ಹಿರಿಯೂರು :
ನಗರದ ಭಾರತೀಯ ರೆಡ್ ಕ್ರಾಸ್ ಮತ್ತು ರೋಟರಿ ಹಾಗೂ ಇನ್ಹರ್ ವ್ಹೀಲ್ ಸಂಸ್ಥೆಗಳು ಸಾರ್ವಜನಿಕರಿಗಾಗಿ ಸಾಮಾಜಿಕವಾಗಿ ಅನೇಕ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವೈದ್ಯರಾದ ಡಾ.ಕೆ.ಜಿ.ಅಶ್ವಿನಿ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ನಡೆಸಲಾದ ಉಚಿತ ತಪಾಸಣಾ ಮತ್ತು ಚಿಕಿತ್ಸಾಹ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ತಿಂಗಳು ಮೊದಲನೇ ಗುರುವಾರ ನಗರದಲ್ಲಿ ಎರಡನೇ ಬುಧವಾರ ಗ್ರಾಮಭಾಗದ ಧರ್ಮಪುರದ ಕಣಿವೆ ಮಾರಮ್ಮ ದೇವಸ್ಥಾನದ ಬಳಿಯ ಸಮುದಾಯ ಭವನದಲ್ಲಿ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನಡೆಸಲಾಗುವುದು ಎಂದರಲ್ಲದೆ,
ಶಿಬಿರದ ಫಲಾನುಭವಿಗಳಿಗೆ ತಮ್ಮ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ನವರಿಗೆ ಉಚಿತ ನೇತ್ರ ಚಿಕಿತ್ಸೆ ನಡೆಸಿ ಇಲ್ಲಿಂದ ದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನಂತರ ಮತ್ತೆ ವಾಪಸ್ ಕರೆದುಕೊಂಡು ಬಂದು ಬಿಡಲಾಗುವುದು ಈ ಸಂಸ್ಥೆಗಳ ಶಿಬಿರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬುದಾಗಿ ಹೇಳಿದರು.
ರೋಟರಿ ಅಧ್ಯಕ್ಷರಾದ ಡಿ.ದೇವರಾಜಮೂರ್ತಿ ಮಾತನಾಡಿ, ಆರೋಗ್ಯವಂತ ಸಮಾಜಕ್ಕಾಗಿ ರೋಟರಿ ರೆಡ್ ಕ್ರಾಸ್ ಸದಾ ಮುಂಚೂಣಿಯಲ್ಲಿದ್ದು, ನಿಸ್ವಾರ್ಥ ಸೇವೆಗಳನ್ನು ನೀಡುತ್ತಾ ಬಂದಿದೆ, ಈ ದಿನದ ಶಿಬಿರದ ದಾನಿಗಳಾದ ಎಲ್.ಆನಂದಶೆಟ್ಟಿ ಎಸ್.ಜೋಗಪ್ಪ, ಬಿ.ಕೆ.ನಾಗಣ್ಣ, ರಂಗನಾಥಪ್ಪ ಇವರುಗಳನ್ನು ಅಭಿನಂದಿಸಿ ಪ್ರತಿಯೊಬ್ಬರು ಯಾವುದೇ ಅಂಜಿಕೆ ಇಲ್ಲದೆ ನಮ್ಮ ಸಂಸ್ಥೆಗಳ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿರುವಂತೆ ಕೋರಿದರು.
ಇನ್ಹರ್ ವ್ಹೀಲ್ ಅಧ್ಯಕ್ಷರಾದ ಲಕ್ಷ್ಮೀರಾಜೇಶ್ವರಿ ಮಾತನಾಡಿ, ಈ ತಪಾಸಣಾ ಶಿಬಿರದಲ್ಲಿ ಸುಮಾರು 50 ಜನರಿಗೆ ತಪಾಸಣೆ ನಡೆಸಿ 13 ಜನರಿಗೆ ಉಚಿತ ನೇತ್ರ ಚಿಕಿತ್ಸೆ ನಡೆಸಲು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನೇತೃಶಸ್ತ್ರ ಚಿಕಿತ್ಸೆ ನಂತರ ಮತ್ತೆ ಹಿರಿಯೂರಿಗೆ ಕರೆದು ತಂದು ಬಿಡಲಾಗುವುದು ಎಂದರಲ್ಲದೆ,
ಈ ಶಿಬಿರದಲ್ಲಿ ನೇತ್ರ ತಪಾಸಣೆಗೆ ಆಗಮಿಸಿರುವ ಡಾ.ಅಶ್ವಿನಿ ಡಾ.ಸಜನಾ, ಡಾ.ಶ್ರಿಖಾ ಡಾ.ಶ್ರೀಕಾಂತ್, ಗೋವಿಂದಗೌಡ ಮತ್ತು ಕೋ ಆರ್ಡಿನೇಟರ್ ಅಭಿಷೇಕ್ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಕಾರ್ಯದರ್ಶಿ ಎಸ್.ಜೋಗಪ್ಪ, ಖಜಾಂಚಿ ಸಣ್ಣಚಭೀಮಣ್ಣ, ಓಂಕಾರ ರಾಜೇಶ್, ವಿಕಾಸ್ ಜೈನ್, ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ, ಬಿ.ಕೆ.ನಾಗಣ್ಣ, ಮಹಾಬಲೇಶ್ವರಶೆಟ್ಟಿ, ಶಶಿಕಲಾ ರವಿಶಂಕರ್, ಪಿ.ಆರ್.ಸತೀಶ್ ಬಾಬು, ಥಿಯಾಸಫಕಲ್ ಸೊಸೈಟಿ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ, ರಂಗನಾಥಪ್ಪ, ಇನ್ಹರ್ ವ್ಹೀಲ್ ಅಧ್ಯಕ್ಷರಾದ ಲಕ್ಷ್ಮಿ ರಾಜೇಶ್, ಸೌಮ್ಯ ಪ್ರಶಾಂತ್ ,ಸ್ವರ್ಣ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರೆಡ್ ಕ್ರಾಸ್ ಮತ್ತು ರೋಟರಿ ಹಾಗೂ ಇನ್ಹರ್ ವ್ಹೀಲ್ ಸೇವಾ ಸಂಸ್ಥೆಗಳ ಕಾರ್ಯವು ನಿಜಕ್ಕೂ ಶ್ಲಾಘನೀಯ ಬಸವೇಶ್ವರ ಆಸ್ಪತ್ರೆ ನೇತ್ರವೈದ್ಯೆ ಡಾ.ಕೆ.ಜಿ.ಅಶ್ವಿನಿ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments