ಚಳ್ಳಕೆರೆ ನ.9: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಸಕ್ರಮ ಯೋಜನೆಗೆ ಒಳಪಡದ ನಿವೇಶನ ಹಾಗೂ ಮನೆಗಳನ್ನು ಬೇರೆಯವರ ಖಾತೆಗೆ ವರ್ಗಾವಣೆಯಾಗದಂತೆ ಪಿಡಿಒಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗಮನಹರಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ತಾಕೀತು ಮಾಡಿದರು.
ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮೀರಸಾಬಿಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಆಲಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಕೆಲವರು ತಮ್ಮ ಪ್ರಭಾವದಿಂದ ಬೇರೊಬ್ಬರ ಜಮೀನು ಹಾಗೂ ನಿವೇಶನಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ಬಡವರ ಪಾಲಿಗೆ ಇಲ್ಲದಂತೆ ಮಾಡಿರುತ್ತಾರೆ ಅಂತಹ ಪ್ರಕರಣಗಳನ್ನು ಪಿಡಿಒ ಹಂತದ ಅಧಿಕಾರಿಗಳು ಪತ್ತೆ ಹಚ್ಚಿ ಅರ್ಹರಿಗೆ ವಾಪಸ್ ಕೊಡಿಸುವ ಕೆಲಸ ಮಾಡಬೇಕು .

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಹಾನ್ ಪಾಷಾ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಹರಿಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೀತಾ ನಾಗರಾಜ್, ಉಪಾಧ್ಯಕ್ಷರಾದ ಗೋವಿಂದಪ್ಪ, ಸದಸ್ಯರುಗಳು, ಮುಖಂಡರಾದ ರಂಗಸ್ವಾಮಿ, ಪ್ರಕಾಶ್, ಸುದರ್ಶನರೆಡ್ಡಿ, ಕರಿಕೆರೆ ರಾಜಪ್ಪ, ಮೂರ್ತಿ, ಓಬಳೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


0 Comments