ರೈತನ ಜಮೀನಿನಲ್ಲಿ ಅಕ್ರಮ ಮರಳು ಸಾಗಾಟ ಮಾಡುವುದನ್ನು ತಡೆದಿದ್ದಕ್ಕೆ ರಾಡಿನಿಂದ ತೈರನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದು.
ಚಳ್ಳಕೆರೆ ಜನಧ್ವನಿವಾರ್ತೆ ಮಾ.6
ಅಕ್ರಮ ಮರಳು ದಂದೆಗೆ ತಡೆಯಲು ಹೋದ ರೈತನ ಮೇಲೆ ಮರಳು ದಂದೆಕೋರರು ಭಾನುವಾರ ತಡರಾತ್ರಿ ಹಲ್ಲೆ ಮಾಡಿದ ಘಟನೆ ನಡೆದಿದೆ.
ರಾತ್ರಿವೇಳೆ ವೇದಾವತಿ ನದಿಯಿಂದ ಟ್ರಾಕ್ಟರ್ ಮೂಲಕ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು.
ಹೌದು ಇದು ಚಳ್ಳಕೆರೆ ತಾಲೂಕು ವೇದಾವತಿ ನದಿ ಪಾತ್ರದಲ್ಲಿ ಅಕ್ರಮ ಮರುಳು ಸಾಗಾಟ ಮಾಡುತ್ತಿದ್ದು ನದಿ ಪಕ್ಕದ ರೈತನ ಜಮೀನಲ್ಲಿ ಮರಳು ಸಾಗಾಟ ಮಾಡುತ್ತಿದ್ದು ಇದರಿಂದ ರೈತನ ಬೆಳೆ ಹಾಳಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ರೈತರ ರಾಜಣ್ಣ ಮೇಲೆ ಭಾನುವಾರ ರಾತ್ರಿ ಸುಮಾರು 12-39 ರಿಂದ 1 ಗಂಟೆ ಸುಮಾರಿನಲ್ಲಿ ಮರಳು ದಂದೆ ಕೋರರು ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ನಾವು ಪೊಲೀಸ್ ಅಧಿಕಾರಿಗಳಿಗೆ ಲಂಚ ಕೊಡುತ್ತೇವೆ ನೀನು ತಡೆಯೋದು ನಿಮ್ಮ ಮೇಲೆ ಟ್ರಾಕ್ಟರ್ ಹತ್ತಿಸುತ್ತೇವೆ ನೀನು ಏನು ಮಾಡಿಕೊಳ್ಳುತ್ತೀಯೋ ನೋಡಿಕೊಳ್ಳುತ್ತೇವೆ ಮರಳು ತಡೆಯು ಬಂದರೆ ಸುಮ್ಮನಿರಲ್ಲಿ ಎಸ್ಪಿ, ಡಿವೈಎಸ್ಪಿ ಹಾಗೂ ಪಿಎಸ್‌ಐ ಗಳಿಗೆ ಮಂತ್ರಿ ಮಾಮೂಲಿ ಕೊಡುತ್ತೇವೆ ತಡಯಲು ನೀನ್ಯಾರು ಎಂದು ಹಲ್ಲೆ ಮಾಡಿರಿವುದು ಬೆಳಕಿಗೆ ಬಂದಿದೆ.
ಪ್ರಾಣ ಬಿಟ್ಟೇವೆ ಮರಳು ಬಿಡುವುದಿಲ್ಲ
ಇತ್ತ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಾವು ಪ್ರಾಣ ಬಿಟ್ಟೇವು ನದಿಯಲ್ಲಿನ ಮರಳು ಎತ್ತಲು ಬಿಡುವುದಿಲ್ಲ ಎಂದು ಶಾಸಕ ಟಿ, ರಘುಮೂರ್ತಿ ರೈತರೊಂದಿಗೆ ಪ್ರತಿಭಟನೆ ನಡೆಸಿ ಮರಳು ಸಾಗಾಟ ಮಾಡಲು ಗುತ್ತಿಗೆ ದಾರರಿಗೆ ಕಡಿವಾಣ ಹಾಕಿದ ಬೆನ್ನಲ್ಲೇ ಇದನ್ನೇ ಬಂಡವಾಳ ಮಾಡಿಕೊಂಡು ಬೆಳೆಗೆರೆ, ಯಲಗಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರಭಾವಿಗಳ ಕೃಪಕಟಾಕ್ಷದಿಂದ ಸುಮಾರು ೧೫ ರಿಂದ೨೦ ಟ್ರಾಕ್ಟರ್ ಮೂಲಕ ರಾತ್ರಿಯಾಲ್ಲ ವೇದಾವತಿ ನದಿ ಒಡಲು ಬಗೆದು ಅಕ್ರಮ ಮರಳು ಸಾಗಾಟ ಮಾಡಿ ಸರಕಾರದ ಬೊಕ್ಕಸಕ್ಕೂ ನಷ್ಟವನ್ನುಂಟು ಮಾಡುತ್ತಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ಹಾಗೂ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಕ್ರಮಕ್ಕೆ ಮುಂದಾಗಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯೂ ಮೌನವಹಿಸಿದೆ.

ವೇದಾವತಿ ನದಿ ಒಡಲಲ್ಲಿ ರಾತ್ರಿಯಲ್ಲಿ ಮನಬಂದAತೆ ನದಿಯ ಒಡಲು ಬಗೆಯಲಾಗುತ್ತಿದೆ. ನೈಸರ್ಗಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ. ಅಕ್ರಮ ದಂಧೆಕೋರರ ಅಟ್ಟಹಾಸಕ್ಕೆ ವೇದಾವತಿ ನದಿಯ ತನ್ನ ರೂಪವನ್ನೇ ಕಳೆದುಕೊಂಡಿದೆ.
ರಾತ್ರಿ ಹೊತ್ತಿನಲ್ಲಿ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಲೇ ತಾಊಕಿನಾದ್ಯಂತ ಹಳ್ಳ, ಕೊಳ್ಳ, ನದಿ ಪಾತ್ರಗಳಲ್ಲಿ ಅಕ್ರಮ ಮರಳು ಸಾಗಾಟದ ದಂಧೆ ನಡೆಯುತ್ತಿದೆ. ಇದರಿಂದಾಗಿ ಕೋಟ್ಯಂತರ ರುಪಾಯಿ ತೆರಿಗೆ ಹಣ ಸರಕಾರಕ್ಕೆ ನಷ್ಟ ಆಗುತ್ತಿದ್ದು ಅಧಿಕಾರಿಗಳ ಹಾಗೂ ಮರಳು ದಂದೆಕೋರಾರು ಜೇಬು ತುಂಬುತ್ತಿದ್ದು ಅಕ್ರಮ ಮರಳು ಗಣಿಗಾರಿಕೆಯಿಂದ ಸ್ಥಳಿಯ ಬಡವರಿಗೆ ಕೃತಕ ಮರಳು ಆಭಾವ ಸೃಷ್ಠಿಯಾಗಿದ್ದು ಅಕ್ರಮ ಮರಳು ದಂಧೆಕೋರರು ಒಂದು ಟ್ರಾಕ್ಟರ್ ಲೋಡಿಗೆ ೫ ರಿಂದ ೬ ಸಾವಿರ ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನದಿ ಪಾತ್ರದ ರೈತರ ಜಮೀನಿನಲ್ಲಿ ಅಕ್ರಮ ಮರಳು ಸಾಗಾಟ ಮಾಡಿರುವುದು.
ರಾತ್ರಿ ಹೊತ್ತಿನಲ್ಲಿ ಅಕ್ರಮ ಮರಳು ಸಾಗಾಟ ಮಾಡಿತ್ತಿರುವುದನ್ನು ಪ್ರಶ್ನೆ ಮಾಡಿದರೆ ಪೊಲೀಸ್ ಇಲಾಖೆಗೆ ಮಂತ್ಲಿ ಕೋಡುತ್ತೇವೆ ನೀನು ಯಾರು ತಡೆಯೋಕೆ ಎಂದು ಯರ‍್ಯಾರಿಗೆ ಎಷ್ಟು ಕೊಡುತ್ತೇವೆ ಎಂದು ತಡೆದವರಿಗೆ ಲೆಕ್ಕ ಹೇಳುತ್ತಾರೆ. ಕೂಡಲೆ ಸಂಬAಧಪಟ್ಟ ಅಧಿಕಾರಿಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕ ಬೇಕು ಹಾಗೂ ಮರಳು ದಂದೆಕೋರಿAದ ಮಾಮೂಲಿ ವಸೂಲಿ ಮಾಡುತ್ತಿರುವ ಅಧಿಕಾರಿಗಳ ಬಗ್ಗೆ ತನಿಖೆ ನಡೆಸುವಂತೆ ನದಿ ಪಾತ್ರದ ರೈತರು ಆಗ್ರಹಿಸಿದ್ದಾರೆ,
0 Comments