ಚಳ್ಳಕೆರೆ ಅ.27.ನಗರದ ವಾಲ್ಮೀಕಿ ವೃತ್ತದ ಬಳಿ ವಾಲ್ಮೀಕಿ ಸಮುದಾಯದ ವತಿಯಿಂದ ಶನಿವಾರ ನಡೆಯಲಿರುವ ವಾಲ್ಮೀಕಿ ಜಯಂತಿ ಪ್ರಯುಕ್ತ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸಮಾಜದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಸಮುದಾಯದ ಬಂಧುಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಪಕ್ಷ ಬೇಧ ಮರೆತು ಸಮುದಾಯದ ಎಲ್ಲ ಪಕ್ಷದ ಮುಖಂಡರು ನಗರಸಭೆ ಸದಸ್ಯರು ತಾಲೂಕಿನ ಎಲ್ಲ ಗ್ರಾಮ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಿದರು ಸಮಾಜದ ರಾಚೇನಹಳ್ಳಿ ಮಠದ ಪ್ರಸನ್ಶಾನಂದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುವರು ಎಂದು ಮಾಹಿತಿ ನೀಡಿದರು.ಬೈಕ್ ರಾಲಿಯಲ್ಲಿ ವಾಲ್ಮೀಕಿ ಸಮುದಾಯದ ಅಪಾರ ಸಂಖ್ಯೆಯ ಯುವಕ ಯು

ಬೈಕ್ ರ್ಯಾಲಿಯು ನಗರದ ವಾಲ್ಮೀಕಿ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತ,ನೆಹರು ವೃತ್ತ, ಬಳ್ಳಾರಿ ರಸ್ತೆ, ಚಿತ್ರಯ್ಯನ ಹಟ್ಟಿ, ಸೂಜಿಮಲ್ಲೇಶ್ವರ ನಗರ ವೀರಭದ್ರಸ್ವಾಮಿ ತೇರು ಬೀದಿ,ಕಾಟಪ್ಪನ ಹಟ್ಟಿ ಹಳೇಟೌನ್ ಪಾವಗಡ ರಸ್ತೆ ಬೆಂಗಳೂರು ರಸ್ತೆ ಗಾಂಧಿ ನಗರ, ಸೂಮಗುದ್ದು ರಸ್ತೆಯ ಮೂಲಕ ವಾಲ್ಮೀಕಿ ವೃತ್ತ ತಲುಪಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ನಗರ ಸಭೆ ಸದಸ್ಯರಾದ ರಮೇಶ್ ಗೌಡ ಮಲ್ಲಿಕಾರ್ಜುನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿಪಿ ಪ್ರಕಾಶ್ ಮೂರ್ತಿ ಪತಕರ್ತರ ಸಂಘದ ಅಧ್ಯಕ್ಷ ಟಿ ಜೆ ತಿಪ್ಪೇಸ್ವಾಮಿ ಚೇತನ್ ಕುಮಾರ್ ಸಿಟಿ ವೀರೇಶ್ ನಾಗಭೂಷಣ ಸುರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು
0 Comments