ಜನ ಧ್ವನಿ ವಾರ್ತೆ ಚಳ್ಳಕೆರೆ ನ.20 ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಹಾಗೂ ರೈತರಿಗೆ ವರದಾನ ಇದನ್ನೇ ಬಂಡವಾಳ ಮಾಡಿಕೊಂಡು ಕಾಮಗಾರಿ ಮಾಡದೆ ಹಣ ದೋಚಿರುವುದು ಬೆಳಕಿಗೆ ಬಂದಿದೆ. ಹೌದು ಚಳ್ಳಕೆರೆ ತಾಲುಕಿನ ದೇವರಮರಿಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ2020-21 ನೇ ಸಾಲಿನಲ್ಲಿ ಎಸ್ .ನಂಜಮ್ಮ ಇವರ ಜಮೀನಿನಲ್ಲಿ 35 ಸಾವಿರ ರೂ ವೆಚ್ಚದ ಕೃಷಿ ಹೊಂಡ ಕಾಮಗಾರಿ ನಿರ್ಮಿಸದೆ ಬಿಲ್ ಪಡೆದಿರುವುದು ಬಯಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಆರ್ ಟಿ ಐ ಕಾರ್ಯಕರ್ತ ಚಂದ್ರಣ್ಣ ಮಾಹಿತಿ ಕೋರಿ ಗ್ರಾಪಂ. ತಾಪಂ ಜಿಪಂ ಹಾಗೂ ಜಿಲ್ಲಾಧಿಕಾರಿಗಲಕ ಕಚೇರಿಗಳಿಗೆ ಅರ್ಜಿ ನೀಡಿದರೂ ಮಾಹಿತಿ ನೀಡದೆ ಇರುವುದು ಈಗ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಕೆಯಾದ ಬೆನ್ನಲ್ಲೇ ಭಾನುವಾರ ತಡ ರಾತ್ರಿ ಜೆಸಿಬಿ ಯಂತ್ರ ರೈತರ ಜಮೀನಿನಲ್ಲಿ ಕೃಷಿಹೊಂಡ ಕಾಮಗಾರಿ ನಿರ್ಮಿಸಲು ಮುಂದಾಗಿದ್ದಾರೆ. ರೈತ ಮಹಿಳೆ ನಂಜಮ್ಮ ಇವರ ಜಮೀನಿನಲ್ಲಿ ಗ್ರಾಪಂ ಅಧ್ಯಕ್ಷ ಗುತ್ತಿಗೆದಾರನೊಂದಿಗೆ ಸೇರಿ ಕಾಮಗಾರಿ ಮಾಡದೆ ಬಿಲ್ ಪಡೆದಿರುವುದು ಬಯಲಾಗಿದೆ. ನರೇಗಾ ಯೋಜನೆಯಲ್ಲಿನ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ ಎಂಬ ಕಾನೂನುವಿದ್ದರೂ ಸಹ ಕೃಷಿಹೊಂಡ ನಿರ್ಮಿಸದೇ ಬಿಲ್ ಪಡೆದಿರುವ ಬಗ್ಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಬೆನ್ನಲ್ಲೇ ರಾತ್ರೋ ರಾತ್ರಿ ಜೆ ಸಿ ಬಿ ಯಂತ್ರದಿಂದ ಕೃಷಿಹೊಂಡ ನಿರ್ಮಿಸುತ್ತಿರುವುದು ಕಾನೂನು ಉಲ್ಲಂಘನೆಯಾಗಿದ್ದು ಕಾಮಗಾರಿಹೆ ಬಳಕೆ ಮಾಡಿದ ಜೆಸಿಬಿ ಯಂತ್ರ ವಶಕ್ಕೆ ಪಡೆದು ಕಾಮಗಾರಿ ಮಾಡದೆ ಬಿಲ್ ಪಡೆದಿರುವು ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ಆರ್ ಟಿ ಐ ಕಾರ್ಯಕರ್ತ ಚಂದ್ರಣ್ಣ ಒತ್ತಾಯಿಸಿದ್ದಾರೆ. ನರೇಗಾ ಯೋಜನೆಯಡಿ ದೇವರಮರಿಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆಸಲಾಗುತ್ತಿರುವ ಕೃಷಿ ಹೊಂಡ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಆದ್ದರಿಂದ ಅವುಗಳ ತನಿಖೆ ನಡೆಸಿ ಎಂದು ಆರ್ ಟಿ ಐ ಕಾರ್ಯಕರ್ತ ಚಂದ್ರಣ್ಣ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ಗ್ರಾಮಪಂಚಾಯಿತಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಯಡಿ ನಡೆಸಲಾಗುತ್ತಿರುವ ಕಷಿ ಹೊಂಡಗಳು ಯೋಜನೆಯ ಉದ್ದೇಶ ಮರೆತು ಮಾನವ ಶಕ್ತಿಯ ಯಂತ್ರಗಳಿಂದ ಪ್ರಬಾವಿಗಳು ಪಲಾನುಭವಿಗಳ ಬಳಿ ಗುತ್ತಿಗೆಯ ರೂಪದಲ್ಲಿ ಪಡೆದು ಯಂತ್ರಗಳಿಂದ ಕಾಮಗಾರಿ ನಡೆಸಿ ಹಣ ದೋಚುವ ಉನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ನಿಖರವಾಗಿ ತನಿಖೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತವಾದ ಕ್ರಮಕೈಗೊಳ್ಳುವಂತೆ ಆರ್ ಟಿ ಐ ಕಾರ್ಯಕರ್ತ ಎಂ.ಟಿ.ಚಂದ್ರಣ್ಣ ಹಾಗೂ ಶಿವಕುಮಾರ್ ಒತ್ತಾಯಿಸಿದ್ದಾರೆ
0 Comments