ಚಳ್ಳಕೆರೆ ಜನಧ್ವನಿ ವಾರ್ತೆ ನ.3 ರೈತರ ಕೃಷಿ ಆದಾಯ ಹೆಚ್ಚಿಸುವಲ್ಲಿ ನೈಸರ್ಗಿಕ ನಾರುಗಳಾದ ಬಾಳೆ,ಕತ್ತಾಳೆ,ಅಡಿಕೆ ಹಾಗು ಕುರಿ ಉಣ್ಣೆಗಳ ಮೌಲ್ಯವರ್ದನೆಯ ಪಾತ್ರ” ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಸಂಕೀರ್ಣ ಮತ್ತು ಸಂವಾದ ಕಾರ್ಯಕ್ರಮ.
ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ (SID)–ಭಾರತೀಯ ವಿಜ್ಞಾನ ಸಂಸ್ಥೆ ಚಳ್ಳಕೆರೆ (IISc) ಇವರ ಸಂಯುಕ್ತಾಶ್ರಯದಲ್ಲಿ ನೈಸರ್ಗಿಕ ನಾರುಗಳಾದ ಬಾಳೆ,ಕತ್ತಾಳೆ,ಅಡಿಕೆ ಹಾಗು ಕುರಿ ಉಣ್ಣೆಗಳಿಂದ ಮೌಲ್ಯವರ್ದಿತ ಉತ್ಪನ್ನಗಳ ತಯಾರಿಸುವಿಕೆ ಮತ್ತು ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳಿಗಿರುವ ಬೇಡಿಕೆಯ ಬಗ್ಗೆ, ಒಂದು ದಿನದ ವಿಚಾರ ಸಂಕೀರ್ಣ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಚಿತ್ರದುರ್ಗ ಜಿಲ್ಲೆಯ ರೈತರು,ಸ್ವ ಉದ್ಯೋಗದಲ್ಲಿ ಆಸಕ್ತಿ ಉಳ್ಳವರು ಮತ್ತು ಕುಶಲ ಕರ್ಮಿಗಳಿಗಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ದಿನಾಂಕ 02-12-2023 ರಂದು ಬೆಳಗ್ಗೆ 10:30 ರಿಂದ ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಕುದಾಪುರ ಚಳ್ಳಕೆರೆ ತಾಲ್ಲೂಕು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೈಸರ್ಗಿಕ ನಾರುಗಳ ಸಂಸ್ಕರಣೆ,ಮೌಲ್ಯವರ್ಧನೆ ಹಾಗು ಆಧುನಿಕ ತಂತ್ರಜ್ಞಾನಗಳ ಬಳಕೆ ಬಗ್ಗೆ ವಿವರಿಸಲಾಗುವುದು. ಮೌಲ್ಯವರ್ದಿತ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆ ಹಾಗು ಮಾರಾಟ ಮಾಡಲು ಇರುವ ವಿವಿಧ ಮಾರ್ಗಗಳ ಬಗ್ಗೆ ತಿಳಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 25-11-2023 ರ ಒಳಗೆ, ಕೆಳಗೆ ನೀಡಿರುವ ಗೂಗಲ್ ಫಾರಂ ಲಿಂಕಿಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿಸಲಾಗಿದೆ. ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು ಸೀಮಿತ ಆಸನ ವ್ಯವಸ್ಥೆ ಇರುವದರಿಂದ ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಗೂಗಲ್ ಫಾರಂ ಲಿಂಕ್: https://forms.gle/t6fujkNiSFVA4DAVA
ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ತಿಳಿಯಬಹುದು
ಗಣೇಶ್ ತೋಳಾರ್ (7349695100)
ಕೋಟೇಶ್ ಕೊರವರ (9663364234)
0 Comments