ಚಳ್ಳಕೆರೆ ಸೆ.1 ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರವು ರೈತರಿಗೆ ಯಾವುದೇ ಮಾಹಿತಿ ನೀಡದೆ ವಿದ್ಯುತ್
ಇಲಾಖೆ ಮುಖಾಂತರ ಮೋಸ ಮಾಡಿ ಆರ್.ಆರ್.ನಂಬರ್‌ಗೆ ಆಧಾರ್ ಕಾರ್ಡ್
ಜೋಡಣೆ ಮಾಡಿ, ಮೀಟರ್ ಅಳವಡಿಸಿ ಸುಂಕ ವಸೂಲಿ ಮಾಡುವುದನ್ನು
ವಿರೋಧಿಸಿ ರಾಜ್ಯಾದ್ಯಂತ ಸೆ.6 ರಂದು
“ರೈತರ ಬೃಹತ್ ಪ್ರತಿಭಟನೆ ನಡೆಸಕಾಗುವುದು ಎಂದು ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮನ್ನಾಳಿದ ಎಲ್ಲಾ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಾ ಈ ಕೃಷಿ ವಲಯಕ್ಕೆ
ಕಿಂಚಿತ್ತೂ ಲಾಭವಾಗಬಾರದೆಂದು ನಡೆಸುತ್ತಿರುವ ಪ್ರಯತ್ನ . ಇಲ್ಲಿಗೆ 77 ವರ್ಷಗಳಿಂ ದ ನಡೆದುಬಂದಾಗಿದೆ. ರೈತರು ಕೃಷಿಯಿಂದ ಯಾವುದೇ
ವರಮಾನವಿಲ್ಲದೆ ಸಾಲದು ಸುಳಿಗೆ ಸಿಲುಕಿ ಸಾವಿನ ಮನೆ ಕದ ತಟ್ಟುವಂತಾಗಿದೆ. ದೇಶದ ಆಹಾರದ ಭದ್ರತೆಯನ್ನು ಕಾಪಾಡುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಕೃಷಿ
ಕೊಳವೆ ಬಾವಿಗಳಿಗೆ 2023 ರಿಂದ ಟಿ.ಸಿ. ವಿದ್ಯುತ್ ಕಂಬಗಳು, ವೈರ್‌ಗಳು ಇತರೆ ಸಾಮಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ
ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕಾನೂನು ಜಾರಿಗೊಳಿಸಿದೆ. ಈ ಕಾನೂನನ್ನು ತಕ್ಷಣವೇ ಹಿಂಪಡೆಯಬೇಕೆಂದು ಸರ್ಕಾರವನ್ನು
ಒತ್ತಾಯಿಸುತ್ತಿದ್ದೇವೆ.
ಕೃಷಿ ಆದಾಯಕ್ಕೆ ಸ್ವಾಮಿನಾಥನ್ ವರದಿಯಂತೆ C2+50 ಆಧಾರದಲ್ಲಿ ರೈತರಿಗೆ ಕನಿಷ್ಟ ಬೆಲೆ ನಿಗದಿ ಮಾಡಿ ಎಂದು ಭಾರತ ಸರ್ಕಾರಕ್ಕೆ
ವರದಿ ನೀಡಿ ಇಲ್ಲಿಗೆ 23 ವರ್ಷಗಳು ಕಳೆದಿವೆ. ಇದುವರೆಗೂ ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ಇತ್ತಕಡೆ ಗಮನಹರಿಸಿಲ್ಲ. ಚುನಾವಣೆ
ಸಮಯದಲ್ಲಿ ಸುಳ್ಳು ಭರವಸೆಗಳನ್ನು ಕೊಡುತ್ತಾ ಬಂದಿದ್ದಾರೆ. ಈಗ ಮತ್ತೆ ವಿದ್ಯುತ್‌ನ್ನು ಸಹ ಖಾಸಗಿಕರಣ ಮಾಡಲು ಹೊರಟಿದ್ದಾರೆ.
2000ನೇ ಇಸವಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಇದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆ.ಇ.ಬಿ.
ಯನ್ನು ಖಾಸಗಿಕರಣಕ್ಕೆ ವರ್ಗಾಯಿಸಿತ್ತು. ನಂತರ 2001 ರಲ್ಲಿ ಇಡೀ ರಾಜ್ಯಾದ್ಯಂತ ರೈತರು ಉಗ್ರ ಹೋರಾಟ ಚಳುವಳಿ, ಸತ್ಯಾಗ್ರಹಗಳನ್ನು
ಮಾಡಿದ್ದರಿಂದ ಖಾಸಗಿಯವರ ಕೈ ಸೇರಲಿಲ್ಲ. ಆಗ ಸರ್ಕಾರಗಳು ಬೆಸ್ಕಾಂ, ಎಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಎಂದು ಐದು ಸಂಸ್ಥೆಗಳಿಗೆ
ವರ್ಗಾಯಿಸಿತು. ಆ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಉಳಿದವು. ಈಗ ಮತ್ತೆ ಆ ಸಂಸ್ಥೆಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ
ವರ್ಗಾಯಿಸಲು ತುದಿಗಾಲಮೇಲೆ ನಿಂತಿವೆ. ಆದ್ದರಿಂದ ಸರ್ಕಾರಗಳು ಯಾವುದೇ ಕಾರಣದಿಂದ ಜನರ ಜೀವನಾಡಿ ಆಗಿರುವಂತರ
ವಿದ್ಯುತ್‌ನ್ನು ಖಾಸಗಿಕರಣ ಮಾಡದೆ ಸರ್ಕಾರವೇ ನಡೆಸಿಕೊಂಡು ಹೋಗುವಂತಹ ಕೆಲಸ ಆಗಬೇಕು.
ಅಕ್ರಮ ಸಕ್ರಮ ಇರುವುದನ್ನು ರದ್ದು ಮಾಡಿ ಪ್ರತಿ ಪಂಪ್‌ಸೆಟ್‌ಗಳನ್ನು ಸಕ್ರಮ ಎಂದು ಘೋಷಣೆ ಮಾಡಿ ರೈತರಿಗೆ ಬೆಲೆ ನೀತಿ ಜಾರಿ
ಆಗುವವರೆಗೂ ರೈತರಿಗೆ ಉಚಿತ ವಿದ್ಯುತ್ ಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ. ನಗರದ ಬೆಸ್ಕಾಂ ಕಚೇರಿ ಮುಂದೆ ಸೆ.6 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ತಾಲೂಕುಅಧ್ಯಕ್ಷ ಶ್ರೀಕಂಠಮೂರ್ತಿ.ಯರ್ರಿಸ್ವಾಮಿ.ಚನ್ನಕೇಶವ.ಸುರೇಶ್.ರಾಘವೇಂದ್ರಚಾರ್.ಶಶಿಕುಮಾರ್ ಇತರರಿದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments