ವಾಣಿವಿಲಾಸಜಲಾಶಯಕ್ಕೆ ಬಾಗಿನಸಮರ್ಪಣೆ ಮಾಡಿದ ಮೈಸೂರಿನ ಅರಸರಾದ ಯದುವೀರಕೃಷ್ಣದತ್ತಒಡೆಯರ್

by | 09/01/23 | ಸುದ್ದಿ

ಹಿರಿಯೂರು :
ರಾಜ್ಯದಲ್ಲಿ ಕೃಷಿ ಹಾಗೂ ಸಂಸ್ಕೃತಿ ಮಹಾಪೋಷಕರಾದ ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಮೈಸೂರಿನ ರಾಜವಂಶದ ಕುಡಿ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಗುರುವಾರದಂದು ಬಾಗಿನ ಅರ್ಪಿಸಿದರು.
ವಾಣಿವಿಲಾಸ ಸಾಗರ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮೈಸೂರು ರಾಜವಂಶದವರು ಬಾಗಿನ ಅರ್ಪಿಸಿದ ಹೆಗ್ಗೆಳಿಕೆಗೆ ಯದುವೀರ ಒಡೆಯರ್ ಪಾತ್ರರಾದರು ಇದಕ್ಕೂ ಮುನ್ನ ಹಿರಿಯೂರಿಗೆ ಆಗಮಿಸಿದ ಯದುವೀರ ಅವರನ್ನು ಶಾಸಕಿ ಪೂರ್ಣಿಮಾಶ್ರೀನಿವಾಸ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಸ್ವಾಗತಿಸಿದರು.
ಆರಂಭದಲ್ಲಿ ನಗರದ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಯದುವೀರ ಒಡೆಯರ್ ರವರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು, ಬಳಿಕ ಮಾರಿಕಣಿವೆ ಶಕ್ತಿದೇವತೆ, ಜಲಾಶಯದ ರಕ್ಷಕಿ ಕಣಿವೆಮಾರಮ್ಮದೇವಿ ದರ್ಶನ ಪಡೆದರರಲ್ಲದೆ, ತಾಲ್ಲೂಕಿನಲ್ಲಿ ಮಳೆ-ಬೆಳೆ ಸಮೃದ್ಧಿಯಾಗುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಯದುವೀರ ಒಡೆಯರ್ ಅವರನ್ನು ವಾದ್ಯಮೇಳದೊಂದಿಗೆ ಜಲಾಶಯದ ಬಳಿಗೆ ಸಾರ್ವಜನಿಕರು, ರೈತರು ಹಾಗೂ ಗ್ರಾಮಸ್ಥರು ಸ್ವಾಗತಿಸಿದರು. ಜಲಾಶಯದ ನೀರನ್ನು ಸ್ಪರ್ಶಿಸಿ, ಸಂಭ್ರಮಿಸಿ, ಗಂಗಾಪೂಜೆ ನೆರವೇರಿಸಿದ ನಂತರ ಬಾಗಿನ ಅರ್ಪಿಸಿ ತಾಲ್ಲೂಕಿನ ಸಮೃದ್ಧಿಗೆ ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿಸಚಿವ ಡಿ.ಸುಧಾಕರ್, ರೈತಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರೈತ ಮುಖಂಡರುಗಳಾದ ಸಿದ್ದರಾಮಣ್ಣ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್, ರಾಜ್ಯಗೊಲ್ಲರಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಗೀತಾಗಂಗಾಧರ್, ಉಪಾಧ್ಯಕ್ಷ ಗುಂಡೇಶ್, ಸದಸ್ಯ ಸಣ್ಣಪ್ಪ, ಈ.ಮಂಜುನಾಥ್, ಬ್ಲಾಕ್ ಅಧ್ಯಕ್ಷ ಖಾದಿ ರಮೇಶ್, ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ್, ತಾಪಂ ಮಾಜಿ ಅಧ್ಯಕ್ಷ ಡಾ.ಜೆ.ಸುಜಾತಾ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ, ಜಿ.ದಾದಾಪೀರ್,ರಾಜ್ಯಪೌರಸೇವಾ ನಿವೃತ್ತ ನೌಕರ ಸಂಘದ ಎಲ್.ನಾರಾಯಣಾಚಾರ್ ಇತರರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *