ರೈತರು ತಮ್ಮ ಜಾನುವಾರುಗಳು ರೋಗಕ್ಕೆ ತುತ್ತಾದಾಗ ಪಶುಸಂಜೀವಿನಿ ತುರ್ತುವಾಹನಕ್ಜೆ ಕರೆ ಮಾಡಿ ಚಿಕಿತ್ಸೆ ಕೊಡಿಸುವಂತೆ ಶಾಸಕ ಟಿ.ರಘುಮೂರ್ತಿ.

by | 19/10/23 | ಆರೋಗ್ಯ


ಚಳ್ಳಕೆರೆ ಅ.19ವಿವಿಧ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳ ಚಿಕಿತ್ಸೆಯ ನೆರವಿಗಾಗಿ ಆಯಾ ಗ್ರಾಮಕ್ಕೆ ಹೋಗಿ ಚಿಕಿತ್ಸೆ ಸೌಲಭ್ಯ ನೀಡುವುದಕ್ಕಾಗಿ ಸರ್ಕಾರ ತುರ್ತು ಚಿಕಿತ್ಸಾ ವಾಹನದ ಸೌಲಭ್ಯ ನೀಡಿದೆ
ತುರ್ತು ಚಿಕಿತ್ಸಾ ವಾಹನ ಪಶುಗಳಿಗೆ ಸಂಜೀವಿನಿ ಇದ್ದಂತೆ. ರೈತರು ತಮ್ಮ ದನಕರುಗಳ ಚಿಕಿತ್ಸೆಗಾಗಿ ಈ ವಾಹನ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಬಿಎಂ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಪಶುಸಂಗೋಪನೆ ಇಲಾಖೆಯಿಂದ ಆಯೋಜಿಸಿದ್ದ ಪಶು ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ತಮ್ಮ ರಾಸುಗಳಿಗೆ ರೋಗಗಳಿಗೆ ತುತ್ತಾದಗ ಆಸ್ಪತ್ರೆಗೆ ಕರೆತರಲು ಆಗದೆ ಇರುವ ಸಂದರ್ಭದಲ್ಲಿ ಮನುಷ್ಯರಿಗೆ 108 ಅಂಬ್ಯಲೆನ್ಸ್ ಎಷ್ಟು ಮುಖ್ಯವೋ ಅದೇ ರೀತಿ 1962 ಸಂಖ್ಯೆಗೆ ಕರೆ ಮಾಡಿದರೆ ಸಾಕು ಪಶು ಸಂಜೀವಿನಿ ವಾಹನ ನಿಮ್ಮ ಮನೆ ಬಾಗಿಲಿಗೆ ಬಂದು ಪಶು ವೈದ್ಯಾಧಿಕಾರಿಗಳು ರಾಸುಗಳ ಚಿಕಿತ್ಸೆ ನೀಡುತ್ತಾರೆ.
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಾದ್ಯಾಂತ 290 ಅಂಬುಲೆನ್ಸ್ ವಾಹನಗಳನ್ನು ಪಶು ಇಲಾಖೆಗೆ ನೀಡಲಾಗಿದೆ. ಇದರಲ್ಲಿ ತಾಲ್ಲೂಕಿನ ಪಶು ಇಲಾಖೆ 2 ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳನ್ನು ನೀಡಲಾಗಿದ್ದು, ಈ ವಾಹನಗಳು ದಿನದ 24 ಗಂಟೆಯು ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತವೆ. ರೋಗ ಬಂದು ಮೇವು ತಿನ್ನದೆ ನಡೆಯಲು ಬಾರದೆ ನಿಯಂತ್ರಾಣಗೊಂಡ ಜಾನುವಾರುಗಳಿಗೆ ಸ್ಥಳಕ್ಕೆ ಪಶು ಸಂಜೀವಿನಿ ವಾಹನ ಬಂದು ಚಿಕಿತ್ಸೆ ನೀಡುತ್ತದೆ. ಇದರ ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣ್ಣ ಮಾತನಾಡಿ ಪಶು ಸಂಜೀವಿನಿ ವಾಹನವು ಜನವಾರುಗಳಿಗೆ ತುರ್ತು ಚಿಕಿತ್ಸೆ ನೀಡುವಂತ ವಾಹನವಾಗಿದೆ. ಈ ವಾಹನದಲ್ಲಿ ಒಬ್ ಚಾಲಕ ಕಮ್ ಡಿ-ಗ್ರೂಪ್, ಒಬ್ಬ ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಪಶು ವೈದ್ಯರು ಕಾರ್ಯನಿರ್ವಹಿಸುತ್ತದೆ.
ರೈತರು ತಮ್ಮ ಜಾನುವಾರುಗಳಿಗೆ ರೋಗ-ರುಜಿನಗಳ ಉಂಟಾಗಿ ನಡೆಯಲು ಬಾರದೆ ನಿಯಂತ್ರಾಣಗೊಂಡಾಗ ಪಶು ಸಂಜೀವಿನಿ ವಾಹನದ ತುರ್ತು ಸಂಖ್ಯೆ 1962 ಕ್ಕೆ ಕರೆ ಮಾಡಿದರೆ ಸಾಕು ಮನೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ತಾಪಂ ಇಓ ಹೊನ್ನಯ್ಯ, ಪಶು ವೈದ್ಯಾಧಿಕಾರಿ ಮುಂತಾದವರು ಇದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *