ಚಳ್ಳಕೆರೆ ಆ.15 ಸ್ವಾತಂತ್ರ್ಯಗತಿಸಿ 78ವರ್ಷಗಳು ಗತಿಸಿದರೂ ಇನ್ನು ಸಮಾನತೆ, ಬಡತನದಿಂದ ಹಿಂದುಳಿದ್ದು, ಸರ್ವರಿಗೂ ಸಮಬಾಳು, ಸರ್ವರೀಗೂ ಸಮಪಾಲು ಎಂಬ ಅಬೇಂಡ್ಕರ್ ಆಶಯ ತಲುಪಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ ಬಯಲು ರಂಗಮಂದಿರಲ್ಲಿ ರಾಷ್ಟ್ರೀಯ ಹಬ್ಬರಗಳ ಸಮಿತಿ ಹಾಗೂ ವಿವಿಧ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭಾರತ ದೇಶಕ್ಕೆ ಆ.15ಅತ್ಯಂತ ಅವಿಸ್ಮರಣೀಯ ದಿನ. ಮಹತ್ಮಗಾಂಧೀಜಿ, ಸರ್‌ದಾರ್ ವಲ್ಲಬಾಯಿಪಾಟೆಲ್, ಅಂಬೆಡ್ಕರ್, ನೆಹರು, ಭಗತ್‌ಸಿಂಗ್, ಕಿತ್ತೂರು ರಾಣಿಚನ್ನಮ್ಮ, ಹೀಗೆ ಹಲವಾರು ಹೋರಾಟಗಾರರ ಬಲಿದಾನದ ಫಲವಾಗಿ ದೇಶ ಪರಕೀಯರಿಂದ ಬಿಡುಗಡೆ ಪಡೆಯಿತು ಅವರ ನೆನಪಿಗಾಗಿ ಇಂತಹ ಜಯಂತಿಗಳನ್ನ ಆಚರಣೆ ಮಾಡಲಾಗುತ್ತಿದೆ ವಿದ್ಯಾರ್ಥಿಗಳು ಇವರ ಆಧರ್ಶ ತತ್ವ ಸಿದ್ದಾಂತಗಳನ್ನು ಜೀವನನದಲ್ಲಿ ಅಳವಡಿಕೊಳ್ಳ ಬೇಕಾಗಿದೆ . ರಾಜ್ಯದಲ್ಲಿ ಮಳೆ ಒಂದು ಕಡೆಯದರೆ ಮೊತ್ತೊಂದು ಕಡೆ ಸರಿಯಾಗಿ ಆಗಿಲ್ಲದ ಕಾರಣ ಈ ಭಾಗದ ರೈತರು ಬರಗಾಲಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಸಮೃದ್ಧಿ ಮಳೆ ಬೆಳೆಯಾಗಿ ಬರಹೋಗಲಾಡಿಸುವಂತಸಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.
ತಹಸೀಲ್ದಾರ್ ರೇಹಾನ್ ಪಾಷ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಕನಸುಗಳನ್ನು ಬಿತ್ತಿ ಜನ ಮಾನಸಕ್ಕೆ ಸ್ಫೂರ್ತಿನೀಡಿದ ಮಹನೀಯರ ಕೊಡುಗೆ ಅತ್ಯಂತ ಸ್ಮರಣೀಯ ಸ್ವರಾಜ್ಯ ಪರಿಕಲ್ಪನೆಯಲ್ಲಿ ಜನಮಾನಸದಲ್ಲಿ ಮೂಡಿಸಿ ಜನಸಾನ್ಯರಾದಿಯಾಗಿ ಎಲ್ಲರನ್ನು ಸ್ವಾತಂತ್ರ ಚಳುವಳಿಯಲ್ಲಿ ತೊಡಿಸಿ ಯುವ ಜನರಲ್ಲಿ ಸ್ಫೂರ್ತಿ ತುಂಬಿದ ಮಹಾನ್ ಯುಗಪುರಷ ಮಹಾತ್ಮಗಾಂಧೀಜಿ ಸುಭಾಷ್ ಚಂದ್ರಬೋಸ್, ಬಾಲಗಂಗಾಧರ ತಿಲಕ್ , ಬಾಬುರಾಜೇಂದ್ರಪ್ರಸಾದ್, ಅಜಾದ್, ವಿಜಯಲಕ್ಷ್ಮಿ ಪಂಡಿತ್ ಅಂಬೇಡ್ಕರ್ ಸಹಸ್ರಾರು ಭಾರತೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದ್ಯರಾದ ಜಯಣ್ಣ.ಸುಜಾತ.ಟಿ.ಮಲ್ಲಿಕಾರ್ಜುನ.ಸಾಕಮ್ಮ.ರಾಘವೇಂದ್ರ.ವಿ.ವೈ.ಪ್ರಮೋದ್.ಶ್ರೀನಿವಾಸ್.ಟಿ.ಕವಿತನಾಯಕಿ.ಎಂ.ನಾಗವೇಣಿ.ಜೈತುಂಬಿ.ಪಾಲಮ್ಮ.ರಮೇಶ್ ಗೌಡ.ಎಂ.ಸಾವಿತ್ರಮ್ಮ.ಚಳ್ಳಕೆರೆಪ್ಪ.ಕವಿತ ಬೋರಯ್ಯ.ಸುಮಕ್ಕ.ಕೆ.ವೀರಭದ್ರಯ್ಯ.ಮಂಜುಳ.ಕವಿತಬೋರಯ್ಯ. ನಾಮನಿರ್ದೇಶಕ ಸದಸ್ಯರು.ತಾಪಂ ಇಒ ಶಶಿಧರ್. ಪೌರಾಯುಕ್ತ ಜಗರೆಡ್ಡಿ.ಬಿಇಒ ಸುರೇಶ್.ಡಿವೈಎಸ್ಪಿ ರಾಜಣ್ಣ.ಪಿ.ಐ ದೇಸಾಯಿ. ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
0 Comments