ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

by | 18/11/23 | ಪ್ರತಿಭಟನೆ

ಚಳ್ಳಕೆರೆನ 18 ಬೆಳೆ ವಿಮೆ .ಬೆಳೆ ಪರಿಹಾರ.ಗೋಶಾಲೆ. ಅಸರ್ಮಕ ವಿದ್ಯುತ್ ಸರಬರಾಜು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ್ಯ ಸರ್ಕಾರ ರೈತರ ಮತ್ತು ರೈತ ಕಾರ್ಮಿಕರ ಗಾಯದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಿ ಕರ್ನಾಟಕದಲ್ಲಿ ಈ ವರ್ಷ ಬರಗಾಲ ಆವರಿಸಿರುವುದರಿಂದ ಬೆಳೆ ನಷ್ಟ ಪರಿಹಾರ ಮತ್ತು ಬೆಳೆ ವಿಮೆ ಎಲ್ಲ ರೈತರ ಸಂಪೂರ್ಣ ಸಾಲಮನ್ನಾ ಜಾನುವಾರುಗಳಿಗೆ ಮೇವು ನೀರು ಮತ್ತು ನೆರಳು ತಕ್ಷಣ ಒದಗಿಸುವಂತೆ ಒತ್ತಾಯಿಸಿದರು.


ರಾಜ್ಯಹಿರಿಯ ಉಪಾಧ್ಯಕ್ಷ ರೆಡ್ಡಿ ಹಳ್ಳಿ ವೀರಣ್ಣ ಮಾತನಾಡಿ ಚಳ್ಳಕೆರೆ ತಾಲೂಕು ಸುಮಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ರೈತರ ಹಾಗೂ ಕಾರ್ಮಿಕರ ಮೇಲೆ ಒಂದರ ಮೇಲೊಂದರಂತೆ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿರುವುದು ದುರದೃಷ್ಟಕರ ಮತ್ತು ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿಕೊಂಡು ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರ ಈಗ ಮಾತು ಬದಲಾಯಿಸಿರುವುದು ಖಂಡನೀಯ ಕೃಷಿ ಈ ದೇಶದ ಸಂಪತ್ತು ಕೈಗಾರಿಕೆಗೆ ಜೀವನಾಡಿ ಆದ್ದರಿಂದ ಇಂತಹ ಕೆಟ್ಟ ರೈತ ವಿರೋಧಿ ಕಾನೂನನ್ನು ತಕ್ಷಣ ವಾಪಸ್ ಪಡೆದು ರೈತರು ಕೃಷಿಗಾಗಿ ಮಾಡಿರುವ ಎಲ್ಲಾ ಸಾಲಗಳನ್ನು ಸಂಪೂರ್ಣ ಮನ್ನ ಮಾಡಬೇಕು ಕೃಷಿ ಮಾಡುವ ರೈತರಿಗೆ ಭೂಮಿ ನೀರು ವಿದ್ಯುತ್ ರೈತರ ಶ್ರಮದಿಂದ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುವುದರಿಂದ ರೈತರು ನೀರಾವರಿಯಲ್ಲಿ ಇಟ್ಟಿರುವಂತಹ ಬೆಳೆಗಳು ರೈತರ ಕೈಸೇರುವಂತೆ ಪಂಪ್ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ತನ್ನು ಎಂಟು ಗಂಟೆಗಳ ಕಾಲ ನೀಡಬೇಕು ತಾಲೂಕಿನಲ್ಲಿ ಈ ವರ್ಷ ಬಿತ್ತಿದ ಎಲ್ಲಾ ಬೆಳೆಗಳು ಮಳೆ ಕೈಕೊಟ್ಟಿದ್ದರಿಂದ ಸಂಪೂರ್ಣ ನಾಶವಾಗಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಬಂದು ಬೆಳೆ ನಷ್ಟ ಪರಿಹಾರ ಮತ್ತು ಬೆಳವಿಮೆ ಜಾನುವಾರುಗಳಿಗೆ ಮೇವು ನೀರು ಒದಗಿಸಬೇಕು ಮತ್ತು ಬರಗಾಲದ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಬಡಜನರ ಕೈಗೆ ಕೆಲಸ ಕೊಟ್ಟು ರೈತರು ಮತ್ತು ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು ನಮ್ಮ ಎಲ್ಲಾ ಹಕ್ಕು ಒತ್ತಾಯಗಳನ್ನು ಈ ತಿಂಗಳ ಕೊನೆಯ ದಿನಾಂಕದೊಳಗೆ ಈಡೇರಿಸಿದೆ ಇದ್ದಲ್ಲಿ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಜಣ್ಣ ಬಾಲಣ್ಣ ಶಿವಣ್ಣ ರತ್ನಮ್ಮ ಜಯಮ್ಮ ಸುರೇಶ್ ಆರ್ ಮನೋಹರ ರಂಗಸ್ವಾಮಿ ಪುಟ್ಟಣ್ಣ ಕೃಷ್ಣಮೂರ್ತಿ ತಿಪ್ಪೇಸ್ವಾಮಿ ಚಂದ್ರಶೇಖರಪ್ಪ ಗೌಡ್ರು ಚಿಕ್ಕಣ್ಣ ಪಾಲಮ್ಮ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು‌.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *