ವಿಜ್ಞಾನ-ತಂತ್ರಜ್ಞಾನ

ಹುಲುಗುಲಕುಂಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತ ಕಾರ್ಖಾನೆನೀರು ಮರುಬಳಕೆ ಮಾಡುವ ಸಾಧನ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ :ಶಿಕ್ಷಣ ಇಲಾಖೆಯಿಂದ ಅಭಿನಂದನೆ


ಹಿರಿಯೂರು :
ತಾಲ್ಲೂಕಿನ ಹುಲುಗುಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಮೃತ ಇವರು ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ತಯಾರಿಸಿರುವ ಕಾರ್ಖಾನೆ ಗಳಿಂದ ಬಿಡುಗಡೆ ಆಗುವ ಬಣ್ಣದ ನೀರನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ಶುದ್ಧೀಕರಣ ಮಾಡಿ ಆ ನೀರನ್ನು ಮರುಬಳಕೆ ಮಾಡುವ ಸಾಧನವನ್ನು ತಯಾರಿಸಿದ್ದು ಈ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂಬುದಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಹುಲುಗಲುಕುಂಟೆ ಗ್ರಾಮದ ಈ ವಿದ್ಯಾರ್ಥಿನಿ ಮನೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ಬಿಆರ್.ಸಿ ತಿಪ್ಪೇರುದ್ರಪ್ಪ, ಚಿತ್ರದುರ್ಗ ಡಯಟ್ ನ ಹಿರಿಯ ಉಪನ್ಯಾಸಕರಾದ ಪ್ರಸಾದ್ , ಹಾಗೂ ಉಪನ್ಯಾಸಕರಾದ ನಿತ್ಯಾನಂದ ಹಾಗೂ ಶಿಕ್ಷಣ ಸಂಯೋಜಕರಾದ ಶಶಿಧರ್ ಇವರುಗಳು ಭೇಟಿ ಮಾಡಿ ವಿದ್ಯಾರ್ಥಿನಿಯನ್ನು ಗೌರವಿಸಿ ಶುಭಹಾರೈಸಿ, ಮಾತನಾಡಿದರು.
ಇದೇ ಸಂದರ್ಭದಲ್ಲಿ ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ವಿದ್ಯಾರ್ಥಿನಿ ಕುಮಾರಿ ಅಮೃತರವರಿಗೆ ಈ ಅದ್ಭುತ ಮಾದರಿಯನ್ನು ತಯಾರಿಸಲು ಸಹಕಾರ ನೀಡಿದ ಶಿಕ್ಷಕಿ ನಾಗಲಕ್ಷ್ಮಿ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಿದರಲ್ಲದೆ ಮುಂದಿನ ದಿನಗಳಲ್ಲೂ ಸಹ ನೀವು ಸೃಜನಶೀಲ ವಿದ್ಯಾರ್ಥಿಗಳ ಹೊಸಹೊಸ ಸಂಶೋಧನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಶಿಕ್ಷಕಿಗೆ ಸೂಚಿಸಿದರು.

ಸರ್ ಎಂ ವಿಶ್ವೇಶ್ವರಯ್ಯನವರ ಚಿಂತನೆಗಳು ನನ್ನ ಜೀವನದಲ್ಲಿ ಪರಿಣಾಮ ಬೀರಿದ್ದರಿಂದಲೇ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು: ಶಾಸಕ ಟಿ ರಘುಮೂರ್ತಿ


ಚಳ್ಳಕೆರೆ: ಸವಾಲುಗಳನ್ನು ಎದುರಿಸಿ ಹೆಜ್ಜೆ ಹೆಜ್ಜೆಗೂ ಸಾಧನೆಗಳನ್ನು ಮಾಡುತ್ತ ಜೀವನ ಪರ್ಯಂತ ನಿಸ್ವಾರ್ಥ ಜೀವನ ಸಾಗಿಸಿದ ಭಾರತರತ್ನ ಡಾ. ಸರ್ ಎಂ ವಿಶ್ವೇಶ್ವರಯ್ಯ ಜಗತ್ತಿಗೆ ಆದರ್ಶವಾಗಿದ್ದಾರೆ ಪ್ರತಿ ಹೆಜ್ಜೆಗಳಲ್ಲಿ ಯಶಸ್ವಿಯಾದ ಅವರು ಶುದ್ಧ ಹಸ್ತರಾಗಿ ಪ್ರಾಮಾಣಿಕರಾಗಿ ಜೀವನ ನಡೆಸಿದರು ಅವರ ಆದರ್ಶಗಳನ್ನು ಇಂದಿನ ಇಂಜಿನಿಯರ್ ಗಳು ಹಾಗೂ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಟಿರಘುಮೂರ್ತಿ ತಿಳಿಸಿದರು.

ನಗರದ ಲೋಕೋಪಯೋಗಿ ಇಲಾಖೆ ಸಭಾಂಗಣದಲ್ಲಿ ವಿಶ್ವೇಶ್ವರಯ್ಯನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು

ರಾಷ್ಟ್ರ ನಿರ್ಮಾಣದಲ್ಲಿ ಅಭಿಯಂತರರ ಪಾತ್ರ ಮಹತ್ತರವಾದುದು ಅಭಿಯಂತರರು ಹಗಲಿರುಳು, ಶ್ರಮಿಸುತ್ತಾ ದೇಶ ಕಟ್ಟುವಲ್ಲಿ ನಿರತರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ನಾನು ಸಹ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿ ಇಂದು ರಾಜಕಾರಣಕ್ಕೆ ಬಂದಿದ್ದೇನೆ ಸರ್ ಎಂ ವಿಶ್ವೇಶ್ವರಯ್ಯನವರ ಮೌಲ್ಯಗಳು ನನ್ನ ಜೀವನದಲ್ಲಿ ಪರಿಣಾಮ ಬೀರಿದ್ದರಿಂದಲೇ ಕ್ಷೇತ್ರದಲ್ಲಿ ಶಾಸಕನಾಗಿ ಅತ್ಯುತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು ಇಂತಹ ಮಹನೀಯರನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸ್ಮರಿಸಿದರು

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಶ್ರೀ ರೆಹಾನ್ ಪಾಷಾ, ಕಾರ್ಯಪಾಲಕ ಅಭಿಯಂತರರಾದ ಶ್ರೀ ವಿಜಯಭಾಸ್ಕರ್, ಇಂಜಿನಿಯರ್ ಶ್ರೀ ರಾಜಣ್ಣ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಶ್ರೀಮತಿ ಕಾವ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ, ಇಂಜಿನಿಯರ್ ಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇವಲ ಉತ್ತೀರ್ಣರಾಗಲು ಅಂಕಗಳನ್ನು ತೆಗೆಯುವ ಬದಲು ಹೊಸ ಆವಿಷ್ಕಾರಗಳನ್ನು ಕಂಡುಹಿಯುವ ವಿಜ್ಞಾನಿಗಳಾಗುವಂತೆ ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ ಸೆ.13ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷ ರಾಭ್ಯಾಸಕ್ಕೆ ಸೀಮಿತವಾಗದೆ. ಜತೆಗೆ ಜ್ಞಾನದ ಅವಶ್ಯಕತೆಯಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಬಗ್ಗೆ ಅಭಿರುಚಿ ಬೆಳೆಸ ಬೆಕೆಂದು ಶಾಸಕ ಟಿ.ರಘುಮೂರ್ತಿ ಕಿವಿಮಾತು ಹೇಳಿದರು.


ನಗರದ ಕುವೆಂಪು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಸಂಘ ಹಾಗೂ ವಿದಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಹೊಸ ಹೊಸ ಅವಿಷ್ಕಾರಗಳನ್ನು ಕಂಡು ಹಿಡಿಯ ಬೇಕು ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷ ರಾಭ್ಯಾಸ ಇದ್ದರೆ ಸಾಕಾಗಾದು. ಜತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷ ಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕತೆ ಇದೆ. ತಾಲೂಕಿನಲ್ಲಿ ಕೇವಲ ಉತ್ತೀರ್ಣರಾಗಲು ಅಂಕಗಳನ್ನು ತೆಗೆಯುವುದನ್ನು ಬಿಟ್ಟು ವಿಜ್ಞಾನದಲ್ಲಿ ಹೊಸ ತಂತ್ರಜ್ಞಾನ ಕಂಡುಹಿಯುವ ವಿಜ್ಞಾನಿಗಳಾಗ ಬೇಕು ತಾಲೂಕಿಗೆ ಅವಶ್ಯಕತೆ ಇಲ್ಲದಿದ್ದರೂ ದೇಶಕ್ಕೆ ಅವಶ್ಯಕತೆ ಯಾಗಲು 11800, ಎಕರೆ ಸರಕಾರಿ ಭೂಮಿನ್ನು ನೀಡಿರುವುದರಿಂದ ಪ್ರಪಂಚದ ಭೂಪಟ ದಲ್ಲಿ ಚಳ್ಳಕೆರೆ ನೋಡುವಂತಾಗಿದೆ. ಭಾರತ ದೇಶ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆ ಮಾಡಿ ವಿಶ್ವಕ್ಕೆ ಭಾರತ ವಿಜ್ಞಾನದಲ್ಲಿ ಮುಂದಿದೆ ಎಂದು ತೋರಿಸಿದರು ಅದೇ ರೀತಿ ವಿದ್ಯಾರ್ಥಿಗಳು ಕೂಡ ಕೇವಲ ಓದುವುದರಲ್ಲಿ ಸೀಮಿತವಾಗದೆ ಹೊಸ ಆವಿಷ್ಕಾರ ತೊಡಗಿ ಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲ ಕಲ್ಪಿಸುವುದು ಮುಖ್ಯ.ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪತ್ಯೇತರ ಚಟುವ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗುತ್ತಿದೆ ವಿವಿಧ ಪ್ರೌಢಶಾಲೆಗಳಿಂದ 135 ಮಾಡೆಲ್ ಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ ಎಂದು ತಿಳಿಸಿದರು.
ನಿವೃತ್ತ ಪ್ರಚಾರ್ಯ ಶಿವಲಿಂಗಪ್ಪ ಮಾತನಾಡಿದರು. ಸ್ಥಾಯಿಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ
ಪೌರಾಯುಕ್ತ ಚಂದ್ರಪ್ಪ, ಪ್ತೌಢಶಾಲಾ ಶಿಕ್ಷಕರಾದ ಡಿ.ಟಿ.ಶ್ರೀನಿವಾಸ್. ಪಾಲಯ್ಯ .ಬಿ.ರಾಜುಕುಮಾರ್.ತಿಪ್ಪೇಸ್ವಾಮಿ.ಬಸವರಾಜ್.ರಂಗನಾಥ್. ಮಂಜುನಾಥ್.ಶಿವರಾಜ್. ಇತರರಿದ್ದರು.

ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ.ಟಿ.ನಾಗಭೂಷಣ್, ಪ್ರಸಕ್ತ ವರ್ಷದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ.

ಚಳ್ಳಕೆರೆ ಸೆ.2ತಾಲೂಕಿನ ರೇಖಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ.ಟಿ.ನಾಗಭೂಷಣ್, ಪ್ರಸಕ್ತ ವರ್ಷದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ್ದಾರೆ.

ರಾಜ್ಯಪಾಲರ ಆದೇಶ ಅನುಸಾರವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್. ಹೊಸಮಠ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸೆ.5ರಂದು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ

ಮರುಬಳಕೆ ಮಾಡಬಹುದಾದ ಮಾನವರಹಿತ ಉಡಾವಣಾ ರಾಕೆಟ್ ಯಶಸ್ವಿ ಹಾರಾಟ ಮತ್ತು ಸ್ವಾಯುತ್ತವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಬಾಹ್ಯಕಾಶ ವಾಹನದ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು.


ಜನಧ್ವನಿ ವಾರ್ತೆ ಏ.2
ಮರುಬಳಕೆ ಮಾಡಬಹುದಾದ ಮಾನವರಹಿತ ಉಡಾವಣಾ ರಾಕೆಟ್ ಯಶಸ್ವಿ ಹಾರಾಟ ಮತ್ತು ಸ್ವಾಯುತ್ತವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಬಾಹ್ಯಕಾಶ ವಾಹನದ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು.
ತಾಲೂಕಿನ ನಾಯಕನಹಟ್ಟಿ ಸಮೀಪದ ಕುದಾಪುರ ಡಿಆರ್‌ಡಿಒ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಇಸ್ರೋ, ಡಿಆರ್‌ಡಿಒ, ಭಾರತೀಯ ವಾಯುನೆಲೆ, ಸೆಮಿಲ್ಯಾಕ್, ಎಡಿಇ, ಎಡಿಆರ್‌ಡಿಇ ಸಹಯೋಗದಲ್ಲಿ ನಡೆಸಿದ ಮಾನವರಹಿತ ಸ್ವಾಯುತ್ತ ನೆಲೆಕಂಡುಕೊಳ್ಳುವ ರಾಕೆಟ್ ಹಾರಾಟವು ಯಶಸ್ವಿಯಾಯಿತು.
ಭಾರತ ದೇಶದಲ್ಲಿ ಇಸ್ರೋ ಸಂಸ್ಥೆಯು ಹಲವಾರು ಯಶಸ್ವಿ ರಾಕೆಟ್‌ಗಳ ಉಡಾವಣೆಯ ಮೂಲಕ ಬಾಹ್ಯಾಕಾಶ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ. ಹಾಗೇ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊಡ್ಡದೊಡ್ಡ ಯೋಜನೆಗಳನ್ನು ಯಶಸ್ವಿಗೊಳಿಸಿದ ಹೆಗ್ಗಳಿಕೆ ಇಸ್ರೋ ಸಂಸ್ಥೆಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಕಡಿಮೆ ವೆಚ್ಚದಲ್ಲಿ ಬಾಹ್ಯಕಾಶದ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎಂಬ ಉದ್ದೇಶದಿಂದ 2016ರ ಮೇ ತಿಂಗಳಲ್ಲಿ ಸ್ವತಂತ್ರö್ಯವಾಗಿ ನೆಲೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (ಆರ್‌ಎಲ್‌ವಿ ಎಲ್‌ಇಎಕ್ಸ್) ಹಾರಾಟ ಮತ್ತು ಇಳಿಯುವಿಕೆಯ ಪರೀಕ್ಷೆಯನ್ನು ಬಂಗಾಳಕೊಲ್ಲಿಯ ಸಮುದ್ರದ ಮೇಲಿನ ಕಾಲ್ಪನಿಕ ರನ್‌ವೇಯಲ್ಲಿ ಪ್ರಯೋಗಿಸಲಾಗಿತ್ತು. ಅಲ್ಲಿ ನಿಖರವಾಗಿ ರನ್‌ವೇಯಲ್ಲಿ ಇಳಿಯದೇ ಇರುವುದರಿಂದ ಇನ್ನೂ ಹೆಚ್ಚಿನ ಅಧ್ಯಯನ, ಪ್ರಯೋಗ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ಬಾರಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು.

ಡಿಆರ್‌ಡಿಒ ಪರೀಕ್ಷಾರ್ಥ ವಾಯುನೆಲೆಯಲ್ಲಿ ಭಾನುವಾರ ಬೆಳಿಗ್ಗೆ 7.11ಕ್ಕೆ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೊದಲು ಮೇಲೆ ಹಾರಿ ನಂತರ ಅದರ ಕೆಳಗಡೆ ಮರುಬಳಕೆ ಮಾಡಬಹುದಾದ ಉಡಾವಣಾ ವಿಮಾನಕ್ಕೆ (ಆರ್‌ಎಲ್‌ವಿ ಎಲ್‌ಇಎಕ್ಸ್) ಹಗ್ಗ ಕಟ್ಟಿಕೊಂಡು ಸುಮಾರು ೪.೫ಕಿ.ಮೀ ಎತ್ತರಕ್ಕೆ ಹಾರಿತು. ಇದೇವೇಳೆ ಮರುಬಳಕೆ ಮಾಡಬಹುದಾದ ಉಡಾವಣಾ ವಿಮಾನವು(ಆರ್‌ಎಲ್‌ವಿ-ಎಲ್‌ಇಎಕ್ಸ್) ಮಿಷನ್ ಮ್ಯಾನೇಜ್‌ಮೆಂಟ್ ಕಂಪ್ಯೂಟರ್ ಆದೇಶದ ಮೇರೆಗೆ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ಸೂಚನೆಗಳನ್ನು ಸ್ವಯಂಚಾಲಿತವಾಗಿ ಸಾಧಿಸಿದ ನಂತರ, ವಿಮಾನವನ್ನು ಗಾಳಿಯಲ್ಲಿ ಭೂಮಿಯಿಂದ4.6 ಕಿ.ಮೀ.ಎತ್ತರದಲ್ಲಿ ಹೆಲಿಕಾಪ್ಟರ್ ಬಿಡುಗಡೆ ಮಾಡಿತು. ನಂತರ ವಿಮಾನವು ಸ್ಥಾನ, ವೇಗ, ಎತ್ತರ ಇತ್ಯಾದಿ ಷರತ್ತುಗಳನ್ನು ಒಳಗೊಂಡ 10 ಸೂಚನೆಗಳನ್ನು ಸ್ವತಂತ್ರö್ಯವಾಗಿ ಪಾಲಿಸಿಕೊಂಡು ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ & ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಲ್ಯಾಂಡಿAಗ್ ತಂತ್ರಗಳನ್ನು ನಿರ್ವಹಿಸಿ ಡಿಆರ್‌ಡಿಒ ಪರೀಕ್ಷಾರ್ಥ ವಾಯುನೆಲೆಯಲ್ಲಿ ಬೆಳಿಗ್ಗೆ 7.40ಕ್ಕೆ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ನೆಲೆಯೂರಿತು. ಅದರಲ್ಲೂ ವಿಶ್ವದಲ್ಲಿಯೇ ಮೊದಲ ಬಾರಿಗೆ, ರೆಕ್ಕೆಯ ದೇಹವನ್ನು ಹೆಲಿಕಾಪ್ಟರ್ ಮೂಲಕ 4.5ಕಿಮೀ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ರನ್‌ವೇಯಲ್ಲಿ ಸ್ವತಂತ್ರವಾಗಿ ನೆಲೆಕಂಡುಕೊಳ್ಳಲು ಬಿಡುಗಡೆ ಮಾಡಲಾಯಿತು. ಆಗ ವಿಮಾನವು ಗಂಟೆಗೆ ೩೫೦ಕಿ.ಮೀ ಹೆಚ್ಚಿನ ವೇಗದಲ್ಲಿ ಸುರಕ್ಷಿತವಾಗಿ ಇಳಿಯಿತು. ಇದರೊಂದಿಗೆ ಮಾನವರಹಿತ ಬಾಹ್ಯಾಕಾಶ ವಾಹನದ ಸ್ವಾಯುತ್ತ ಲ್ಯಾಂಡಿAಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿತು.
ಆ ಮೂಲಕ ಬಾಹ್ಯಕಾಶಕ್ಕೆ ತೆರಳಿದ ಮಾನವರಹಿತ ವಿಮಾನವು ಹೆಚ್ಚಿನ ವೇಗದೊಂದಿಗೆ ಅದೇ ಮಾರ್ಗದಲ್ಲಿ ನಿಖರವಾಗಿ ಹಿಂತಿರುಗಿ ನೆಲೆಕಂಡುಕೊಳ್ಳುವುದು ಮತ್ತು ನೆಲೆಕಂಡುಕೊಳ್ಳುವಾಗ ಭೂಮಿಗೆ ಸಂಬAಧಿತ ವೇಗ ಸೇರಿದಂತೆ ಬಾಹ್ಯಾಕಾಶ ವಾಹನವು ಅದರ ಹಿಂತಿರುಗುವ ಹಾದಿಯಲ್ಲಿ ಅನುಭವಿಸಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಸಾಧಿಸಲಾಗಿದೆ. ಈ ಮಾನವರಹಿತ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವು ನಿಖರವಾದ ಸ್ಥಳಸೂಚಿಯ ಜತೆಗೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್, ಸ್ಯೂಡೋಲೈಟ್ ವ್ಯವಸ್ಥೆ, ಕಾ-ಬ್ಯಾಂಡ್ ರಾಡಾರ್ ಅಲ್ಟಿಮೀಟರ್, ಸ್ಥಳೀಯ ಲ್ಯಾಂಡಿAಗ್ ಗೇರ್, ಏರೋಫಾಯಿಲ್ ಜೇನು-ಬಾಚಣಿಗೆ ರೆಕ್ಕೆಗಳು ಮತ್ತು ಬ್ರೇಕ್ ಪ್ಯಾರಾಚೂಟ್ ಸಿಸ್ಟಮ್ ಸೇರಿದಂತೆ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಿತು.
ವಿಎಸ್‌ಎಸ್‌ಸಿ ನಿರ್ದೇಶಕ ಡಾ.ಎಸ್.ಉನ್ನಿಕೃಷ್ಣನ್ ನಾಯರ್ ಮತ್ತು ಎಟಿಎಸ್‌ಪಿ ಕಾರ್ಯಕ್ರಮ ನಿರ್ದೇಶಕ ಎನ್.ಶ್ಯಾಮ್‌ಮೋಹನ್ ವಿಜ್ಞಾನಿಗಳ ತಂಡಗಳಿಗೆ ಮಾರ್ಗದರ್ಶನ ನೀಡಿದರು. ಮಿಷನ್ ನಿರ್ದೇಶಕರಾಗಿ ಆರ್‌ಎಲ್‌ವಿ ಯೋಜನಾ ನಿರ್ದೇಶಕ ಡಾ.ಎಂ.ಜಯಕುಮಾರ್, ಮತ್ತು ಯೋಜನೆಗೆ ವಾಹನ ನಿರ್ದೇಶಕರಾಗಿ ಆರ್‌ಎಲ್‌ವಿಯ ಸಹ ಯೋಜನಾ ನಿರ್ದೇಶಕರಾದ ಜೆ.ಮುತ್ತುಪಾಂಡಿಯನ್ ಕಾರ್ಯನಿರ್ವಹಿಸಿದ್ದಾರೆ.
ಇದೇವೇಳೆ ಇಸ್ಟಾçಕ್ ನಿರ್ದೇಶಕರಾದ ರಾಮಕೃಷ್ಣ, ಇಸ್ರೋ ಕಾರ್ಯದರ್ಶಿ ಎಸ್.ಸೋಮನಾಥ್ ಪರೀಕ್ಷೆಯನ್ನು ವೀಕ್ಷಿಸಿದರು ಮತ್ತು ಇಡೀ ತಂಡವನ್ನು ಅಭಿನಂದಿಸಿದರು.

ಮರಡಿಹಳ್ಳಿ: ಜಿಲ್ಲಾಮಟ್ಟದ ಕಲಿಕಾ ಹಬ್ಬ ಮುಕ್ತ ವಾತಾವರಣದಿಂದ ಅರ್ಥಪೂರ್ಣ ಕಲಿಕೆ

ಮರಡಿಹಳ್ಳಿ ಫೆ.13:
ಕಲಿಕೆಯನ್ನು ಅತಿ ಶಿಸ್ತಿನ ಚೌಕಟ್ಟಿನೊಳಗೆ ಮಾಡದೆ, ಮುಕ್ತ ವಾತಾವರಣದಲ್ಲಿ ಆಟದೊಂದಿಗೆ ಮಾಡಿದರೆ ಅರ್ಥಪೂರ್ಣವಾದ ಕಲಿಕೆಯಾಗುತ್ತದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಆಟದೊಂದಿಗೆ ಕಲಿಸಬಹುದಾಗಿದೆ. ಎಷ್ಟು ಓದಿದರೂ ಅರ್ಥವಾಗದೇ ಪರಿಕಲ್ಪನೆಗಳನ್ನು ಚಟುವಟಿಕೆ ಮಾಡುವುದರ ಮುಖಾಂತರ, ಪರಿಸರವನ್ನು ಅಧ್ಯಯನ ಮಾಡುವುದರ ಮುಖಾಂತರ ಕಲಿಸಬಹುದಾಗಿದೆ ಎಂದರು.
ಕಲಿಕಾ ಹಬ್ಬವು 152 ಕ್ಲಸ್ಟರ್‍ಗಳಲ್ಲಿ ನಡೆದು ಈಗ ಜಿಲ್ಲಾ ಹಂತದಲ್ಲಿ ನಡೆಯುತ್ತಿದ್ದು, ಒಟ್ಟು 18,300 ಮಕ್ಕಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದಾರೆ. ಈ ಕಲಿಕಾ ಹಬ್ಬಗಳನ್ನು 830 ಜನ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟಿದ್ದಾರೆ. ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ, ಪೆÇೀಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅಪಾರ ಪೆÇ್ರೀತ್ಸಾಹ ಸಿಕ್ಕಿದೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿಯ ವಿದ್ಯಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ ಮಾತನಾಡಿ, ಕಲಿಕಾ ಹಬ್ಬದ ಪ್ರಾರಂಭದಲ್ಲಿ ನಡೆದ ಮೆರವಣಿಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶನ ಮಾಡುವ ವೇದಿಕೆಯಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಧಿಕಾರಿ ಎಂ.ಮಂಜುನಾಥ ಸ್ವಾಮಿ ಮಾತನಾಡಿ, ಕಲಿಕಾ ಹಬ್ಬವು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ತಿಳಿಸಿರುವ ಮೌಲ್ಯಗಳಿಗೆ ಅನುಸಾರವಾಗಿ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಉಂಟಾದ ಕಲಿಕೆಯ ಕೊರತೆಯನ್ನು ಈ ಹಬ್ಬದ ಮೂಲಕ ಸರಿಪಡಿಸಲಾಗುತ್ತಿದೆ ಎಂದರು.
ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಕಲಿಕಾ ಹಬ್ಬ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನಾ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ವೇಷ ಭೂಷಣಗಳಿಂದ ಅಲಂಕೃತರಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಕಲಾ ತಂಡಗಳು ಗ್ರಾಮಸ್ಥರನ್ನು ಬೆರಗಾಗುವಂತೆ ಮಾಡಿದವು.
ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ರಘುನಾಥ ರೆಡ್ಡಿ, ಜಿಲ್ಲಾ ಕಲಿಕಾ ಹಬ್ಬದ ನೋಡಲ್ ಅಧಿಕಾರಿಗಳಾದ ಎಂ.ಜಿ.ಮಂಜುನಾಥ್, ಕುಸುಮ, ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

