ರಾಷ್ಟ್ರೀಯ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ಎನ್ಎಸ್ಎಸ್ ಶಿಬಿರಗಳು ಸಹಕಾರಿ: ಡಿವೈಎಸ್ಪಿ ಟಿಬಿ ರಾಜಣ್ಣ


ಚಳ್ಳಕೆರೆ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಶಿಸ್ತು, ಸಮಯ ಪಾಲನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಎನ್ಎಸ್ಎಸ್ ಶಿಬಿರಗಳು ಸಹಕಾರಿ ಆಗಲಿವೆ ಎಂದು ನಗರ ಪೊಲೀಸ್ ಠಾಣೆಯ ಡಿವೈಎಸ್ಪಿ ಟಿಬಿ ರಾಜಣ್ಣ ಅಭಿಪ್ರಾಯಪಟ್ಟರು.


ತಾಲೂಕಿನ ದೊಡ್ಡೇರಿ ಗ್ರಾಮದ ಡಿ ಉಪಾರಟ್ಟಿಯಲ್ಲಿ ನಗರದ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎನ್ಎಸ್ಎಸ್ ಘಟಕಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಒಂದು ಉತ್ತಮ ವೇದಿಕೆಯಾಗಿದ್ದು ಗ್ರಾಮೀಣ ಭಾಗದ ಸ್ವಚ್ಛತೆ ಕಾಪಾಡುವಲ್ಲಿ ಎನ್ಎಸ್ಎಸ್ ಘಟಕಗಳ ಪಾತ್ರ ಅವಿಸ್ಮರಣೀಯವಾದದ್ದು ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಭವಿಷ್ಯದಲ್ಲಿ ಉತ್ತಮ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳುವುದಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ ನಿದರ್ಶನಗಳಿವೆಎಂದು ತಿಳಿಸಿದರು.


ತಾಲೂಕಿನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ ರವೀಶ್ ಕುಮಾರ್ ಮಾತನಾಡಿ ಕಾಲೇಜಿನ ಎನ್ಎಸ್ಎಸ್ ಘಟಕವು ಹಲವು ವರ್ಷಗಳಿಂದ ಗ್ರಾಮೀಣ ಭಾಗಗಳಿಗೆ ತೆರಳಿ ಉತ್ತಮ ರೀತಿಯ ಸೇವೆ ಸಲ್ಲಿಸಿದ್ದರಿಂದ ಇಂದು ರಾಜ್ಯಮಟ್ಟದ ಪ್ರಶಸ್ತಿ ಪಡೆದು ತಾಲೂಕು ಹಾಗೂ ಕಾಲೇಜಿಗೆ ಉತ್ತಮ ಹೆಸರು ತಂದುಕೊಟ್ಟಿದೆ ಈ ಸಂದರ್ಭದಲ್ಲಿ ಎನ್ಎಸ್ಎಸ್ ಘಟಕದ ಅಧಿಕಾರಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿದ್ದೇನೆ ಎಂದು ತಿಳಿಸಿದರು.


ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಶಾಂತಕುಮಾರಿ ಮಾತನಾಡಿ ಎನ್ಎಸ್ಎಸ್ ಘಟಕದ ಕಾರ್ಯ ಚಟುವಟಿಕೆಗಳಿಗೆ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರಿಂದ ಹಾಗೂ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹದಿಂದ ಇಂದಿಗೂ ಸಹ ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ ದೊಡ್ಡೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಘಟಕದ ಶಿಬಿರದ ಉತ್ತಮ ಕಾರ್ಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ ಇದರಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿದ್ದು ಘಟಕದ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಸದಸ್ಯರಾದ ಸಿರಿಗುಂಡಪ್ಪ ಎ ಶೇಖರಪ್ಪ ಶಿಲ್ಪ ವೆಂಕಟೇಶ್ ಶಿವಣ್ಣ ಹನುಮಂತರಾಯ ಗುಂಡಣ್ಣ ಜಿಕೆ ಈರಣ್ಣ ಶಾಲೆಯ ಮುಖ್ಯೋಪಾಧ್ಯಾಯರಾದ ಚಾರುಮತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬಿವುಲ್ಲ ನಾಗರಾಜ್ ಬೆಳಗಟ್ಟ ಈರಣ್ಣ ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾವೇರಿ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಹಾಗೂ ಸಿಡಬ್ಲ್ಯೂಸಿ ನಿಯಮಗಳನ್ನು ಪಾಲಿಸುತ್ತಿದೆ: ಸಚಿವ ಮಧು ಬಂಗಾರಪ್ಪ


ಚಳ್ಳಕೆರೆ ಸೆ 27. ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ಹಾಗೂ ಸಿಡಬ್ಲ್ಯೂಸಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ದಾರಿ ತುಳಿದಿವೆ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿ ಡಬ್ಲ್ಯೂ ಸಿ ಅಧಿಕಾರಿಗಳು ರಾಜ್ಯಕ್ಕೆ ಬಂದು ವಾಸ್ತವಾಂಶ ಅರಿಯದೆ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ ಹೀಗಾಗಿ ಕಾವೇರಿ ಸಮಸ್ಯೆ ಉದ್ಭವವಾಗಿದೆ ಸಿ ಡಬ್ಲ್ಯೂ ಸಿ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ರಾಜ್ಯದ ಬಿಜೆಪಿ ಸಂಸದರು ಯಡಿಯೂರಪ್ಪನವರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ಬಳಿ ಮನವಿ ಮಾಡಿಕೊಳ್ಳಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮುಂದೆ ಮಾತನಾಡಲು ಬಿಜೆಪಿ ಸಂಸದರಿಗೆ ತಾಕತ್ತಿಲ್ಲ ಪ್ರತಿಭಟನೆ ಮಾಡುವುದು ಸಂವಿಧಾನ ನೀಡಿರುವ ಹಕ್ಕಾಗಿರುವುದರಿಂದ ಸರ್ಕಾರ ಪ್ರತಿಭಟನೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟಿಸಿದರೆ ಸರ್ಕಾರದ ಅಭ್ಯಂತರವಿಲ್ಲ ಪಠ್ಯ ಪರಿಷ್ಕರಣೆ ಕಾನೂನು ಬದ್ಧವಾಗಿ ಬದಲಾವಣೆ ಆಗಲಿದೆ ಎಂದು ಇದೇ ವೇಳೆ ಉತ್ತರಿಸಿದರು.
ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಚಂದ್ರಪ್ಪ ಇದ್ದರು.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ.

    ಚಳ್ಳಕೆರೆ ಜನಧ್ವನಿ ವಾರ್ತೆ ಫೆ.6ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವುದು ಶತಸಿದ್ಧ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷೆ ಪಿ.ತಿಪ್ಪೇಸ್ವಾಮಿ ಹೇಳಿದರು.
    ನಗರದ ಗಾಂಧಿನಗರ ಹಾಗೂ ಬಾಗೇನಾಳ್ ಗ್ರಾಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ರಾಜ್ಯದಲ್ಲಿ ಪಂಚರತ್ನ ಯಾತ್ರೆಯಲ್ಲಿ ಸ್ವಂ ಪ್ರೇರಿತರಾಗಿ ಉತ್ಸಹದಿಂದ ನಿರೀಕ್ಷೆಗೂ ಮೀರಿ ಜನರು ಸೇರುವ ಮೂಲಕ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯರಿಗೆ ವಿಭಿನರೀತಿಯ ಹಾರಗಳನ್ನು ಹಾಕುವ ಮುಲ್ಲ ಹಬ್ಬದ ವಾತಾವರಣದಂತೆ ಜನರು ಭಾಗವಹಿಸುತ್ತಾರೆ.
    ಜೆಡಿಎಸ್ ಸರಕಾರದ ಅವಧಿಯಲ್ಲಿ ರೈತರ ಪರ ಯೋಜನೆಗಳು ಸಾಲಮನ್ನ, ಕೃಷಿ ಪಂಪಸೆಟ್ ವಿದ್ಯುತ್ ಸೇರಿದಂತೆ ಹಲವು ಜನರ ಯೋಜನೆಗಳನ್ನು ಜಾರಿಗೆ ತಂದಿರುವುದರಿAದ ಮತ್ತೆ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತನೀಡುವಂತೆ ಮನವಿ ಮಾಡಿಕೊಂಡರು.
    ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಮಾತನಾಡಿ ಜೆಡಿಎಸ್ ಪಕ್ಷ ನಿರಂತರವಾಗಿ ನಾಡಿನ ಅನ್ನದಾತರ ಹಿತ ಕಾಯುವ ಆಲೋಚನೆಗಳು ನಡೆಸುತ್ತಾ ಬಂದಿದೆ. ಈ ನೆಲೆಯಲ್ಲಿ ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಸಮರ್ಪಕ ಜಾರಿಗೆ ತರಲು ಜಲಸಂರಕ್ಷಣೆ ಹೆಸರಿನಲ್ಲಿ ಜೆಡಿಎಸ್ ಪಕ್ಷ ಜನತಾ ಜಲಧಾರೆ, ಪಂಚರತ್ನ ಸೇರಿದಂದ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲದಿಂದ ಅಧಿಕಾರುವುದು ಖಚಿತ.
    ಜೆಡಿಎಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಬಿಜೆಪಿ , ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದರು.
    ಬಾಗೇಳ್ ಗ್ರಾಮದವರು ಪಕ್ಷಕ್ಕೆ ಸೇರ್ಪಡೆಗೊಂಡವರು ವಸಂತ್ ಕುಮಾರ್ , ತಿಪ್ಪೇಸ್ವಾಮಿ , ಬಸವರಾಜು, ಲೋಕೇಶ್ , ಮಹಾಂತೇಶ್, ಮಲ್ಲಿಕಾರ್ಜುನ , ಆನಂದಪ್ಪ
    ಜನತಾ ಕಾಲೋನಿಯಲ್ಲಿ ಶಾಖೆಲ್, ಇಮ್ರಾನ್, ವೀರೇಶ್, ಅನೀಫ್, ಇಮಾಡ್, ಇರ್ಫಾನ್, ಭಾಷಾ, ಕಾಜ, ರೆಹಮಾನ್, ಲತೀಫ್, ಮಾಬು, ಸುನಿ,ಲೋಕೇಶ್, ಜಲೀಲ್, ಮುನ್ನಫಿ ಸುಮಾರು 5೦ಕ್ಕೂ ಹೆಚ್ಚು ಜನರು ಸೇರ್ಪಡೆಗೊಂಡರು.
    ನಗರಸಭಾ ಸದಸ್ಯರಾದ ನಾಗವೇಣಿ ,ವಿ.ವೈ ಪ್ರಮೋದ್, ನಿರ್ಮಲ, ತಿಪ್ಪಕ್ಕ ಇತರರಿದ್ದರು.

ರಾಷ್ಟ್ರಪತಿಯವರ ಪದಕ ಪ್ರಧಾನ-2022 ಸಮಾರಂಭದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ

ಬೆಂಗಳೂರು: ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್ ಡಿಆರ್ ಎಫ್ ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ರಾಜಭವನ ದ ಗಾಜಿನಮನೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿಯವರ ಪದಕ ಪ್ರಧಾನ-2022 ಸಮಾರಂಭದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ನೈಸರ್ಗಿಕ ಮತ್ತು ಮಾನವೀಯತೆಯಿಂದ ಜನರಿಗೆ ಸೇವೆ ಸಲ್ಲಿಸುವಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ನಿರ್ವಹಿಸುತ್ತಿರುವ ಕಾರ್ಯ ಪ್ರಶಂಸನೀಯ ಎಂದರು.

ಕಷ್ಟದ ಪರಿಸ್ಥಿತಿಯಲ್ಲಿ ದೇಶವಾಸಿಗಳ ರಕ್ಷಣೆಗಾಗಿ ಹಾಗೂ ತ್ಯಾಗ ಮತ್ತು ಸಮರ್ಪಣೆಗಾಗಿ ಮತ್ತು ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಅವರ ವಿಶಿಷ್ಟ ಸೇವೆಗಳಿಗಾಗಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್‍ಡಿಆರ್‍ಎಫ್‍ನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ “ರಾಷ್ಟ್ರಪತಿ ಪದಕ”ವನ್ನು ಪ್ರದಾನ ಮಾಡಿರುವುದು ಸಂತಸ ತಂದಿದೆ. ಅದಮ್ಯ ಧೈರ್ಯ, ಸಂಕಲ್ಪ, ನಿಸ್ವಾರ್ಥ ಮತ್ತು ತ್ಯಾಗ ಶ್ಲಾಘನೀಯ. ಉತ್ಕೃಷ್ಟತೆಯ ಎತ್ತರವನ್ನು ಸಾಧಿಸಲು ನಿಮ್ಮ ಕಾರ್ಯಗಳು ಎಲ್ಲರಿಗೂ ಮಾದರಿಯಾಗುತ್ತವೆ ಎಂದು ತಿಳಿಸಿದರು.ಕೋವಿಡ್ , ಪ್ರವಾಹ , ಕಟ್ಟಡಗಳಲ್ಲಿ ಬೆಂಕಿ, ರಸ್ತೆ, ರೈಲು ಮತ್ತು ವಾಯು ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳು – ಭೂಕಂಪ ಮತ್ತು ಭೂಕುಸಿತ ಮುಂತಾದ ವಿವಿಧ ಸಂದರ್ಭಗಳಲ್ಲಿ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಾಗರಿಕ ರಕ್ಷಣಾ ಇಲಾಖೆಯು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ತಿಳಿಸಿದರು.

ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಹೊರತುಪಡಿಸಿ, ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್‍ಗಳು ಯಾವುದೇ ರೀತಿಯ ವಿಪತ್ತಿನ ಸಂದರ್ಭದಲ್ಲಿ ಸಮುದಾಯದ ಸುರಕ್ಷತೆಗೆ ಪ್ರಾಥಮಿಕವಾಗಿ ಅತ್ಯಗತ್ಯ. ಅಪಘಾತ ಅಥವಾ ನೈಸರ್ಗಿಕ ವಿಕೋಪದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಂವಹನಗಳನ್ನು ಒದಗಿಸಲು ಪ್ರಾಥಮಿಕ ಪ್ರತಿಸ್ಪಂದಕರಾಗಿ, ವಿಪತ್ತು ನಿರ್ವಹಣೆಗಾಗಿ ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಾಮಥ್ರ್ಯವನ್ನು ನಿರ್ಮಿಸಲು ಈ ಸಂಸ್ಥೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಪ್ರಶಂಸಿದರು.

ಹವಾಮಾನ ಬದಲಾವಣೆಯಿಂದಾಗಿ, ಪ್ರವಾಹಗಳು, ಬರಗಳು, ಶಾಖದ ಅಲೆಗಳು ಮತ್ತು ಚಂಡಮಾರುತಗಳಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬುದು ಅನೇಕ ಸಂಶೋಧನಾ ಕಾರ್ಯಗಳಿಂದ ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನೈಸರ್ಗಿಕ ವಿಕೋಪಗಳ ಆವರ್ತನ ಮತ್ತು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ರಾಸಾಯನಿಕ ಬೆಂಕಿಯ ಸಂದರ್ಭದಲ್ಲಿ, ಅಗ್ನಿಶಾಮಕ ಸೇವೆಗಳು ಜೀವ ಮತ್ತು ಆಸ್ತಿಗಳನ್ನು ಉಳಿಸುವ ಉನ್ನತ ಮಟ್ಟದ ಸಾಮಥ್ರ್ಯವನ್ನು ಪ್ರದರ್ಶಿಸಿದವು. ಇದು ಎಲ್ಲಾ ಹಂತಗಳಲ್ಲಿ ಮೆಚ್ಚುಗೆ ಪಡೆದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಕರ್ನಾಟಕದ ನಾಗರಿಕ ರಕ್ಷಣಾ ಇಲಾಖೆಯನ್ನು ದೇಶದ ಅತ್ಯುತ್ತಮ ನಾಗರಿಕ ರಕ್ಷಣಾ ಸೇವಾ ಪೂರೈಕೆದಾರ ಎಂದು ಗುರುತಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಒಟ್ಟು 58 ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು. ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರಕ್ಷಕ ಮಹಾನಿರ್ದೇಶಕರಾದ ಡಾ.ಅಮರ್ ಕುಮಾರ್ ಪಾಂಡೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಇಡಬ್ಲ್ಯುಎಸ್ ಮೀಸಲಾತಿ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಪಂಚ ಸದಸ್ಯರ ಪೀಠ ಎತ್ತಿ ಹಿಡಿದಿದೆ.
ಆದರೆ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರು ಮೀಸಲಾತಿಯ ವಿರುದ್ಧ ತೀರ್ಪು ನೀಡಿದ್ದಾರೆ.
ಪೀಠದಲ್ಲಿದ್ದ ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಪರ್ದಿವಾಲಾ ಮೀಸಲಾತಿ ಪರವಾಗಿ ತೀರ್ಪು ನೀಡಿದರೆ, ನ್ಯಾಯಮೂರ್ತಿ ರವೀಂದ್ರ ಭಟ್ , ಸಿಜೆಐ ಯುಯು ಲಲಿತ್ ಅವರು ಮೀಸಲಾತಿ ವಿರುದ್ಧವಾಗಿ ತೀರ್ಪು ನೀಡಿದ್ದಾರೆ.
ನ್ಯಾ. ರವೀಂದ್ರ ಭಟ್ ಅವರು ಬಹುಮತದ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿ ಭಿನ್ನ ತೀರ್ಪು ನೀಡಿದ್ದಾರೆ.

ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು, ಆರ್ಥಿಕ ಆಧಾರದ ಮೇಲೆ ಮೀಸಲಾತಿ ಒದಗಿಸುವುದರಿಂದ ಮೂಲಭೂತ ರಚನೆ ಅಥವಾ ಭಾರತ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದು ತೀರ್ಪು ನೀಡಿದರು.
ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬೇಲಾ ತ್ರಿವೇದಿ ಅವರ ತೀರ್ಪುಗಳಿಗೆ ನನ್ನ ಸಹಮತವಿದೆ. ಇಡಬ್ಲ್ಯೂಎಸ್ ತಿದ್ದುಪಡಿಯನ್ನು ನಾನು ಎತ್ತಿಹಿಡಿಯುವೆ ಎಂದು ತೀರ್ಪಿನಲ್ಲಿ ತಿಳಿಸಿದರು.

ನ್ಯಾ. ಪರ್ದಿವಾಲಾ ಅವರು, ಮೀಸಲಾತಿಯನ್ನು ಪಟ್ಟಭದ್ರ ಹಿತಾಸಕ್ತಿಯಾಗಲು ಬಿಡಬಾರದು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಕೊನೆಗೊಳಿಸಬೇಕಿದೆ. ಆಂದೋಲನ 7 ದಶಕಗಳ ಹಿಂದೆ ಪ್ರಾರಂಭವಾಗಿದ್ದು ಅಂತರವನ್ನು ಕಡಿಮೆ ಮಾಡಲು ದೀರ್ಘಕಾಲೀನ ಅಭಿವೃದ್ಧಿ ಮತ್ತು ಶಿಕ್ಷಣ ಸಹಾಯ ಮಾಡಿದೆ ಎಂದು ತೀರ್ಪಿನಲ್ಲಿ ತಿಳಿಸಿದರು

ʻಏಸ್ ಹೈದರಾಬಾದ್ ಇ-ಪ್ರಿಕ್ಸ್ʼಗೆ 100 ದಿನಗಳು: ಭಾರತದ ಮೊದಲ ʻಫಾರ್ಮುಲಾ ಇ-ರೇಸ್ʼಗೆ ಕ್ಷಣಗಣನೆ

ದೆಹಲಿ: ವಿಶ್ವದ ಪ್ರಮುಖ ಇಂಧನ ಪರಿವರ್ತನೆ ಮತ್ತು ಡಿಕಾರ್ಬನೈಜೇಶನ್ ಪರಿಹಾರಗಳನ್ನು ಒದಗಿಸುವ ʻಗ್ರೀನ್ಕೋʼದಿಂದ ಬೆಂಬಲಿಸಲ್ಪಟ್ಟ ʻಎಬಿಬಿ ಎಫ್ಐಎ ಫಾರ್ಮುಲಾ ಇ ವಿಶ್ವ ಚಾಂಪಿಯನ್‌ಶಿಪ್, ಭಾರತದಲ್ಲಿ ಆರಂಭಕ್ಕೆ ಸಜ್ಜಾಗಿದ್ದು, ಹೈದರಾಬಾದ್ ಇದರ ಆತಿಥ್ಯ ವಹಿಸಲಿದೆ.

ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ʻ2023 ಏಸ್ ಹೈದರಾಬಾದ್ ಇ-ಪ್ರಿಕ್ಸ್ʼ ಇಂದು ನವದೆಹಲಿಯಲ್ಲಿ ʻಫಾರ್ಮುಲಾ ಇ ಶೋʼ ಕಾರನ್ನು ಅನಾವರಣಗೊಳಿಸುವ ಮೂಲಕ 2023ರ ಫೆಬ್ರವರಿ 11 ರವರೆಗೆ 100 ದಿನಗಳ ಕ್ಷಣಗಣನೆಯನ್ನು ಆರಂಭಿಸಿದೆ. 2023ರಲ್ಲಿ ಭಾರತವು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಆತಿಥೇಯ ದೇಶಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲಿದ್ದು, 2026 ರವರೆಗೆ ಇದು ಮುಂದುವರಿಯಲಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಪುರಿ, ನೀತಿ ಆಯೋಗದ ಮಾಜಿ ಸಿಇಓ ಅಮಿತಾಭ್ ಕಾಂತ್, ʻಫಾರ್ಮುಲಾ ಇʼ ಸಹ-ಸಂಸ್ಥಾಪಕ ಮತ್ತು ಮುಖ್ಯ ಚಾಂಪಿಯನ್ಶಿಪ್ ಅಧಿಕಾರಿ ಆಲ್ಬರ್ಟೊ ಲೊಂಗೊ, ʻಏಸ್ ನೆಕ್ಸ್ಟ್ ಜೆನ್ʼ ಸಂಸ್ಥಾಪಕ, ʻಗ್ರೀನ್ಕೊ ಗ್ರೂಪ್ʼನ ಸಿಇಒ ಮತ್ತು ಎಂಡಿ ಶ್ರೀ ಅನಿಲ್ ಕುಮಾರ್ ಚಲಮಲಶೆಟ್ಟಿ ಹಾಗೂ ತೆಲಂಗಾಣ ಸರಕಾರದ ಪ್ರತಿನಿಧಿಯಾಗಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್, ಐ.ಎ.ಎಸ್. ಅವರ ಉಪಸ್ಥಿತಿಯಲ್ಲಿ ಚಾಂಪಿಯ ಶಿಪ್ ಗೆ ಚಾಲನೆ ನೀಡಲಾಯಿತು.

ʻಎಬಿಬಿ ಎಫ್.ಐ.ಎ. ಫಾರ್ಮುಲಾ ಇ ವಿಶ್ವ ಚಾಂಪಿಯನ್ಶಿಪ್ʼ ಎಂಟು ಆವೃತ್ತಿಗಳಲ್ಲಿ(ವರ್ಷಗಳು) ಜಾಗತಿಕ ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, 21 ನಗರಗಳಲ್ಲಿ 100 ರೇಸ್ ಗಳನ್ನು ಪೂರ್ಣಗೊಳಿಸಿದೆ. ವಿಶ್ವದಾದ್ಯಂತದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ, ಜಾಗೃತಿ ಮತ್ತು ಉತ್ತೇಜನಕ್ಕೆ ವೇಗ ನೀಡುವತ್ತ ಚಾಂಪಿಯನ್ಶಿಪ್ ಗಮನ ಹರಿಸುತ್ತದೆ. ಮುಂಬರುವ ಆವೃತ್ತಿಯಲ್ಲಿ, ಭಾರತೀಯ ಮೂಲದ ಮಹೀಂದ್ರಾ ಸಮೂಹದ ಭಾಗವಾದ ʻಮಹೀಂದ್ರಾ ರೇಸಿಂಗ್ ಫಾರ್ಮುಲಾ ಇʼ ತಂಡ ಸೇರಿದಂತೆ 11 ತಂಡಗಳು ಮತ್ತು 22 ಚಾಲಕರು ವಿಶ್ವದ ಅತ್ಯಂತ ಅಪ್ರತಿಮ ನಗರಗಳಲ್ಲಿ ಹೊಸ ʻಜೆನ್3ʼ ಮೂಲಕ ರೇಸಿಂಗ್ ಮಾಡುವುದನ್ನು ʻಫಾರ್ಮುಲಾ ಇʼ ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.

ಆತಿಥೇಯ ನಗರಗಳಲ್ಲಿ ಒಂದಾಗಿರುವ ಹೈದರಾಬಾದ್, 2023ರ ಜನವರಿ ಮತ್ತು ಜುಲೈ ನಡುವೆ ನಡೆಯಲಿರುವ ಚಾಂಪಿಯನ್ಶಿಪ್ನ ಆವೃತ್ತಿ 9ರ ಒಟ್ಟು 17 ರೇಸ್ಗಳ ಪೈಕಿ 4ನೇ ಸುತ್ತಿಗೆ ಸಾಕ್ಷಿಯಾಗಲಿದೆ. ಪ್ರಸಿದ್ಧ ಹುಸೇನ್ ಸಾಗರ್ ಸರೋವರದ ಸುತ್ತಲಿನ ಸಿಟಿ ಸರ್ಕ್ಯೂಟ್ನಲ್ಲಿ ʻಎಲೆಕ್ಟ್ರಿಕ್ ಜೆನ್3 ಫಾರ್ಮುಲಾ ಇ ಕಾರುಗಳ ರೇಸ್ʼಗೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

ತೆಲಂಗಾಣ ಸರಕಾರದ ಐಟಿ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಾದ ಕೆ.ಟಿ.ರಾಮರಾವ್ ಅವರು ಮಾತನಾಡಿ “ನಗರದಲ್ಲಿ ನಡೆಯಲಿರುವ ʻಫಾರ್ಮುಲಾ ಇ ಚಾಂಪಿಯನ್ಶಿಪ್ʼಗಾಗಿ ಜಗತ್ತಿನ ಮೂಲೆ ಮೂಲೆಗಳಿಂದ ರೇಸಿಂಗ್ ಉತ್ಸಾಹಿಗಳನ್ನು ಸ್ವಾಗತಿಸುತ್ತಿರುವುದು ನಮಗೆ ಗೌರವದ ಸಂಗತಿಯಾಗಿದೆ. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ, ಏಕೆಂದರೆ ರೇಸ್ ಗಳನ್ನು ನಿಗದಿಪಡಿಸಿರುವ 13 ಜಾಗತಿಕ ನಗರಗಳಲ್ಲಿ ಹೈದರಾಬಾದ್ ಒಂದಾಗಿದೆ. ಇದಲ್ಲದೆ, ಜಾಗೃತಿ ಮೂಡಿಸುವುದು ಮತ್ತು ಸುಸ್ಥಿರ ಪರಿಸರ ಅಭ್ಯಾಸಗಳತ್ತ ಬದಲಾವಣೆಗೆ ಪ್ರೇರೇಪಿಸುವುದು ಹಾಗೂ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜಿನ ನೀಡುವ ಗುರಿಯನ್ನು ಇದು ಹೊಂದಿದೆ” ಎಂದರು.

ʻಫಾರ್ಮುಲಾ ಇʼ ಸಹ-ಸಂಸ್ಥಾಪಕ ಮತ್ತು ಮುಖ್ಯ ಚಾಂಪಿಯನ್ಶಿಪ್ ಅಧಿಕಾರಿ ಆಲ್ಬರ್ಟೊ ಲೊಂಗೊ ಅವರು ಮಾತನಾಡಿ “ಎಬಿಬಿ ಎಫ್ಐಎ ಫಾರ್ಮುಲಾ ಇ ವಿಶ್ವ ಚಾಂಪಿಯನ್‌ಶಿಪ್ ಅನ್ನು ಮೊದಲ ಬಾರಿಗೆ ಭಾರತಕ್ಕೆ ತರಲು ಮತ್ತು ನಮ್ಮ ಹೊಸ ʻಜೆನ್ 3ʼ ಕಾರನ್ನು ಹೊಸ ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ನಾವು ರೋಮಾಂಚನಗೊಂಡಿದ್ದೇವೆ. ಬಹಳ ದಿನದಿಂದಲೂ ಚಾಂಪಿಯನ್ ಶಿಪ್ ಏರ್ಪಡಿಸಲೇಬೇಕಾದ ತಾಣಗಳಲ್ಲಿ ಹೈದರಾಬಾದ್ ಒಂದಾಗಿದೆ, ಆದ್ದರಿಂದ ಫೆಬ್ರವರಿ 11ರಂದು ನಗರದಲ್ಲಿ ರೇಸಿಂಗ್ ಏರ್ಪಡಿಸಲು ನಾವು ಕಾತುರರಾಗಿದ್ದೇವೆ,ʼʼ ಎಂದರು.

“ಭಾರತವು ದೊಡ್ಡ ಮತ್ತು ಉತ್ಸಾಹಿ ʻಫಾರ್ಮುಲಾ ಇʼ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಸಂಖ್ಯೆ ಬೆಳೆಯುತ್ತಲೇ ಇದೆ. ʻಮಹೀಂದ್ರಾ ರೇಸಿಂಗ್ʼನ ಪಾಲ್ಗೊಳ್ಳುವಿಕೆಯಿಂದಾಗಿ ಸ್ಥಳೀಯ ಅಭಿಮಾನಿಗಳು ಬೆಂಬಲಿಸಲು ಮತ್ತು ಅನುಸರಿಸಲು ತಮ್ಮದೇ ತವರಿನ ತಂಡವನ್ನು ಹೊಂದಿದಂತಾಗಿದೆ. ಭಾರತದ ಅಗ್ರಗಣ್ಯ ತಂತ್ರಜ್ಞಾನ ಕೇಂದ್ರಗಳಲ್ಲೊಂದಾದ ಹೈದರಾಬಾದ್ಲ್ಲಿ ರೇಸಿಂಗ್ ನಡೆಯುತ್ತಿದೆ. ಹೆಚ್ಚಿನ ಕಾರ್ಯಕ್ಷಮತೆಯ ರೇಸಿಂಗ್ ಮತ್ತು ಅತ್ಯಾಧುನಿಕ ನಾವೀನ್ಯತೆಯನ್ನು ಪ್ರದರ್ಶಿಸಲು ಮಾತ್ರವಲ್ಲದೆ, ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಹಾಗೂ ಅಳವಡಿಕೆಯು ಅಂತಹ ಸಮಸ್ಯೆಗೆ ಪರಿಹಾರದ ಒಂದು ಭಾಗವಾಗಿದೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇದು ಸೂಕ್ತ ಸ್ಥಳವಾಗಿದೆ,ʼʼ ಎಂದು ಹೇಳಿದರು.

ʻಏಸ್ ನೆಕ್ಸ್ಟ್ ಜೆನ್ʼ ಸಂಸ್ಥಾಪಕ ಮತ್ತು ʻಗ್ರೀನ್ಕೋʼ ಸಿಇಒ ಮತ್ತು ಎಂಡಿ ಅನಿಲ್ ಕುಮಾರ್ ಚಲಮಲಶೆಟ್ಟಿ ಮಾತನಾಡಿ, “ತೆಲಂಗಾಣ ಸರಕಾರದ ಸಹಭಾಗಿತ್ವದಲ್ಲಿ ಮತ್ತು ಕೇಂದ್ರ ಸರಕಾರದ ಬೆಂಬಲದೊಂದಿಗೆ ಭೂಮಿಯ ಮೇಲಿನ ನೆಚ್ಚಿನ ಕ್ರೀಡೆ ಮತ್ತು ಭಾರತದ ಮೊದಲ ʻಫಾರ್ಮುಲಾ ಇ ರೇಸ್ʼ ಅನ್ನು ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಹವಾಮಾನ ಬದಲಾವಣೆ ಸವಾಲನ್ನು ಎದುರಿಸಲು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆಯನ್ನು ಬೆಂಬಲಿಸುತ್ತೇವೆ. ಜೊತೆಗೆ ಜಾಗತಿಕವಾಗಿ ಇಂಗಾಲ ಹೊರಸೂಸುವಿಕೆ ತಗ್ಗಿಸುವಿಕೆಯನ್ನು(ಡಿಕಾರ್ಬನೈಸೇಶನ್) ಉತ್ತೇಜಿಸಲು ವಿಶ್ವಾಸಾರ್ಹ, ಸುಸ್ಥಿರ ತಂತ್ರಜ್ಞಾನಗಳ ಮೂಲವಾಗಿ ದೇಶವನ್ನು ನಿರ್ಮಿಸುವ ಮೋದಿ ಅವರ ದಿಟ್ಟ ಮತ್ತು ಧೈರ್ಯಶಾಲಿ ಆಶಯವನ್ನು ನಾವು ಹಂಚಿಕೊಳ್ಳುತ್ತೇವೆ. ಹೈದರಾಬಾದಿನವನೇ ಆಗಿರುವ ನನ್ನ ಪಾಲಿಗೆ, ವಿಶ್ವದ ಅತ್ಯಂತ ಹಸಿರು ನಗರಗಳಲ್ಲಿ ಒಂದಾಗಿರುವ ನನ್ನ ನಗರವು ಸಚಿವ ಕೆ.ಟಿ.ರಾಮರಾವ್ ಅವರ ದಿಟ್ಟ ನಾಯಕತ್ವದಲ್ಲಿ ಹಸಿರು ಓಟಕ್ಕೆ ಆತಿಥ್ಯ ವಹಿಸುತ್ತಿರುವುದು ಅತೀ ಸಂತಸ ತಂದಿದೆ. ಮೊದಲ ನಿವ್ವಳ ಶೂನ್ಯ ಇಂಗಾಲದ ಊಟಕ್ಕೆ ಕೇವಲ 100 ದಿನಗಳು ಮಾತ್ರ ಬಾಕಿ ಇದ್ದು, ಸುಸ್ಥಿರತೆ ಮತ್ತು ʻಡಿಕಾರ್ಬನೈಸೇಶನ್ʼನ ಭವಿಷ್ಯದ ನೇತೃತ್ವವನ್ನು ಭಾರತವು ವಹಿಸುವಂತೆ ಖಾತರಿಪಡಿಸಿಲು ನಾವು ನಮ್ಮ ಓಟಕ್ಕೆ ವೇಗ ನೀಡುತ್ತೇವೆ,ʼʼ ಎಂದು ಹೇಳಿದರು.

“ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ 2022” ಸ್ವೀಕರಿಸಿದ ಹೈದರಾಬಾದ್ ನಗರವು ಭಾರತದ ಅತಿದೊಡ್ಡ ಟೆಕ್ ಹಬ್ ಆಗುವ ಅನ್ವೇಷಣೆಯಲ್ಲಿ ನಾವಿನ್ಯತೆಯನ್ನು ಮುಂಚೂಣಿಗೆ ತಂದಿದೆ. ಪ್ರಾರಂಭದಿಂದಲೂ ʻಫಾರ್ಮುಲಾ ಇʼ, ವಿಶ್ವದ ಏಕೈಕ ಪ್ರಮಾಣೀಕೃತ ನಿವ್ವಳ ಶೂನ್ಯ ಕಾರ್ಬನ್ ಕ್ರೀಡೆಯಾಗಿದ್ದು, ʻಹೈದರಾಬಾದ್ ಇ-ಪ್ರಿಕ್ಸ್ʼ ಭಾರತದ ಮೊದಲ ನಿವ್ವಳ ಶೂನ್ಯ ಮೋಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವಾಗಿದೆ. ಕ್ರೀಡೆಯ ಆಶಯವನ್ನು ಬಳಸಿಕೊಂಡು, ʻಫಾರ್ಮುಲಾ ಇʼ ಒಂದು ಶಕ್ತಿಯುತ ಮತ್ತು ಅರ್ಥಪೂರ್ಣ ಸಂದೇಶವನ್ನು ಸಾರುತ್ತದೆ. ಜನರ ಗ್ರಹಿಕೆಗಳನ್ನು ಬದಲಾಯಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಬದಲಾವಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಎಲೆಕ್ಟ್ರಿಕ್ ಮತ್ತು ಕಡಿಮೆ ಇಂಗಾಲದ ಭವಿಷ್ಯಕ್ಕೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಮೂಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. ತನ್ನ ಪ್ರಮುಖ ಆಶಯದ ಭಾಗವಾಗಿ ʻಏಸ್ ನೆಕ್ಸ್ಟ್ ಜೆನ್ʼ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಗೆಲ್ಲಲು ಮತ್ತು ನವೀನ ಪರಿಹಾರಗಳ ಮೂಲಕ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ತನ್ನ ಪ್ರಯತ್ನಗಳನ್ನು ವೇಗಗೊಳಿಸುತ್ತಿದೆ. ʻಗ್ರೀನ್ಕೋʼ ಬೆಂಬಲದೊಂದಿಗೆ, ತೆಲಂಗಾಣ ಸರಕಾರದ ಸಹಭಾಗಿತ್ವದೊಂದಿಗೆ ಭೂ ಗ್ರಹದ ನೆಚ್ಚಿನ ಕ್ರೀಡೆ ʻಫಾರ್ಮುಲಾ ಇʼ ಭಾರತಕ್ಕೆ ಬರುತ್ತಿದೆ.

You cannot copy content of this page