ಜನಧ್ವನಿವಾರ್ತೆ ಅ.9. ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಿರುವದನ್ನು ವಿರೋದಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಳಕು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡಿಸಿತು.
ರೈತ ಮುಖಂಡ ನಿಜಲಿಂಗಪ್ಪ ಮಾತನಾಡಿ ಈಗಾಗಲೆ ಮಳೆ ಕೊರತೆಯಿಂದ ಮಳೆಯಾಶ್ರತಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು ಮಳೆಯಿಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದು ಇರುವ ನೀರಿನಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆಯಲ್ಲಿ ನೀರಾವರಿ ಆಶ್ರಿತ ಬೆಳೆಗಳನ್ನು ಉಳಿಸಿಕೊಳ್ಳು ಹೈರಾಣಾಗಿದ್ದಾರೆ.
ಮತ್ತೆ ಸರಕಾರ ರೈತರ ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕಕಡಿತಗೊಳಿಸಿರುವುದರಿಂದ ಈಗ ಹಾಲಿ ಇಟ್ಟಿರುವ ಬೆಳೆಗಳಿಗೆ ತುಂಬಾ ತೊಂದರೆಯಾಗಿರುತ್ತದೆ. ಬೆಳೆಗಳನ್ನುಮೊದಲಿನಂತೆ 7 ಗಂಟೆ ವಿದ್ಯುತ್ ಕೊಡಬೇಕು. ಮತ್ತು ಸುಟ್ಟುಹೋದ ಪರಿವರ್ತಕಳನ್ನು ಎರಡುದಿನಗಳೊಳಗಾಗಿ ಒದಗಿಸಬೇಕು ಹಾಗೂ ರೈತರು ಅಕ್ರಮ ಸಕ್ರಮಕ್ಕೆ ತಮ್ಮ ಇಲಾಖೆಗೆ ಹಣ ತುಂಬಿದ್ದು ಸರಿಯಷ್ಟೆ ರೈತರಿಗೆ ಬೆಸ್ಕಾಂ ನೀಡಬೇಕಾದ ಸೌಲಭ್ಯವನ್ನು ನೀಡಿಲ್ಲ ಯಾವುದೇ ಸರಕಾರವಾಗಿರ ಬಹುದನ್ನು ರೈತರನ್ನು ಕಡೆಗಣಿಸಿದ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ರೈತರ ಸಮಸ್ಯೆ ಈಡೇರಿಸದಿದ್ದಲ್ಲಿ ಮುಂಬರುವ ಸಂಸದರ ಚುನವಾವಣೆಯಲ್ಲಿ ತಕ್ಕ ಪಾಠಕಲಿಸಲಾಗುವುದು ಎಂದು ಕಿಡಿ ಕಾರಿದರು.
ಕೂಡಲೆ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅನಿರ್ಧಿಷ್ಟಕಾಲ ಉಗ್ರ ಚಳುವಳಿ ಮಾಡಲಾಗುವುದೆಂದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿಮಂಜುನಾಥ್, ಎರ್ರಿಸ್ವಾಮಿ,ತಿಮ್ಮಾರೆಡ್ಡಿ, ವೆಂಕಟೇಶ್, ಸೇರಿಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ತಳಕು ಬೆಸ್ಕಾಂ ಎಇಇ ತಿಮ್ಮರಾಜ್ ಇವರಿಗೆ ಮನವಿ ಸಲ್ಲಿಸಿದರು.
0 Comments