ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆರೋಗ್ಯದ ಕಡೆ ಗಮನಹರಿಸುವುದು ಅತ್ಯವಶ್ಯಕ :ಎಂ ರವೀಶ್ ಕುಮಾರ್

by | 04/12/23 | ಆರೋಗ್ಯ

ಚಳ್ಳಕೆರೆ ಡಿ.3 ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ  ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ,  ಅನಿಮೀಯ ಮುಕ್ತಪೌಷ್ಟಿಕ ಕರ್ನಾಟಕ ಯೋಜನೆಯಡಿ    ರಕ್ತಹೀನತೆ  ಪರೀಕ್ಷೆಯನ್ನು ನಡೆಸಲಾಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಂ ರವೀಶ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರಗಳಿಗೆ ಆಗಮಿಸುವುದರಿಂದ  ಬೆಳಗ್ಗೆಯಿಂದ ಸಂಜೆಯವರೆಗೂ ಸರಿಯಾದ ಊಟ ಉಪಹಾರ ಸೇವಿಸದೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದಾಗಿ ರಕ್ತಹೀನತೆ ಸೇರಿದಂತೆ ಹಲವು ರೋಗಗಳಿಗೆ ವಿದ್ಯಾರ್ಥಿಗಳು ತುತ್ತಾಗುತ್ತಿದ್ದಾರೆ ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಮತ್ತು

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ, ಆರೋಗ್ಯ ಅತಿ ಮುಖ್ಯ ವಾಗಿರುವುದರಿಂದ, ಎಲ್ಲಾ ವಿದ್ಯಾರ್ಥಿಗಳಿಗೆ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೈದ್ಯರ ಮೂಲಕ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು.

ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ ಯಾವುದೇ ವಿದ್ಯಾರ್ಥಿಗಳು ಹಿಮೋಗ್ಲೋಬಿನ್ ಸಮಸ್ಯೆಯಿಂದ ಬಳಲಬಾರದು ಎಂಬ ದೃಷ್ಟಿಯಿಂದ ಸರ್ಕಾರದಿಂದ ಕಬ್ಬಿಣಾಂಶಯುಕ್ತ ಮಾತ್ರೆಗಳನ್ನು ಹೀಮೋಗ್ಲೋಬಿನ್  7ಕ್ಕಿಂತ ಕಡಿಮೆ ಇದ್ದ ವಿದ್ಯಾರ್ಥಿಗಳಿಗೆ ಐರನ್-ಸುಕ್ರೋಸ್ ಇಂಜಕ್ಷನ್ ಹಾಗೂ ಹಿಮೋಗ್ಲೋಬಿನ್ 5ಕ್ಕಿಂತ ಕಡಿಮೆ ಕಂಡುಬರುವ ಮಕ್ಕಳಿಗೆ ರಕ್ತವನ್ನು ನೀಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾದ ಶಾಂತಕುಮಾರಿ ಬಿ, ಡಾ//ರಮೇಶ್, ಡಾ//ಮಂಜುನಾಥ್, ಉಪನ್ಯಾಸಕರಾದ ಪುಟ್ಟರಂಗಪ್ಪ,  ರವಿಕುಮಾರ್, ರಾಜಶೇಖರ್, ಮಹಾಂತೇಶ್, ಮಧು,  ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರೇಖ, ಅಕ್ಷತಾ ಉಪಸ್ಥಿತರಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page