ಚಳ್ಳಕೆರೆ ಜನಧ್ವನಿ ವಾರ್ತೆ ಅ20 ರೈತರ ಜಮೀನಿಗೆ ಬಾರದ ಕಡತ ವಿಲೇವಾರಿ ಮಾಡಿ ರೈತನನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುವಂತೆ ಮಾಡಿದ್ದು ರೈತ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರುವಂತೆ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲ್ಲೂಕು,ತಳಕು ಹೋಬಳಿ, ಗುಡಿಹಳ್ಳಿ ಗ್ರಾಮದ ಪಾಲಯ್ಯ ಬಿನ್ ತಿಮ್ಮಪ್ಪ,
ಬೊಮ್ಮಕ್ಕ ಕೋಂ ಓಬಜಪ್ಪ ಇವರು ಗುಡಿಹಳ್ಳಿ ಗ್ರಾಮದಲ್ಲಿ ರಿ.ಸ.ನಂ.36/2 ರಲ್ಲಿ
06 ಎಕರೆ 3ಗುಂಟೆ, 34/1ರಲ್ಲಿ 2 ಎಕರೆ 33 ಗುಂಟೆ, 34/1ರಲ್ಲಿ 1ಎಕರೆ 01 ಗುಂಟೆ,
32/3ರಲ್ಲಿ 1ಎಕರೆ 01 ಗುಂಟೆ ಸುಮಾರು 9 ಎಕರೆ ಜಮೀನು ಜಂಟಿಖಾತೆಯಲ್ಲಿದ್ದು,
ಇದನ್ನು ಪಾಲುವಿಭಾಗ ಮಾಡಿಕೊಳ್ಳಲು ದಿನಾಂಕ:26-08-2019 ರಂದು ರೂ:4000/-
ಸರ್ವೆ ಶುಲ್ಕವನ್ನು, ದಿನಾಂಕ:1-1-2023ರಂದುರೂ:5000/- ಮತ್ತು ದಿನಾಂಕ:13-07-
2023ರಂದು ರೂ:8,500/- ಒಟ್ಟು ಇಲ್ಲಿಯವರೆಗೆ ರೂ:17,500/- ಗಳ ಶುಲ್ಕವನ್ನು
ಪಾವತಿಸಲಾಗಿದೆ. ಇವರು ಸರಿಯಾಗಿ ದಾಖಲೆಗಳನ್ನು ಪರಿಶೀಅಸದೆ 3 ಬಾರಿ ಯಾವುದೋ
ಒಂದು ನೆಪವನ್ನು ಹೇಳಿ ಸರ್ವೆ ಮಾಡದೆ .ಗ್ರಾಮಕ್ಕೂ ಬಾರದೆ ನಮ್ಮ ಅರ್ಜಿಗಳನ್ನು ಸಹಿ
ಇಲ್ಲದೆ ವಿಲೆ ಮಾಡಿದ್ದಾರೆ. ದಿನಾಂಕ:18-10-2023 ರಂದು ಚಳ್ಳಕೆರೆ ಕಛೇರಿಗೆ ಭೇಟಿ
ನೀಡಿದಾಗ ಮತ್ತೆಶುಲ್ಕವನ್ನು ಭರಿಸಬೇಕೆಂದು ಹೇಳುತ್ತಾರೆ .ಈಗಲೆ 17500 ರೂಗನ್ನು ನೀಡಿ ಕಳೆದುಕೊಂಡಿದ್ದೇವೆ ಅಧಿಕಾರಿಗಳ ನಿರ್ಕಕ್ಷತೆ ಹಾಗೂ ಕರ್ತವ್ಯಲೋಪದಿಂದಾಗಿ ಹಣವೂ ಇಲ್ಲ ಭೂಮಿ ಅಳತೆಯೂ ಇಲ್ಲ ಮತ್ತೆ ಶುಲ್ಕ ಕಟ್ಟಿ ಎಂದು ಸರ್ವೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮಳೆ ಬೆಳೆಯಿಲ್ಲದೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿ ಸಂಕಷ್ಟಕ್ಕೆ ಸಿಲುಕಿ ಸಾಲದ ಸುಳಿಗೆ ಸಿಲುಕಿದ್ದರೂ ಸಹ ಸರ್ವೇ ಇಲಾಖೆ ಅಧಿಕಾರಿಗಳ ನಿರ್ಲಕ್ಕೆ ಮತ್ತೆ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಜಮೀನನ್ನು ಪಾಲುವಿಭಾಗ ಮಾಡಿಕೊಳ್ಳಲು ಸಾಲವನ್ನು ಮಾಡಿ ಪಾಲುದಾರಿಕೆಗೆ
ಹಣವನ್ನು ಪಾವತಿಸಿದ್ದೇವೆ.ಆದರೆ ಇಲ್ಲಿಯವರೆಗೂ ಸರ್ವೆ ಮಾಡದೆ ನಮಗೆ ತಪ್ಪು ಮಾಹಿತಿಗಳನ್ನು ಕೊಟ್ಟು
ಸರ್ಕಾರಿ ಸೌಲಭ್ಯಗಳಿಂದ ಪಾಲುದಾರಿಕೆ ನಾವು ಸಾಗಾಕಿದ್ದಾರೆ. ಮಾಡಿಕೊಳ್ಳದೆ
ವಂಚಿತರಾಗಿದ್ದೇವೆ. ಆದ್ದರಿಂದ ನಮಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಅಸಿ,
ನಿಮ್ಮ ಸಮಕ್ಷಮದಲ್ಲಿ ಸರ್ವೆಮಾಡಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಾಗೂ
ನಮಗೆ ತಪ್ಪು ಮಾಹಿತಿಯನ್ನು ನೀಡಿ ಹಣವನ್ನು ಕಳೆದುಕೊಂಡಿರುವುದರಿಂದ ನಮಗೆ
ಸರ್ಕಾರದ ನಿಯಮದ ಪ್ರಕಾರ ಸಂಬಂಧಿಸಿದ ಸರ್ವೆ ಇಲಾಖೆಯವರಿಂದ
ಕೊಡುವುದಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯದೊರಕಿಸಿ
ಕೊಡಬೇಕೆಂದು ಎಂದು ಲೋಕಾಯುಕ್ತ ಕಚೇರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ರೈತರಿಗೆ ನ್ಯಾಯ ದೊರಕಿಸಿಕೊಡುವರೇ ಕಾದು ನೋಡ ಬೇಕಾಗಿದೆ.
ರೈತರು ಭೂಮಿ ಅಳತೆಗೆ ಶುಲ್ಕ ಕಟ್ಟಿದ್ದರೂ ಕಡತ ವಿಲೆವಾರಿ ಮಾಡಿರುವ ಬಗ್ಗೆ ಸರ್ವೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು..
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments