ವಿದ್ಯುತ್ ಅವಗಡಕ್ಕೆ ಕೈ ಬೀಸಿ ಕರೆಯುವ ವಿದ್ಯುತ್ ಕಂಬ ಬದಲಾಯಿಸುವಂತೆ ರೈತರ ಆಗ್ರಹ.

by | 05/09/23 | ಜನಧ್ವನಿ


ಚಳ್ಳಕೆರೆ ಸೆ.5 ತುಕ್ಕು ಹಿಡಿದ ವಿದ್ಯುತ್ ಕಂಬವನ್ನು ಬದಲಾಯಿಸುವಂತೆ ಹಲವು ಬಾರಿ ಬೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆವಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಮೈಲನಹಳ್ಳಿ ಗ್ರಾಪಂ ವ್ಯಾಪ್ತಿಯ ಬೂದಿಹಳ್ಳಿ ಗ್ರಾಮದ ರೈತ ಬೂದಿಯಪ್ಪ ಇವರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬ ಶಿಥಿಲಾವಾಗಿ ಅಸ್ಥಿಪಂಜರದಂತಾಗಿ ವಾಲಿರುವ ವಿದ್ಯುತ್ ಕಂಬ ನೇತಾಡುವ ವಿದ್ಯುತ್ ತಂತಿಗಳು ಇತ್ತೀಚೆಗೆ ಮುಂಗಾರು ಮಳೆ ಗಾಳಿಗೆ ಸಿಲುಕಿ‌ಯಾವುದೇ ಸಂದರ್ಭದಲ್ಲಿ ನೆಲಕ್ಕುರುಳುವ ಆತಂಕ ಜೀವ ಭಯದಲ್ಲಿ ಓಡಾಡುವ ರೈತ ಶಿಥಿಲವಾದ ವಿದ್ಯುತ್ ಕಂಬವನ್ನು ಬದಲಾಯಿಸುವಂತೆ ಬೆಸ್ಕಾಂ ಅಧಿಕಾರಿಗಳ ಗಮನೆ ಸೆಳೆದರೂ ಅನ್ನದಾತನ ಮನವಿ ಅಧಿಕಾರಿಗಳ ಕಿವಿಗೆ ಬೀಳದೆ ಇದಕ್ಕೂ ನಮಗೂ ಸಂಬಂದವಿಲ್ಲ ಎಂಬಂತೆ ಅಧಿಕಾರಿಗಳು ಮೌನವಹಿಸಿದ್ದಾರೆ. ಶಿಥಿಲವಾಗಿ ವಾಲಿದ ವಿದ್ಯುತ್ ಕಂಬವನ್ನು ರೈತರೇ ನೇರವಾಗಿ ನಿಲ್ಲಿಸಿ ನೇರವಾಗಿ ನಿಲ್ಲಲು ನಾಲ್ಕು ಕಡೆ ಆಸರೆಯಾಗಿ ಕಟ್ಟಿದ್ದೇವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ‌‌‌‌‌ ವಿದ್ಯುತ್ ಅವಗಡಕ್ಕೆ ತುಕ್ಕು ಹಿಡಿದ ವಿದ್ಯುತ್ ಕಂಬ ಕೈ ಬೀಸಿ ಕರೆಯುವಂತಿರುವ ವಿದ್ಯುತ್ ಕಂಬವನ್ನು ಅವಗಡಕ್ಕೆ ತುತ್ತಾಗುವ ಮುನ್ನವೇ ಸಂಬಂಧ ಪಟ್ಟ ಅಧಿಕಾರಿಗಳು ಬದಲಾಯಿಸುವರೇ ಕಾದು ನೋಡ ಬೇಕಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *