ಚಳ್ಳಕೆರೆ ಆ29 ಗ್ರಾಮೀಣಾಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಜಾರಿಗೊಂಡ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನ್ನದಾತರಿಗೆ ವರದಾನ ಇದನ್ನೇ ಮಂಡವಾಳ ಮಾಡಿಕೊಂಡ ಕೆಲವರ ರೈತರ ಹೆಸರಿನಲ್ಲಿ ಹುಂಡೆ ನಾಮ ಹಾಕಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ರೈತರ ಹೆಸರಿನಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡದೆ ಬಿಲ್ ಪಡೆದಿರುವುದು ಬೆಳಕಿಗೆ ಬಂದಿದೆ.
ಗೋಪನಹಳ್ಳಿ ಗ್ರಾಮದ ಜಿ.ಆರ್ .ತಿಪ್ಪೇಸ್ವಾಮಿ ಬಿನ್ ರಂಗಪ್ಪ ಇವರ ಜನೀನಿನ ಸರ್ವೆ ನಂ68/1ರಲ್ಲಿ ಗುಲಾಬಿ ಸಸಿ ಬೆಳೆಯಲಾಗಿದೆ ಎಂದು 58,625 ರೂ ಕೂಲಿ ಹಣ ಪಡೆದು ಬೆಳಕಿಗೆ ಬಂದಿದೆ.
ರೈತ ತಿಪ್ಪೇಸ್ವಾಮಿ ಜಮೀನಿನಲ್ಲಿ ಅಡಿಕೆ ಬೆಳೆ ಬೆಳೆದಿದ್ದು ಡ್ರಿಪ್ ಹಾಕಿಸಲು ಮುಂದಾಗಿದ್ದಾರೆ ಏಜೆನ್ಸಿ ಕಡೆಯಿಂದ ಡ್ರಿಪ್ ವೈರ್ ಅಳವಡಿದಲು ಬಂದೆ ಗೋಪನಹಳ್ಳಿ ಗ್ರಾಮದ ಯುವಕ ರೈತ ತಿಪ್ಪೇಸ್ವಾಮಿಯಿಂದ ಪಹಣಿ.ಆಧಾರ್ ಕಾರ್ಡ್ ಕೊಡಿ ನಿಮಹೆ ಡ್ರಿಪ್ ಅಳವಡಿಸಿಕೊಂಡಿರುವ ನಗ್ಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಬರುತ್ತದೆ ಎಂದು ನಂಬಿಸಿ ದಾಖಲೆ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗುಲಾಬಿ ಬೆಳೆ ಹಾಕಿರಯವ ಬಗ್ಗೆ ಯುವಕನ ಸಂಬಂಧಿಕರ ಇತರರ ಕೂಲಿ ಕಾರ್ಮಿಕರ ಕಾರ್ಡ್ ಹಾಕಿ 58,625 ರೂ ಕೂಲಿ ಹಣ ಬಿಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ರೈತ ತಿಪ್ಪೇಸ್ವಾಮಿ ನಮ್ಮ ಪಹಣಿ ಮೇಲೆ ಗುಲಾಬಿ ಬಿಲ್ ಪಡೆದಿದ್ದೀಯ ನಮಗೆ ಕೊಡು ಎಂದಾಗ ರೈತನಿಗೆ ಹುಡಾಪೆ ಉತ್ತರ ನೀಡಿ ನಾನು ಕೊಡುವುದಿಲ್ಲ ಏನಾದು ಮಾಡಿಕೊ ಇಲ್ಲವೆ ನನ್ನ ಪಹಣಿ ಕೊಡುತ್ತೇ ನೀನೂ ನರೇಗಾ ಮಾಡಿಸಿ ಹಣ ಪಡೆದುಕೋ ಎಂದು ರೈತನಿಗೆ ಹುಡಾಪೆ ಮಾಡಿದ್ದಾನೆ.
ಇದೇನು ಹೊಸದಲ್ಲಿ ಕೃಷಿ ಇಲಾಖೆ ಯಲ್ಲಿ ಕೃಷಿಹೊಂಡ
ಬುನಿರ್ಮಾಣ. ಹಾಗೂ ತೋಟಗಾರಿಗೆ ಇಲಾಖೆಯಲ್ಲಿ ಎಲೆ ಬಳ್ಳಿ. ಮಳೆಯಾಶ್ರೀತ ಪ್ರದೇಶದಲ್ಲಿ ಗುಲಾಬಿ ಸಸಿಗಳನ್ನಿಟ್ಟು ಬೋಗಸ್ ಬಿಲ್ ಪಡೆದಿರುವ ಬಗ್ಗೆ ಗುಸು ಗುಸು ಮಾತುಗಳು ಸಹ ಕೇಳಿ ಬರುತ್ತಿವೆ.
ಗುಲಾಬಿ ಬೆಳೆದು ಲಾಬ ಪಡೆಯಬೇಕಿದ್ದ ರೈತನ ಹೆಸರಿನಲ್ಲಿ ಗುಲಾಬಿ ಬೆಳೆಯದೆ ನರೇಗಾ ಕೂಲಿ ಹಣ ವಂಚನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವರೇ ಕಾದು ನೋಡ ಬೇಕಿದೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments