ಚಳ್ಳಕೆರೆ ಜನಧ್ವನಿ ವಾರ್ತೆ ಅ.7. ಮಳೆ ಕೊರತೆಯಿಂದ ಉಂಟಾಗಿರುವ ಬರಪರಿಸ್ಥಿತಿ ಅಧ್ಯಯನ ಮಾಡಿ, ಪರಿಶೀಲಿಸಲಕೇಂದ್ರ ಜಲ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ತಂಡ ಶನಿವಾರ ಚಿತ್ರದುರ್ಗ ತಾಲೂಕಿನಿಂದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಗೆ ಭೇಟಿ ನೀಡಿ
ರೈತರ ಜಮೀನುಗಳಿಗೆ ಭೇಟಿ ನೀಡಿ ಕ್ಷೇತ್ರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿತು.
ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮದುರ್ಗ ಗ್ರಾಮಕ್ಕೆ ಭೇಟಿ ನೀಡಿ ನರೇಗಾ ಕಾಮಗಾರಿ ಹಾಗೂರೈತರ ಶೇಂಗಾ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದರು.

ರೈತರಾದ ಚನ್ನಯ್ಯ, ಪಾಲಯ್ಯ,ಓಬಯ್ಯ ಮಾತನಾಡಿ ಸ್ವಾಮಿ ನಾವುಶೇಂಗಾ, ತೊಗರಿ ಬಿತ್ತನೆ ಮಾಡಿದ್ದು ಬಿತ್ತನೆ ಮಾಡಿದಾಗ ಅಲ್ಪ ಸ್ವಲ್ಪ ಮಳೆ ಬಂದಿದ್ದು ಬಿಟ್ಟರೆ ಇದುವರೆಗೂ ಮಳೆ ಬಾರದೆ ಇರುವುದರಿಂದ ಬಿಸಿಲಿನ ತಾಪಕ್ಕೆ ಸಂಪೂರ್ಣ ಒಣಗಿ ಹೋಗಿದ್ದು ನಷ್ಟದಿಂದ ಸಾಲದ ಸುಳಿಗೆ ಸಿಕುವಂತೆ ಮಾಡಿದೆ ಬೆಳೆ ಪರಿಹಾರ ಹಾಗೂ ಬೆಳೆವಿಮೆಯನ್ನು ನೀಡುವಂತೆ ಅಳಲು ತೋಡಿಕೊಂಡರು.
ಬಂಗಾರಪ್ಪ ಗ್ರಾಪಂ ಸದಸ್ಯ ಮಾತಮಾಡಿ ಚಳ್ಳಕೆರೆ ತಾಲುಕು ಅತಿ ಕಡಮೆ ಮಳೆ ಬೀಳುವ ಪ್ರದೇಶ ಸಮಾರು 10 ವರ್ಷಗಳಿಂದಲೂ ಸರಿಯಾಗಿ ಮಳೆ ಬೆಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಬರಗಾಲಕ್ಕೆ ತುತ್ತಾಗುತ್ತಿದೆ ಜನ ಜಾನುವಾರಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ ರೈತರಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡರು.
ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನರೇಗಾ ವರದಾನವಾಗಿದ್ದು 100 ದಿನಗಳಿಂದ 150 ಕ್ಕೆ ಮಾನವ ದಿನಗಳು ಹೆಚ್ಚಿಸ ಬೇಕು ಈಗಿರುವ ಕೂಲಿ ಹಣವನ್ನು ಹೆಚ್ಚಿಸ ಬೇಕು , ನರೇಗಾ ಯೋಜನೆಯಡಯಲ್ಲಿ ಇನ್ನು ಹೆಚ್ಚಿನ ಕಾಮಗಾರಿಗಳನ್ನು ನೀಡುವ ಮೂಲಕ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಕೆಲಸ ನೀಡ ಬೇಕು ಹೂಳೆತ್ತುವ ಕಾಮಗಾರಿಯಲ್ಲಿ 70 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸಮಾಡುತ್ತಿದ್ದಾರೆ ಆದ್ದರಿಂದ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಮನವಿ ಮಾಡಿಕೊಂಡರು.
ಜಿಲ್ಲೆಯ 6 ತಾಲೂಕು ಗಳನ್ನು ಸರಕಾರ ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆ ಜಿಲ್ಲೆಯ ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಧೀವ್ಯಪ್ರಭು ಹಾಗೂ ಜಿಪಂ ಸಿಇಒ ಸೋಮಶೇಖರ್ ಬರಮಾಡಿಕೊಂಡರು.
ಮಳೆ ಹಿಂದಿನ ವರ್ಷ ಅತಿವೃಷ್ಠಿಯಿಂದ ಬೆಳೆ ಹಾಳಾಗಿತ್ತು, ಈ ವರ್ಷ ಮಳೆ ಸಕಾಲಕ್ಕೆ ಬಾರದೆ ಬೆಳೆ ನಷ್ಟವಾಗಿದೆ. ಆಗಾಗ್ಗೆ ಮಳೆ ಬಂದರೂ ಸಹ ಭೂಮಿಯ ಮೇಲ್ಭಾಗದ ಒಂದೆರಡು ಇಂಚು ಮಾತ್ರ ತೇವಗೊಂಡಿರುತ್ತದೆ. ಬೇರಿನವರೆಗೆ ತೇವಾಂಶ ಇರುವುದಿಲ್ಲ. ಮುಂದಿನ ಮುಂಗಾರಿನವರೆಗೆ ಜಾನುವಾರುಗಳಿಗೆ ನೀರು, ಮೇವು ಬೇಕು. ಬರಗಾಲದಿಂದ ಜನರ ರಕ್ಷಣೆ ಮಾಡುವಂತೆ ಮತ್ತು ತಾಲೂಕಿನ ಸಮಗ್ರ ವರದಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ರೈತರು ಕೇಂದ್ರ ತಂಡದ ಅಧಿಕಾರಿಗಳಿಗೆ ಮನವಿ ಮಾಡಿದರು.
ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ. ಮಾತನಾಡಿ ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈಗಾಗಲೆ ಜಿಲ್ಲಾಡಳಿತ ಸಂಪೂರ್ಣ ಮಾಹಿತಿ ನೀಡಿದ್ದು ಕೇಂದ್ರ ಬರ ಅಧ್ಯಯನ ಪರಿಶೀಲನಾ ತಂಡ ಜಿಲ್ಲೆಯ ಆಯ್ದ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೈಜ ವರದಿಯನ್ನು ಹತ್ತು ದಿನಗಳ ಒಳಗಾಗಿ ಸರಕಾರಕ್ಕೆ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಬೆಳೆ ಹಾನಿಯಾದ ರೈತರ ಪ್ರದೇಶಗಳಿಗೆ ತಂಡವು ಭೇಟಿ ನೀಡಿತು. ಈ ಸಂದರ್ಭ ಎಂ.ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕರಣ್ ಚೌದರಿ ಆಹಾರ ನಾಗರೀಕ ಸರಬರಾಜ ಇಲಾಖೆ ಉಪಯಾರ್ಯದರ್ಶಿ ಸಂಗೀತಕುಮಾರ್ , ರಾಜ್ಯ ಪ್ರಕೃತಿವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆ ಗಾರ ಡಾ.ಶ್ರೀನಿವಾಸ್ ರೆಡ್ಡಿ,ಜಿಲ್ಲಾಧಿಕಾರಿ ಧೀವ್ಯಪ್ರಭು, ಜಿಪಂ ಸಿಇಒ ಸೋಮಶೇಖರ್, ಅಪಾರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್,ಜಂಟಿ ಕೃಷಿ ನಿರ್ಧೇಶಕ ಮಂಜುನಾಥ್,ತೋಟಗಾರಿಕೆ ಉಪನಿರ್ಧೇಶಕಿ ಸವಿತಾ, ತಹಶೀಲ್ದಾರ್ ರೇಹಾನ್ ಪಾಷಾ. ಕೃಷಿ ಉಪನಿರ್ಶೇಕ ಶಿವಕುಮಾರ್, ಸಹಾಯಕ ಕೃಷಿ ನಿರ್ಶೇಕ ಅಶೋಕ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ವಿರುಪಾಕ್ಷಪ್ಪ, ಕೃಷಿ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಜಿಲ್ಲೆಯ ಹಲವು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಕೆಲವೆಡೆ ಬೆಳೆ ಇದ್ದರೂ ಉಂಟಾಗಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ಬರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಮನವರಿಕೆ ಮಾಡಿದರು. ಅಧಿಕಾರಿಗಳ ಭೇಟಿ ವೇಳೆ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳಿಂದ ಮಳೆಯ ವಾಸ್ತವದ ಬಗ್ಗೆ ಮನವರಿಕೆ ಮಾಡಿದರು.
0 Comments