂಗ್ ಮಾಡಬೇಕೆಂಗಬ ನಿಯಮವಿದೆ ಇದೇ ರೀತಿ ಮರದಲ್ಲಿ ವಿದ್ಯುತ್ ತಂತಿ ಮರದಲ್ಲಿ ಕೊಂಬೆ ಕಡಿಯಲು ಹೋದವರ ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆಗಳು ನಡೆದಿವೆ ಈ ಗ್ರಾಮದಲ್ಲೂ ಇಂತಹ ಘಟನೆ ನಡೆಯುವ ಮುನ್ನ ಬೆಸ್ಕಾಂ ಇಲಾಖೆ ಮರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗದಂತೆ ಮರದ ಕೊಂಬೆಗಳನ್ನು ತೆರವುಗೊಳಿಸ ಬೇಕಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕುರಿಬೊಮ್ಮಯ್ಯನಹಟ್ಟಿ ಗ್ರಾಮದ ಮನೆ ಮುಂದೆ ಮರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗದಂತೆ ಮರದ ಕೊಂಬೆಗಳನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.


.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *