ಚಳ್ಳಕೆರೆ.
ರೈತರ ಮಕ್ಕಳು ಎಸ್ಸಿ. ಎಸ್ಟಿ , ಒಬಿಸಿ ಸೇರಿದಂತೆ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿ ವೇತನ ಪಡೆದರೂ ಸಹ ರೈತ ವಿದ್ಯಾಸಿರಿ ಯೋಜನಡೆಯಲ್ಲಿ ಪಡೆಯುವ ಅವಕಾಶವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹಾಗೂ ತಾಪಂ ಆಡಳಿತ ಅಧಿಕಾರಿ ರಮೇಶ್‌ಕುಮಾರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡುವಾಗ ಕಟ್ಟಡ ಕಾರ್ಮಿಕರಿಗೆ ಮಾತ್ರ ಕಾರ್ಮಿಕ ಇಲಾಖೆಗೆ ಸೀಮಿತವಾಗದೆ ನರೇಗಾ ಯೋಜನೆ ಸೇರಿದಂತೆ ವಿವಿಧ ಕಡೆ ಕೆಲಸ ಮಾಡವ ಕಾರ್ಮಿಕರ ಬಗ್ಗೆ ಮಾಹಿತಿ ಪಡೆಯ ಬೇಕು ನರೇಗಾ ಯೋಜನೆಯಲ್ಲಿ ಕೂಲಿ ಕೆಸಲ ಮಾಡುವ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುವAತೆ ತಿಳಿಸಿದರು.
ಆಡಳಿತ ಅಧಿಕಾರಿ ರಮೇಶ್ ಕುಮಾರ್ ಮಾತನಾಡಿ ರೈತರ ಬೆಳೆ ವಿಮೆ ಪಾವತಿಸಿರುವ ಬಗ್ಗೆ ಹಾಗೂ ಬೆಳೆ ನಷ್ಟ ಪರಿಹಾರ ಎಷ್ಟು ರೈತರಿಗೆ ಬಂದಿದೆ ಇನ್ನು ಎಷ್ಟು ಜನ ರೈತರಿಗೆ ಬರಬೇಕಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕುಡಿಯುವ ನೀರಿನ ಶುದ್ದ ಘಟಕರಗಳು ಎಲ್ಲಿ ಕೆಟ್ಟಿವೆಯೋ ಅವುಗಳ ದುರಸ್ಥಿ ಪಡಿಸ ಬೇಕು ಹಾಗೂ ಜಿಪಂ ಸಿಇಒ ಈಗಾಗಲೆ ವಿದ್ಯಾರ್ಥಿನಿಲಯ ಹಾಗೂ ಆಸ್ಪತ್ರೆಗಳಿಗೆ ಭೇಟಿ ಸ್ವಚ್ಚತೆಇಲ್ಲದೆ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ ಆದರಿಂದ ವಸತಿ ನಿಯಲಗಳಲ್ಲಿ ಊಟ, ವಸತಿ, ಸ್ವಚ್ಚತೆ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದರು.
ತಾಪಂ ಇಒ ಹೊನ್ನಯ್ಯ ಮಾತನಾಡಿ ಈಗಾಗಲೆ ಅಧಿಕಾರಿಗಳ ಸಭೆ ಮಾಡಿ ತಂಡ ರಚನೆ ಮಾಡಿದ್ದು ವಸತಿ ನಿಯಲಗಳಗೆ ಭೇಟಿ ನೀಡಿ ಆಹಾರದ ಗುಣ ಮಟ್ಟ ಸ್ವಚ್ಚತೆ ಬಗ್ಗೆ ಊಟ ಸವಿಯುವ ಮೂಲಕ ರುಚಿ ನೋಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶ ವಿರುಪಾಕ್ಷಪ್ಪ, ಕುಡಿಯುವ ನೀರು ಸಬರರಾಜು ಎಇಇ ದಯಾನಂದ್, ಬಿಸಿಯೂಟ ಸಹಾಯಕ ನಿದೇಶಕ ತಿಪ್ಪೇಸ್ವಾಮಿ ,ಎಇಇ ಕಾವ್ಯ, ನರೇಗಾ ಸಹಾಯಕ ನಿದೇರ್ಶಕ ಸಂತೋಷ್ ಹಾಗೂ ವಿವಿಧ ಇಲಾಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರೈತರ ಮಕ್ಕಳು ಎಸ್ಸಿ. ಎಸ್ಟಿ , ಒಬಿಸಿ ಸೇರಿದಂತೆ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿ ವೇತನ ಪಡೆದರೂ ಸಹ ರೈತ ವಿದ್ಯಾಸಿರಿ ಯೋಜನಡೆಯಲ್ಲಿ ಪಡೆಯುವ ಅವಕಾಶವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹಾಗೂ ತಾಪಂ ಆಡಳಿತ ಅಧಿಕಾರಿ ರಮೇಶ್‌ಕುಮಾರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments