ಚಳ್ಳಕೆರೆ.
ರೈತರು ಬೆಳೆನಷ್ಟ ಪರಿಹಾರ ಬಂದಿಲ್ಲವೆAದು ಆತಂಕದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದು, ರೈತರಿಗೆ ಬೆಳೆ ನಷ್ಟ ಪರಿಹಾರ ದೊರಕಿಸಕೊಡಬೇಕು ಎಂದು ಶಾಸಕ ಟಿ.ರಘಮೂರ್ತಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೆöÊಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಕ ಕೇಷಿ ನಿರ್ದೇಶಕ ಡಾ.ಅಶೋಕ್ ಸಭೆಗೆ ಮಾಹಿತಿ ನೀಡುತ್ತಾ ತಾಲ್ಲೂಕಿನ ೯೪, ೬೪೫ ಸಾವಿರ ಹೆಕ್ಟರ್ ಮುಂಗಾರರಿನಲ್ಲಿ ಬಿತ್ತನೆ ಗುರಿಯಿದ್ದ ಇದರಲ್ಲಿ ೧೮ ಬೆಳೆಗಳು ಸೇರಿ ೮೫, ೨೧೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು, ಇದರಲ್ಲಿ ೪೩, ೪೮೧ ಸಾವಿರ ಹೆಕ್ಷರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಬೆಳೆ ನಷ್ಟ ಪರಿಹಾರಕ್ಕೆ ಸರ್ಕಾರಕ್ಕೆ ಶಿಪರಸ್ಸು ಮಾಡಲಾಗಿತ್ತು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಸೇರಿ ೧೧ ಕೋಟಿ ಬೆಳೆ ನಷ್ಟ ಪರಿಹಾರ ಬಂದಿದೆ. ಕೃಷಿ ಇಲಾಖೆ ಬೆಳೆಗಳಿಗೆ ಸುಮಾರು ೩೨ ಕೋಟಿ ಬರಬೇಕು ಎಂದು ತಿಳಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ ವಿರುಪಾಕ್ಷಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಈರುಳ್ಳಿ ೫೧೦೦ ಹೆಕ್ಟರ್, ೬೫೦೦ ಹೆಕ್ಟರ್ ಇತರೆ ಬೆಳೆಗಳು ಹಾನಿಯಾಗಿದ್ದು ತೋಟಗಾರಿಕೆ ಬೆಳೆಗಳಿಗೆ ೧೫ ಕೋಟಿ ಬೆಳೆ ಪರಿಹಾತ ಬರಬೇಕು ಎಂದು ಮಾಹಿತಿ ನೀಡಿದರು.
ಶಾಸಕರ ತಾಲ್ಲೂಕಿನ ರೈತರು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರದಿಂದ ವಂಚಿತರಾಗಬಾರದು, ಬೆಳೆ ನಷ್ಟ ವರದಿ ಸಲ್ಲಿಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು. ಕೆರೆ, ಕಟ್ಟಿಗಳು, ಹಳ್ಳಕೊಳ್ಳ ಭರ್ತಿಯಾಗಿ ದಾಳಿಂಬೆ, ಅಡಿಕೆ ಬೆಳೆಗಳು ಹಾನಿಯಾಗಿದ್ದು ಪರಿಹಾರ ದೊರಕಿಸಕೊಡಬೇಕು ಎಂದರು.
ತಾಪA ಇಒ ಹೊನ್ನಯ್ಯ ಮಾತನಾಡಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಿ ಆದಾಯ ಪಡೆಯಲಾಗುತ್ತಿದೆ ಆದರೆ ಕೆರೆಗಳ ಏರಿ ಮೇಲೆ ಜಂಗಲ್ ಹಾಗೂ ಕೆರೆ ಅಭಿವೃದ್ಧಿಗೆ ಮೀನುಗಾರಿಗೆ , ಸಣ್ಣನೀರಾವರಿ ಹಾಗೂ ಜಿಪಂ ಇಂಜಿಯರ್ ವಿಭಾಗದ ಅಧಿಕಾರಿಗಳಿಗೆ ಮುಂದಾಗುವAತೆ ಸೂಚನೆ ನೀಡಿದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ತಾಲೂಕಿನ ಸ್ಮಶಾನಗಳ ಒತ್ತುವರಿಗೆ ಹಾಗೂ ಸರಕಾರದ ಭೂಮಿಯಲ್ಲಿ ಸ್ಮಶಾನಗಳಿಗೆ ಜಾಗ ಮಂಜುರಾತಿ ಮಾಡಿಕೊಡಲಾಗುವುದು ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಗ್ರಾಪಂ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗುವAತೆ ತಿಳಿಸದರು.
ಪಶುಸಂಗೋನೆ ಅಧಿಕಾರಿ ಡಾ. ರೇವಣ್ಣ ಮಾಹಿತಿ ನೀಡಿ ತಾಲ್ಲೂಕಿನಲ್ಲಿ ೨೬೭ ಜಾನುವಾರುಗಳು ಚರ್ಮ ಗಂಟು ರೋಗದಿಂದ ಸಾವನ್ನಪ್ಪಿವೆ, ಈಗ ಚರ್ಮ ಗಂಟು ರೋಗ ಅತೋಟಿಗೆ ಬಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು , ಪಿಡಿಒಗಳು ತಾಪಂ ಆಡಳೀತ ಅಧಿಕಾರಿ ರಮೇಶ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ತಾಪಂ ಕೆಡಿಪಿಸದಸ್ಯರು ಉಪಸ್ಥಿತಿದ್ದರು.
0 Comments