ಮಸ್ಕಲ್ ಆ.8 ಮಸ್ಕಲ್ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ರೈತರಿಗೆ ಗುರುವಾರ ಮೇವಿನ ಬೀಜದ ಪೊಟ್ಟಣಗಳನ್ನು ವಿತರಿಸಲಾಯಿತು.
ಪ್ರಭಾರ ಪಶುವೈದ್ಯಾಧಿಕಾರಿ ಡಾ. ಗುರುಪ್ರಸಾದ್ ಮಾತನಾಡಿ, ಸರಕಾರ ಎಲ್ಲ ರೀತಿಯಿಂದಲೂ ರೈತರಿಗೆ ಪ್ರೋತ್ಸಾಹ ನೀಡಲು ಇಂತಹ ಯೋಜನೆಗಳನ್ನು ರೂಪಿಸಿದೆ. ಮೇವಿನ ಪೊಟ್ಟಣಗಳನ್ನು ಪಡೆದ ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ರೈತನ ಸಂಗಾತಿಯಾದ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳುವುದು ರೈತನ ಕರ್ತವ್ಯ. ಎಲ್ಲ ಜಾನುವಾರುಗಳಿಗೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಜಾನುವಾರು ಮೃತಪಟ್ಟಾಗ ಪರಿಹಾರ ಧನ ಸಿಗುತ್ತದೆ ಎಂದರು. ಪಶುಇಲಾಖೆಯಿಂದ ವಿತರಿಸುವ ಮೇವಿನ ಜೋಳದ ಬೀಜ ಬಿತ್ತನೆ ಮಾಡಿ ಮೇವು ಬೆಳೆದು ಪಶುಗಳಿಗೆ ಹಾಕಿದರೆ ಉತ್ತಮ ಪೌಷ್ಠಿಕತೆ ಹಾಗೂ ಹೆಚ್ಚು ಹಾಲು ನೀಡುತ್ತದೆ ಮೇವಿನ ಬೀಜ ಪಡೆದ ರೈತರು ಮೇವು ಬೆಳಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿದರು. ಈಸಂದರ್ಭದಲ್ಲಿ ಸಿಬ್ಬಂದಿ ಮಂಜುನಾಥ. ರೈತ ರಘುನಾಥ್ ಇದ್ದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments