ಚಿತ್ರದುರ್ಗ ಜನಧ್ವನಿ ವಾರ್ತೆ ಅ.17 ವಾಣಿ ವಿಲಾಸ ಸಾಗರದ ನೀರು ವೇದಾವತಿ ನದಿಗೆ ಹರಿಯುವ ಸಂಭವ ಇರುವದರಿಂದ ಹೂಳು ತುಂಬಿದ ಕಾಲುವೆಯನ್ನು ದುರಸ್ತಿ ಪಡಿಸುವಂತೆ ಟಿಎನ್ ಕೋಟೆ ಭಗತ್ ಸಿಂಗ್ ಯುವಕ ಸಂಘದಿಂದ ಮನವಿ ಸಲ್ಲಿಸಿದರು. ಚಿತ್ರದುರ್ಗ ನಗರದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ವಾಣಿವಿಲಾಸ ಸಾಗರದ ವೇದಾವತಿ ನದಿಯ ನಾರಾಯಣಪುರ ಬಲದಂಡೆಯ ಫೀಡರ್ ಚಾನಲ್ ಶಿಥಿಲಗೊಂಡಿದ್ದು ನೀರು ಹರಿಸಿದರೆ ಸರಾಗವಾಗಿ ಹರಿಯುವುದಿಲ್ಲ ಹಾಗಾಗಿ ನೀರು ಹರಿಸುವ ಮುನ್ನ ದುರಸ್ಥಿಗೊಳಿಸ ಬೇಕು.
ನಾರಾಯಣಪುರ ಬಲದಂಡೆಯ ಕಾಲುವೆಯು ಟಿ.ಎನ್ .ಕೋಟೆ ಗೋಸಿಕೆರೆ ಚೌಳೂರು ಪರಶುರಾಂಪುರ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ಕಾಲುವೆಯಾಗಿದ್ದು ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಎಲ್ಲ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿತ್ತು ಹಾಗೂ ಹಳ್ಳಕೊಳ್ಳದ ನೀರು ಕಾಲುವೆಯ ಮುಖಾಂತರ ಹರಿದಿದ್ದರಿಂದ ಕಾಲುವೆಗೆ ಕೂಡ ಸಹ ಸಾಕಷ್ಟು ಪ್ರಮಾಣದಲ್ಲಿ ಹೂಳು ಸೇರಿತ್ತು ಆದರೆ ಈಗ ಪ್ರಸ್ತುತ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕೆರೆಯಲ್ಲಿ ನೀರು ಬರಿದಾಗುತ್ತಾ ಬಂದಿದೆ. ಈ ವರ್ಷ ಬೇಸಿಗೆ ಆರಂಭವಾಗುವ ಮುನ್ನವೇ ಟಿ ಎನ್ ಕೋಟೆ ಗೋಸೀಕೆರೆ ಚೌಳೂರು ಪರಶುರಾಂಪುರ ಕೆರೆಗಳಿಗೆ ನೀರು ಸರಾಗವಾಗಿ ಹರಿಯುತ್ತದೆ. ಇದರಿಂದ ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ ಕೂಡಲೇ ಪೀಡರ್ ಚಾನಲ್ ದುರಸ್ಥಿ ಮಾಡಿಸುವಂತೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಮಾತನಾಡಿ ತುರ್ತಾಗಿ ಕಾಲುವೆ ಪರಿಶೀಲನೆಗೆ ಬಂದು ಹೂಳೆತ್ತುವ ಕಾರ್ಯವನ್ನು ಕೈಗೊಳ್ಳುತ್ತೇವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಟಿ ಎನ್ ಕೋಟೆಯ ಉಮಾ ಮಹೇಶ್ವರಪ್ಪ ಭಗತ್ ಸಿಂಗ್ ಯುವ ಪಡೆಯ ಅಧ್ಯಕ್ಷರಾದ ರಂಗಸ್ವಾಮಿ ಮಹಾಂತೇಶ್ .ಪ್ರಕಾಶ್ ಇತರರಿದ್ದರು.
ವಾಣಿವಿಲಾಸ ಸಾಗರದ ವೇದಾವತಿ ನದಿಯ ನಾರಾಯಣಪುರ ಬಲದಂಡೆಯ ಫೀಡರ್ ಚಾನಲ್ ಶಿಥಿಲಗೊಂಡಿದ್ದು ನೀರು ಹರಿಸಿದರೆ ಸರಾಗವಾಗಿ ಹರಿಯುವುದಿಲ್ಲ ಹಾಗಾಗಿ ನೀರು ಹರಿಸುವ ಮುನ್ನ ಪೀಡರ್ ಚಾನಲ್ ಹೂಳೆತ್ತುವಂತೆ ಗ್ರಾಮಸ್ಥರ ಮನವಿ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments