ಚಳ್ಳಕೆರೆ ಜನಧ್ವನಿ ವಾರ್ತೆ ನ.3. ರತೀಯ ರೈಲ್ವೆ ನಮ್ಮ ದೇಶದ ಜೀವಾಳವಾಗಿದ್ದು ಖಾಸಗಿಕರಣ ವಿಶ್ವ ದರ್ಜೆಯ ಅನುಭವ ನೀಡಲಿದೆ ಜನರಿಗೆ ಅನೇಕ ಅನುಕೂಲಗಳು ದೊರೆಯಲಿವೆ ಹೆಚ್ಚಿನ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಹುಸಿ ಭರವಸೆ ನೀಡಿ ಕೇಂದ್ರದ ಬಿಜೆಪಿ ಸರ್ಕಾರವು ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಸಿಐಟಿಯು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಟಿ ನಿಂಗಣ್ಣ ದೇಶದಲ್ಲಿ 7300 ರೈಲ್ವೆ ನಿಲ್ದಾಣಗಳಿದ್ಧು 13,452 ಪ್ರಯಾಣಿಕರ ರೈಲುಗಳು ಸಂಚರಿಸುತ್ತಿದ್ದು 2.40ಕೋಟಿ ಜನ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುತ್ತಾರೆ ಅಗತ್ಯ ವಸ್ತುಗಳು ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು ಸೇರಿದಂತೆ 1.42 ಶತಕೋಟಿ ಮೆಟ್ರಿಕ್ ಟನ್ ಸರಕುಗಳನ್ನು ಪ್ರತಿದಿನ ಸಾಗಣೆ ಮಾಡುವ ರೈಲ್ವೆ ಇಲಾಖೆಯನ್ನು ಖಾಸಗಿಕರಣ ಗೊಳಿಸುವುದರಿಂದ ಕೂಲಿ ಕಾರ್ಮಿಕರಿಗೆ ಆಟೋ ಚಾಲಕರಿಗೆ ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಆದಾಯವಿಲ್ಲದಂತೆ ಆಗುತ್ತದೆ ಈ ನೀತಿಯು ಸಾಮಾನ್ಯ ಜನ ಹಾಗೂ ರೈಲ್ವೆ ಸಿಬ್ಬಂದಿಗೆ ಧ್ವಂಸಕಾರಿಯಾಗಿದೆ ಮೋದಿ ಸರ್ಕಾರ ಕಾರ್ಪೊರೇಟ್ ಬಂಡವಾಳ ಪರ ನವ ಉದಾರೀಕರಣ ನೀತಿಯನ್ನು ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ಜನತೆಯು ಸಂಕಷ್ಟಕ್ಕೆ ಒಳಗಾಗುತ್ತದೆ ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಬೆನ್ನೆಲುಬಾದ ಭಾರತೀಯ ರೈಲ್ವೆಯನ್ನು ಖಾಸಗಿಕರಣ ಮಾಡುವುದನ್ನು ತಕ್ಷಣ ಹಿಂಪಡೆದು ದೇಶದ ಜನರ ಬೃಹತ್ ಸಾರಿಗೆಯಾದ ರೈಲ್ವೆಯನ್ನು ಸರ್ಕಾರದ ಅಧೀನದಲ್ಲಿ ನಡೆಯಬೇಕು ರೈಲ್ವೆಗೆ ಸಂಬಂಧಿಸಿದೆ ಎಲ್ಲಾ ವಿಭಾಗಗಳ ಖಾಸಗಿಕರಣ ನಿಲ್ಲಬೇಕು ರೈಲ್ವೆಯಲ್ಲಿ ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು ಖಾಲಿ ಇರುವ ಮೂರು ಲಕ್ಷಕ್ಕೂ ಹೆಚ್ಚು ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಬೇಕು ರೈಲ್ವೆ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ರೂಪಿಸಬೇಕು ಜನತೆಯ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ರೈಲ್ವೆ ಯನ್ನು ವಿವಿಧ ಪ್ರದೇಶಗಳಿಗೆ ವಿಸ್ತರಿಸಬೇಕು ಜನತೆಯ ರೈಲ್ವೆ ಪ್ರಯಾಣಕ್ಕೆ ಉತ್ತೇಜಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಟಿ ತಿಪ್ಪೇಸ್ವಾಮಿ ಖಜಾಂಚಿ ನಾಗರಾಜ್ ಎಸ್ ರಾಜಣ್ಣ ಶಿವಣ್ಣ ದುರ್ಗಾವರ ಬೋರಯ್ಯ ಕೆ ಪ್ರಭು ಸತೀಶ್ ವೆಂಕಟೇಶ್ ಬೋರಯ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 Comments