30ನೇ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ಜನಮನ ಸೂರೆಗೊಳ್ಳುತ್ತಿರುವ ಹೂವಿನ ಕಲಾಕೃತಿಗಳು

ಚಿತ್ರದುರ್ಗ ಫೆ.10:
ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆಯಿಂದ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ಫಲ-ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು.
ಫೆ.10 ರಿಂದ ಫೆ.12 ರವರೆಗೆ ಹಮ್ಮಿಕೊಂಡಿರುವ 30ನೇ ಫಲ-ಪುಷ್ಪ ಪ್ರದರ್ಶನವನ್ನು ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ, ಉದ್ಘಾಟಿಸಿದರು.
ಫಲ-ಪುಷ್ಪ ಪ್ರದರ್ಶನದಲ್ಲಿರುವ ವಿವಿಧ ಜಾತಿಯ ಹೂ, ಹಣ್ಣು, ತರಕಾರಿಗಳನ್ನು ಹಾಗೂ ವಿವಿಧ ರೀತಿಯ ಕಲಾಕೃತಿಗಳನ್ನು ಹಾಗೂ ತೋಟಗಾರಿಕೆ, ಕೃಷಿ, ಪಶು ಇಲಾಖೆ ಹಾಗೂ ಅರಣ್ಯ ಇಲಾಖೆಯ ಸೇರಿದಂತೆ ವಿವಿಧ ಇಲಾಖೆಯ ವಸ್ತು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗದ ನಗರದ ಐತಿಹಾಸಿಕ ಗಾಳಿ ಗೋಪುರ ಮತ್ತು ಉಯ್ಯಾಲೆ ಕಂಬ, ಗಂಧದ ಗುಡಿ ಹಾಗೂ ಕಾಂತಾರ ಚಲನಚಿತ್ರದ ಕಲಾಕೃತಿಗಳು, ಆದರ್ಶ ಸಂತ ಸಿದ್ದೇಶ್ವರ ಸ್ವಾಮೀಜಿ, ತರಕಾರಿ ಮನೆ ಹಾಗೂ ಹಳ್ಳಿಯ ಸೊಗಡು, ಮತದಾನ ಜಾಗೃತಿ ಕುರಿತು ಕಲಾಕೃತಿಗಳು ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ಜನಮನ ಸೂರೆಗೊಳ್ಳುತ್ತಿವೆ.
ಎರಡು ವರ್ಷಗಳ ನಂತರ ಆಯೋಜಿಸಲಾಗಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕುಟಂಬ ಸಮೇತರಾಗಿ ಆಗಮಿಸಿ, ಹೂಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಣ್ಣು ಮತ್ತು ತರಕಾರಿ ತೆಂಗಿನ ಚಿಪ್ಪಿನ ಕೆತ್ತನೆಯ ಕಲಾಕೃತಿಗಳನ್ನು ವೀಕ್ಷಿಸಿ, ವಿವಿಧ ಬಗೆಯ ತಿಂಡಿತಿನಿಸುಗಳನ್ನು ಸವಿದು ಸಾರ್ವಜನಿಕರು ಆನಂದಿಸುತ್ತಿರುವುದು ಕಂಡುಬಂತು.
ಈ ಸಂದರ್ಭದಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಸುಜಯ್ ಪ್ರಕಾಶ್, ತೋಟಗಾರಿಕೆ ಉಪನಿರ್ದೇಶಕಿ ಜಿ.ಸವಿತಾ, ತೋಟಗಾರಿಕೆ ಸಹಾಯಕ ನಿರ್ದೇಶಕಿ ದೀಪಾ ಸೇರಿದಂತೆ ಮತ್ತಿತರರು ಇದ್ದರು.

ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಚಾಲನೆ

ಚಿತ್ರದುರ್ಗ ಫೆ. 08 :
ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಗ್ರಾಮದಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಭೂ ದಾಖಲೆಗಳ ಉಪನಿರ್ದೇಶಕ ಬಿ.ರಾಮಾಂಜನೇಯ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತಂತ್ರಜ್ಞಾನ ಆಧಾರಿತ ಡ್ರೋನ್ ಮೂಲಕ ಮರು ಭೂಮಾಪನಾ ಕಾರ್ಯವನ್ನು ಆರಂಭಿಸಿದ್ದು, ಇದರಲ್ಲಿ ಗ್ರಾಮೀಣ ವಸತಿ ಆಸ್ತಿ, ಕೃಷಿ ಭೂಮಿಯ ಹಕ್ಕುದಾಖಲೆ ಮತ್ತು ನಗರ ಆಸ್ತಿ ದಾಖಲೆಗಳನ್ನು ಸಿದ್ದಪಡಿಸುವ ಯೋಜನೆಯಾಗಿದೆ ಎಂದು ಹೇಳಿದರು.
ಡ್ರೋನ್ ಆಧಾರಿತ ಭೂಮಾಪನಾ ಕಾರ್ಯದಿಂದ ಬಹುದಿನಗಳಿಂದ ಬಾಕಿ ಉಳಿದಿರುವ ಭೂವ್ಯಾಜ್ಯಗಳಿಗೆ ಪರಿಹಾರ ಸಿಗಲಿದೆ. ಅಲ್ಲದೇ ಈಗ ಮರು ಭೂಮಾಪನವನ್ನು ಆಧುನಿತ ತಂತ್ರಜ್ಞಾನ ಅಳವಡಿಸಿ ದಾಖಲೆಗಳನ್ನು ತಯಾರಿಸುವುದರಿಂದ ಭವಿಷ್ಯದಲ್ಲಿ ಭೂವ್ಯಾಜ್ಯಗಳು ಕಡಿಮೆಯಾಗುತ್ತದೆ ಮತ್ತು ಎಲ್ಲಾ ಭೂಮಾಲೀಕರಿಗೆ ಸರ್ಕಾರದ ಯೋಜನೆಗಳು ತುರ್ತಾಗಿ ತಲುಪಲಿವೆ ಎಂದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ 188 ಗ್ರಾಮಗಳು, ಹಿರಿಯೂರು ತಾಲ್ಲೂಕಿನಲ್ಲಿ 157, ಹೊಸದುರ್ಗ ತಾಲ್ಲೂಕಿನಲ್ಲಿ 225, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 91, ಚಳ್ಳಕೆರೆ ತಾಲ್ಲೂಕಿನಲ್ಲಿ 191 ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ 201 ಗ್ರಾಮಗಳು ಸೇರಿದಂತೆ ಒಟ್ಟು 1053 ಗ್ರಾಮಗಳಲ್ಲಿ ಡ್ರೋನ್ ಆಧಾರಿತ ಮರು ಭೂಮಾಪನಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆ ತುಂಬಾ ಮಹತ್ತರವಾದ ಯೋಜನೆಯಾಗಿರುವುದರಿಂದ ಈ ಯೋಜನೆಗೆ ಎಲ್ಲಾ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಭೂ ದಾಖಲೆಗಳ ಉಪನಿರ್ದೇಶಕ ಬಿ.ರಾಮಾಂಜನೇಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ವಿಆರ್‍ಎಂ ಏಕನಾಥ್, ಅಧೀಕ್ಷಕ ಬಿ.ಎಸ್.ಬಾಬು, ಡ್ರೋನ್ ತಂಡ ಹಾಗೂ ಪಿಟ್ಲಾಲಿ ಗ್ರಾಮಸ್ಥರು ಇದ್ದರು.

ನ.16ರಿಂದ ರಜತ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶ, ಪ್ರಧಾನಿ ಉದ್ಘಾಟನೆ 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳ ಆಗಮನ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಜಾಗತಿಕ ಪ್ರತಿಷ್ಠೆಯ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್‌) ರಜತೋತ್ಸವ ವರ್ಷದ ಶೃಂಗಸಭೆಯು ನ.16, 17 ಮತ್ತು 18ರಂದು ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುಯಲ್‌ ರೂಪದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ತಲೆಮಾರಿಗೆ ತಂತ್ರಜ್ಞಾನ’ (Tech4NexGen) ಘೋಷವಾಕ್ಯದಡಿ ಸಮಾವೇಶವು ಈ ಬಾರಿ ಭೌತಿಕವಾಗಿ (ಆಫ್‌ಲೈನ್‌) ನಡೆಯಲಿದೆ. 20 ದೇಶಗಳ 350ಕ್ಕೂ ಹೆಚ್ಚು ಪರಿಣತರು ಭಾಗವಹಿಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದರ ಜತೆಗೆ 575 ಪ್ರದರ್ಶಕರು, ನಾವೀನ್ಯತೆಯ ಶಕ್ತಿಯನ್ನು ತೋರಿಸಲು ಬೃಹತ್‌ ಸಂಖ್ಯೆಯ ನವೋದ್ಯಮಗಳು ಮತ್ತು ಯೂನಿಕಾರ್ನ್ ಕಂಪನಿಗಳು ಇರಲಿವೆ. ಮುಂದೆ ಈ ಸಮಾವೇಶವನ್ನು ದಾವೋಸ್‌ ಶೃಂಗಸಭೆಯಂತೆ ನಡೆಸಲಾಗುವುದು ಎಂದರು.

ರಾಜ್ಯ ಸರಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್‌ಗಳ (ಎಸ್‌ಟಿಪಿಐ) ಸಹಯೋಗದೊಂದಿಗೆ ಬಿಟಿಎಸ್‌-25ನ್ನು ಏರ್ಪಡಿಸುತ್ತಿದೆ. ಇದು ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಸಮಾವೇಶವಾಗಿದ್ದು, ಎಲೆಕ್ಟ್ರಾನಿಕ್ಸ್, ಡೀಪ್‌ ಟೆಕ್‌, ಬಯೋಟೆಕ್ ಮತ್ತು ಸ್ವಾರ್ಟಪ್‌ಗಳ ಮೇಲೆ ಗಮನ ಕೇಂದ್ರೀಕರಿಸಲಾಗುವುದು. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಖಾತೆಯ ಸಹಾಯಕ ಸಚಿವ ಒಮರ್ ಬಿನ್‌ ಸುಲ್ತಾನ್‌ ಅಲ್‌ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್‌ ವ್ಯಾಟ್ಸ್, ಫಿನ್ಲೆಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್‌, ಭಾರತದ ಪ್ರಪ್ರಥಮ ಯೂನಿಕಾರ್ನ್ ಕಂಪನಿ ‘ಇಮ್ಮೊಬಿ’ಯ ಸಂಸ್ಥಾಪಕ ನವೀನ್‌ ತೆವಾರಿ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರೋನ್‌ (ವರ್ಚುಯಲ್‌) ಮತ್ತು ಅಮೆರಿಕದ ಕೈಂಡ್ರೆಲ್‌ ಕಂಪನಿಯ ಸಿಇಒ ಮಾರ್ಟಿನ್‌ ಶ್ರೋಟರ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರಜತ ಮಹೋತ್ಸವದ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ 25ಕ್ಕಿಂತ ಹೆಚ್ಚು ವರ್ಷದಿಂದ ಸಕ್ರಿಯವಾಗಿರುವ ಐಟಿಇ ವಲಯದ 35, ಎಸ್‌ಟಿಪಿಐ ವಲಯದ 10, ಬಿಟಿ ವಲಯದ 6 ಕಂಪನಿಗಳಿಗೆ ಮತ್ತು ಯೂನಿಕಾರ್ನ್ ದರ್ಜೆಯ 10 ನವೋದ್ಯಮಗಳಿಗೆ ಸನ್ಮಾನಿಸಲಾಗುವುದು. ಸಮಾವೇಶವು 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್‌ ಆರ್ಥಿಕತೆಯ ಸಾಧನೆಗೆ ಇಂಬು ನೀಡಲಿದೆ ಎಂದು ಅವರು ನುಡಿದರು.

ಐಒಟಿ ವಲಯದಲ್ಲಿ ಭಾರತದ ಒಟ್ಟು ಪಾಲಿನಲ್ಲಿ ರಾಜ್ಯವು ಶೇ.25ರಷ್ಟು ಪಾಲು ಹೊಂದಿದೆ. ಚಿಪ್‌ ವಿನ್ಯಾಸದಲ್ಲಿ ಜಗತ್ತಿಗೇ ಎರಡನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರಲಿದ್ದೇವೆ. ಎನ್‌ಇಪಿ ಅನುಷ್ಠಾನದಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದ್ದು, ಪ್ರತಿಭೆಯ ಶೋಧ ಮತ್ತು ಪೋಷಣೆ ಎರಡೂ ನಡೆಯುತ್ತಿದೆ. ಉದ್ಯಮರಂಗಕ್ಕೆ ಅತ್ಯುತ್ತಮ ಪ್ರತಿಭೆಗಳ ಅಗತ್ಯವಿರುವುದನ್ನು ಗಮನಿಸಿ, ಕ್ರಾಂತಿಕಾರಕ ಪರಿವರ್ತನೆಗಳನ್ನು ತರಲಾಗಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಇದೇ 11ರಂದು ಪ್ರಧಾನಿ ನರೇಂದ್ರ ಮೋದಿ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನ ನಾಗಾಲೋಟಕ್ಕೆ ತಕ್ಕಂತೆ ಇದಕ್ಕೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಇದು ನಮ್ಮ ರಾಜಧಾನಿಯ ಯಶೋಗಾಥೆಯನ್ನು ಸಂಕೇತಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಐಟಿಇ ಮತ್ತು ಡೀಪ್‌ ಟೆಕ್‌, ಬಯೋಟೆಕ್‌, ಸ್ಟಾರ್ಟಪ್‌ ಟ್ರಾಕ್‌ಗಳಲ್ಲಿ ಗೋಷ್ಠಿಗಳು ನಡೆಯಲಿವೆ. ಇವುಗಳಲ್ಲಿ ಕೃತಕ ಬುದ್ಧಿಮತ್ತೆ, ಹೈಬ್ರಿಡ್‌ ಕ್ಲೌಡ್‌, 5ಜಿ, ಎಡ್ಜ್‌ ಕಂಪ್ಯೂಟಿಂಗ್‌, ಸ್ಪೇಸ್‌ಟೆಕ್‌, ಜಿನೋಮಿಕ್ಸ್‌, ಬಯೋಫಾರ್ಮ, ಜೀನ್‌ ಎಡಿಟಿಂಗ್ ಮತ್ತು ಕೃಷಿ, ಜಿನೋಮಿಕ್‌ ಔಷಧಿ, ಜೈವಿಕ ಇಂಧನ, ಜೀನ್‌ ಥೆರಪಿ, ರೋಬೋಟಿಕ್ಸ್, ಫಿನ್‌ಟೆಕ್‌, ಸಾಮಾಜಿಕ ಉದ್ಯಮಶೀಲತೆ ಮುಂತಾದವುಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದರು.

ಗ್ಲೋಬಲ್‌ ಇನ್ನೋವೇಶನ್‌ ಅಲೈಯನ್ಸ್‌ ಟ್ಯ್ಯಾಕ್‌ನಲ್ಲಿ ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್‌, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಯುನೈಟೆಡ್‌ ಕಿಂಗ್‌ಡಂ, ಸ್ವೀಡನ್, ನೆದರ್‍ಲೆಂಡ್ಸ್, ಇಸ್ರೇಲ್‌, ಜರ್ಮನಿ, ಸ್ವಿಜರ್ಲೆಂಡ್‌f, ಜಪಾನ್‌, ಯೂರೋಪಿಯನ್‌ ಒಕ್ಕೂಟ ಸೇರಿದಂತೆ ಮುಂತಾದ ದೇಶಗಳು ಭಾಗವಹಿಸಲಿವೆ ಎಂದು ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌, ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಮುಖ್ಯಸ್ಥ ಬಿ ವಿ ನಾಯ್ಡು, ಜಗದೀಶ್‌ ಪಾಟಣಕರ್, ಜೈವಿಕ ತಂತ್ರಜ್ಞಾನ ಕ್ಷೇತ್ರದ ಉಸ್ತುವಾರಿ ವಿಜಯ್‌ ಚಂದ್ರು ಉಪಸ್ಥಿತರಿದ್ದರು.